ಫ್ಯಾಷನ್ ಶೋ, ಚಿತ್ರ ರಂಗ ಟು ರಾಜಕೀಯ – ಇದು ಸುಮಲತಾ ಅಂಬರೀಷ್ ನಡೆದು ಬಂದೆ ದಾರಿ

sumalatha ambareesh journey

ಆ ಕಾಲದಲ್ಲಿ ಪಡ್ಡೆ ಹುಡುಗರ ಮನಸೂರೆಯಾಗುವಂತೆ ಮಾಡಿದ್ರು ಈ ನಟಿ. ಇವರ ಕೆಲವು ನಟನೆಯನ್ನಂತೂ ಈಗಲೂ ಮರೆಯೋಕೆ ಆಗಲ್ಲ. ಯಾಕಂದ್ರೆ ಇವರು ಕನ್ನಡ ಚಿತ್ರೋದ್ಯಮಕ್ಕೆ ಕಾಲಿಟ್ಟು, ಕೆಲವೇ ದಿನಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಹೌದು. ಆ ನಟಿ ಬೇರೆ ಯಾರು ಅಲ್ಲ. ನಮ್ಮ ಸುಮಲತಾ ಅಂಬರೀಷ್ ಅವರು. ಸುಮಲತಾ ಅಂಬರೀಷ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಎಲ್ಲರಿಗು ಗೊತ್ತು. ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ಮೇರು ನಟಿಯರಲ್ಲಿ ಅವರು ಒಬ್ಬರು. ಅವರು ಆಗ ನಟಿಯಾಗಿ ನಟಿಸಿದ ಎಲ್ಲ ಚಿತ್ರಗಳು ಬಹಳಷ್ಟು ಅದ್ದೂರಿಯಾಗಿ ಪ್ರದರ್ಶನ ಕಂಡಿದ್ದವು.

Advertisements

ಬಾಲ್ಯ

ಸುಮಲತಾ ಅಂಬರೀಷ್ ಅವರು ಆಗಸ್ಟ್ 27, 1963ರೆಂದು ಚನ್ನೈ ನಲ್ಲಿ ಜನಿಸಿದರು. ಬಾಲ್ಯದಿಂದಲೂ ಸುಮಲತಾ ಅವರಿಗೆ ನಟನೆ ಬಗ್ಗೆ ಬಹಳ ಆಸಕ್ತಿ ಇತ್ತು. ಹಾಗಾಗಿ ಸ್ಕೂಲ್, ಕಾಲೇಜ್ ಗಳಲ್ಲಿ ನಡೀತಿದ್ದ ಫ್ಯಾಷನ್ ಶೋ ಗಳಲ್ಲಿ ಹೆಚ್ಚಾಗಿ ಭಾಗವಹಿಸ್ತಿದ್ರು. ಇದೆ ರೀತಿ 1979ರಲ್ಲಿ ಆಂದ್ರಪ್ರದೇಶದಲ್ಲಿ ನಡೆದ ಫ್ಯಾಷನ್ ಶೋ ಒಂದರಲ್ಲಿ ಭಾಗವಹಿಸಿ ಮೊದಲ ಬಹುಮಾನ ಪಡೆದಿದ್ದರು. ಅಲ್ಲಿಂದ ಅವರು ಸಿನಿಮಾ ರಂಗಕ್ಕೆ ಕಾಲಿಟ್ಟರು.

ಜೀವನ

ಸಿನಿಮಾ ರಂಗಕ್ಕೆ ಕಾಲಿಡಬೇಕೆಂದು ನಿರ್ಧರಿಸಿದ ಸುಮಲತಾ ಅವರಿಗೆ ಬೇಡಿಕೆಗಳು ಹುಡುಕಿಕೊಂಡು ಬರುತ್ತಿದ್ದವು. ಮೊದಲು ಇವರು ತಮಿಳು ಹಾಗು ಮಲಯಾಳಂ ನಲ್ಲಿ ನಟಿಸಿದರು. ಅದರಲ್ಲಿ ಸುಮಾರು 150ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದರು. ನಂತರ 1991ರಲ್ಲಿ ಅಂಬರೀಷ್ ಅವರನ್ನ ಮದುವೆಯಾದರು. ಅಲ್ಲಿಂದ ಅವರು ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟರು. ಅವರಿಗೆ ಒಂದು ಗಂಡು ಜನಿಸಿತು. ಅದಕ್ಕೆ ಅಭಿಷೇಕ್ ಗೌಡ ಎಂದು ಹೆಸರಿಟ್ಟರು. ಸ್ಯಾಂಡಲ್ ವುಡ್ ಗೆ ಬಂದ ಸುಮಲತಾ ಅವರು ಹೆಚ್ಚಾಗಿ ದಿಗ್ಗಜ ನಟರೊಂದಿಗೆ ಅಭಿನಯಿಸಿದರು.

