ಕನ್ನಡದ ಈ Multi-Talented ನಟರನ್ನು ತೆರೆ ಮೇಲೆ ನೋಡುವುದೇ ಒಂದು ಖುಷಿ

talents of kannada film industry

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕಲಾವಿದರು ಬಂದು ನಿವೃತ್ತಿ ತೆಗೆದುಕೊಂಡಿದ್ದಾರೆ, ಹೊಸಬ್ಬರ ಹವಾ ಈಗಷ್ಟೇ ಶುರುವಾಗಿದೆ. ಅಭಿಮಾನಿಗಳು ಕೇವಲ ಸ್ಟಾರ್ ನಟ ನಟಿಯರನ್ನು ನೋಡಲು ಬರುವುದಿಲ್ಲ. ಈಗ ಸಿನಿಮಾದಲ್ಲಿ ಕೊಂಚ ಕಾಲ ಬಂದರು ಮನೋರಂಜನೆ ಅನ್ನೋ ಪದಕ್ಕೆ ಅರ್ಥ ಕೊಡುವ ಕಲಾವಿದರು ಎಲ್ಲರ ಮನವನ್ನು ಗೆಲ್ಲುತ್ತಿದ್ದಾರೆ.

ಧನಂಜಯ

ಧನಂಜಯ ಅವರ ಪ್ರಥಮ ಚಿತ್ರ ಡೈರೆಕ್ಟರ್ ಸ್ಪೆಷಲ್ , ಗುರು ಪ್ರಸಾದ್ ನಿರ್ದೇಶನದಲ್ಲಿ ಮೂಡಿ  ಬರುತ್ತದೆ. ಧನಂಜಯ್ ಅವರು ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಸಿನಿಮಾಕ್ಕೆ ಹೊಸ ಪ್ರತಿಭೆಯ ನಟನ  ಪುರಸ್ಕೃತಕ್ಕೆ ಆಯ್ಕೆ ಆಗಿ ಸೈಮಾ ಪ್ರಶಸ್ತಿಯನ್ನು ಬಾಚಿಕೊಳ್ಳುತ್ತಾರೆ. ಸ್ಪೆಷಲ್ ಸ್ಟಾರ್ ಧನಂಜೆಯ ಎಂದು ಜನ ಕರೆಯಲು ಶುರು ಮಾಡುತ್ತಾರೆ. ನಂತರ ಅರ್ಜುನ್ ನಿರ್ದೇಶನದಲ್ಲಿ ಮೂಡಿ ಬಂದ ರಾಟೆ ಚಿತ್ರದಲ್ಲಿ ಅಭಿನಯಿಸುತ್ತಾರೆ.

Advertisements

ನೆಕ್ಸ್ಟ್ ಪ್ರೀತಂ ಗುಬ್ಬಿ ನೇತೃತ್ವದಲ್ಲಿ ಬಂದ ಚಿತ್ರ ಬಾಕ್ಸರ್ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೊಂದು ಸದ್ದು ಮಾಡಲಿಲ್ಲ. ಸಂತ ಅಲ್ಲಮಪ್ರಭು ಪಾತ್ರಕ್ಕೆ ಬಣ್ಣ ಹಚ್ಚಿ ನಾನು ಸಹ ಐತಿಹಾಸಿಕ ಪಾತ್ರವನ್ನು ನಿಭಾಯಿಸಬಲ್ಲೆ ಅಂತ ನಿರೂಪಿಸುತ್ತಾರೆ. ಸುಕ್ಕಾ ಸೂರಿಯ ಕಣ್ಣು ಧನಂಜಯ ಮೇಲೆ ಬಿದ್ದಿತು ಆಗ ಸಿನಿರಂಗದಲ್ಲಿಯೇ ಹೊಸ ಅಲೆ ಎಬ್ಬಿಸಿದ ಚಿತ್ರವೇ ಟಗರು. ಧನಂಜಯ್ ಅವರ ಡಾಲಿ ಪಾತ್ರ ಇಂದಿಗೂ ಕರ್ನಾಟಕದ ಜನರು ಅನಾಸಾಯವಾಗಿ ಮರೆಯಲು ಸಾದ್ಯವಾಗುತಿಲ್ಲ. ಅಷ್ಟರ ಮಟ್ಟಿಗೆ ಪ್ರಭಾವ ಬೀರಿತು ಡಾಲಿ ಎಂಬ ನರರಾಕ್ಷಸನ ಪಾತ್ರ. ಡಾಲಿಯ ಆರ್ಭಟಕ್ಕೆ ಮನಸೋತವರು ಲೆಕ್ಕಕ್ಕೆ ಇಲ್ಲ. ಈಗ ಕರ್ನಾಟಕದ ಜನರು ಧನಂಜಯ ಹೆಸರನ್ನು ಮರೆತು ಕರ್ನಾಟಕದ ಡಾಲಿ ಎಂದೇ ಕರೆಯಲು ಶುರು ಮಾಡಿದ್ದಾರೆ. ಇತ್ತೀಚಿನ ಚಲನಚಿತ್ರಗಳಲ್ಲಿ ಇವರದೇ ದರ್ಬಾರ್.

