ಕರ್ನಾಟಕದ ತೊಳಹುಣಸೆ ಎಂಬ ಯೋಧರ ಗ್ರಾಮ – ಇಲ್ಲಿಯ ಗಲ್ಲಿ ಗಲ್ಲಿಯಲ್ಲೂ ದೇಶಪ್ರೇಮಿಗಳೇ

tolehunase

ಕೊಡಗು ಜಿಲ್ಲೆಯನ್ನು ಯೋಧರ ಭೂಮಿಯಂದೆ ಕರೆಯುತ್ತಾರೆ. ಪ್ರಾಚೀನ ಕಾಲದಲ್ಲಿ ರಾಜಮನೆತನದ ಸೈನಿಕರು ರಾಜ್ಯಕ್ಕೋಸ್ಕರ ಯುದ್ಧದ ಮೊರೆ ಹೋಗುತ್ತಿದ್ದರು, ಆನಂತರ ಆಂಗ್ಲರ ವಿರುದ್ಧ ದೇಶದ ಸ್ವತಂತ್ರಕ್ಕಾಗಿ ಮಣಿದರು. ಅಧಿಕವಾದ ಯುವಕರು ಸೈನ್ಯಕ್ಕೆಂದೇ ಸೇವೆಸಲ್ಲಿಸುವ ಉದ್ದೇಶದಿಂದ ಮುಗಿಬೀಳುತ್ತಾರೆ. ಸಾವಿರಾರು ಜನ ಕೊಡಗಿನಿಂದ ದೇಶದ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಜಿಸಲು ಮುಂದಾಗುತ್ತಾರೆ.

ಕೊಡಗು ನಮ್ಮ ದೇಶಕ್ಕೆ ಹಲವಾರು ಯೋಧರನ್ನು ನೀಡಿದೆ. ಕೊಡಂದೆರ ಮಾದಪ್ಪ ಕರಿಯಪ್ಪ ಮೊದಲನೆಯ ಇಂಡಿಯನ್ ಚೀಫ್ ಆಫ್ ಆರ್ಮಿ, ಇವರ ವಿಗ್ರಹ ಮಡಿಕೇರಿಯಲ್ಲಿ ನೆಲೆಗೊಂಡಿದೆ. ೨೯ ವರ್ಷಗಳ ಕಾಲ ಸೇವೆ ಸಾಲಿಸಿದ್ದಾರೆ, ಭಾರತ ಪಾಕಿಸ್ತಾನ ಮಹಾಯುದ್ದದಲ್ಲಿ ಇವರ ಕೊಡುಗೆ ಅಪಾರ. ಜನರಲ್ ತಿಮ್ಮಯ್ಯ, ಮತ್ತೊಬ್ಬ ಸೈನಿಕ ಇಂಡೋ-ಪಾಕಿಸ್ತಾನ ಯುದ್ಧಕ್ಕೆ ಸಾಕ್ಷಿಯಾಗುತ್ತಾರೆ, ಪದ್ಮಭೂಷಣ ಬಿರುದಿಗೆ ಭಾಜನರಾಗುತ್ತಾರೆ.

