ಬ್ರೇಕಿಂಗ್ : ಕೆ.ಪಿ.ಜೆ.ಪಿ ಇಂದ ಉಪೇಂದ್ರ ಅವರು ಹೊರ ಹೋಗ್ತಾರಾ? ಪಕ್ಷದಲ್ಲಿ ಭಾರಿ ಭಿನ್ನಾಭಿಪ್ರಾಯ

upendra out of kpjp

ಕರ್ನಾಟಕ ಪ್ರಜ್ಞಾವಂಥ or KPJP ಪಕ್ಷದಲ್ಲಿ ಭಾರಿ ಭಿನ್ನಾಭಿಪ್ರಾಯ. ಪಕ್ಷದಿಂದ ಉಪೇಂದ್ರ ಹೊರಕ್ಕೆ ಬರ್ತಾರೆ ಎಂಬ ಸುದ್ದಿ ಹೊರ ಹಾಕಿದ ರಾಜ್ಯದ ಮಾಧ್ಯಮಗಳು. ಉಪೇಂದ್ರ ಮತ್ತು ಮಹೇಶ್ ಗೌಡ, ಈ ಇಬ್ಬರ ನಡುವೆ ಆದ ಒಂದು ಚಿಕ್ಕ ಗೊಂದಲಕ್ಕೆ ಉಪೇಂದ್ರ ಅವರು ಪಕ್ಷ ಬಿಡಬೇಕಾಗಿ ಬರುತ್ತಾ?

KPJP/ಕೆ.ಪಿ.ಜೆ.ಪಿ ಸಂಸ್ಥಾಪಕ ಉಪೇಂದ್ರ ಅಲ್ಲ ಎಂಬ ಸುದ್ದಿಯೇ ಆಘಾತಕರ

ಇಷ್ಟು ದಿನ ನಾವೆಲ್ಲರೂ ಕೆ.ಪಿ.ಜೆ.ಪಿ ಸಂಸ್ಥಾಪಕ ನಟ ಉಪೇಂದ್ರ ಎಂದು ತಿಳಿದು ಕೊಂಡಿದ್ದೆವು. ಆದರೆ ಇವತ್ತು ಮಾಧ್ಯಮದಲ್ಲಿ ಕೇಳಿ ಬರುತ್ತಿರುವ ಹಾಗೆ, ಪಕ್ಷದ ನಿಜವಾದ ಸಂಸ್ಥಾಪಕ ಮಹೇಶ್ ಗೌಡ ಎಂದು. ಕರ್ನಾಟಕ ಪ್ರಜ್ಞಾವಂತ ಪಕ್ಷ ಅಂತ ಮೊದಲೇ ಇತ್ತಂತೆ ಮತ್ತು ಉಪೇಂದ್ರ ಅವರು ಈ ಪಕ್ಷವನ್ನು ಸೇರಿ ಕೊಂಡರು ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆ.ಪಿ.ಜೆ.ಪಿ ಸಮಿತಿ ಯಲ್ಲಿ ಉಪೇಂದ್ರ ಅವರು ರಾಷ್ಟ್ರಾಧ್ಯಕ್ಷರಾಗಿ ಮತ್ತು ಮಹೇಶ್ ಗೌಡ ಚೀಫ್ ಸೆಕ್ರೆಟರಿ ಎಂದು ಹೇಳಲಾಗುತ್ತಿದೆ. ಇದು ಬರಿ ಮಹೇಶ್ ಗೌಡ ಅವರ ಅಂಬೋಣವೂ ಅಥವಾ ರಿಯಾಲಿಟಿ ಏನಿದೆಯೋ ಎಂದು ಇನ್ನೂ ತಿಳಿದು ಬಂದಿಲ್ಲ.

Advertisements

kpjp

ಯಾವ ವಿಷಯಕ್ಕೆ ಭಿನ್ನಾಭಿಪ್ರಾಯ?

