ಶಂಕರ್ ನಾಗ್ ಅವರ ಕೊನೆಯ ಚಿತ್ರದ ಬಗ್ಗೆ ಇಲ್ಲಿದೆ ನೋಡಿ Interesting ವಿಷಯ

0
8092
Shankar Nag

ಇವರು ನಮ್ಮನ್ನ ಅಗಲಿ ಹಲವು ವರ್ಷಗಳಾಗಿವೆ. ಆದರೂ ಇವರನ್ನ ಜನರು ಮರೆತಿಲ್ಲ. ಇವರಿಗೆ ಎಂಥ ಅಭಿಮಾನಿಗಳಿದ್ದಾರೆ ಅಂದ್ರೆ ನೋಡಿದವರಿಗೆ ನಿಜಕ್ಕೂ ಆಶ್ಚರ್ಯವಾಗುತ್ತೆ. ಹೌದು. ಇವರ ನಟನೆಯನ್ನ ಮರೆತವರು ಯಾರು ಇಲ್ಲ. ಇವರ ನಟನೆ ಒಂದು ಅದ್ಭುತವನ್ನೇ ಸೃಷ್ಟಿಸುತ್ತಿತ್ತು. ಇವರ ಸಿನಿಮಾವನ್ನ ನೋಡಿದ್ರೆ ಮತ್ತೊಮ್ಮೆ, ಮಗದೊಮ್ಮೆ ನೋಡಬೇಕು ಎನಿಸುತಿತ್ತು.

ಆಟೋರಾಜ, ಕರಾಟೆ ಕಿಂಗ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಯಾರನ್ನಾದ್ರೂ ಕೇಳಿದ್ರೆ ನಮ್ಮ ಶಂಕರಣ್ಣ ಅಂತ ಹೆಮ್ಮೆಯಿಂದ ಹೇಳ್ತಾರೆ. ಹೌದು. ಚಿಕ್ಕವರಿಂದ ಹಿಡಿದು, ದೊಡ್ಡವರ ವರೆಗೂ ಇವರು ಎಲ್ಲರಿಗೂ ಗೊತ್ತು. ಇವರು ನಮ್ಮಿಂದ ದೂರ ಆಗಿ ಅನೇಕ ವರ್ಷಗಳಾಗಿವೆ. ಆದರೂ ಇವರನ್ನ ಇಲ್ಲಿಯವರೆಗೂ ಯಾರು ಮರೆತಿಲ್ಲ. ನಮ್ಮಲ್ಲಿ ಈಗಲೂ ಎಷ್ಟೋ ಜನ ಆಟೋ ಡ್ರೈವರ್ ಗಳು ಇವರನ್ನ ಮನಸ್ಸಿನಲ್ಲಿ ಪೂಜಿಸುತ್ತಾರೆ.

ಅದ್ಭುತ ಚಿತ್ರಗಳನ್ನ ನೀಡಿದ ಕರಾಟೆ ಕಿಂಗ್

ನಮ್ಮ ಶಂಕರಣ್ಣ ಇಂದಿಗೂ ಮರೆಯಲಾಗದಂತ ಸಿನಿಮಾಗಳನ್ನ ಕೊಡುಗೆಯಾಗಿ ನೀಡಿದ್ದಾರೆ. ಅವರ ಎಲ್ಲ ಸಿನಿಮಾಗಳನ್ನು ನಾವು ನೋಡಿ ಆನಂದಿಸಿದ್ದೇವೆ. ಆದರೆ ಅವರೇ ಅಭಿನಯಿಸಿದ ಒಂದು ಚಿತ್ರ ಮಾತ್ರ, ಅವರ ಜೀವನದ ದಿಕ್ಕನ್ನೇ ಬದಲಾಯಿಸಿತ್ತು. ಹೌದು ಅವರು ನಟಿಸಿದ ಒಂದು ಚಿತ್ರದಿಂದ ಅವರು ಬಹಳಷ್ಟು ಮನ ಕೆಡಿಸಿಕೊಂಡಿದ್ದರು. ಅವರ ವರ್ತನೆಯಿಂದ ಅವರ ಮನೆಯವರಿಗೆ ಆಶ್ಚರ್ಯವಾಗಿತ್ತು. ಇವರೇಕೆ ಈ ರೀತಿ ವರ್ತಿಸುತ್ತಿದ್ದಾರೆ ಅಂತ ತಲೆ ನೋವಾಗಿತ್ತು. ಆದರೆ ಅವ್ರ ಬಾಯಲ್ಲಿ ಬರುತ್ತಿದ್ದ ಮಾತುಗಳು ಮಾತ್ರ ಒಂದೇ. ಅದೇನು ಅಂತ ಹೇಳ್ತಿವಿ ಮುಂದೆ ಓದಿ.

