ಕೃಷ್ಣ ಒಂದು ದೋಣಿಯಲ್ಲಿ ಬಂದು ಉಡುಪಿ ತಲುಪಿರುವ ರೋಚಕ ಸತ್ಯ ಘಟನೆ ಇಲ್ಲಿದೆ

udupi krishna

ನಮ್ಮ ಕರ್ನಾಟಕದಲ್ಲಿ ತುಂಬಾ ಪವಿತ್ರವಾದ ಸ್ಥಳಗಳಿವೆ. ಪ್ರವಾಸಿ ತಾಣಗಳ ಜೊತೆಗೆ, ದೇವಾಲಯಗಳು ಹೆಚ್ಚಾಗಿ ಇವೆ. ದಿನ ಬೆಳಗಾದ್ರೆ ಸಾವಿರಾರು ಜನ ಭಕ್ತಾಧಿಗಳು ದೇವಾಲಯಗಳಿಗೆ ಭೇಟಿ ನೀಡ್ತಾರೆ. ಈ ದೇವಾಲಯಗಳನ್ನ ನೋಡಲು ದೇಶ ವಿದೇಶಗಳಿಂದ ಬರುತ್ತಾರೆ. ಯಾಕಂದ್ರೆ ನಮ್ಮಲ್ಲಿರುವ ದೇವಾಲಯಗಳ ಇತಿಹಾಸ ಬಹಳಷ್ಟು ವಿಶೇಷವಾಗಿದೆ ಹಾಗೂ ವಿಶಿಷ್ಟವಾಗಿದೆ.

ಹೌದು. ಇದೆ ರೀತಿ ನಮ್ಮಲ್ಲಿರುವ ವಿಶೇಷವಾದ ದೇವಾಲಯಗಳಲ್ಲಿ ಉಡುಪಿಯೂ ಒಂದು. ಉಡುಪಿ ನಮ್ಮ ಕರ್ನಾಟಕ ರಾಜ್ಯದ ಅತ್ಯಂತ ಪವಿತ್ರವಾದ ದೇವಾಲಯ. ಇದು ಶ್ರೀ ಕೃಷ್ಣನಿಗೆ ಸಮರ್ಪಿತವಾದ ದೇವಾಲಯವಾಗಿದೆ. ಕಿಂಡಿಯಲ್ಲಿ ಕಾಣುವ ಕೃಷ್ಣನನ್ನ ನೋಡಲು ಸಾವಿರಾರು ಭಕ್ತಾಧಿಗಳು ಬರುತ್ತಾರೆ. ಈ ದೇವಾಲಯವು ಸುಮಾರು 100 ವರ್ಷಗಳಷ್ಟು ಹಳೆಯದಾಗಿದೆ.

Advertisements

ಉಡುಪಿ ಸ್ಥಾಪನೆಯಾಗಿದ್ದಾದ್ರೂ ಹೇಗೆ?

ಈ ಹಿಂದೆ ಪ್ರಜಾಪತಿಯ ಶಾಪದಿಂದ ಮುಕ್ತಿ ಹೊಂದಲು ಚಂದ್ರನು ಇಲ್ಲಿರುವ ಒಂದು ಸ್ಥಳದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿದನು. ತದನಂತರ ಚಂದ್ರನೇ ಇಲ್ಲಿ ಒಂದು ದೇವಾಲಯ ನಿರ್ಮಿಸಿದನು. ಆಗಿನಿಂದ ಈ ಆ ದೇವಾಲಯವನ್ನ ಜನರು ಚಂದ್ರೇಶ್ವರ ದೇವಾಲಯ ಎಂದು ಹೆಸರಿಟ್ಟರು. ಆಗ ದೇವಾಲಯದಲ್ಲಿ ಉಡುಪ ಅನ್ನೋ ಅಕ್ಷರಗಳು ಎಲ್ಲೆಂದರಲ್ಲಿ ಕಾಣುತ್ತಿತ್ತು. ಅದಕ್ಕೋಸ್ಕರ ಇಲ್ಲಿನ ಜನರೇ ಈ ಊರಿಗೆ ಉಡುಪ ಎಂದು ಹೆಸರಿಡಬೇಕು ಅಂದು ನಿರ್ಧಾರ ಮಾಡಿದರು. ಅಂದಿನಿಂದ ಇದು ಉಡುಪ ಆಗಿತ್ತು. ಕಾಲಾನುಕ್ರಮವಾಗಿ ಉಡುಪಿ ಎಂದು ಬದಲಾಯಿತು. ಮೊದಲು ಉಡುಪಿಯಲ್ಲಿ ಚಂದ್ರೇಶ್ವರ ದೇವಾಲಯ ನಿರ್ಮಾಣವಾಗಿದ್ದು. ಹಾಗಾಗಿ ಇಲ್ಲಿನ ಪದ್ಧತಿ ಏನೆಂದರೆ, ಇಲ್ಲಿಗೆ ಬರುವ ಭಕ್ತರು ಮೊದಲು ಅನಂತೇಶ್ವರ ಹಾಗೂ ಚಂದ್ರೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ನಂತರ ಕೃಷ್ಣನ ಸನ್ನಿದಿಗೆ ಹೋಗಬೇಕು ಅನ್ನೋದು ಇಲ್ಲಿನ ವಾಡಿಕೆಯಾಗಿದೆ.