talents of kannada film industry

ವಸಿಷ್ಠ ಸಿಂಹ

ಇವರ ಧ್ವನಿಯಲ್ಲೆ ಒಂದು ಗತ್ತು ಅಡಗಿದೆ. ರಾಜಹುಲಿ ಚಿತ್ರದಲ್ಲಿ ಜಗ್ಗ ಅನ್ನೋ ಪಾತ್ರ ನಿರ್ವಹಿಸಿದ್ದರು. ಪಕ್ಕ ಲೋಕಲ್ ರೌಡಿಯ ಪಾತ್ರ. ಭಗ್ನ ಪ್ರೇಮಿ ಹಾಗೂ ರೌಡಿಯ ಮಿಶ್ರಣದ ಪಾತ್ರದ ಅಭಿನಯಕ್ಕೆ ಪ್ರೇಕ್ಷಕರು ಮಾರು ಹೋಗಿದ್ದರು. ಇಲ್ಲಿಂದ ಶುರುವಾಯಿತು ಇವರ ಸಿನಿ ಪಯಣ. ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ಚಿತ್ರದಲ್ಲಿ ಪೋಷಕ ನಟನಾಗಿ ಹಾಗೂ ನೆಗೆಟಿವ್ ರೋಲ್ ಮಾಡಿದ್ದಾರೆ. ಈ ಚಿತ್ರದ ನಟನೆಗಾಗಿ ಉತ್ತಮ ಪೋಷಕ ನಟನ ಪ್ರಶಸ್ತಿ ಲಭಿಸುತ್ತದೆ.  ಸುಂದರಾಂಗ ಜಾಣ, ಉಪೇಂದ್ರ ಮತ್ತೆ ಬಾ, ಇನ್ನೂ ಅನೇಕ ಚಿತ್ರಗಳಲ್ಲಿ ಅಭಿನಯಿಸುತ್ತಾ ಬರುತ್ತಾರೆ. ಮಫ್ತಿ ಚಿತ್ರದಲ್ಲಿ ಗ್ಯಾಂಗ್ಸ್ಟರ್ ಕಾಶಿ ಆಗಿ ಪ್ರತ್ಯಕ್ಷರಾಗುತ್ತಾರೆ. ದಯವಿಟ್ಟು ಗಮನಿಸಿ ಚಿತ್ರಕ್ಕೆ ನಾಯಕ ನಟನ ಪಾತ್ರ ನಿಭಾಯಿಸಿ, ಒಂದು ಹಾಡನ್ನೂ ಸಹ ಹಾಡುತ್ತಾರೆ.