ನಾಗಿಣಿ ಚಿತ್ರದಿಂದ ಮನ ಕೆಡಿಸಿಕೊಂಡಿದ್ದ ಶಂಕರ್ ನಾಗ್

ಶಂಕರ್ ನಾಗ್ ಅವರ ನಾಗಿಣಿ ಚಿತ್ರವನ್ನ ಕೆಲವರು ನೋಡಿದ್ದಾರೆ, ಆದ್ರೆ ಇನ್ನೂ ಕೆಲವರು ನೋಡಿಲ್ಲ. ಆದ್ರೆ ಇದೆ ಚಿತ್ರದಿಂದಲೇ ಅವರಿಗೆ ಶುರುವಾಗಿತ್ತು ತಲೆ ನೋವು. ಹೌದು ಈ ಚಿತ್ರದ ಸಮಯದಲ್ಲಿ ಅವರ ವರ್ತನೆ ಬಹಳಷ್ಟು ಬದಲಾಗಿತ್ತು. ಪ್ರತಿದಿನ ವಿಚಿತ್ರವಾಗಿ ವರ್ತಿಸೋದು ಹಾಗೂ ನಿದ್ದೆಯಲ್ಲಿ ಕನವರಿಸೋದು ಈ ರೀತಿ ಮಾಡುತ್ತಿದ್ದರು. ಕನಸಲ್ಲಿ ನಾಗಿಣಿಯೇ ಬಂದಂತೆ ಆಗುತ್ತಿತ್ತಂತೆ ಅವರಿಗೆ.

ಇಚ್ಚಾದಾರಿ ಹಾವನ್ನ ಪ್ರೀತಿಸಿದ ಆಟೋ ರಾಜ

ನಿನ್ನ ಕಣ್ಣುಗಳು ನನ್ನನ್ನು ಕೊಲ್ಲುತ್ತಿವೆ. ನಿನ್ನ ಕಣ್ಣಲ್ಲಿ ಕ್ಷೀರ ಸಾಗರವೇ ತೇಲುವಂತಿದೆ. ಎಲ್ಲವನ್ನೂ ದೋಚುವಂತಿರುವ ನಿನ್ನ ಕಣ್ಗಳು, ನನ್ನನ್ನೇ ಕೊಲ್ಲುತ್ತದೆ ಎಂದು ನಾನು ತಿಳಿದಿರಲಿಲ್ಲ. ಇಂತ ಮನಸೂರೆಯಾಗುವಂತ ಸಾಲುಗಳನ್ನ ಶಂಕರಣ್ಣ ಸಿನಿಮಾದಲ್ಲಿ ನಾಯಕಿಗೆ ಹೇಳಿದ್ರು. ಹೌದು ಈ ಚಿತ್ರದಲ್ಲಿ ನಟಿ ಗೀತಾ ಅವರು ನಾಗಿಣಿ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಶುರುವಾಗೋದೇ ನಾಯಕಿಯ ಕಣ್ಣುಗಳಿಂದ. ಯಾಕಂದ್ರೆ ಗೀತಾ ಅವರು ಇದರಲ್ಲಿ ಹಾವಿನ ಪಾತ್ರ ಮಾಡಿದ್ದರಿಂದ ಇವರ ಕಣ್ಣುಗಳು ಹಾವಿನ ಕಣ್ಣುಗಳಂತೆ ಇದ್ದವು. ಆದ್ರೆ ಅದನ್ನ ನೋಡಿದ ಶಂಕರ್ ನಾಗ್ ಅವ್ರಿಗೆ ಅವರ ಮೇಲೆ ಪ್ರೇಮವಾಗುತ್ತೆ. ಅಂದಿನಿಂದ ಅವರು ನಾಗಿಣಿಯನ್ನ ಪ್ರಿತಿಸೋಕೆ ಶುರು ಮಾಡ್ತಾರೆ. ತಾನು ಒಬ್ಬ ಇಚ್ಚಾದಾರಿ ಹಾವು ಅನ್ನೋದನ್ನ ಗೀತಾ ಅವರು ಮರೆತು ಅವರು ಸಹ ಒಬ್ಬ ಸಾಮಾನ್ಯ ವ್ಯಕ್ತಿಯಾಗಿರೋ ಶಂಕರ್ ನಾಗ್ ಅವರನ್ನ ಪ್ರೀತಿಸುತ್ತಾರೆ.