ಕೃಷ್ಣ ಉಡುಪಿಗೆ ಬಂದಿದ್ದಾದ್ರೂ ಹೇಗೆ?

ಶ್ರೀ ಕೃಷ್ಣ ಉಡುಪಿಗೆ ಬಂದಿರೋದರ ಹಿಂದೆ ಒಂದು ರೋಚಕ ಕಥೆಯಿದೆ. ಹೌದು. ಒಮ್ಮೆ ದ್ವಾರಕೆಯಲ್ಲಿ ಕೃಷ್ಣನ ವಿಗ್ರಹವು ಗೋಪಿಚಂದನದಲ್ಲಿ ಮುಳುಗಿ ಕಾಣದಂತಾಯಿತು.ಆಗ ಆ ವಿಗ್ರಹ ಒಬ್ಬ ಅಂಬಿಗನ ಕೈಗೆ ಸಿಗುತ್ತೆ. ಅದನ್ನ ತೆಗೆದುಕೊಂಡು ಹಾಗೆ ದೋಣಿಯಲ್ಲಿ ಪ್ರಯಾಣ ಬೆಳೆಸುತ್ತಾನೆ. ನಂತರ ಆ ಅಂಬಿಗ ಮಲ್ಪೆ ಬಳಿಯ ಕರಾವಳಿ ಬಳಿ ಬರುತ್ತಾನೆ. ಆಗ ಆ ಸಮಯಕ್ಕೆ ಅಲ್ಲಿ ಸಂಪೂರ್ಣ ಬಿರುಗಾಳಿ ಹಬ್ಬುತ್ತೆ. ಆಗ ಅಲ್ಲಿಗೆ ಬಂದ ತ ಮತ ಸಂಸ್ಥಾಪಕರಾದ ಶ್ರೀ ಮದ್ವಾಚಾರ್ಯರು ಅದನ್ನೆಲ್ಲ ತಮ್ಮ ದಿವ್ಯ ದೃಷ್ಟಿಯಿಂದ ಅರಿತು, ತಮ್ಮ ಶಕ್ತಿಯಿಂದ ಬಿರುಗಾಳಿಯನ್ನ ನಿಲ್ಲಿಸುತ್ತಾರೆ. ಅದರಿಂದ ಸಂತೋಷಗೊಂಡ ಅಂಬಿಗ ಅವ್ರಿಗೆ ವಿಗ್ರಹ ನೀಡುತ್ತಾನೆ. ಆಗ ಆ ವಿಗ್ರಹವನ್ನ ತೆಗೆದುಕೊಂಡ ಮದ್ವಾಚಾರ್ಯರು ಅದನ್ನ ಅಲ್ಲೇ ಒಂದು ಕೊಳದಲ್ಲಿ ಶುದ್ದೀಕರಿಸಿ, ಅಲ್ಲೇ ಒಂದು ಸ್ಥಳದಲ್ಲಿ ಅದನ್ನ ಪ್ರತಿಷ್ಠಾಪಿಸುತ್ತಾರೆ. ಅಂದಿನಿಂದ ಅಲ್ಲಿ ಕೃಷ್ಣ ನೆಲೆಸಿದ್ದಾನೆ. ಶ್ರೀ ಕೃಷ್ಣನ ವಿಗ್ರಹವನ್ನು ಶುದ್ಧೀಕರಿಸಿದ ಕೆರೆಗೆ ಇಂದು ಮಾಧ್ವ ಸರೋವರ ಎಂದು ಕರೆಯಲಾಗುತ್ತಿದೆ.