ಟಗರು ಚಿತ್ರದಲ್ಲಿ ಚಿತ್ತರಂಜನ್ ಅಲಿಯಾಸ್ ಚಿಟ್ಟೆ ಎಂಬ ಪಾತ್ರದ ನಟನೆಗೆ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಸಿಗುತ್ತದೆ. ಕನ್ನಡ ಚಿತ್ರರಂಗದ ಮಾರುಕಟ್ಟೆಯಲ್ಲಿ ಇವರ ಹೆಸರು ಹೊಸ ಟ್ರೆಂಡೇ ಸೃಷ್ಟಿಸುತ್ತದೆ. ಕೆ‌ಜಿ‌ಎಫ್ ಚಿತ್ರದಲ್ಲಿಯೂ ಕಮಲ್ ಅನ್ನೋ ಪಾತ್ರಕ್ಕೆ ಜನರ ಪ್ರತಿಕ್ರಿಯೆ ಜೋರಾಗಿದೆ. ಕೆ‌ಜಿ‌ಎಫ್ ಭಾಗ ೨ರಲ್ಲಿ ಇವರ ಅಭಿನಯ ವೀಕ್ಷಿಸಲು ಕಾಯಲೇಬೇಕು.

Advertisements

talents of kannada film industry

ಪ್ರಮೋದ್ ಶೆಟ್ಟಿ

ಪ್ರಮೋದ್ ಶೆಟ್ಟಿ, ಬಹುಶ ನೀವು ಇವರ ಹೆಸರು ಕೇಳಿರಬೇಕು. ಕಿರಿಕ್ ಪಾರ್ಟಿ ಚಿತ್ರದಲ್ಲಿ ಕಿರಿಕ್ ತರಲೆ ಹುಡುಗನಾಗಿ ಪ್ರತ್ಯಕ್ಷ ಆದ ಪ್ರತಿಭಾವಂತ ಕಲಾವಿದ. ಕಿರಿಕ್ ಹುಡುಗನಾಗುವ ಮುಂಚೆ ರಿಕ್ಕಿ ಸಿನಿಮಾದಲ್ಲಿ ಒಬ್ಬ ಕ್ರಾಂತಿಕಾರ ಹೋರಾಟಗಾರನಾಗಿ ಅಭಿನಯಿಸಿದ್ದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಸ್ಯಮಯವಾದ ಕೋಪಿಷ್ಟನ ನಟನೆ ಸಿನಿವೀಕ್ಷಕರನ್ನು ಸೆಳೆಯುತ್ತದೆ. ಗುಳ್ಟೂ, ಹಂಬಲ್ ಪೊಲಿಟೀಷಿಯನ್ ನಾಗ್ರಾಜ್, ಪ್ಲಾನ್, ಉಳಿದವರು ಕಂಡಂತೆ ಚಿತ್ರಗಳಲ್ಲಿ ಪೋಷಕ ಪಾತ್ರ ಗಿಟ್ಟಿಸಿಕೊಳ್ಳುವುದರ ಮೂಲಕ ಕರ್ನಾಟಕದ ಪ್ರಜೆಗಳಿಂದ ಸೈ ಎನ್ನಿಸಿಕೊಂಡಿದ್ದಾರೆ. ಇತ್ತೀಚೆಗೆ ತೆರೆ ಕಂಡ ಬೆಲ್ ಬಾಟಮ್ ಚಿತ್ರದಲ್ಲೂ ಇವರು ನಿಮಗೆ ಇಷ್ಟ ಆಗುತ್ತಾರೆ.

