ನಿಮಗೆ ಗೊತ್ತಿರದ ಮತ್ತು ಓದಲೇಬೇಕಾದ ‘ಓಂ’ ಚಿತ್ರದ ತೆರೆ ಹಿಂದಿನ 12 ರೋಚಕ ವಿಷಯಗಳು

Om Kannada Movie

ಕನ್ನಡದಲ್ಲಿ ಅದೆಷ್ಟೋ ಹಿಟ್ ಚಿತ್ರಗಳು ಬಂದಿವೆ.. ಅದೆಷ್ಟೋ ಚಿತ್ರಗಳು ದಾಖಲೆಗಳನ್ನು ಬರೆದಿವೆ ಆದರೆ ಈ ‘ಓಂ’ ಅನ್ನೋ ಚಿತ್ರ ಈವತ್ತಿಗೂ ಒಂದು ದಾಖಲೆ ಅಂದರೆ ತಪ್ಪಾಗಲಾರದು. 1995 ರಲ್ಲಿ ಬಿಡುಗಡೆಯಾದ ‘ಓಂ’, ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿ ಬಂದ ಒಂದು ಕ್ಲಾಸಿಕ್ ಇಂಡಿಯನ್ ಸಿನಿಮಾ. ಇಂದಿಗೂ ಈ ಚಿತ್ರ ಬಂದರೆ ಸಾಕು ಜನ ಹುಚ್ಚೆದ್ದು ಮುಗಿಬೀಳ್ತಾರೆ ಅಂದರೆ ಅದಕ್ಕೆ ಕಾರಣ ಇದೆ. ಸುಮ್ನೆ ಅಲ್ಲ. ಹಾಗಾದರೆ ಬನ್ನಿ, ಈ ‘ಓಂ’ ಚಿತ್ರದ ಬಗ್ಗೆ ಇರುವ ಕೆಲವು ಸ್ವಾರಸ್ಯಕರವಾದ ವಿಷಯಗಳನ್ನು ಮತ್ತು ಯಾರಿಗೂ ಗೊತ್ತಿರದ ಹಲವು ತೆರೆ ಹಿಂದಿನ ಕಥೆಗಳನ್ನು ನೋಡೋಣ.

ಶಿವ್ ರಾಜಕುಮಾರ್ ಮುಖ್ಯ ಭೂಮಿಕೆ ಯಲ್ಲಿ ಇರುವ ಈ ಕಥೆಯನ್ನು, ಭೂಗತ ಪ್ರಪಂಚದ ಮಜಲುಗಳನ್ನು ಸರಾಸರಿಯಾಗಿ ಪ್ರೇಮದ ಲೇಪನೆಯಲ್ಲಿ ಹೇಳಲಾಗಿತ್ತು. ನಿಮಗೆ ಈಗಾಗಲೇ ಗೊತ್ತಿರುವ ಹಾಗೆ, ಓಂ ಮರು ಬಿಡುಗಡೆ ಯಾಗಿದ್ದು ಬರೋಬ್ಬರಿ 632 ನೇ ಸಾರಿ ಅಂಡ್ ಇದು ಇಡೀ ಭಾರತದ ಚಿತ್ರರಂಗದ ಇತಿಹಾಸದಲ್ಲೇ ಒಂದು ದಾಖಲೆ ಮತ್ತು ಮೈಲಿಗಲ್ಲು. ‘ಓಂ’ ಅಂತಹ ಚಿತ್ರ ಆಗುವುದು ಕೇವಲ ಒಂದು ಬಾರಿ ಅಂಡ್ ‘ಓಂ’ ನ ಮರುಸೃಷ್ಠಿ ಸ್ವತಃ ಉಪೇಂದ್ರ ಕೂಡ ಮಾಡಲಾಲರು. ಇದನ್ನು ಅವರೇ ಹೇಳಿರುವ ಹಾಗೆ, ” ಓಂ ಒಂದು ಅದ್ಬುತ. ಅದು ಆಯಿತು , ಆಯಿತು ಅಷ್ಟೇ. ನಾನೂ ಅದರ ಒಂದು ಭಾಗ ಎಂದು ಹೇಳಲು ಹೆಮ್ಮೆ ಪಡುತ್ತೇನೆ.”