ಪಕ್ಷದ ಅಭ್ಯರ್ಥಿಗಳ ಆಯ್ಕೆಯ ವಿಷಯದಲ್ಲಿ ಈ ಭಿನ್ನಾಭಿಪ್ರಾಯ ಮೂಡಿದೆ ಎಂದು ಹೇಳಲಾಗಿದೆ. ಮೊನ್ನೆ ಕರೆದ ಸಭೆಯಲ್ಲಿ ಉಪೇಂದ್ರ ಅವರು ಆಯ್ಕೆಯ ಎಲ್ಲ ಹಕ್ಕನ್ನು ನನಗೇ ಕೊಡೆಬೇಕೆಂದು ಕೇಳಿದ್ದಕ್ಕೆ, ಮಹೇಶ್ ಗೌಡ ಅಂಡ್ ಟೀಮ್ ಬೇಸರ ಗೊಂಡು ಈಗ ಮಾಧ್ಯಮದ ಮುಂದೆ ಬಂದು ಗುಲ್ಲು ಮಾಡಿದ್ದಾರೆ ಎಂದು ಹೊರ ನೋಟಕ್ಕೆ ಎನಿಸುತ್ತದೆ. ಉಪೇಂದ್ರ ಅವರ ಈ ನಿಲುವು ನಮಗೆ ಬೇಸರ ತಂದಿದೆ ಮತ್ತು ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಮಾಧ್ಯಮದ ಮುಂದೆ ಮಹೇಶ್ ಗೌಡ ಹೇಳಿ ಕೊಂಡಿದ್ದಾರೆ.

ಮುಂದೆ ಏನು ಆಗಬಹುದು?

ಮಹೇಶ್ ಗೌಡ ಹೇಳುವ ಹಾಗೆ, ಸಮಿತಿಯ ಮೀಟಿಂಗ್ ನಲ್ಲಿ ಇದರ ನಿರ್ಧಾರವಾಗುತ್ತದೆ ಎಂದು ಹೇಳಿದ್ದಾರೆ. ಪಕ್ಷದ ಚೀಫ್ ಸೆಕ್ರೆಟರಿ ಆಗಿರುವುದರಿಂದ, ಯಾವುದೇ ನಿರ್ಧಾರವನ್ನು ಕೈಗೊಳ್ಳಲು ಮಹೇಶ್ ಗೌಡರು ಅರ್ಹ ರಾಗಿರುತ್ತಾರೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಇದರ ಬಗ್ಗೆ ಉಪೇಂದ್ರ ಅವರು ಇನ್ನೂ ಯಾವ ಪ್ರತಿಕ್ರಿಯೆ ನೀಡಿಲ್ಲ. ಮಹೇಶ್ ಗೌಡ ಮತ್ತು ಶಿವ್ ಕುಮಾರ್ ಹೇಳುವ ಹಾಗೆ, ಉಪೇಂದ್ರ ವರು ಪಕ್ಷ ಬಿಡುವ ಎಲ್ಲ ಸಾಧ್ಯತೆಗಳು ಹೆಚ್ಚಿವೆ ಎಂದು ತಿಳಿದು ಬರುತ್ತದೆ.

ನೆನ್ನೆ ಉಪೇಂದ್ರ ಅವರು ಮಾಡಿದ ಟ್ವೀಟ್ ಗೂ ಈ ಪ್ರಕರಣಕ್ಕೂ ಏನಾದ್ರೂ ಸಂಬಂಧ ಇರಬಹುದಾ?

Advertisements

ಸುದ್ದಿ ಕೇಳಿದ ರಾಜ್ಯದ ಜನರು ತಮ್ಮ ಅಭಿಪ್ರಾಯವನ್ನು ಈ ರೀತಿ ಟ್ವೀಟ್ ಮಾಡಿದ್ದಾರೆ.

https://twitter.com/aruncsgpt/status/970595191626321921