talents of kannada film industry

ಚಿಕ್ಕಣ್ಣ

ಚಿಕ್ಕಣ್ಣನ ನಟನೆ ನೈಜ್ಯವಾದ ನಟನೆ, ಎಲ್ಲಿಯೂ ಅಧಿಕವಾದ ಅಭಿನಯವನ್ನು ಯಾವುದೇ ಚಿತ್ರಗಳಲ್ಲಿ ಮಾಡಿಲ್ಲ. ಯುವಕರ ಹೃದಯದಲ್ಲಿ ನೆಲೆಗೊಂಡಿದ್ದಾರೆ ಈ ಹಾಸ್ಯ ನಾಯಕ. ನಟನ ಸ್ನೇಹಿತನ ಪಾತ್ರಕ್ಕೆ ಸೂಕ್ತವಾದ ಹಾಸ್ಯ ನಟ. ಸಣ್ಣ ಪುಟ್ಟ  ಪಾತ್ರಗಳಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟುಕೊಂಡು ಬಂದು ಈಗ ಕರ್ನಾಟಕದ ಮನೆ ಮಾತಾಗಿದ್ದರೆ. ಈ ಹಾಸ್ಯ ನಟನ ಅಭಿಮಾನದ ಸಂಘವೇ ಹುಟ್ಟುಕೊಂಡಿದೆ.  ಕೇವಲ ಹಾಸ್ಯಮಾಯವಾದ ಪಾತ್ರಕ್ಕೆ ಮಾತ್ರ ಸೀಮಿತವಾಗಿಲ್ಲ, ಎಲ್ಲಾ ಪಾತ್ರಗಳನ್ನು ನೀರು ಕುಡಿದಂತೆ ಅಭಿನಯಿಸುವ ಕಲೆ ಇವರಲ್ಲಿ ಅಡಗಿದೆ. ಹಾಸ್ಯಕ್ಕೆ ಇನ್ನೊಂದು ಹೆಸರೇ ಚಿಕ್ಕಣ್ಣ ಎನ್ನುವ ಮಟ್ಟಿಗೆ ಜನಪ್ರಿಯರಾಗಿದ್ದಾರೆ.

ಚೊಚ್ಚಲ ಚಿತ್ರ ಕಿರಾತಕ ದಲ್ಲಿ ಹಳ್ಳಿ ತರಲೆ ತುಂಟು ಯುವಕನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಅವಕಾಶ ಒದಗಿ ಬಂದಿತು. ರಾಜಹುಲಿ, ಅಧ್ಯಕ್ಷ  ಚಿತ್ರಗಳು ಇವರ ಸಿನಿ ವೃತ್ತಿ ವೃತ್ತಿಯಲ್ಲಿ ಪ್ರಮುಖವಾದ ಚಿತ್ರಗಳು . ರಾಜಹುಲಿ ಚಿತ್ರದ ನಟನೆಗೆ ಬೆಸ್ಟ್ ಕಾಮಿಡಿಯನ್ ಸೈಮಾ ಎಂಬ ಅವಾರ್ಡ್ ತಮ್ಮ ಮುಡಿಗೆ ಏರಿಸಿಕೊಳ್ಳುತ್ತಾರೆ. ಆದ್ಯಕ್ಷ ಚಿತ್ರಕ್ಕೂ ಇದೇ ಪ್ರಶಸ್ತಿಯ ಸರದಿಯಲ್ಲಿ ನಿಂತಿತ್ತು, ಮತ್ತೊಮ್ಮೆ ಕೀರ್ತಿ ಪತಾಕಿಯನ್ನು ಹಾರಿಸುತ್ತಾರೆ. ಮಾಸ್ಟೆರ್ ಪೀಸ್ ಚಿತ್ರದ ಬ್ರೂಸ್ ಲೀ ಹಾಸ್ಯ  ಪಾತ್ರಕ್ಕೆ ಉತ್ಸವಮ್ ಅವಾರ್ಡ್ ಪಡೆದುಕೊಳ್ಳುತ್ತಾರೆ. ಇತ್ತೀಚಿಗಷ್ಟೇ ನಟಸಾರ್ವಭೌಮ ಚಿತ್ರದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಉದ್ಧ ಸಂಬಾಷೆಯನ್ನು ಹೇಳುವದರಲ್ಲಿ ಇವರು ನಿಸ್ಸೀಮ.