ಅಭಿನಯಿಸಿದ ಚಿತ್ರಗಳು

ಸುಮಲತಾ ಅವರು ಮೊದಲು ಹೇಗೆ ಬೇರೆ ಭಾಷೆಗಳಲ್ಲಿ ನಟನೆ ಮಾಡಿ, ಹೆಸರು ಪಡೆದರೋ, ಅದೇ ರೀತಿ ಕನ್ನಡದಲ್ಲೂ ಸಹ ಅತಿ ಕಡಿಮೆ ಸಮಯದಲ್ಲಿ ಒಳ್ಳೆ ನಟಿ ಎಂದು ಹೆಸರು ಪಡೆದರು. ಇವರು ಹೆಚ್ಚಾಗಿ, ಅಂಬರೀಷ್, ವಿಷ್ಣುವರ್ಧನ್ ಹಾಗು ರಾಜ್ ಕುಮಾರ್ ಅವರೊಂದಿಗೆ ನಟಿಸಿದ್ದಾರೆ. ಅವರು ನಟಿಸಿರುವ ಕೆಲವು ಚಿತ್ರಗಳ ಒಂದು ಸಣ್ಣ ಝಲಕ್ ಇಲ್ಲಿದೆ ನೋಡಿ.

Advertisements

ರವಿಚಂದ್ರ, ಆಹುತಿ, ತಾಯಿ ಕನಸು, ತಾಯಿ ಮಮತೆ, ತಾಯಿಯ ಹೊಣೆ, ಕಥಾ ನಾಯಕ, ಕರ್ಣ, ಸತ್ಯ ಜ್ಯೋತಿ, ಹುಲಿ ಹೆಬ್ಬುಲಿ, ತಾಯಿಗೊಬ್ಬ ಕರ್ಣ, ನ್ಯೂಡೆಲ್ಲಿ, ಅವತಾರ ಪುರುಷ, ನ್ಯಾಯಕ್ಕಾಗಿ ನಾನು, ರಾಜ ಯುವರಾಜ, ಹಾಂಕಾಂಗ್ ನಲ್ಲಿ ಏಜೇಂಟ್ ಅಮರ್, ಮಹೇಶ್ವರ, ಕಲಿಯುಗ ಭೀಮ, ಒಲವಿನ ಕಾಣಿಕೆ, ಶ್ರೀ ಮಂಜುನಾಥ, ಎಸ್ಕ್ಯೂಸ್ ಮೀ, ಕಲ್ಲರಳಿ ಹೂವಾಗಿ ಹಾಗೂದೊಡ್ಮನೆ ಹುಡುಗ. ಈ ರೀತಿ ನಾಯಕಿಯಾಗಿ, ಪೋಷಕ ನಟಿಯಾಗಿ ನಟಿಸಿದ್ದಾರೆ.

ಲಭಿಸಿರುವ ಪ್ರಶಸ್ತಿಗಳು

ಸುಮಲತಾ ಅವರು ಹಲವು ಚಿತ್ರಗಳಲ್ಲಿ ನಟಿಸಿರೋದ್ರಿಂದ ಅವರ ಕಲೆಗೆ ಮೆಚ್ಚಿ ಅವರಿಗೆ ಕೆಲವು ಪ್ರಶಸ್ತಿಗಳು ದೊರೆತಿವೆ.