Advertisements

ಓಂ ಚಿತ್ರದ ಬಗ್ಗೆ ನಿಮಗೆ ಗೊತ್ತಿರದ ಕೆಲವು ವಿಷಯಗಳು

ಓಂ ಚಿತ್ರದ ಕಥೆಯನ್ನು ಉಪೇಂದ್ರ ಅವರು ತಮ್ಮ ಕಾಲೇಜು ದಿನಗಳಲ್ಲಿ ಬರೆದದ್ದು

ಒಂದು ರಿಯಾಲಿಟಿ ಶೋ ನಲ್ಲಿ ಮಾತಾಡುತ್ತಾ, ಉಪೇಂದ್ರ ಅವರು ಓಂ ಚಿತ್ರದ ಕಥೆಯನ್ನು ತಮ್ಮ ಕಾಲೇಜು ದಿನಗಳಲ್ಲಿ ಬರೆದದ್ದು ಎಂದು ಹಂಚಿಕೊಂಡಿದ್ದರು. ಅವರು ತಮ್ಮ ಕೆರಿಯರ್ ಶುರು ಮಾಡುವ ಮೊದಲು ಬರೆದ ೧೦ ಕಥೆಗಳಲ್ಲಿ ಓಂ ನ ಕಥೆಯೂ ಒಂದು. ಉಪೇಂದ್ರ ಅವರ ಸ್ನೇಹಿತರಾದ ಪುರುಷೋತ್ತಮ್ ಬರೆದ ಒಂದು ಕಾಗದ ಓಂ ಕಥೆಗೆ ಸ್ಪೂರ್ತಿ ಆಯಿತು ಎಂದರೆ ನೀವು ನಂಬಲೇ ಬೇಕು. ಕಥೆಯ ಒಂದೆಳೆಯನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದ ಉಪೇಂದ್ರರವರಿಗೆ ಅದನ್ನು ಸಿನಿಮಾ ಮಾಡುವ ಅವಕಾಶ ಆ ಸಮಯದಲ್ಲಿ ಸಿಗಲಿಲ್ಲ.

Om Kannada Movie

1989 ರಲ್ಲಿ ತೆರೆಕಂಡ ‘ಶಿವ’ ಎಂಬ ಸಿನಿಮಾದ ಕಥೆಯು ಉಪೇಂದ್ರ ರವರ ಕಥಾ ಹಂದರವನ್ನೇ ಹೋಲುತಿತ್ತು

ಉಪೇಂದ್ರ ರವರು ಮೊದಲಿನಿಂದಲೂ ಭೂಗತ ಲೋಕ ಮಾತ್ತು ಮಾಫಿಯಾ ಎಂಬ ವಿಷಯದ ಬಗ್ಗೆ ಸಿನಿಮಾ ಮಾಡುವ ಆಸಕ್ತಿ ಹೊಂದಿದ್ದರು. ಅವರು ಒಂದು ಕಥೆಯ ಎಳೆಯನ್ನೂ ಸಹ ಸಿದ್ಧ ಪಡಿಸಿದ್ದರು ಆದರೆ ಅದನ್ನು ಅಲ್ಲೇ ಬಿಟ್ಟು ಬಿಡಬೇಕಾಯ್ತು. ಅದು ಉಪೇಂದ್ರ ಅವರಿಗೆ ನೋವ ತಂದ ಸಂಗತಿ. ಆಗ ತೆರೆಕಂಡ ಶಿವ ಚಿತ್ರದ ಕಥೆ, ಉಪೇಂದ್ರ ಬರೆದ ಕಥೆಯನ್ನೇ ಹೋಲುತಿತ್ತು. ಹಾಗಾಗಿ ಇದನ್ನು ಸಿನಿಮಾ ಮಾಡುವ ಆಸೆಯನ್ನು ಉಪೇಂದ್ರ ಬಿಟ್ಟಿದ್ದರು. ನಂತರ ಅದನ್ನು ಉಲ್ಟಾ ಮಾಡಿ ಓಂ ಸೃಷ್ಠಿ ಮಾಡಿದ್ದು ಇವತ್ತಿಗೆ ಒಂದು ರೋಚಕ ಇತಿಹಾಸ.