Advertisements

talents of kannada film industry

ತಬಲಾ ನಾಣಿ

ತಬಲಾ ನಾಣಿ ಆಗೋ ಈಗೋ ಚಿತ್ರಗಳಲ್ಲಿ ಕಾಣಿಸಿಕೊಂಡರೂ ಇವರ ಅಬ್ಬರ ಜೋರಾಗೆ ಇರುತ್ತದೆ. ಜನರಿಗೆ ನೀಡುವ ಹಾಸ್ಯದ ಔಷದಿ ನರನಾಡಿಗಳಲ್ಲಿ ತೇಲಾಡಿ ಆನಂದದ ಪ್ರವಾಹವೇ ಉಕ್ಕಿ ಹರಿಯುತ್ತದೆ. ವಿಕ್ಟರಿ ಚಿತ್ರದಲ್ಲಿ  ಪ್ರೇಕ್ಷಕರನ್ನು ಹೊಟ್ಟೆ ಹುನ್ನಾಗಿಸುವಷ್ಟು ನಗಿಸಿದ ಕಿವುಡಣ ಪಾತ್ರ ಜನ ಮರೆಯಲು ಸದ್ಯವೇ ಇಲ್ಲ. ಮಠ ಚಲಚಿತ್ರದಲ್ಲಿ ವೇಣುಗೋಪಾಲ್ ಪಾತ್ರಕ್ಕೆ ಸಿಕ್ಕ ಪ್ರತಿಷ್ಠೆ ಬಹಳ ದೊಡ್ಡದು. ಹಾಸ್ಯ ಸನ್ನಿವೇಶ ಬಿಟ್ಟು ಗಾಂಭೀರ್ಯವಾದ ಪಾತ್ರಕ್ಕೂ ಜೈ ಅನ್ನುವ ಮೇರು ಕಲಾವಿದ. ಎದ್ದೇಳು ಮಂಜುನಾಥ ಇವರಿಗೆ ಯಶಸ್ಸು ತಂದು ಕೊಟ್ಟಿತು. ಹುಡುಗರು, ಅದ್ದೂರಿ, ವಿಕ್ಟರಿ, ಮೈನಾ, ಬಹದ್ದೂರ್, ಬುಲೆಟ್ ಬಸ್ಯ, ಬ್ಯೂಟಿಫುಲ್ ಮನಸುಗಳು, ಚೌಕ, ಇನ್ನೂ ಅನೇಕ ಚಿತ್ರಗಳಿಗೆ ಇವರ ನಟನೆ ಸಾಕ್ಷಿಯಾಗಿದೆ. ಕೆಮಿಸ್ಟ್ರಿ ಆಫ್ ಕರಿಯಪ್ಪನ ಚಿತ್ರದಲ್ಲಿ ಇವರ ಕೆಮಿಸ್ಟ್ರಿ ಏನಿರಬಹುದು ಎಂದು ತಿಳಿಯಲು ಚಿತ್ರಮಂದಿರಕ್ಕೆ ಭೇಟಿ ಕೊಡಬೇಕಾಗುತ್ತದೆ.

talents of kannada film industry

ಪ್ರಕಾಶ್ ಬೆಳವಾಡಿ

ಪ್ರಕಾಶ್ ಬೆಳವಾಡಿ ಸದಾ ಕಾಲ ಆಕ್ಟಿವ್ ಆಗಿರೋ ಒಬ್ಬ ಜರ್ನಲಿಸ್ಟ್, ನಟ. ಬಹಳಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಎಲ್ಲಿಯೂ ಸಹ ಪಾತ್ರಕ್ಕೆ ಒಂಚೂರು ಧಕ್ಕೆ ಉಂಟು ಮಾಡದೆ,  ನಿಜ ಜೀವನದ ಶೈಲಿನಲ್ಲಿ ಹೇಗೆ ವರ್ತಿಸುತ್ತೆವೋ ಹಾಗೆ ಇರುತ್ತದೆ ಇವರ ಅಭಿನಯ. ಕಣ್ಣಿಗೆ ಕಟ್ಟುವ ಹಾಗೆ ನಟಿಸಬಲ್ಲ ಏಕೈಕ ವ್ಯಕ್ತಿ ಎಂದರೆ ಪ್ರಕಾಶ್ ಬೆಳವಾಡಿ. ಕನ್ನಡ ಭಾಷೆ ಅಲ್ಲದೆ ಬಾಲಿವುಡ್ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. .