ಹುಣ್ಣೆಮೆಗಾಗಿ ಕಾಯುತ್ತಿದ್ದಳು ನಾಗಿಣಿ

ಚಿತ್ರದಲ್ಲಿ ನಾಗಿಣಿ ಇಚ್ಚಾದಾರಿ ಹಾವಾಗಿದ್ದರಿಂದ ಮನುಷ್ಯರ ರೂಪ ತಾಳುತ್ತಿತ್ತು. ಆದ್ರೆ ಶಂಕರ್ ನಾಗ್ ಒಬ್ಬ ಸಾಮಾನ್ಯ ವ್ಯಕ್ತಿ ಆಗಿದ್ದರಿಂದ ಅವರನ್ನ ಪಡೆಯಬೇಕು ಅಂದ್ರೆ, ಅವರು ಸಹ ಹಾವಾಗಬೇಕಿತ್ತು. ಅದಕ್ಕೋಸ್ಕರ ನಾಗಿಣಿ ಆ ಒಂದು ಹುಣ್ಣೆಮೆಗಾಗಿ ಕಾಯುತ್ತಿದ್ದಳು. ಅಂದುಕೊಂಡಂತೆ ಹುಣ್ಣಿಮೆಯೂ ಬಂದಿತ್ತು. ಆದ್ರೆ ನಾಗಿಣಿಗೆ ಶಂಕರ್ ನಾಗ್ ಸಿಗಬಾರದು ಅನ್ನೋದು ಬೇರೆಯವರ ಆಸೆಯಾಗಿತ್ತು. ಹಾಗಾಗಿ ಅವರಿಬ್ಬರೂ ಒಂದಾಗುವ ಸಮಯದಲ್ಲಿ ನಾಗಿಣಿಯನ್ನ ಕೊಲ್ಲೋಕೆ ಮುಂದಾಗ್ತಾರೆ. ಆದ್ರೆ ಆಗ ಶಂಕರಣ್ಣ ಸಾಯುತ್ತಾರೆ. ನಂತರ ಅವರು ಮರು ಜನ್ಮ ಪಡೆಯುತ್ತಾರೆ. ಆದ್ರೆ ಅವರ ಆ ಪಾತ್ರವನ್ನ ಅನಂತ್ ನಾಗ್ ಮಾಡುತ್ತಾರೆ. ಯಾಕಂದ್ರೆ ಅಷ್ಟರಲ್ಲಿ ಶಂಕರ್ ನಾಗ್ ಅವರ ಸ್ಥಿತಿ ವಿಚಿತ್ರವಾಗಿರುತ್ತೆ.

ಕನಸಲ್ಲೂ ಕೆಣಕಿದಳು ಇಚ್ಚಾದಾರಿ ನಾಗಿಣಿ

ಎಷ್ಟೋ ಸಿನಿಮಾಗಳಲ್ಲಿ ನಮ್ಮ ಶಂಕರಣ್ಣ ನಟಿಸಿದ್ದಾರೆ. ಆದರೆ ಯಾವ ಸಿನಿಮಾವು ಅವರ ಮನಸನ್ನ ಕೆಣಕಿರಲಿಲ್ಲ. ಆದ್ರೆ ಈ ನಾಗಿಣಿ ಸಿನಿಮಾ ಮಾತ್ರ ಅವರನ್ನ ಬಹಳಷ್ಟು ಡಿಸ್ಟರ್ಬ್ ಮಾಡಿತ್ತು. ಹೌದು ಪ್ರತಿ ಸಿನಿಮಾ ಶೂಟಿಂಗ್ ಮುಗಿದ ಮೇಲೆ ಆರಾಮಾಗಿ ಮನೆಗೆ ಬಂದು ಕಥೆ, ಸಂಗೀತ ಅಂತ ಕಾಲ ಕಳೀತಿದ್ರು. ಆದ್ರೆ ಈ ಸಿನಿಮಾ ಶೂಟಿಂಗ್ ಮುಗಿತು ಅಂದ್ರೆ ಸಾಕು ಬರಿ ವಿಶ್ರಾಂತಿ ಪಡೆಯೋಕೆ ಅಂತ ಹೋಗ್ತಿದ್ರು. ಕೆಲವೊಂದು ಸಾರಿ ಈ ಸಿನಿಮಾ ಮುಗಿಸಿಕೊಂಡು, ನಿದ್ದೆ ಮಾಡೋಕೆ ಅಂತ ಹೋದ್ರೆ, ಕನಸಲ್ಲೂ ಸಹ ನಾಗಿಣಿ ಎದುರಿಗೆ ಬಂದಂತೆ ಆಗುತ್ತಿತ್ತಂತೆ. ಎಷ್ಟೋ ಸಾರಿ ಕನಸಲ್ಲಿ ನಾಗಿಣಿ ಬಂದಿರೋದಕ್ಕೆ ನಿದ್ದೆ ಮಾಡದೇ ಮದ್ಯ ರಾತ್ರಿಯೇ ಎದ್ದು ಕೂರುತ್ತಿದ್ದರು.

