ಶಿವಣ್ಣ ಮತ್ತು ರವಿಚಂದ್ರನ್ ಒಂದೇ ದಿನ ಬರಲಿದ್ದಾರೆ. ಏನಿದು ಸುದ್ದಿ?

0
2317
shiv rajkumar ravichandran

ಬಹಳ ವರ್ಷಗಳ ಕೆಳಗೆ ಕೋದಂಡ ರಾಮ ಅನ್ನೋ ಸಿನೆಮಾ ಬಿಡುಗಡೆ ಆಗಿತ್ತು. ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಬ್ಬರು ಸ್ಟಾರ್ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದರು. ಇಬ್ಬರು ಸ್ಟಾರ್ ನಟರು ನಟಿಸಿದ್ದ ಸಿನೆಮಾ ಹಿಟ್ ಆಗಿತ್ತು. ಶಿವರಾಜ್ ಕುಮಾರ್ ಅವರ ಅಭಿನಯವನ್ನು ಬರೀ ಪದಗಳ ಮೂಲಕ ವರ್ಣಿಸಲು ಸಾಧ್ಯವಿಲ್ಲ. ರವಿಚಂದ್ರನ್ ಅವರು ಕೂಡ ಶಿವಣ್ಣ ನ ಸರಿ ಸಮಾನಾವಾಗೆ ನಟಿಸಿದ್ದರು. ಕೋದಂಡ ರಾಮನ ನಂತರ ಇವರಿಬ್ಬರು ಮತ್ತೊಮ್ಮೆ ಸ್ಕ್ರೀನ್ ಹಂಚಿಕೊಳ್ಳಲಿಲ್ಲ. ಆದರೆ ಪ್ರಸ್ತುತವಾಗಿ ಇವರಿಬ್ಬರು ಬೇರೆ ಬೇರೆ ಸಿನೆಮಾದಲ್ಲಿ ಆಕ್ಟ್ ಮಾಡಿದ್ದಾರೆ, ಇನ್ನೇನು ಸಿನೆಮಾ ಬಿಡುಗಡೆ ಆಗಬೇಕು ಅಷ್ಟೇ. ಇದರಲ್ಲಿ ಏನಿದೆ ಅಂತಾ ಆಲೋಚಿಸುತ್ತಿದ್ದೀರಾ ಹೌದೂ ಈ ಇಬ್ಬರ ಸ್ಟಾರ್ ನಟರ ಚಿತ್ರಗಳು ಒಂದೇ ದಿನ ತೆರೆ ಕಾಣಲಿವೆ. ಯಾವು ಆ ಎರಡು ಚಿತ್ರಗಳು?

ಏಪ್ರಿಲ್ 5 ರಂದು ಕವಚ ಹಾಗೂ ದಶರಥ ಚಲನಚಿತ್ರಗಳು ಬಿಡುಗಡೆ ಆಗಲಿವೆ

ಯೆಸ್ ಅಭಿಮಾನಿಗಾಳಿಗಂತೂ ಇದು ಸಂತಸದ ವಿಷಯ. ಆ ಕಡೆ ಶಿವಣ್ಣನ ಅಭಿಮಾನಿಗಳು, ಮತ್ತೊಂದು ಕಡೆ ರವಿ ಮಾಮಾನ ಅಭಿಮಾನಿಗಳು ಒಂದೇ ದಿನ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದ್ದಾರೆ. ಶಿವರಾಜ್ ಕುಮಾರ್ ಆಕ್ಟ್ ಮಾಡಿದ ಕವಚ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಕುರುಡನ ಪಾತ್ರವನ್ನು ಭಜರಂಗಿ ನಿಭಾಯಿಸಿದ್ದಾರೆ, ಇದನ್ನು ವೀಕ್ಷಿಸಿದ ಪ್ರೇಕ್ಷಕರು ಯಾವಾಗ ಚಿತ್ರ ಬಿಡುಗಡೆ ಆಗುತ್ತದೆ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡು ಕೂತಿದ್ದಾರೆ. ಕವಚ ಒಂದು ರೀಮೇಕ್ ಸಿನೆಮಾ, ಶಿವಣ್ಣ ಬಹಳ ವರ್ಷಗಳ ನಂತರ ಮಲಯಾಳಂ ಭಾಷೆಯ ಚಿತ್ರವೊಂದನ್ನು ರೀಮೇಕ್  ಮಾಡಲು ಮುಂದಾಗಿದ್ದಾರೆ, ಅದಕ್ಕೆ ಕಾರಣ ಚಿತ್ರ ಕಥೆ ಅವರನ್ನು ಆಕ್ಷರ್ಷಿತರನ್ನಾಗಿ ಮಾಡಿರಬಹುದು. ಕವಚ ಇಷ್ಟೊತ್ತಿಗೆ ಆಗಲೇ ಬಿಡುಗಡೆ ಆಗಬೇಕಿತ್ತು, ಕಾರಣಾಂತರಗಳಿಂದ ಬಿಡುಗಡೆಯ ದಿನಾಂಕ ಮುಂದೂಡುತ್ತಲೇ ಇದೆ.