ಕೆಂಡಸಂಪಿಗೆ ಸಿನಿಮಾದಲ್ಲಿ ಡಿ‌ಸಿ‌ಪಿ ಸೂರ್ಯಕಾಂತ್ ಅನ್ನೋ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಪಾತ್ರಕ್ಕೆ ಅನುಗುಣವಾಗಿ ನಟನೆಯ ಸಾಮ್ಯರ್ಥ ಹೊರ ಹೊಮ್ಮುತಿತ್ತು. ಆಟಗಾರ, ಲಾಸ್ಟ್ ಬಸ್, ದಯವಿಟ್ಟು ಗಮನಿಸಿ ಇವರ ಪ್ರಮುಖ ಚಿತ್ರಗಳು. ಮುಫ್ತಿ ಚಿತ್ರದಲ್ಲಿ ಸಮಾಜ ಸೇವಕನ ರೋಲ್ನಲ್ಲಿ ಅಭಿನಯಿಸಿದ್ದಾರೆ. ಕಿರಗೂರಿನ ಗಯ್ಯಾಳಿಗಳು, ಲೀಡರ್, ಇನ್ನೂ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಧಾರವಾಹಿಯಲ್ಲಿಯೂ ಕೆಲಸ ಮಾಡಿದ್ದಾರೆ – ಗರ್ವ(೨೦೦೧), ಇಲ್ಲಿರುವುದು ಸುಮ್ಮನೆ (೨೦೦೮) ಎಂಬ ಎರಡು ಧಾರವಾಹಿಗಳ ಸೂತ್ರಧಾರ ಕೂಡ ಆಗಿದ್ದಾರೆ.

Advertisements

talents of kannada film industry

ರಾಜೇಶ್ ನಟರಂಗ

ಪೊಲೀಸ್ ಪಾತ್ರಕ್ಕೆ ಇವರ ಹೆಸರು ಖಾಯಂ ಅಂತಾ ಅನಿಸುತ್ತದೆ. ಹೆಚ್ಚಿನ ಸಿನಿಮಾಗಳಲ್ಲಿ ಪೊಲೀಸ್ ಪಾತ್ರವನ್ನು ಮಾಡಿದ್ದಾರೆ. ಮೊಗ್ಗಿನ ಮನಸ್ಸು ಚಿತ್ರದಲ್ಲಿ ಪ್ರೊಫೆಸರ್ ಆಗಿ ಅಭಿನಯಿಸಿದ್ದರು, ಕೆಂಡಸಂಪಿಗೆ, ಕಡ್ಡಿಪುಡಿ, ದ್ಯಾವ್ರೇ, ಜಸ್ಟ್ ಮಾತ್ ಮಾತಲ್ಲಿ, ನಾನು ನನ್ನ ಕನಸು, ಕಳ್ಳರ ಸಂತೆ, ಅಣ್ಣ ಬಾಂಡ್, ಕಿಲ್ಲಿಂಗ್ ವೀರಪ್ಪನ್, ಹೀಗೆ ಹಿಟ್ ಲಿಸ್ಟಿನ ಸಿನಿಮಾಗಳಲ್ಲಿ ಇವರ ಹೆಸರು ಸೇರ್ಪಡೆಯಾಗುತ್ತದೆ.