 

ಮದ್ವಾಚಾರ್ಯರೇನೋ  ಶ್ರೀ ಕೃಷ್ಣನ ವಿಗ್ರಹವನ್ನ ಒಂದೆಡೆ ಪ್ರತಿಷ್ಠಾಪನೆ ಮಾಡಿದರು. ನಂತರ ಅದಕ್ಕೆ ಒಂದು ದೇವಾಲಯ ನಿರ್ಮಾಣ ಮಾಡಬೇಕು ಅಂತ ನಿರ್ಧರಿಸಿ ದೇವಾಲಯವನ್ನು ನಿರ್ಮಾಣ ಮಾಡಿದರು. ಆದ್ರೆ ಅಲ್ಲಿ ವರೆಗೂ ಇಲ್ಲಿ ಒಂದು ದೇವಾಲಯವಿದೆ. ಆ ದೇವಸ್ಥಾನ ತುಂಬಾ ಪ್ರಖ್ಯಾತಿ ಅಂತ ಯಾರಿಗೂ ಗೊತ್ತಿರಲಿಲ್ಲ. ಆದ್ರೆ ಯಾವಾಗ ಕೃಷ್ಣನ ಮಹಿಮೆ ಜನರಿಗೆ ತಿಳಿಯಿತೋ, ಅಂದಿನಿಂದ ಅಲ್ಲಿಗೆ ಲಕ್ಷಂತಾರ ಜನ ಭಕ್ತರು ಬರೋಕೆ ಶುರುವಾಗುತ್ತೆ.

Advertisements

ಮಹಿಮೆ

ಉಡುಪಿ ಎಂದಾಕ್ಷಣ ನಮಗೆ ನೆನಪಾಗೋದೇ ಕನಕನ ಕಿಂಡಿ. ಆದ್ರೆ ಈ ಕನಕನ ಕಿಂಡಿ ಹೆಸರು ಬಂದಿದ್ದಾದ್ರೂ ಹೇಗೆ? ಮತ್ತೆ ಅದು ಅಷ್ಟೊಂದು ಪ್ರಖ್ಯಾತಿ ಆಗಲು ಕಾರಣವೇನು ಎಂಬುದು ಈಗಲೂ ಕೆಲವರಿಗೆ ಗೊತ್ತಿಲ್ಲ. ಹೌದು. 16ನೇ ಶತಮಾನದಲ್ಲಿ ವಾದಿರಾಜರ ಆಡಳಿತವಿತ್ತು. ಆ ಸಮಯದಲ್ಲಿ ಕೆಳ ಜಾತಿಯವರನ್ನ ಬಹಳಷ್ಟು ನಿಕೃಷ್ಟವಾಗಿ ಕಾಣುತ್ತಿದ್ದರು. ಆದ್ರೆ ಅಲ್ಲಿ ಶ್ರೀ ಕೃಷ್ಣ ದೇವಾಲಯ ನಿರ್ಮಾಣವಾಗಿದ್ದರಿಂದ ಭಕ್ತಾದಿಗಳೆಲ್ಲಾ ಬರುತ್ತಿದ್ದರು. ಆದ್ರೆ ಕೆಳ ಜಾತಿಯವರನ್ನ ಮಾತ್ರ ದೇವಾಲಯದೊಳಗೆ ಬಿಡುತ್ತಿರಲಿಲ್ಲ. ಅದೇ ಸಮಯಕ್ಕೆ ಕೆಳ ಜಾತಿಗೆ ಸೇರಿದ ಕನಕದಾಸರು ದೇವಾಲಯಕ್ಕೆ ಬರುತ್ತಾರೆ. ಆದ್ರೆ ಅವರಿಗೆ ದೇವಾಲಯದ ಒಳಗೆ ಬಿಡುವುದಿಲ್ಲ. ಅವರನ್ನ ದೇವಾಲಯದವರೆಲ್ಲ ಸೇರಿ ಹೊರಗೆ ದಬ್ಬುತ್ತಾರೆ. ಆದ್ರೂ ಅವರು ಒಳಗೆ ಹೋಗಲು ಪ್ರಯತ್ನಿಸುತ್ತಾರೆ. ಕೋಪಗೊಂಡ ದೇವಾಲಯದ ಸಿಬ್ಬಂದಿ ಅವರನ್ನ ಥಳಿಸುತ್ತಾರೆ.