ಕವಚ ಸಿನೆಮಾಕ್ಕೆ ಅಂತೂ ಬಿಡುಗಡೆಯ ಭಾಗ್ಯ ಒದಗಿ ಬಂದಿದ್ದು ಶಿವಣ್ಣನ ಅಭಿಮಾನಿಗಳಿಗೆ ಸಿಹಿ ಸುದ್ದಿ

ಈಗ ಕೊನೆದಾಗಿ ಕವಚ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಒದಗಿ ಬಂದಿದೆ. ಏಪ್ರಿಲ್ 5 ರಂದು ಚಲನಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ, ಶಿವನ ದರ್ಶನಕ್ಕಾಗಿ ಅಭಿಮಾನಿಗಳು ಕಾತರಿಸಿದಕ್ಕು, ಅಂತಿಮವಾಗಿ ಒಂದು ಒಳ್ಳೆ ಸಿಹಿ ಸುದ್ದಿ ಸಿಕ್ಕಿದೆ. ಕುರುಡನಾಗಿದ್ದರು ಹೇಗೆ ಸಮಾಜದ ಸ್ಥಿತಿ ಗತಿಯೊಂದಿಗೆ ಹೋರಾಡುತ್ತಾನೆ, ಅಂಗವಿಕಲನಾಗಿದ್ದರು ಸಾಧಾರಣ ಮನುಷ್ಯಗಿಂತ ನಾನು ಏನು ಕಮ್ಮಿ ಇಲ್ಲ, ನನ್ನಲು ಶಕ್ತಿ ಅಡಗಿದೆ ಎಂದು ನಿರೂಪಿಸುವ ಸಿನೆಮಾನೆ ಕವಚ ಆಗಿದೆ ಎಂದು ಚಿತ್ರದ ಟೀಸರ್ ನೋಡಿದ ನಂತರ ನಮ್ಮಗೆ ಅನಿಸುತ್ತದೆ. ಕವಚದಲ್ಲಿ ಇಶಾ ಕೊಪ್ಪಿಕರ್, ಬೇಬಿ ಮೀನಾಕ್ಷಿ, ವಸಿಷ್ಠ ಸಿಂಹ ಬಣ್ಣ ಹಚ್ಚಿದ್ದಾರೆ. ಚಿತ್ರ ಬಿಡುಗಡೆ ಆದ ನಂತರ ಇದರ ಅಬ್ಬರ ಹೇಗಿರುತ್ತೆ ಅಂತಾ ತಿಳಿಯಲಿದೆ ಅಲ್ಲಿಯವರೆಗೂ ಚಿತ್ರದ ನಿರೀಕ್ಷೆ ಹಾಗೆ ಇಟ್ಟುಕೊಳ್ಳಬೇಕು.

shiv rajkumar ravichandran

 

ದಶರಥ ಸಿನೆಮಾದ ಮೂಲಕ ರವಿ ಮಾಮಾ ತೆರೆ ಮೇಲೆ ಬಹಳ ದಿನಗಳ ನಂತರ ಕಾಣಿಸಿ ಕೊಳ್ಳಲಿದ್ದಾರೆ 

ರವಿ ಚಂದ್ರನ್ ಅವರ ಸಿನೆಮಾ ಬಿಡುಗಡೆ ಆಗಲಾರದೇ ಸಾಕಷ್ಟು ದಿನಗಳು ಕಳೆದವು, ಅಭಿಮಾನಿಗಳು ಯಾವಾಗ ಇವರ ಸಿನೆಮಾ ರಿಲೀಸ್ ಆಗಬಹುದು ಎಂದು ಕಾಯುತ್ತಲೇ ಇದ್ದಾರೆ, ದಶರಥ ಚಿತ್ರದ ಮೂಲಕ ಬೆಳ್ಳಿ ಪರದೆ ಮೇಲೆ ರವಿ ಅವರು ಪ್ರತ್ಯಕ್ಷ ಆಗುತ್ತಿದ್ದಾರೆ. ಯೆಸ್ ರವಿ ಮಾಮಾ ಈಸ್ ಬ್ಯಾಕ್. ಎಂ ಎಸ್ ಅವರು ಚಿತ್ರವನ್ನೂ ನಿರ್ದೇಶಿಸಿದ್ದಾರೆ, ಸೋನಿಯ ಅಗರ್ವಾಲ್, ಬಹು ಭಾಷೆ ತಾರೆ ಪ್ರಿಯಾಮಣಿ ಮುಖ್ಯ ರೋಲ್ ಗೆ ಜೀವ ತುಂಬಿದ್ದಾರೆ. ನಮ್ಮ ನಿಮ್ಮೆಲ್ಲರ ಪ್ರೀತಿಯ ಯಜಮಾನ, ಅಂದರೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಶೀರ್ಷಿಕೆ ಹಾಡಿಗೆ ತಮ್ಮ ಕಂಠವನ್ನು ನೀಡಿದ್ದು, ಚಿತ್ರಕ್ಕೆ ಇನ್ನಷ್ಟು ಕಲೆ ಬಂದಿದೆ. ದಶರಥ ಕೂಡ ಏಪ್ರಿಲ್ 5 ರಂದೇ  ತೆರೆಗೆ ಅಪ್ಪಳಿಸಿದೆ.

shiv rajkumar ravichandran

ದಶರಥ ಮತ್ತು ಕವಚ ಸಿನೆಮಾಗಳು ಒಂದೇ ದಿನ ತೆರೆಕಾಣಲಿವೆ. ಕೋದಂಡ ಮತ್ತು ರಾಮ ಇಬ್ಬರು ಒಂದೇ ಚಿತ್ರದಲ್ಲಿ ನಟಿಸಿದ್ದರು, ಆದರೆ ಈಗ ಒಂದೇ ದಿನದಂದು ಪೈಪೋಟಿಗೆ ಸಿದ್ದರಾಗಿದ್ದಾರೆ. ಯಾವ ಚಿತ್ರಕ್ಕೆ ರಾಜ್ಯದ ಜನತೆ ಸೈ ಎನ್ನುತ್ತಾರೋ ಗೋತಿಲ್ಲ, ಏಪ್ರಿಲ್ 5 ನೇ ತಾರೀಕು ತನಕ ನಾವು ಕಾಯಲೇಬೇಕು.

Comments

comments

LEAVE A REPLY

Please enter your comment!
Please enter your name here