talents of kannada film industry

ಅಚ್ಯುತ್ ರಾವ್

ಅಚ್ಯುತ್ ರಾವ್ ಅಮೋಘವಾದ ಕಲಾವಿದ. ಮಿಸ್ಟರ್ ಅಂಡ್ ಮಿಸ್ಸಸ್ಸ್ ರಮಾಚಾರಿಯ ಚಿತ್ರದಲ್ಲಿ ತಂದೆಯ ಪಾತ್ರ ವೀಕ್ಷಿಸಿದ ಪ್ರತಿಯೊಬ್ಬರೂ ಕರಗಿ ನೀರಾಗಿದ್ದಾರೆ. ನೀನಾಸಮ್ ಸಂಸ್ಥೆಯಲ್ಲಿ ಕಾರಗತರಾಗಿ ಹೊರಗೆ ಬರುತ್ತಾರೆ. ಮೊದಲು ಮೂಡಲ ಮನೆ, ಪ್ರೀತಿ ಇಲ್ಲದ ಮೇಲೆ ಧಾರವಾಹಿಗಳಲ್ಲಿ ಅಭಿನಯಿಸುತ್ತ ಬರುತ್ತಾರೆ. ಮೊಗ್ಗಿನ ಮನಸು ಚಿತ್ರದಿಂದ ಸಿನಿ ಪ್ರಪಂಚಕ್ಕೆ ಕಾಲಿಡುತ್ತಾರೆ.

ಲುಸಿಯಾ ಚಿತ್ರದಲ್ಲಿ ಶಂಕರಣ್ಣ ಟಾಕಿಸ್ ಕಾರ್ಯದರ್ಶಿಯ ಪಾತ್ರ ಫಿಲಮ್ ಫೇರ್ ಅವಾರ್ಡ್ ತಂದು ಕೊಡುತ್ತದೆ. ಆ ದಿನಗಳು, ಜೋಶ್,ಮನಸ್ಸಾರೆ, ನಾನು ನನ್ನ ಕನಸು, ರಾಜಧಾನಿ,ಲೈಫ್ ಇಷ್ಟೇನೇ, ಎದೆಗಾರಿಕೆ, ಕಿರಿಕ್ ಪಾರ್ಟಿ, ರಾಜಕುಮಾರ, ಟಗರು, ರಾಜು ಕನ್ನಡ ಮೀಡಿಯಂ, ಹೀಗೆ ಹೇಳುತ್ತಾ ಹೊರಟರೆ ಸಿಕ್ಕಾಪಟ್ಟೆ ಹಿಟ್ ಚಿತ್ರಗಳು ಇವರ ಸರದಿಯಲ್ಲಿ ನಿಲ್ಲುತ್ತದೆ. ಇತ್ತೀಚಿಗಷ್ಟೇ ನಟಸಾರ್ವಭೌಮ ಚಿತ್ರದಲ್ಲಿ ಜ್ಯೋತಿಷಿ ಪಾತ್ರವನ್ನು ನಿರ್ವಹಿಸಿದ್ದರು.

talents of kannada film industry

ಸುಜಯ್ ಶಾಸ್ತ್ರಿ

ಪಾಂಡುರಂಗ ವಿಠಲ ಸೀರಿಯಲ್ ಅಲ್ಲಿ ನಗಿಸುತ್ತಿದ್ದ ನಟ ಈಗ ಒಂದೇ ಸಮನೆ ಬೆಳ್ಳಿ ಪರದೆಗೆ ಹಾರಿದ್ದಾರೆ. ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ನಟಿಸಿದ್ದಾರೆ. ರಿಷಭ್ ಶೆಟ್ಟಿ ಅಭಿನಯದ, ಜಯ ತೀರ್ಥ ನಿರ್ದೇಶನದಲ್ಲಿ ಬಂದ ಚಿತ್ರ ಬೆಲ್ ಬಾಟಮ್ ಸಖತ್ ಸದ್ದು ಮಾಡುತ್ತಿದೆ, ಇದರಲ್ಲಿ ಸುಜಯ್ ಅವರು ಶಗಣಿ ಪಿಂಟು ಎಂಬ ಪಾತ್ರ ದಲ್ಲಿ ಆಕ್ಟ್ ಮಾಡಿದ್ದಾರೆ.