ನಾಗಿಣಿ ಸಿನಿಮಾನೇ ಆಯ್ತಾ ಕೊನೆ ಚಿತ್ರ?

ನಾಗಿಣಿ ಸಿನಿಮಾ ಸಮಯದಲ್ಲೇ ಶಂಕರ್ ನಾಗ್ ಅವರು ತುಂಬಾ ಮನ ಕೆಡಿಸಿಕೊಂಡಿದ್ದರು. ಎಷ್ಟೋ ಬಾರಿ ಅವರ ಪತ್ನಿ ಅರುಂಧತಿ ನಾಗ್ ಅವರು ಕೇಳಿದ್ದುಂಟು. ಏನಾಗಿದೆ, ಈ ರೀತಿ ಯಾಕೆ ವರ್ತಿಸುತ್ತಿದ್ದೀರಾ ಅಂತ. ಆದರೆ ಅದಕ್ಕೆಲ್ಲ ಅವರಿಂದ ಒಂದೇ ಉತ್ತರ ಬರುತ್ತಿತ್ತು. ಅದು ನಾಗಿಣಿ ಅಂತ. ಈ ಸಿನಿಮಾನೇ ಶಂಕರ್ ನಾಗ್ ಅವರ ಕೊನೆ ಚಿತ್ರ ಅಂತ ಬಲ್ಲ ಮೂಲಗಳಿಂದಲೂ ತಿಳಿದುಬಂದಿದೆ. ಜೊತೆಗೆ ಕೆಲವರ ಅನಿಸಿಕೆಯು ಇದೆ ಆಗಿದೆ. ಆದ್ರೆ ಇನ್ನೂ ಕೆಲವರು ಸುಂದರಕಾಂಡ ಸಿನಿಮಾ ಸಮಯದಲ್ಲಿ ಸಾವನ್ನಪ್ಪಿದ್ದು ಎಂದು ಹೇಳುತ್ತಾರೆ. ಆದ್ರೆ ಸುಂದರಕಾಂಡ ಸಿನಿಮಾ ನಾಗಿಣಿ ಬಂದ ಮೇಲೆ ಬಂದದ್ದು ನಿಜ. ಆದ್ರೆ ನಾಗಿಣಿ ಸಿನಿಮಾಗಿಂತ ಮೊದಲೇ ಸುಂದರಕಾಂಡ ಸಿನಿಮಾ ಶೂಟಿಂಗ್ ಮುಗಿದಿತ್ತು. ಆದ್ರೆ ನಾಗಿಣಿ ಸಿನಿಮಾ ನಂತರ ಬಿಡುಗಡೆ ಮಾಡಿದರಾಯ್ತು ಎಂದು ನಿರ್ಧರಿಸಿದ್ದರು. ಹಾಗಾಗಿ ನೋಡುಗರಿಗೆ ಶಂಕರ್ ನಾಗ್ ಅವರ ಕೊನೆ ಚಿತ್ರ ಸುಂದರಕಾಂಡ ಅಂತ ಕಂಡರೂ, ಅವರ ಕೊನೆ ಚಿತ್ರ ನಾಗಿಣಿಯಾಗಿದೆ.

