ಮಹೇಶ್ ಬಾಬು ಸಿನಿಮಾ ಗೆ ನೋ ಎಂದ ಉಪ್ಪಿ. ದೇವಕಿ ಮೂಲಕ ಉಪೇಂದ್ರ ಅವರ ಮಗಳು ಸಿನೆಮಾಗೆ ಎಂಟ್ರಿ

0
2387

ಕರ್ನಾಟಕದಲ್ಲಿ ಉಪೇಂದ್ರ ಅವರು ಸೂಪರ್ ಸ್ಟಾರ್ ಹಾಗೂ ರಿಯಲ್ ಸ್ಟಾರ್ ಎಂದು ಗುರುತಿಸಿಕೊಂಡಿದ್ದಾರೆ. ರಾಜಕೀಯದಲ್ಲಿ ಕೂಡ ಇವರು ಎಂಟ್ರಿ ಕೊಟ್ಟಿದ್ದಾರೆ. ಸಧ್ಯಕ್ಕೆ ಪ್ರಜಾಕಿಯ ಪಕ್ಷದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಉಪೇಂದ್ರ ಅವರ ಐ ಲವ್ ಯು ಚಿತ್ರ ಸಹ ಬಿಡುಗಡೆಗೆ ಸಿದ್ದವಾಗಿದೆ. ಚಿತ್ರದ ಟ್ರೇಲರ್ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಯಾವಾಗಲೋ ಚಿತ್ರ ಬಿಡುಗಡೆ ಆಗಬೇಕಿತ್ತು, ಯಾಕೋ ಸ್ವಲ್ಪ ತಡೆ ಉಂಟಾಗಿದೆ. ಮೊನ್ನೆ ಅಷ್ಟೇ ಈ ಚಿತ್ರದ ಟ್ರೇಲರ್ ತೆಲುಗು ಭಾಷೆಯಲ್ಲಿ ಕೂಡ ರಿಲೀಸ್ ಆಗಿತ್ತು, ತೆಲುಗು ಚಿತ್ರದ ನಿರ್ದೇಶಕರೂ ಚಿತ್ರಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

ಪ್ರಜಾಕೀಯದಲ್ಲಿ ಬಿಜೀ ಇರುವದರಿಂದ ಮಹೇಶ್ ಬಾಬು ನಟಿಸಲಿರುವ ಚಿತ್ರಕ್ಕೆ ನೋ ಎಂದ ಉಪ್ಪಿ

ಅರ್ಜುನ್ ರೆಡ್ಡಿ ಸಿನೆಮಾದ ನಿರ್ದೇಶಕರು ನಾನು ಉಪ್ಪಿ ಅವರ ಅಭಿಮಾನಿ, ಸಣ್ಣ ವಯಸ್ಸಿನಿಂದ ಅವರ ಚಿತ್ರವನ್ನು ನೋಡುತ್ತಾ ನಾವು ಬೆಳೆದಿದ್ದೇವೆ,ನಾನು ಅರ್ಜುನ್ ರೆಡ್ಡಿ ಸಿನೆಮಾ ನಿರ್ದೇಶಿಸಲು, ಉಪೇಂದ್ರ ಅವರು ಡೈರೆಕ್ಟ್ ಮಾಡಿದ ಸಿನೆಮಾಗಳೆ ಸ್ಪೂರ್ತಿ ಎಂದು ಹೇಳಿದ್ದಾರೆ. ಇನ್ನೂ ತೆಲುಗು ಚಿತ್ರ ರಂಗದ ಸ್ಟಾರ್ ನಟ ಮಹೇಶ್ ಬಾಬು ಅವರ ಹೊಸ ಸಿನೆಮಾಗೆ ನಾನು ನಟಿಸೋದಿಲ್ಲ ಎಂದು ಉಪೇಂದ್ರ ತಿಳಿಸಿದ್ದಾರೆ, ಇದಕ್ಕೆ ಕಾರಣ ಉಪ್ಪಿ ಪ್ರಜಾಕೀಯದ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಹೆಗಲಿನ ಮೇಲೆ ಹೊತ್ತುಕೊಂಡಿದ್ದಾರೆ ಆದ್ದರಿಂದ ಖಡಾ ಖಂಡಿತವಾಗಿ ನೋ ಎಂದ್ದಿದ್ದಾರೆ.

upendra devaki

ಉಪ್ಪಿಯ ಮಗಳು ದೇವಕಿ ಸಿನೆಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ

ಉಪೇಂದ್ರ ಅವರ ಪತ್ನಿ ಪ್ರಿಯಾಂಕ ಉಪೇಂದ್ರ ಈ ಹಿಂದೆ ಮಮ್ಮೀ ಅನ್ನೋ ಹಾರರ್ ಚಿತ್ರದಲ್ಲಿ ಮುಖ್ಯ ಪಾತ್ರದಾರಿಯಾಗಿ ಕಾಣಿಸಿಕೊಂಡಿದ್ದರು. ರಿಯಲ್ ಸ್ಟಾರ್ ಅಣ್ಣನ ಮಗ ನಿರಂಜನ್ ಅವರು ಸಹ 2nd ಹಾಫ್ ಅನ್ನೋ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿ ಗೆ ಪಾದಾರ್ಪಣೆ ಮಾಡಿದ್ದಾರೆ. ಹೀಗೆ ಉಪ್ಪಿಯ ವಂಶಕ್ಕೂ ಸಿನಿರಂಗಕ್ಕೂ ಒಂದು ನಂಟಿದೆ ಅಂತಾ ಹೇಳಬಹುದು. ಈಗ ಬುದ್ಧಿವಂತನ ಮಗಳ ಸರದಿ. ಹೌದೂ ಉಪ್ಪಿ ಅವರ ಮಗಳು ಐಶ್ವರ್ಯ ದೇವಕಿ ಸಿನಿಮಾದಿಂದ ಸಿನಿರಂಗಕ್ಕೆ ಪ್ರವೇಶಿಸಿದ್ದಾರೆ. ಚಿತ್ರದ ಹೆಸರು ಮೊದಲು ಹೌರಾಬ್ರಿಡ್ಜ್ ಎಂದು ನಾಮಕರಣ ಮಾಡಿದ್ದರು, ಆದರೆ ಅದನ್ನು ಪ್ರಿಯಾಂಕ ಉಪೇಂದ್ರ ಅವರು ದೇವಕಿಯಾಗಿ ಬದಲಾಯಿಸಿದ್ದಾರೆ.