facts about OM

ತರ್ಲೆ ನನ್ ಮಗ ಮತ್ತು ಶ್ ನಂತರ ಉಪೇಂದ್ರ ನಿರ್ದೇಶಿಸಿದ ಮೂರನೇ ಚಿತ್ರವೇ ಈ ಓಂ

ಉಪೇಂದ್ರ ಸಿನಿಮಾ ರಂಗಕ್ಕೆ ಬಂದದ್ದು ಕಾಶಿನಾಥ್ ಗರಡಿ ಇಂದ ಎಂಬುದು ನಿಮಗೆಲ್ಲ ಗೊತ್ತಿರುವ ವಿಷಯ. ಸಂಭಾಷಣೆ, ಕಥೆ, ಹಾಡು ಬರೆಯುತ್ತಿದ್ದ ಉಪೇಂದ್ರ ರವರಿಗೆ ‘ತರ್ಲೆ ನನ್ ಮಗ’ ಎಂಬ ಸಿನಿಮಾ ವನ್ನು ನಿರ್ದೇಶಿಸುವ ಅವಕಾಶ ಬರುತ್ತದೆ. ಅದರ ನಂತರ ಶ್ ಬರುತ್ತದೆ. ಈ ಎರಡು ಚಿತ್ರಗಳು ಒಳ್ಳೆ ಹೆಸರು ಮಾಡಿ ಸಿನಿಮಾ ಮೇಕಿಂಗ್ ನ ಶೈಲಿ ಯನ್ನು ಬದಲಿಸುತ್ತವೆ. ನೆಕ್ಸ್ಟ್ ಉಪೇಂದ್ರ ಏನ್ ಮಾಡ್ತಾರೆ ಎಂಬ ಕುತೂಹಲ ಇರೋವಾಗಲೇ, ಓಂ ಎಂದು ಓಂಕಾರ ಬರೆಯಲು ಸಿದ್ಧರಾಗುತ್ತಾರೆ.

Advertisements

Om Kannada Movie

ಶಿವ ರಾಜಕುಮಾರ್ ಓಂ ಚಿತ್ರಕ್ಕೆ ಮೊದಲ ಆಯ್ಕೆ ಅಲ್ಲ

ಅದು ಉಪೇಂದ್ರ ಚಿತ್ರ ಕಥೆ ಬರೆಯುತ್ತಿದ್ದ ಸಮಯ.. ‘ಸತ್ಯ’ ಎಂಬ ಶೀರ್ಷಿಕೆ ಅವರ ತಲೆಯಲ್ಲಿ ಇತ್ತು ಮತ್ತು ಕುಮಾರ್ ಗೋವಿಂದ್ ರನ್ನು ಮುಖ್ಯ ಭೂಮಿಕೆ ಯಲ್ಲಿ ಇಡುವ ಯೋಚನೆ ಸಹ ಇತ್ತು. ಹಿಂದಿನ ಶ್ ಚಿತ್ರದ ಕಾಂಬಿನೇಶನ್ ಹಿಟ್ ಆಗಿದ್ದರಿಂದ, ಈ ಯೋಚನೆ ಬಂದಿದ್ದು ಸಹಜ. ನಂತರ ಚಿತ್ರ ಕಥೆ ದೆವೆಲೋಪ್ ಆಗ್ತಾ, ಉಪೇಂದ್ರ, ಶಿವಣ್ಣ ಇದ್ರೆ ಚೆಂದ ಎಂದು ನಿರ್ಧರಿಸ್ತಾರೆ. ಅವರು ಹೇಳೋ ಹಾಗೆ, “ಶಿವಣ್ಣನ ಕಣ್ಣಲ್ಲಿ ಆ ಇಂಟೆನ್ಸಿಟಿ ಇದೆ ಮತ್ತು ಅವರೇ ‘ಸತ್ಯ’ ಎಂಬ ಪಾತ್ರಕ್ಕೆ ನ್ಯಾಯ ಒದಗಿಸ ಬಲ್ಲರು” ಎಂದು. ಇಂದು ಶಿವಣ್ಣ ಅಲ್ಲದೆ ಬೇರೆ ಯಾರನ್ನೂ ಆ ಪಾತ್ರದಲ್ಲಿ ಊಹೆ ಮಾಡಿಕೊಳ್ಳಲು ಸಹ ಸಾಧ್ಯ ವಿಲ್ಲ. ಅಷ್ಟರ ಮಟ್ಟಿಗೆ ಶಿವ್ ರಾಜ್ ಕುಮಾರ್ ಆ ಪಾತ್ರದ ಜೀವ ಆಗಿಬಿಟ್ಟರು.. ವನ್ಸ್ ಅಗೈನ್ ಉಪೇಂದ್ರ, ಪಾತ್ರದ ಆಯ್ಕೆ ಯಲ್ಲಿ ಗೆದಿದ್ದರು.

