ಉಪೇಂದ್ರ ಸೂಪರ್ ಸಿನಿಮಾ ದಲ್ಲಿ 8 ವರ್ಷದ ಹಿಂದೆ ಹೇಳಿದ್ದನ್ನ ಉತ್ತರ ಪ್ರದೇಶದ ಸಿ.ಎಂ ಆದಿತ್ಯನಾಥ್ ಜಾರಿಗೆ ತಂದಿದ್ದಾರೆ

0
22309
UP for sale

ಉಪೇಂದ್ರ ಎಂದರೆ ಹೀಗೇ ನೇ. ಯಾವತ್ತಿಗೂ ಒಂದು ಮೈಲಿ ಮುಂದೇನೆ ಯೋಚನೆ ಮಾಡೋ ಅಂತ ವ್ಯಕ್ತಿತ್ವ. ಉಪೇಂದ್ರ ರವರ ಬುದ್ಧಿವಂತಿಕೆ ಮತ್ತು ಸೃಜನ ಶೀಲತೆಗೆ ಅವರೇ ಸಾಟಿ ಎಂದರೂ, ಅಲ್ಲಲ್ಲಿ ಅದನ್ನೂ ಮೀರಿ ಯಾರೂ ಯೋಚನೆ ಮಾಡಲು ಆಗದ ಯಾವುದೋ ಒಂದನ್ನು ಮಾಡಿರುತ್ತಾರೆ. ಅವರ ಸಿನಿ ಪ್ರಯಾಣವನ್ನು ನೀವು ನೋಡುತ್ತಾ ಬಂದರೆ ನಿಮಗೆ ಸೂಕ್ಷ್ಮವಾಗಿ ಅದರ ಅರಿವು ಮೂಡದೇ ಇರದು. ಈ 8 ವರ್ಷಗಳ ಹಿಂದೆ, ಉಪೇಂದ್ರ ರವರು ನಿರ್ದೇಶನಕ್ಕೆ ಮರು ಎಂಟ್ರಿ ಕೊಟ್ಟು, ದಾಖಲೆಯ ಚಿತ್ರ ಒಂದನ್ನು ಚಿತ್ರಿಸಿದ್ದರು. ಒಂದು ಚಲನಚಿತ್ರವಾಗಿ, ಒಂದು ಯೋಚನೆಯಾಗಿ, ಭರವಸೆ ಯಾಗಿ ಮತ್ತು ಪಕ್ಕ ಮಾಸ್ ಎಂಟರ್ಟೈನರ್ ಆಗಿ ಈ ಸಿನಿಮಾ ಗೆದ್ದಿತ್ತು. ಅದೇ ‘ಸೂಪರ್.’

‘ಸೂಪರ್’ ಎಂಬ ಈ ಚಿತ್ರ ನವ ಭಾರತದ ಕನಸನ್ನು ಹೊತ್ತು, ಒಂದು ವಿಭಿನ್ನವಾದ ಕಥಾ ವಸ್ತುವಿನ ಮೂಲಕ ಬೆಳ್ಳಿ ತೆರೆಯ ಮೇಲೆ ಬಂದಿತ್ತು. ಇವತ್ತಿಗೂ ನೀವು ಕರ್ನಾಟಕದಲ್ಲಿ, ನಮ್ಮ ಭಾರತ ಹೇಗಿರಬೇಕು ಎಂದು ಕೇಳಿದರೆ, ‘ಸೂಪರ್’ ಸಿನಿಮಾದಲ್ಲಿ ತೋರ್ಸಿದ್ದಾರೆ ನೋಡಿ, ಹಾಗಿರಬೇಕು ಅಂತಾರೆ ಜನ. ಅಷ್ಟರ ಮಟ್ಟಿಗೆ ಈ ಸಿನಿಮಾ ಒಂದು ಸುಂದರ ಭಾರತದ ಕಲ್ಪನೆಯನ್ನು, ಸೂಪರ್ ಆಗಿ ಕಟ್ಟಿ ಕೊಟ್ಟಿತ್ತು. ಸಿ.ಎಂ ಎಂದರೆ ‘ಕಾಮನ್ ಮ್ಯಾನ್’ ಅನ್ನೋ ಆ ಯೋಚನೆ, ಪರದೇಶಿಯರನ್ನು ಬಿಂಬಿಸಿದ ಪರಿ, ರೂಪಾಯಿ- ಡಾಲರ್ ನ ಕಲ್ಪನೆ, ಮತ್ತು ಇನ್ನು ಇತರೆ ವಿಚಾರಗಳು ಈ ಸಿನಿಮಾದಲ್ಲಿ ನೋಡಿದ್ದೀರಿ. ಆದರೆ ನೀವು ಗಮನಿಸಿದ್ದೀರಾ?