Advertisements

ತೊಳಹುಣಸೆ ಎಂಬ ಯೋಧರ ಗ್ರಾಮ

ಕೊಡಗು ಜಿಲ್ಲೆ ಇಡೀ ಕರ್ನಾಟಕಕ್ಕೆ ಗೊತ್ತು ಆದರೆ ಈ ಹಳ್ಳಿಯೂ ಕೂಡ ಅಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದೆ.ಯೋಧರ ಗ್ರಾಮ ಎಂದೇ ತೊಳೆಹುಣಸೆ ಹೆಸರುವಾಸಿ. ದಾವಣಗೆರೆಯ ಜಿಲ್ಲೆಯ ತೊಳಹುಣಸೆ ಗ್ರಾಮದಲ್ಲಿ ಜನಿಸಿದ ಪ್ರತಿಯೊಬ್ಬ ಗಂಡು, ಸೈನ್ಯಕ್ಕೆಂದೆ ತಮ್ಮ ಪ್ರಾಣವನ್ನು ಮುಡಿಪಾಗಿ ಇಡುತ್ತಾರೆ. ಪುಲ್ವಾಮದ ದಾಳಿ ಇಂದ ಅನೇಕ ಯೋಧರು ಹುತಾತ್ಮರಾಗಿದ್ದಾರೆ. ನಾವು ಅದರ ಪ್ರತೀಕಾರ ತೀರಿಸಿಕೊಳ್ಳಬೇಕೆನ್ನುವುದು ಇವರ ಆಶಯ

ಗ್ರಾಮದ ನಿವಾಸಿಯ ಜನರು ವೀರಮರಣಕ್ಕೆ ಶರಣಾದ ಯೋಧರನ್ನು ತಮ್ಮದೇ ಆದಂತಹ ಶೈಲಿನಲ್ಲಿ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ನಾವು ಅವರಿಗೋಸ್ಕರ ನಮ್ಮ ಪ್ರಾಣವನ್ನು ಕೊಡಲು ಸಿದ್ದವಾಗಿದ್ದೇವೆ ಎಂದು ಗ್ರಾಮದ ಯುವಕರು ಹೇಳಿದ್ದಾರೆ, ಗ್ರಾಮದ ಗಲ್ಲಿ ಗಲ್ಲಿಯಲ್ಲೂ ದೇಶ ಪ್ರೇಮಿಗಗಳೇ ಇದ್ದಾರೆ, ಇವರ ಆಕ್ರೋಶ ಮುಗಿಲು ಮುಟ್ಟಿದೆ, ಸೇಡಿನ ಕೊರಗು ಕರಗುತಿಲ್ಲ. ಇಲ್ಲಿ ಪ್ರತಿ ಒಂದು ಮನೆ ಮನೆಯಲ್ಲೂ ಒಬ್ಬ ಯೋಧ ಹುಟ್ಟುಕೊಂಡಿದ್ದಾನೆ.

ಯೋಧರ ಭಾವ ಚಿತ್ರದ ಮುಂದೆ ನಿಂತು ನಾವು ಆ ಉಗ್ರಗ್ರಾಮಿಗಳನ್ನು ಮಟ್ಟ ಹಾಕುತ್ತೇವೆ ಎಂದು ತುಂಬಾ ಭಾವುಕರಾಗಿ ಪ್ರತಿಜ್ಞೆ ಮಾಡಿದ್ದಾರೆ. ಸೈನಿಕರ ಗುಂಡಿನ ಕಾವು ಹೇಗೆ ಇರುತ್ತದೆ ಅನ್ನುವುದು ನಾವು ಅವರಿಗೆ ತೋರಿಸಬೇಕು, ತಕ್ಕ ಶಾಸ್ತಿ ಆಗಲೇಬೇಕು ಎಂದು ಹೇಳಿಕೆ ನೀಡಿದ್ದಾರೆ. ಈಗಾಗಲೇ ನಮ್ಮ ಸೈನ್ಯ ಇಬ್ಬರು ಉಗ್ರರರನ್ನು ಹೊಡೆದು ಸಾಯಿಸಿದ್ದಾರೆ. ಕೃತ್ಯದ ಹಿಂದೆ ಇರುವ ಎಲ್ಲಾ ಉಗ್ರರನ್ನು ಆದಷ್ಟು ಬೇಗ ನಾಶ ಮಾಡುವುದರಲ್ಲಿ ಯಶಸ್ವಿ ಆಗಲಿ.

Advertisements

Contributed by Sri Harsha

If You don’t want to miss our next Post then Like and Follow MetroSaga on Facebook and Instagram or simply download our Android App

You can also Subscribe to MetroSaga for newsletters.

Advertisements