OM kannada movie

ಓಂ ಚಿತ್ರದ ಹಿಂದೆ ಹೊನ್ನವಳ್ಳಿ ಕೃಷ್ಣ ಅವರ ಪಾತ್ರ ಬಹು ಮುಖ್ಯ ವಾದದ್ದು

ಶಿವ ರಾಜ್ ಕುಮಾರ್ ರನ್ನು ಕ್ಯಾಸ್ಟ್ ಮಾಡುವ ಯೋಚನೆ ಯಲ್ಲಿ ಇರುವಾಗ, ಹೇಗಪ್ಪಾ ಇಂತಹ ಸ್ಟಾರ್ ನಟನನ್ನು ಒಪ್ಪಿಸುವುದು ಎಂಬ ಯೋಚನೆ ಯಲ್ಲಿ ಇದ್ದಾಗ, ಉಪೇಂದ್ರ ಭೇಟಿ ಮಾಡಿದ್ದು ಹೊನ್ನವಳ್ಳಿ ಕೃಷ್ಣ ರವರನ್ನು. ರಾಜ್ ಕುಟುಂಬಕ್ಕೆ ಹತ್ತಿರ ಇದ್ದ ಕೃಷ್ಣ, ಉಪೇಂದ್ರ ರವರನ್ನು ಕಥೆ ಹೇಳಲು ಅಣ್ಣಾವ್ರ ಮನೆಗೆ ಕರೆದು ಕೊಂಡು ಹೋದರು. ರಾಜಕುಮಾರ್ ರ ಅಣ್ಣ, ವರದಪ್ಪ ಅವರೊಂದಿಗೆ ಮಾತಾಡಿ ರಾಜ್ ಕುಮಾರ್ ರೊಂದಿಗೆ ಭೇಟಿ ಏರ್ಪಾಡು ಮಾಡಿಸಿದರು.

ನೀವು ನಂಬಲೇ ಬೇಕು, ಕಥೆ ಕೇಳಿದ ಕೇವಲ 10 ನಿಮಿಷದಲ್ಲೇ, ಡಾ. ರಾಜ್ , ಗ್ರೀನ್ ಸಿಗ್ನಲ್ ಕೊಟ್ಟು ಬಿಟ್ಟರು. ಕಥೆಯ ಅಂಶ, ಸಂದೇಶ, ಮತ್ತು ವಿಷಯ ಹೊಸದಾಗಿ ಇರುವ ಕಾರಣ, ಕಥೆ ಓಕೆ ಆಯಿತು ಅಂಡ್ ಶಿವ್ ರಾಜ್ ಕುಮಾರ್ ರ ಕಾಲ್ ಶೀಟ್ ಅಂದುಕೊಂಡದ್ದು ಗಿಂತ ಸುಲಭವಾಗಿಯೇ ದೊರೆಯಿತು.

Advertisements

ಹಾಗೆಯೇ, ಸಿನಿಮಾ ವನ್ನು ಪಾರ್ವತಮ್ಮ ಬ್ಯಾನರ್ ಅಡಿಯಲ್ಲಿಯೇ ನಿರ್ಮಾಣ ಎಂತಲೂ ನಿರ್ಧಾರ ವಾಯಿತು. ಆಗ ಪಾರ್ವತಮ್ಮ ನವರು ಉಪೇಂದ್ರ ರವರ ಕೈಗೆ, ಟೋಕನ್ ಅಡ್ವಾನ್ಸ್ ಎಂದು ೫೦,೦೦೦ ಇಟ್ಟಾಗ, ಉಪೇಂದ್ರ ಅಕ್ಷರಸಹ ಭಾವುಕರಾಗಿ, ಕಣ್ಣೇರು ಇಟ್ಟರು. ನಿಜಕ್ಕೂ ಅದು ಯಾರ ಪಾಲಿಗೇ ಆಗಲಿ, ಒಂದು ಸಂತಸದ ಕ್ಷಣ.

