30 ಕೋಟಿ ವೆಚ್ಚದ ಬೃಹದಾದ ಆಸ್ಪತ್ರೆಯ ನಿರ್ಮಾಣಕ್ಕೆ ಸುಧಾಮೂರ್ತಿ ಮುಂದಾಗಿದ್ದಾರೆ

0
4508

ಸುಧಾಮೂರ್ತಿ ಅವರು ತಮ್ಮ ಸರಳ ವ್ಯಕ್ತಿತ್ವದಿಂದಾನೇ ಜನರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಬಹಳ ಕಠಿಣ ಸವಾಲುಗಳನ್ನ ಎದುರಿಸಿ ಉನ್ನತ ಸ್ಥಾನಕ್ಕೆ ಬಂದ ಮಹಿಳೆ. ಅದೆಷ್ಟೋ ಯಂಗ್ ಟೆಕ್ನೀಷಿಯನ್ಸ್ ಗೆ ಮಾದರಿಯಾಗಿ ನಿಂತಿದ್ದಾರೆ. ಕಡಿಮೆ ವೆಚ್ಚದಲ್ಲಿ ಶುರು ಮಾಡಿದ ಇನ್ಫೋಸಿಸ್ ಕಂಪನಿ ಈಗ ಬೃಹದ್ ಆಕಾರಕ್ಕೆ ಬೆಳೆದು ನಿಂತಿದೆ, ಈ ಬೆಳವಣಿಗೆಗೆ ಸುಧಾಮೂರ್ತಿ ಅವರೇ ಕಾರಣ. ದೊಡ್ಡ ವ್ಯಕ್ತಿಗಳ ಸರದಿ ಅಲ್ಲಿ ಇದ್ದರೂ ಒಂಚೂರು ಗರ್ವ, ಅಹಂ ಯಾವುದೇ ಸಂದರ್ಭದಲ್ಲಿ ವ್ಯಕ್ತ ಪಡಿಸುವುದಿಲ್ಲ. ಸಮಾಜದಲ್ಲಿ ಯಾವುದೇ ಒಂದು ಘಟನೆಯಾದರೂ ತಕ್ಷಣವೇ ಸುಧಾ ಮೂರ್ತಿ ಅವರು ಸ್ಪಂದಿಸುತ್ತಾರೆ.

ಪುಲ್ವಾಮ ದಾಳಿಗೆ ಸ್ಪಂದಿಸಿದ ಕರ್ನಾಟಕದ ಮಹಿಳೆ

ಉದಾಹರಣೆಗೆ ಇತ್ತೀಚಿಗೆ ನಡೆದ ಪುಲ್ವಾಮ ದಾಳಿ ಇಂದಾಗಿ ಯೋಧರು ಹುತಾತ್ಮರಾಗಿದ್ದರು. ಹುತಾತ್ಮರಾದ ಯೋಧರ ಕುಟುಂಬಕ್ಕೆ ಹಣವನ್ನು ನೀಡಿ ಸಮಾಜ ಸೇವಕಕಿಯಾಗಿ ಗುರುತಿಸಿಕೊಂಡಿದ್ದರು. ಈ ಹಿಂದೆ ಕೂಡ ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಗಣಕಯಂತ್ರವನ್ನು ಕೊಡಬೇಕೆನ್ನುವುದು ಸುಧಾರವರ ನಿಲುವಾಗಿತ್ತು. ಇನ್ಫೋಸಿಸ್ ಕಂಪನಿಗೂ ಹಾಗೂ ನಾನು ಮಾಡಿತ್ತಿರುವ ಸಮಾಜ ಸೇವೆಗೂ, ಯಾವುದೇ ರೀತಿ ಸಂಭಂಧವಿಲ್ಲ ಅಂತಾ ಕೆಲವು ದಿನಗಳ ಹಿಂದೆ ಹೇಳಿದ್ದರು. ನಾನು ಯಾರಿಗೆ ಸಹಾಯ ಮಾಡಿದ್ದೆನೋ ಅವರಿಗೆ, ನಾನು ಐ‌ಟಿ ಕಂಪನಿಯಾ ಮುಖ್ಯಸ್ಥೆ ಎಂದು ತಿಳಿಯಬಾರದು, ಅಕಸ್ಮಾತ್ ತಿಳಿದರೆ ನನ್ನಿಂದ ಇನ್ನಷ್ಟು ಜನರು ನಿರೀಕ್ಷೆ ಇಟ್ಟುಕೊಳ್ಳುತ್ತಾರೆ ಎಂದು ಮಾತನಾಡಿದ್ದರು.