UP for Sale

ಸೂಪರ್ ಐಡಿಯಾ

ಕಥೆಯಲ್ಲಿ, ರಾಜ್ಯದ ಮಾರಾಟ ಎಂಬ ದೃಶ್ಯ ಬರುತ್ತದೆ ಮತ್ತು ಹೂಡಿಕೆದಾರರ ಆಕ್ಷನ್ ಅಂಡ್ ಬಿಡ್ಡಿಂಗ್ ದೃಶ್ಯಗಳು ಹೈಲೈಟ್ ಆಗಿ ಸಿಗುತ್ತವೆ. ಹೌದು, ಬಹುಷಃ ಸಿನೆಮಾದಲ್ಲಿ ಅದು ಡ್ರಾಮಾಟಿಕ್ ಆಗಿ ಕಾಣಿಸಿದ್ದರೂ, ವಾಸ್ತವದಲ್ಲಿ ಇದು ಒಂದು ಸಿಂಪಲ್ ವ್ಯವಹಾರ ಅಷ್ಟೇ. ರಾಜ್ಯದ ಮುಖ್ಯ ಮಂತ್ರಿ ಆಗಿ, ನನ್ನ ರಾಜ್ಯದ ಬೆಳೆವಣಿಗೆ ಗಾಗಿ, ನೀವು ಹಣ ಹೂಡಿಕೆ ಮಾಡಿ ಮತ್ತು ಅದರ ಶೇರ್ ತೊಗೋಳಿ ಎಂಬ ಸಾಮಾನ್ಯವಾದ ಬಿಸಿನೆಸ್ ಲಾಜಿಕ್.

ಫುಡ್, ಡೇರಿ, ಮೂಲ ಸೌಕರ್ಯ, ಪ್ರವಾಸ, ನಾಗರಿಕ ಬೆಳವಣಿಗೆ ಮತ್ತು ಇತರೆ ಕ್ಷೇತ್ರಗಳಲ್ಲಿ, ಹೂಡಿಕೆದಾರರು ಹಣ ಹೂಡುತ್ತಾರೆ ಮತ್ತು ಅದರ ಶೇರ್ ಅನ್ನು ಸರ್ಕಾರದ ವತಿಯಿಂದ ಪಡೆಯುತ್ತಾರೆ. ಜಸ್ಟ್ ಏ ಕೊಡು- ತೊಗೊಳೊ ವ್ಯವಹಾರ ಎನ್ನಬಹುದು. ಈ ನಿಟ್ಟಿನಲ್ಲಿ, ಉತ್ತರ ಪ್ರದೇಶದ ಮುಖ್ಯ ಮಂತ್ರಿ, ಯೋಗಿ ಆದಿತ್ಯನಾಥ್ ರವರು ತಮ್ಮ ರಾಜ್ಯದ ಮಾರಾಟಕ್ಕೆ ಮುಂದಾಗಿದ್ದಾರೆ.

ಉತ್ತರ ಪ್ರದೇಶ, ಹೂಡಿಕೆಗಾಗಿ ಸೇಲ್

ಉತ್ತರ ಪ್ರದೇಶದ ಮುಖ್ಯ ಮಂತ್ರಿ, ಯೋಗಿ ಆದಿತ್ಯನಾಥ್ ರವರು ಒಂದು ಹೂಡಿಕೆದಾರರ ಸಮ್ಮಿಟ್ ಅನ್ನು ಮಾಡಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಅವರು ಮೊನ್ನೆ ಮುಕೇಶ್ ಅಂಬಾನಿ, ರತನ್ ಟಾಟಾ, ಚಂದ್ರಶೇಖರನ್ ಮತ್ತು ಹಲವು ಬಿಸಿನೆಸ್ ದಿಗ್ಗಜರನ್ನು ಭೇಟಿ ಮಾಡಿದ್ದಾರೆ. ಲಕ್ನೋ ನಲ್ಲಿ, ಫೆಬ್ರವರಿ 20-22 ರಂದು ನಡೆಯಲಿರುವ ರೋಡ್ ಶೋ ಸಮ್ಮಿಟ್ ನಲ್ಲಿ ಭಾಗವಿಹಸಲು ಎಲ್ಲ ಹೂಡಿಕೆದಾರರಿಗೆ ಕರೆ ನೀಡಿದ್ದಾರೆ. ಈ ವಿಚಾರವಾಗಿ, ಬ್ಯಾಂಕ್ ಗಳ ಜೊತೆಯೂ ಸಂವಾದ ನಡೆಸಿದ ಯೋಗಿ, ಗುಜರಾತ್ ಮಾದರಿಯ ರಾಜ್ಯವನ್ನು ಕಟ್ಟಲು ಮುಂದಾಗಿದ್ದಾರೆ. ಉತ್ತರ ಪ್ರದೇಶ ಎಂಬ ರಾಜ್ಯದಲ್ಲಿ, ಹೂಡಿಕೆ ಮಾಡಲು ಇದು ಒಳ್ಳೆಯ ಕಾಲ ಮತ್ತು ಎಲ್ಲ ಸೆಕ್ಟರ್ ಗಳಲ್ಲಿಯೂ ಸಮಾನವಾದ ಅವಕಾಶವಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇದು ಯಾವ ರೂಪ ಪಡೆಯುತ್ತದೆ ಎಂದು ಕಾದು ನೋಡ ಬೇಕಾಗಿದೆ.