facts about OM

ಜೂಹಿ ಚಾವ್ಲಾ ಎಂಬ ಬಾಲಿವುಡ್ ನಟಿಯು ಹೆಸರು ಕೇಳಿ ಬಂದಿತ್ತು

ನಿರ್ದೇಶಕರು ಹೆರೋಯಿನ್ ನ ಹುಡುಕಾಟದಲ್ಲಿ ಇರುವಾಗ, ಕೆಲವು ಬಾಲಿವುಡ್ ಚಿತ್ರ ನಟಿಯರ ಹೆಸರು ಕೇಳಿ ಬಂದಿತ್ತು. ಜೂಹಿ ಚಾವ್ಲಾ ಎಂಬ ಮಾದಕ ಚೆಲುವೆಯ ಹೆಸರೂ ಸಹ ಗುಲ್ಲಾಗಿತ್ತು. ಆದರೆ ತಂಡ ಆಯ್ಕೆ ಮಾಡಿದ್ದು ‘ಪ್ರೇಮ’ ಎಂಬ ಹೆಸರನ್ನು. ಅದಾಗಲೇ ಪ್ರೇಮ ಅವರು ಶಿವಣ್ಣನ ಜೊತೆಗೆ ‘ಸವ್ಯಸಾಚಿ’ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

facts about OM

ಓಂ ಒಂದು ಭೂಗತ ಲೋಕದ ಪಾತಕಿಯರ ಜೀವನ ಇಟ್ಟುಕೊಂಡ ಹೆಣೆದ ಕಥೆ ಆಗಿತ್ತು

ಓಂ ನ ಕಥೆ ಭೂಗತ ಲೋಕದ ಮೇಲೆ ಆಧಾರಿತ ವಾಗಿದ್ದರಿಂದ, ನಿಜವಾದ ಅಂಡರ್ವರ್ಲ್ಡ್ ಡಾನ್ ಗಳು ಚಿತ್ರದಲ್ಲಿ ಇದ್ದರೆ ನೈಜತೆ ಇರುತ್ತದೆ ಎಂದು ಯೋಚಿಸಿ, ಹಾಗೆಯೇ ಭೂಗತ ಲೋಕದ ಕೆಲ ಪಾತಕಿಯರನ್ನು ಸಿನಿಮಾ ಗೆ ಕ್ಯಾಸ್ಟ್ ಮಾಡುತ್ತಾರೆ. ಚಿತ್ರದಲ್ಲಿ ಬೆಂಗಳೂರು ಡಾನ್ ಗಳಾದ ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಕೃಷ್ಣ, ತಂವೀರ್ ಅಹ್ಮದ್, ಮತ್ತು ಜೇಡ್ರಹಳ್ಳಿ ಕೃಷ್ಣ ಮುಖ್ಯ ಪಾತ್ರವನ್ನು ವಹಿಸಿದ್ದರು. ಈ ವಿಷಯ ಆ ಕಾಲದಲ್ಲಿ ತುಂಬಾ ಸುದ್ದಿ ಆಗಿತ್ತು.

Advertisements

Om Kannada Movie

ಓಂ ನ ಶೀರ್ಷಿಕೆ ಹುಟ್ಟಿದ್ದೇ ಒಂದು ರೋಚಕ ಕಥೆ

ಕಥೆ ಮಾಡುವಾಗ ಉಪೇಂದ್ರ ಯೋಚಿಸಿದ ಟೈಟಲ್ ‘ಸತ್ಯ’ ಆದರೆ ಅದು ನಂತರ ದಿನಗಳಲ್ಲಿ ‘ಓಂ’ ಎಂದು ಬದಲಾಗುತ್ತದೆ. ಕನ್ನಡ ಕಣ್ಮಣಿ ರಾಜಕುಮಾರ್ ರವರು ಕಥೆಯ ಹಾಳೆಯ ಮೇಲೆ ‘ಓಂ’ ಎಂದು ಬರೆದಾಗ, ಉಪೇಂದ್ರರವರು ಇದನ್ನೇ ಯಾಕೆ ಟೈಟಲ್ ಆಗಿ ಇಡಬಾರದು ಎಂದು ಯೋಚಿಸಿ, ಸಿನಿಮಾದ ಶೀರ್ಷಿಕೆ ಯನ್ನು ‘ಓಂ’ ಎಂದು ರಿಜಿಸ್ಟರ್ ಮಾಡಿಸುತ್ತಾರೆ.