ನಂದಿ ಪ್ರಶಸ್ತಿ ಅತ್ಯುತ್ತಮ ನಟಿ ತೆಲುಗು 1987

Advertisements

ಫಿಲಂ ಫ್ಯಾನ್ಸ್ ಪ್ರಶಸ್ತಿ ಅತ್ಯುತ್ತಮ ನಟಿ ತೆಲುಗು 1987

ಕೇರಳ ಫಿಲಂ ವಿಮರ್ಶಕರ ಪ್ರಶಸ್ತಿ ಅತ್ಯುತ್ತಮ ನಟಿ ಮಲಯಾಳಂ 1987

ಲಕ್ಸ್ ಪ್ರಶಸ್ತಿ ಅತ್ಯುತ್ತಮ ನಟಿ ಮಲಯಾಳಂ 1987

Advertisements

ಫಿಲಂ ಫ್ಯಾನ್ಸ್ ಪ್ರಶಸ್ತಿ ಅತ್ಯುತ್ತಮ ನಟಿ ಹಿಂದಿ 1987

ಕೇರಳ ಫಿಲಂ ವಿಮರ್ಶಕರ ಪ್ರಶಸ್ತಿ ಅತ್ಯುತ್ತಮ ನಟಿ ಮಲಯಾಳಂ 1988

ಸುಮಲತಾ ಅವರು ಆಗ ಯಾವ ರೀತಿ ನಾಯಕಿಯಾಗಿ ನಟಿಸ್ತಿದ್ರೋ, ಅದೇ ರೀತಿ ನಂತರವೂ ಪೋಷಕ ನಟಿಯಾಗಿ ನಟಿಸಿದ್ದಾರೆ. ಆದರೆ ಅವರ ನಟನೆಯಲ್ಲಿ ಮಾತ್ರ ಯಾವುದೇ ರೀತಿ ಏರು, ಪೇರಾಗಿಲ್ಲ. ಅದೇ ಆಸಕ್ತಿಯಿಂದ ನಟಿಸುತ್ತಿದ್ದಾರೆ. ಅವರು ಅಣ್ಣಾವ್ರ ಜೊತೆಗೆ ನಟಿಸಿದ ರವಿಚಂದ್ರ ಸಿನಿಮಾ ನಿಜಕ್ಕೂ ಬಹಳ ಅದ್ಭುತವಾಗಿದೆ. ಅಲ್ಲದೆ ವಿಷ್ಣುವರ್ಧನ್ ಜೊತೆಯೂ ಅಭಿನಯಿಸಿದ ಕರ್ಣ ಸಿನಿಮಾವು ಸಹ ಮನ ಮಿಡಿಯುವಂಥ ಸಿನಿಮಾವಾಗಿದೆ. ಇದರಲ್ಲೂ ಅವರ ನಟನೆ ಬಹಳ ಅಮೋಘವಾಗಿದೆ.

ಪತಿ ಸಾವಿನಿಂದ ಮಂಕಾದ ಸುಮಲತಾ

ಸುಮಲತಾ ಅಂಬರೀಷ್ ಜೋಡಿ, ಈಗಿನ ಕಾಲದ ಜೋಡಿಗಳಿಗೆ ಸ್ಫೂರ್ತಿಯಾಗಿತ್ತು. ಹೌದು. ಸಿನಿಮಾ ರಂಗದಲ್ಲಿ ಇವರ ಈ ಜೋಡಿ ಎಲ್ಲರ ಕಣ್ಣು ಕುಕ್ಕುವಂತಿತ್ತು. ಆದರೆ ಅಂಬರೀಷ್ ಅವರ ನಿಧನ, ಸುಮಲತಾ ಅವರ ಜೀವನದ ದಿಕ್ಕನ್ನೇ ಬದಲಾಯಿಸಿದೆ. ತನ್ನ ಪತಿ ಇರೋವರೆಗೂ ಸಿನಿಮಾದಲ್ಲಿ ನಟಿಸಿದ ಸುಮಲತಾ ಅವರು, ಅವರ ಪತಿ ನಿಧನ ಹೊಂದಿದ ಮೇಲೆ ಸಿನಿಮಾ ಕಡೆ ಆಸಕ್ತಿ ಕಡಿಮೆ ಮಾಡಿದ್ದಾರೆ. ಕೆಲವೆಡೆ ಅವರು ಇನ್ನು ಮುಂದೆ ನಟಿಸಲ್ಲ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಆದರೆ ಸದ್ಯಕ್ಕಂತೂ ಅವರು ತಮ್ಮ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ.

Advertisements

ರಾಜಕೀಯಕ್ಕೆ ಎಂಟ್ರಿ ಕೊಟ್ಟಿರೋ ಸುಮಲತಾ ಅಂಬರೀಷ್

ತಮ್ಮ ಪತಿಯ ಸಾವಿನ ನಂತರ ಸುಮಲತಾ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಯಾಕಂದ್ರೆ ತಮ್ಮ ಪತಿ ರಾಜಕೀಯದಲ್ಲಿ ಇದ್ದಾಗ ಅವರಿಗೆ ಸೀಟ್ ಸಿಗಲಿಲ್ಲ. ಹಾಗಾಗಿ ನಾನು ಗೆದ್ದು ಅವರ ಆಸೆಯನ್ನ ಪೂರೈಸುತ್ತೇನೆ ಅನ್ನೋದು ಅವರ ಮಾತಾಗಿದೆ. ಹಾಗಾಗಿ ಈಗ ನಡೆಯುತ್ತಿರುವ ಲೋಕ ಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ನಿಲ್ಲುತ್ತಿದ್ದಾರೆ. ಇವರಿಗೆ ಮಂಡ್ಯದ ಜನತೆ, ಹಾಗು ಕೆಲವು ಸಿನಿಮಾ ರಂಗದವರು ಕೂಡ ಬೆಂಬಲ ನೀಡುತ್ತಿದ್ದಾರೆ.

ಒಂದು ಫ್ಯಾಷನ್ ಶೋ ನಲ್ಲಿ ಗೆದ್ದ ಯುವತಿಗೆ ನೇರವಾಗಿ ಚಿತ್ರ ರಂಗ ಕೈ ಬೀಸಿ ಕರೆಯಿತು. ಅದರಂತೆ ತಮ್ಮ ಸಿನಿಮಾ ಜೀವನವನ್ನ ಶುರು ಮಾಡಿದ್ರು. ನಂತರ ಕನ್ನಡ ಮೇರು ನಟನನ್ನ ಮದುವೆಯಾಗುವುದರ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದರು. ಈಗ ಚುನಾವಣೆಯಲ್ಲಿ ನಿಂತಿದ್ದಾರೆ. ಜನರು ನಿಜಕ್ಕೂ ಇವರನ್ನ ಕೈ ಹಿಡಿಯುತ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.