ನಾಗಿಣಿ ಚಿತ್ರಕ್ಕೆ ಧ್ವನಿ ನೀಡಿದ್ರು ಅನಂತ್ ನಾಗ್

ನಾಗಿಣಿ ಚಿತ್ರದ ನಾಯಕ ಯಾರು ಅಂದ್ರೆ ಶಂಕರ್ ನಾಗ್ ಎಂದು ಹೇಳುತ್ತಾರೆ. ಹೌದು. ಆದ್ರೆ ಈ ಸಿನಿಮಾದಲ್ಲಿ ಅವರ ಅಣ್ಣ ಅಂನತ್ ನಾಗ್ ಕೂಡ ನಟಿಸಿದ್ದಾರೆ. ಶಂಕರ್ ನಾಗ್ ಅವರನ್ನ ನಾಗಿಣಿ ಇಷ್ಟ ಪಟ್ಟಾಗ ಅವರು ನಾಗಿಣಿಗೆ ಸಿಗೋದಿಲ್ಲ. ನಂತರ ಅವರ ಜನ್ಮವನನ್ನೇ ಅನಂತ್ ನಾಗ್ ಅವರು ಮತ್ತೆ ಪುನರ್ಜನ್ಮ ಪಡೆಯುತ್ತಾರೆ. ಆದ್ರೆ ಸಿನಿಮಾದ ಅರ್ಧ ಭಾಗದಿಂದಲೇ ಶಂಕರ್ ನಾಗ್ ಅವರ ನಟನೆಗೆ ಅಂನತ್ ನಾಗ್ ಅವರ ಧ್ವನಿ ನೀಡಿದ್ದಾರೆ. ಯಾಕಂದ್ರೆ ಅಷ್ಟರಲ್ಲಿ ಶಂಕರ್ ನಾಗ್ ಅವರು ಸಾವನ್ನಪ್ಪಿದ್ದರು. ಹಾಗಾಗಿ ಅವರ ಪಾತ್ರಕ್ಕೆ ಅಂನತ್ ನಾಗ್ ಅವರು ಧ್ವನಿ ಜೋಡಿಸಿದ್ದರು.

ಶಂಕರ್ ನಾಗ್ ಅವರ ಸಾವು ಈಗಲೂ ಹಲವು ಅನುಮಾನಗಳಿಂದ ತುಂಬಿದೆ. ಅವರು ನಮ್ಮನ್ನ ಅಗಲಿ ಇಷ್ಟು ವರ್ಷಗಳು ಕಳೆದರು ಅವರ ಸಾವಿಗೆ ಇನ್ನೂ ಸರಿಯಾದ ಕಾರಣ ತಿಳಿದುಬಂದಿಲ್ಲ. ಕೆಲವ್ರು ಆಕ್ಸಿಡೆಂಟ್ ಆಯಿತು ಅಂತಾರೆ. ಆದ್ರೆ ಇನ್ನೂ ಕೆಲವರು ಅದನ್ನ ಬೇಕು ಅಂತಾನೆ ಯಾರೋ ಮಾಡ್ಸಿದ್ದು ಅಂತಾರೆ. ಆದ್ರೆ ನಿಜ ಏನು ಅನ್ನೋದು ಇನ್ನೂ ಗೌಪ್ಯವಾಗಿದೆ.

ಶಂಕರಣ್ಣ ನಮ್ಮನ್ನೆಲ್ಲ ಬಿಟ್ಟೋದರು, ಈಗಲೂ ಅವರು ನಮ್ಮ ಜೊತೆಯಲ್ಲಿದ್ದಾರೆ ಅಂತಾನೆ ಅಭಿಮಾನಿಗಳು ತಿಳಿದಿದ್ದಾರೆ. ಈಗಲೂ ಪ್ರತಿ ಆಟೋ ಡ್ರೈವರ್ ಗಳು ಅವರನ್ನೇ ನೆನೆಯುತ್ತಾರೆ. ಕನ್ನಡ ರಾಜ್ಯೋತ್ಸವ ಬಂತು ಅಂದ್ರೆ ಸಾಕು ಅವರ ಫೋಟೋ ಇಟ್ಟು ಪೂಜೆ ಮಾಡ್ತಾರೆ. ಆದ್ರೆ ಶಂಕರ್ ನಾಗ್ ಅವರಂತ ಕಲಾವಿದನನ್ನ ನಾವು ಮತ್ತೊಮ್ಮೆ ನೋಡಲು ಆಗುವುದಿಲ್ಲ. ಚಂದನವನಕ್ಕೆ ಅವರ ಕೊಡುಗೆ ಅಪಾರ. ಅಂತ ನಟ ಮತ್ತೊಮ್ಮೆ ಬರಲಿ ಅನ್ನೋದು ಎಲ್ಲ ಅಭಿಮಾನಿಗಳ ಆಸೆ.

Comments

comments

LEAVE A REPLY

Please enter your comment!
Please enter your name here