ಇದರಿಂದ ಉಪೇಂದ್ರ ರವರ ಒಂದು ಅಕ್ಷರದ ಟೈಟಲ್ ಇಡುವ ಟ್ರೆಂಡ್ ಮುಂದುವರೆಯಿತು. ಬಿ.ಸಿ ಗೌರಿ ಶಂಕರ್, ಸಿನೆಮಾದ ಸಿನೆಮ್ಯಾಟೋಗ್ರಾಫರ್, ಟೈಟಲ್ ಗೆ ತಕ್ಕಂತೆ ಚಿತ್ರದ ಉದ್ದಕ್ಕೂ ಹಳದಿ ಫಿಲ್ಟರ್ ಬಳಕೆ ಮಾಡಿದ್ದು ಅದು ನಮಗೆ ಬೆಳ್ಳಿ ಪರದೆ ಮೇಲೆ ಹೊಸದಾಗಿ, ನವಿರಾಗಿ ಕಂಡಿತ್ತು.

Om Kannada Movie

‘ಹೇ ದಿನಕರ’ ಎಂಬ ಹಾಡು ಸೂಚಿಸಿದ್ದು ಡಾ. ರಾಜ್

ಹಾಗೆ ನೋಡಿದರೆ ಸಿನಿಮಾ ದಲ್ಲಿ ಈ ಹಾಡು ಇಡುವ ಯೋಚನೆ ತಂಡಕ್ಕೆ ಇರಲಿಲ್ಲ. ಅಂದರೆ ‘ಓಂ’ ಪದ ಬಳಕೆ ಮಾಡಿ ಯಾವ ಹಾಡೂ ಸಹ ಕಂಪೋಸ್ ಆಗಿರ್ಲಿಲ್ಲ. ಆದರೆ ಡಾ. ರಾಜ್ ರ ಸೂಚನೆ ಮೇರೆಗೆ, ಹೇ ದಿನಕರ ಎಂಬ ಹಾಡು ಮಾಡಲಾಯಿತು. ಇಂದು ಈ ಹಾಡನ್ನು ಎಲ್ಲೇ ಕೇಳಿದರು, ಒಂದು ಪೂಜ್ಯ ಭಾವ ನಮ್ಮ ಮನದಲ್ಲಿ ಮೂಡುವದು ಖಂಡಿತ. ಹಂಸಲೇಖ ರವರಿಗೆ ಈ ಮೂಲಕ ನಮ್ಮ ಧನ್ಯವಾದವನ್ನು ತಿಳಿಸಲು ಹೆಮ್ಮೆ ಅನಿಸುತ್ತದೆ.

kannada movies

ಸಿನೆಮಾದ ಆಡಿಯೋ ಹಕ್ಕನ್ನು ಮ್ಯಾಗ್ನ ಮ್ಯೂಸಿಕ್ ಕಂಪನಿ ಖರೀದಿ ಮಾಡುತ್ತಾರೆ

ಓಂ ತೆರೆಕಂಡಿದ್ದು 1995 ರಲ್ಲಿ ಆದರೆ ಇದರ ಆಡಿಯೋ ಹಕ್ಕನ್ನು ಖರೀದಿ ಮಾಡಿದ್ದು ಸೆಪ್ಟೆಂಬರ್ 2015 ರಲ್ಲಿ. ಇಲ್ಲೇ ನೀವು ಊಹೆ ಮಾಡಬಹುದು, ಓಂ ನ ಹವಾ ಹೇಗಿದೆ ಎಂದು. ಒಂದು ಮೂಲದ ಪ್ರಕಾರ, ಸೋನಿ ಮ್ಯೂಸಿಕ್ ಕಂಪನಿ ಸಹ ಇದರ ಆಡಿಯೋ ಹಕ್ಕನ್ನು ಖರೀದಿ ಮಾಡಿತ್ತು ಎಂದು ಹೇಳಲಾಗುತ್ತದೆ.