UP for Sale

ಪ್ರಜಾಕಾರಣ ಮತ್ತು ಉಪ್ಪಿ ಐಡಿಯಾಸ್

ಪ್ರಜಾಕೀಯ ಪಕ್ಷವು ತನ್ನ ಪ್ರಣಾಳಿಕೆಯನ್ನು ಮೊನ್ನೆ ಬಿಡುಗಡೆ ಮಾಡಿದೆ. ಅದನ್ನು ಓದುತ್ತಿದ್ದರೆ, ಅರೇ ಇದೆಲ್ಲ ಸಾಧ್ಯ ನಾ ಅಂತ ಅನಿಸಿ ಬಿಡುತ್ತದೆ ಮತ್ತು ಇವುಗಳು ನಡೆದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ ಅಂತ ನೂ ಅನಿಸದೇ ಇರಲು ಸಾಧ್ಯವಿಲ್ಲ. ಒಟ್ಟು 24 ಪ್ರಣಾಳಿಕೆಗಳು ಇದ್ದು, ಈ ಬರುವ ಚುನಾವಣೆಯಲ್ಲಿ  ಪ್ರಮುಖ ಪಾತ್ರವನ್ನು ನಿಭಾಯಿಸಲು ಸಜ್ಜಾಗಿವೆ.

ಸರ್ಕಾರದ್ದೇ ಆದ ಟೆಲಿವಿಜನ್ ಚಾನಲ್, ಪ್ರತಿಯೊಂದು ಇಲಾಖೆಗಳಲ್ಲಿ ಹಾಗೂ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಸಾಮಾಜಿಕ ಜಾಲತಾಣಗಳು, ಮತ್ತು ಮೊಬೈಲ್ ಅಪ್ಲಿಕೇಶನ್ ಗಳು ಲಭ್ಯವಿರುತ್ತವೆ. ಸಮಸ್ಯೆ ಪರಿಹರಿಸಿದ ಪ್ರತಿನಿಧಿಗಳಿಗೆ ಪುರಸ್ಕಾರ, ಅಂಕಗಳು, ಎಲ್ಲ ಸರ್ಕಾರ ಕಚೇರಿಗಳಲ್ಲಿ
ಬಯೊಮೀಟ್ರಿಕ್ ಎಂಟ್ರಿ ವ್ಯವಸ್ಥೆ, ದಾಖಲೆ ಬದ್ಧ ಅಧಿಕಾರ ಚಲಾವಣೆ, ಆನ್ಲೈನ್ ನಲ್ಲಿ ಟೆಂಡರ್ ಚರ್ಚೆ, ಮತ್ತು ಹೀಗೆ ಹಲವು ವಿಚಾರಗಳು ನೀವು ಪ್ರಣಾಳಿಕೆಯಲ್ಲಿ ನೋಡಬಹುದು.

ರೀಲ್ ನಲ್ಲಿ ಕೊಟ್ಟ ಒಂದು ಐಡಿಯಾ ಈಗ ಉತ್ತರ ಪ್ರದೇಶದಲ್ಲಿ ಜಾರಿಗೆ ಬರುತ್ತಿದೆ ಮತ್ತು ಹಿಂದೆ ಮೋದಿ ಅವರೂ  ಸಹ ಇದನ್ನು ಗುಜರಾತ್ ನಲ್ಲಿ ಅಳವಡಿಸಿದ್ದು, ಉಪೇಂದ್ರ ರವರ ದೂರ ದೃಷ್ಟಿಗೆ ಕನ್ನಡಿಯಾಗಿ ನಿಂತಿದೆ. ಜಸ್ಟ್ ಸಿನಿಮಾದಲ್ಲಿ ಈ ರೀತಿ ಆದರೆ, ರಿಯಾಲಿಟಿ ನಲ್ಲಿ ಇನ್ನು ಏನೇನು ಮಾಡಬಹುದು ಅಂತ ನೀವೇ ಯೋಚನೆ ಮಾಡಿ. ಬ್ರಿಲಿಯಂಟ್ ಐಡಿಯಾಸ್, ಹೊಸ ಆಲೋಚನೆಗಳು, ಕಾರ್ಪೊರೇಟ್ ಪಾಲಿಟಿಕ್ಸ್, ಅಂಡ್ ಉಪ್ಪಿ ಉವಾಚಗಳು.

Comments

comments

[jetpack_subscription_form]
SHARE
Previous articleHITS AND FLOPS OF 2017 – KFI Creates Yet Another Record But Flunks in Success Rate??
Next article12 The Most Easiest and Simple Ways to Impress Bengalurians like Never Before
mm
Shrinag is a writer, designer, and a social media buff who loves to scribble, explore and present the things in a creative way. When he is not writing or designing, he loves reading books, meditate, travel, and paint.

LEAVE A REPLY

Please enter your comment!
Please enter your name here