aishwarya

ಸಿನೆಮಾದ ಟೀಸರ್ ರಿಯಲ್ ಸ್ಟಾರ್ ಲಾಂಚ್ ಮಾಡಿದ್ದಾರೆ

ಚಿತ್ರದಲ್ಲಿ ಪ್ರಿಯಾಂಕ ಅವರು ಕೂಡ ಅಭಿನಯಿಸಲಿದ್ದಾರೆ, ನೆನ್ನೆ ತಾನೇ ಚಿತ್ರದ ಸಣ್ಣ ತುಣುಕು ರಿಯಲ್ ಸ್ಟಾರ್ ಲಾಂಚ್ ಮಾಡಿದ್ದಾರೆ. ಉಪ್ಪಿ 2 ಸಿನೆಮಾದಲ್ಲಿ ನಟಿಸಿರುವ ಪಾರುಲ್ ಯಾದವ್ ಅವರು ಉಪ್ಪಿ ಮಗಳಾದ ಐಶ್ವರ್ಯಾರ ಫಸ್ಟ್ ಲುಕ್ ಬಿಡುಗಡೆ ಮಾಡಿ, ಚಿತ್ರ ಒಳ್ಳೆ ಪ್ರದರ್ಶನ ಕಾಣಲಿ ಅಂತಾ ಮಾತನಾಡಿ ತಮ್ಮ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಮದುವೆ ಆಗಿ ಇಷ್ಟು ವರ್ಷವಾದರೂ ಪ್ರಿಯಾಂಕ ಅವರ ಸೌಂದರ್ಯದ ವಿಷಯದಲ್ಲಿ, ಒಂಚೂರು ಬದಲಾಗಿಲ್ಲ ಅಂತಾ ಹೇಳಿ ಪ್ರಿಯಾಂಕ ಅವರಿಗೆ ಕ್ರೆಡಿಟ್ ಕೊಟ್ಟಿದ್ದಾರೆ. ಪತ್ನಿ ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳಿಗೂ ಉಪೇಂದ್ರ ಪ್ರೋತ್ಸಾಹಿಸಿದ್ದಾರೆ, ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಪಾರುಲ್ ಅವರು ಮಾತನಾಡಿದ್ದಾರೆ.

aishwarya

ಚಿತ್ರದ ಪಾತ್ರಕ್ಕೆ ಅನುಗುಣವಾಗಿ ಪ್ರಿಯಾಂಕ ಉಪೇಂದ್ರ ಶೀರ್ಷಿಕೆ ಬದಲಿಸಿದ್ದಾರೆ

ಚಿತ್ರದ ಪಾತ್ರಕ್ಕೆ ಅನುಗುಣವಾಗಿ ಪ್ರಿಯಾಂಕ ಉಪೇಂದ್ರ ಅವರು ಶೀರ್ಷಿಕೆ ಬದಲಿಸಿದ್ದಾರೆ. ಚಿತ್ರದ ಪಾತ್ರ ದೇವಕಿ ಆದ್ದರಿಂದ ಹೌರಾ ಬ್ರಿಡ್ಜ್ ಹೆಸರು ಸೂಕ್ತವಲ್ಲ, ಆದ್ದರಿಂದ ಚಿತ್ರದ ಹೆಸರು ಚೇಂಜ್ ಮಾಡಲಾಗಿದೆ ಎಂದು ಚಿತ್ರದ ನಿರ್ಮಾಪಕ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಹೆಚ್ ಸಿ ವೇಣು ಅವರು ಚಿತ್ರದ ಸಿನೆಮಾಟೊಗ್ರಾಫರ್ ಆಗಿದ್ದರೆ, ನೋಬಿನ್ ಪೌಲ್ ಅವರು ಚಿತ್ರದ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ. ಇನ್ನೂ ಚಿತ್ರ ನಿರ್ಮಾಣದ ಒತ್ತಡವನ್ನು ಮೂರು ಜನ ಸಾಫ್ಟ್ವೇರ್ ಇಂಜಿನೀರ್ಸ್ ವಹಿಸಲಿದ್ದಾರೆ. ಎಲ್ಲಾ ಅಂದು ಕೊಂಡಂತೆ ಆದರೆ ಚಿತ್ರ ಮುಂದಿನ ತಿಂಗಳು ನಿಮ್ಮ ಚಿತ್ರ ಮಂದಿರದ ಬಾಗಿಲಿಗೆ ಸಮೀಪಿಸಲಿದೆ.

Comments

comments

LEAVE A REPLY

Please enter your comment!
Please enter your name here