Advertisements

facts about OM

ಓಂ ಮರು ಬಿಡುಗಡೆಯಾಗಿದ್ದು ಬರೋಬ್ಬರಿ 632 ನೇ ಸಾರಿ ಮತ್ತು ಇದು ಭಾರತದ ಚಿತ್ರರಂಗದ ಇತಿಹಾಸದಲ್ಲೇ ಒಂದು ದಾಖಲೆ

ಮಾರ್ಚ್ 2015 ಅಂತ ಇತ್ತು ಕೊಂಡರೆ, ಓಂ ಮರು ಬಿಡುಗಡೆ ಯಾಗಿದ್ದು ಬರೋಬ್ಬರಿ 632 ನೇ ಸಾರಿ ಮತ್ತು ಕರ್ನಾಟಕದ 400 ಚಿತ್ರ ಮಂದಿರಗಳಲ್ಲಿ ತೆರೆ ಕಂಡಿದ್ದು ಒಂದು ವಿಶೇಷ.. ಮಾರ್ಚ್ 12, 2015, ರಲ್ಲಿ ಡಿ.ಟಿ.ಸ್ ತಂತ್ರ ಜ್ಞಾನ ದೊಂದಿಗೆ 100 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಿದ್ದು ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿ.

Om Kannada Movie

ಓಂ ತೆಲುಗು ಮತ್ತು ಹಿಂದಿ ಗೆ ರಿಮೇಕ್ ಆಗುತ್ತದೆ

1997 ರಲ್ಲಿ, ಓಂ ತೆಲುಗು ಗೆ ‘ಓಂಕಾರಂ’ ಎಂಬ ಟೈಟಲ್ ಅಡಿಯಲ್ಲಿ ರಿಮೇಕ್ ಆಗುತ್ತದೆ ಮತ್ತು ಅದರಲ್ಲಿ ರಾಜಶೇಖರ್ ಅಂಡ್ ಪ್ರೇಮ ಮುಖ್ಯ ಪಾತ್ರಧಾರಿಗಳು. ಉಪೇಂದ್ರ ರವರೇ ತೆಲುಗು ಅವತರಣಿಕೆಯನ್ನು ನಿರ್ದೇಶನ ಮಾಡುತ್ತಾರೆ. ಹಿಂದಿ ಯಲ್ಲಿ ಅರ್ಜುನ್ ಪಂಡಿತ್ ಆಗಿ ರಿಮೇಕ್ ಆದ ‘ಓಂ’ 1998 ರಲ್ಲಿ ತೆರೆ ಕಂಡ ‘ಸತ್ಯ’ ಎಂಬ ಚಿತ್ರಕ್ಕೂ ಸ್ಪೂರ್ತಿ ಆಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬರುತ್ತದೆ.. ಇದು ಒಂದು ಆಕಸ್ಮಿಕ ಎಂದು ಕೆಲವರು ಹೇಳುತ್ತಾರೆ ಆದರೆ ಕಥೆಯನ್ನು ಸೂಕ್ಶ್ಮವಾಗಿ ಗಮನಿಸಿದರೆ, ಇರಬಹುದೇನೋ ಎಂದೂ ಸಹ ಅನಿಸುತ್ತದೆ.

ಅಬ್ಬಾ! ಹೀಗಿತ್ತು ನೋಡಿ ‘ಓಂ’ಚಿತ್ರದ ತೆರೆ ಹಿಂದಿನ ರೋಚಕ ಕಥೆಗಳು. ನಿಮಗೆ ಈ ಬರಹ ಇಷ್ಟವಾದಲ್ಲಿ ‘ಲೈಕ್’ ಮಾಡಿ ಮತ್ತು ತಪ್ಪದೇ ಶೇರ್ ಮಾಡಿ.

Read the Article in English 

Get the best of Metrosaga delivered to your inbox. Subscribe to Metrosaga and never miss an update from us.

Advertisements