sudha murthy

30 ಕೋಟಿ ವೆಚ್ಚದ ಬೃಹದಾದ ಆಸ್ಪತ್ರೆ ನಿರ್ಮಾಣಕ್ಕೆ ಸುಧಾಮೂರ್ತಿ ಮುಂದಾಗಿದ್ದಾರೆ

ಯೋಧರ ಸಮಾಜ ಸೇವೆಯ ನಂತರ ಮತ್ತೊಂದು ಉತ್ತಮವಾದ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ. ಯಾವುದು ಅಂತೀರಾ? ಯೆಸ್ ಸುಧಾಮೂರ್ತಿ ಅವರು ಮತ್ತೊಂದು ಸಕಾರಾತ್ಮಕ ಹಾಗೂ ಜನರ ಒಳಿತಿಗಾಗಿ, ಆಸ್ಪತ್ರೆ ಕಟ್ಟಲು ಸಿದ್ಧರಾಗಿದ್ದಾರೆ. ಆಸ್ಪತ್ರೆ ನಿರ್ಮಾಣಕ್ಕೆ ಆಗುವ ಖರ್ಚನ್ನು ಸ್ವತಃ ಸುಧಾಮೂರ್ತಿ ಅವರು ನೀಡಲಿದ್ದಾರೆ. ರಾಮನಗರ ಜಿಲ್ಲಾಡಿತ ಹಾಗೂ ಇನ್ಫೋಸಿಸ್ ಫೌಂಡೇಷನ್ ನೇತೃತ್ವದಲ್ಲಿ ನಡೆದ, ಹೆರಿಗೆ ಹಾಗೂ ಮಕ್ಕಳ ಆಸ್ಪತ್ರೆಯ ಒಪೆನಿಂಗ್ ಸೆರೆಮನಿಗೆ ಸುಧಾ ಅವರು ಸಾಕ್ಷಿಯಾಗಿದ್ದಾರೆ. ಕನಕಪುರದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕನಕಪುರದಲ್ಲಿ ನೆಲೆಯಾಗಿರುವ ಹಳೆ ಆಸ್ಪತ್ರೆ ಇದು, ಆ ಪ್ರದೇಶದಲ್ಲಿಯೇ ಮತ್ತೊಂದು ಉತ್ತಮವಾದ ಗುಣಮಟ್ಟವಾದ ಆಸ್ಪತ್ರೆ ಸ್ಥಾಪಿಸಲು ಸುಧಾ ಮೂರ್ತಿ ಅವರು ಮುಂದಾಗಿದ್ದಾರೆ.

ಟೆಕ್ನಾಲಜಿ ಅಲ್ಲದೆ ಬರವಣಿಗೆಯಲ್ಲೂ ಆಸಕ್ತಿ ಹೊಂದಿದ್ದಾರೆ

ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಅಧಿಕವಾಗಿ ಸಿಗಬೇಕು ಎನ್ನುವುದು ಸುಧಾ ಅವರ ಕಾಳಜಿ, ಇದಕ್ಕಾಗಿಯೇ ಬಹಳಷ್ಟು ಯುವಕರು ಇನ್ಫೋಸಿಸ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅಂತಾ ಭಾಷಣ ಮಾಡುವಾಗ ಸುಧಾ ಮೂರ್ತಿ ಹೇಳಿಕೊಂಡಿದ್ದಾರೆ. ಐ‌ಟಿ ಫೀಲ್ಡ್ ಅಲ್ಲದೆ ಬರವಣಿಗೆಯಲ್ಲೂ ಇವರು ಆಸಕ್ತಿ ಹೊಂದಿದ್ದಾರೆ. ಅನೇಕ ಪುಸ್ತಕಗಳನ್ನು ಬರೆದು ಬಿಡುಗಡೆ ಮಾಡಿದ್ದಾರೆ. ಇಂಗ್ಲಿಷ್ ಹಾಗೂ ಕನ್ನಡ ಎರಡು ಭಾಷೆಯಲ್ಲಿಯೂ ಬರೆಯುವ ಸಾಮ್ಯರ್ಥತೆ ಇವರಲ್ಲಿ ಇದೆ. ಇವರು ಸಾಮಾನ್ಯ ಜೀವನ, ಆತಿಥ್ಯ, ಸಾಕ್ಷಾತ್ಕಾರ, ತಂತ್ರಜ್ಞಾನ ವಿಷಯದ ಕುರಿತು ಪುಸ್ತಕವನ್ನು ಬರೆಯುತ್ತಾರೆ.

sudha murthy

ಹುತಾತ್ಮರಾದ ಸೈನಿಕರ ನೆನೆಯುತ್ತಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ

ಆಸ್ಪತ್ರೆ ತಯಾರಾಗಲು ಸುಮ್ಮಾರು ೩೦ ಕೋಟಿ ಕರ್ಚಾಗುತ್ತದೆ, ಅದೆಷ್ಟೇ ಹಣ ಕರ್ಚಾಗಲಿ ನಾನು ಕೊಡುತ್ತೇನೆ, ದವಾಕಾಣಿಯ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿರಬೇಕೆಂದು ಸುಧಾಮೂರ್ತಿ ಅವರು ಮಾತನಾಡಿದ್ದಾರೆ. ಇಂತಹ ಒಂದು ಒಳ್ಳೆಯ ಸೇವೆಗೆ ನಾಡಿನ ಜನರು ಇವರನ್ನು ಹೊಗಳುತ್ತಿದ್ದಾರೆ. ಪುಲ್ವಾಮ ದಾಳಿ ಇಂದಾಗಿ ಹುತಾತ್ಮರಾದ ಯೋಧರನ್ನು ನೆನೆಯುತ್ತಾ, ಹಮ್ಮಿಕೊಂಡ ಸಮಾರಂಭದಲ್ಲಿ ತಮ್ಮ ನೋವಿನ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಇಂತಹ ಮತ್ತಷ್ಟು ಸಮಾಜ ಸೇವೆಯಲ್ಲಿ ಸುಧಾ ಮೂರ್ತಿ ಅವರು ತೊಡಗಿಕೊಳ್ಳಿ ಅಂತಾ ಹರಿಸೋಣ.

ಈ ಪೋಸ್ಟ್ ನಿಮಗೆ ಇಷ್ಟ ವಾದಲ್ಲಿ ಲೈಕ್ ಅಂಡ್ ಫಾಲೋ MetroSaga – Kannada on Facebook 

Comments

comments

[jetpack_subscription_form]
SHARE
Previous articleHere Are Some Of The Best Places In Bengaluru To Have Delicious Varieties Of Holige
Next articleThere’s Something Special About South Bengaluru Which Makes It The Most Loved Part Of The City

LEAVE A REPLY

Please enter your comment!
Please enter your name here