Advertisements

talents of kannada film industry

ಕಿಶೋರ್

ಕಿಶೋರ್ ,ಕಂಟಿ ಸಿನಿಮಾದಿಂದ ಚಿತ್ರರಂಗಕ್ಕೆ ಲಗ್ಗೆ ಇಡುತ್ತಾರೆ. ರಾಕ್ಷಸ ಚಿತ್ರದಲ್ಲಿ ಪೋಷಕ ನಟನ ಪಾತ್ರಕ್ಕೆ ಕರ್ನಾಟಕ ಸ್ಟೇಟ್ ಅವಾರ್ಡ್ ದೊರೆಯುತ್ತದೆ. ದುನಿಯಾ ಚಿತ್ರದಲ್ಲಿ ಕಾಕಿ ಬಟ್ಟೆಯಲ್ಲಿ ಮಿಂಚಿದ್ದರು. ಕಠಿಣವಾದ ಸನ್ನಿವೇಶಗಳ ಚಿತ್ರದ ದೃಶ್ಯಗಳಲ್ಲಿ ಬಹಳ ಸಲೀಸಾಗಿ ನಟನೆ ಮಾಡುತ್ತಾರೆ. ಆಕಾಶ್, ಡೆಡ್ಲಿ ಸೋಮ, ಬಿರುಗಾಳಿ, ಹುಲಿ, ಉಳಿದವರು ಕಂಡಂತೆ, ಇಂತಿ ನಿನ್ನ ಪ್ರೀತಿಯ ಇನ್ನೂ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

talents of kannada film industry

ರೋಜರ್ ನಾರಾಯಣ್

ಹಾಲೀವುಡ್ ಮೂವೀಸ್ ಮತ್ತು ಸೇರಿಯಲ್ಸ್ ನೀವು ನೋಡುತ್ತಿದ್ದರೆ ರೋಜರ್ ನಾರಾಯಣ್ ಅನ್ನೋ ಹೆಸರು ಹೊಸದೇನಲ್ಲ. ಹಾಲೀವುಡ್ ಅಲ್ಲಿ ಬಾಲ್ಯ ನಟ ಆಗಿ ಸದ್ದು ಮಾಡಿದ್ದರು . ಇವರು ಕನ್ನಡ, ತಮಿಳ್, ಉರ್ದು, ಇಂಗ್ಲಿಷ್ ಅಲ್ಲಿ ಮಾತಡಬಲ್ಲ ಬಹುಮುಖ ಪ್ರತಿಭೆ. ನಟನೆಯ ಚಾಣಕ್ಷ್ಯತನದಿಂದ ಮಿಸ್ಟರ್ ಇಂಡಿಯಾ ಅನ್ನೋ ಪಟ್ಟ ಗೆಲ್ಲುತ್ತಾರೆ . ಮಾರ್ಷಿಯಲ್ ಆರ್ಟ್ಸ್ ವಿದ್ಯೆಯಲ್ಲಿ ಪರಿಣಿತಿ ಹೊಂದಿದ್ದಾರೆ. ಉ ಟರ್ನ್ , ಹಂಬಲ್ ಪೊಲಿಟೀಷಿಯನ್ ನಾಗ್ರಾಜ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚಿಗಷ್ಟೇ ಚಂಬಲ್ ಚಿತ್ರದಲ್ಲಿ ತಮ್ಮ ನಟನೆಯ ಕೌಶಲ್ಯ ವ್ಯಕ್ತ ಪಡಿಸಿದ್ದಾರೆ.

talents of kannada film industry

ಇಂತಹ ನಟರಿಗೆ ಇನ್ನು ಹೆಚ್ಚು ಹೆಚ್ಚು ಸಿನಿಮಾಗಳು ಸಿಗಲಿ ಎಂದು ನಾವು ಆಶಿಶುತ್ತೇವೆ.

ನಮ್ಮ ಫೇಸ್ಬುಕ್ ಪೇಜ್ MetroSaga – Kannada ವನ್ನು ಲೈಕ್ ಮಾಡಿ.