ಭಕ್ತನಿಗಾಗಿ ಹಿಂದಿರುಗಿ ನಿಂತ ಕಷ್ಣ ಪರಮಾತ್ಮ

ಕನಕದಾಸರನ್ನ ಹೊರಗೆ ದಬ್ಬಿದ ಕೂಡಲೇ, ಅವರು ಬಹಳ ಬೇಸರಗೊಳ್ಳುತ್ತಾರೆ. ಆದ್ರೆ ಅವರಿಗೆ ಕೃಷ್ಣನ ದರ್ಶನ ಪಡೆಯಲೇ ಬೇಕು ಅನ್ನೋ ಹಂಬಲ ಹೆಚ್ಚಾಗಿರುತ್ತೆ. ನೊಂದ ಕನಕದಾಸರು ಗರ್ಭಗುಡಿಯ ಹಿಂಭಾಗದ ಗೋಡೆಯಲ್ಲಿ ನಿಂತು ಆ ಶ್ರೀ ಕೃಷ್ಣನನ್ನು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾರೆ. ಅವರ ಭಕ್ತಿಗೆ ಮೆಚ್ಚಿದ ಶ್ರೀ ಕೃಷ್ಣನು ದೇವಾಲಯದ ಹಿಂಭಾಗಕ್ಕೆ ತಿರುಗಿ ಕನಕದಾಸರಿಗೆ ದರ್ಶನ ಭಾಗ್ಯವನ್ನು ನೀಡುತ್ತಾನೆ. ಆ ಸಮಯದಲ್ಲಿ ಗರ್ಭ ಗುಡಿ ಒಳಗೆ ಪೂಜೆ ಮಾಡುತ್ತಿದ್ದ ಅರ್ಚಕರಿಗೆ ಆಶ್ಚರ್ಯವಾಗುತ್ತೆ. ಈ ಕಡೆ ಇದ್ದ ವಿಗ್ರಹ, ಆ ಕಡೆ ತಿರುಗಿದ ಕೂಡಲೇ. ಆಗ ಎಲ್ಲರಿಗು ತಿಳಿಯುತ್ತೆ. ಇವರ ಮಹಿಮೆ ಅಪಾರ ಎಂದು. ದೇವರಿಗೆ ಯಾವುದೇ ಜಾತಿ, ಭೇದವಿಲ್ಲ ಅಂತ. ಕನಕದಾಸರು ನೋಡಿದ ಕಿಂಡಿ, ಅಂದಿನಿಂದ ಕನಕನ ಕಿಂಡಿ ಎಂದೇ ಪ್ರಸಿದ್ದಿಯಾಗಿದೆ. ಈ ರೀತಿಯಾಗಿ ದ್ವಾರಕೆಯಿಂದ ಸ್ವತಃ ಶ್ರೀ ಕೃಷ್ಣನೇ ಇಲ್ಲಿ ಆಗಮಿಸಿದ ಎಂದು ನಂಬಲಾಗಿದೆ. ಹಾಗಾಗಿ ಈ ಸ್ಥಳಕ್ಕೆ ಭಕ್ತಾಧಿಗಳು ಎಲ್ಲ ಸಮಯದಲ್ಲೂ ಆಗಮಿಸುತ್ತಾರೆ.

ಇಲ್ಲಿನ ಪದ್ದತಿಯಂತೆ ಜನರು ಮೊದಲು ಅನಂತೇಶ್ವರ ಹಾಗೂ ಚಂದ್ರೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ನಂತರ ಶ್ರೀ ಕೃಷ್ಣನ ದರ್ಶನಕ್ಕೆ ಬರುತ್ತಾರೆ. ಕೃಷ್ಣ ನೆಲೆಸಿರುವ ಸ್ಥಳವಾದ್ದರಿಂದ ಇಲ್ಲಿ ಹಲವು ಉತ್ಸವಗಳು ನಡೆಯುತ್ತಲೇ ಇರುತ್ತವೆ. ಕೃಷ್ಣ ಜನ್ಮಾಷ್ಟಮಿ ಬಂತು ಅಂದ್ರೆ ಸಾಕು, ಅದನ್ನ ಇಲ್ಲಿ ಜಾತ್ರೆಯಂತೆ ಮಾಡುತ್ತಾರೆ. ವಿಶೇಷ ಪೂಜೆ ಹಾಗೂ ಕಾರ್ಯಕ್ರಮಗಳನ್ನ ಮಾಡುತ್ತಾರೆ. ಕೃಷ್ಣ ಜನ್ಮಾಷ್ಟಮಿ ದಿನ ಇಲ್ಲಿಗೆ ಲಕ್ಷಾಂತರ ಭಕ್ತರು ಬಂದು ಶ್ರೀ ಕೃಷ್ಣನನ್ನ ಕಣ್ತುಂಬಿ ಕೊಳ್ಳುತ್ತಾರೆ.

Advertisements