ಸಂದೀಪ್ ಉನ್ನಿಕೃಷ್ಣನ್ ಬ್ಯಾಂಕ್ ಬ್ಯಾಲೆನ್ಸ್ ಜೀರೋ. ಸೈನಿಕಿನ ತಾಯಿ ಹಂಚಿಕೊಂಡ ಈ ಕಥೆ ಕೇಳಿದ್ರೆ ವ್ಹಾ ಅಂತೀರಾ

sandeep

ಕರ್ನಾಟಕದ ಹೆಮ್ಮೆಯ ಯೋಧ ಸಂದೀಪ್ ಉನ್ನಿಕೃಷ್ಣನ್. ಕೊನೆ ಉಸಿರು ಇರೋವರೆಗೂ ದೇಶಕ್ಕಾಗಿ ಹೋರಾಡಿದ ಮಹಾನ್ ಧೀರ, ದೇಶ ಸೇವೆಗಾಗಿ ಅಶೋಕ ಚಕ್ರವನ್ನು ಸರ್ಕಾರದವರು ಸಂದೀಪ್ ಅವರಿಗೆ ನೀಡಿದ್ದಾರೆ . ಭಾರತದಲ್ಲಿಯೇ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿರುವ ಪ್ರಶಸ್ತಿ ಪೀಸ್ ಟೈಮ್ ಗ್ಯಾಲ್ಲೆಂಟರಿ ಪ್ರಶಸ್ತಿ ಸಹ ಇವರಿಗೆ ಲಭಿಸಿದೆ. ಯೋಧರಲ್ಲಿ ಸಂದೀಪ್ ಅವರು ಮೇಜರ್ ಸೈನಿಕಾ ಎಂದೇ ಗುರುತಿಸಿಕೊಂಡಿದ್ದರು. ಇವರು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ಮತ್ತು ಸೇನೆಯೊಂದಿಗೆ ಇವರ ಗುಪ್ತಕಾರ್ಯಾಚರಣೆಗಳು ಯಾವಾಗಲೂ ಉತ್ತಮವಾದ ಫಲಿತಾಂಶ ನೀಡುತಿತ್ತು. ಗಂಡೆದೆಯ ಗುಂಡಿಗೆ ಎಂದರೆ ಅದೂ ಸಂದೀಪ್ ಉನ್ನಿಕೃಷ್ಣನ್ ಅವರದ್ದು ಮಾತ್ರ ಅಂತಾ ಹೇಳಬಹುದು.

ದೇಶ ಸೇವೆ ಹೊರತು ಪಡಿಸಿ ಸಮಾಜ ಸೇವೆಯಲ್ಲೂ ಸಂದೀಪ್ ಉನ್ನಿಕೃಷ್ಣನ್ ಅವರು ತೊಡಗಿಸಿಕೊಂಡಿದ್ದರು

ದೇಶ ಸೇವೆ ಹೊರತು ಪಡಿಸಿ ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸಂದೀಪ್ ಅವರು ವೀರ ಸ್ವರ್ಗ ಸೆರಿ ಈಗ 10 ವರ್ಷ ಆಯಿತು. ಸುಮಾರು 9 ವರ್ಷಗಳ ಕಾಲ ಇವರು ತಮ್ಮ ಉದ್ಯೋಗದಲ್ಲಿ ಸಂಪಾದಿಸಿದ ಹಣದಲ್ಲಿ ಅರ್ಧ ಹಣವನ್ನು ಬಡವರಿಗೋಸ್ಕರ ದಾನ ಮಾಡಿದ್ದಾರೆ, ಅಷ್ಟೊಂದು ಉದಾರವಾದ ವ್ಯಕ್ತಿತ್ವ ಈ ಯೋಧನದು. ಮುಂಬೈ ನಾ ತಾಜ್ ಹೊಟೇಲ್ ಅಲ್ಲಿ ನಡೆದ ಉಗ್ರರ ದಾಳಿಯಲ್ಲಿ, ಸಂದೀಪ್ ಅವರು ಉಗ್ರರೊಂದಿಗೆ ತಮ್ಮ ಕೊನೆ ಉಸಿರು ಇರೋವರೆಗೂ ಹೋರಾಡಿ ವೀರ ಮರಣಕ್ಕೆ ಶರಣಾಗುತ್ತಾರೆ ಎಂಬುವುದು ಮಾತ್ರ ನಮ್ಮಗೆ ಗೊತ್ತು. ಇವರ ಇನ್ನೊಂದು ರೂಪದ ಗುಣದ ಬಗ್ಗೆ ಮಾಹಿತಿ ನೀಡುತ್ತೇವೆ ಮುಂದೆ ಓದಿ.

Advertisements

 

ಸೈನಿಕನ ರೋಚಕವಾದ ಕಥೆ ಸ್ವತಃ ಅವರ ತಾಯಿ ಧನಲಕ್ಷ್ಮಿ ಉನ್ನಿಕೃಷ್ಣನ್ ಅವರು ಹಂಚಿಕೊಂಡಿದ್ದಾರೆ

ಈ ಸೈನಿಕನ ರೋಚಕ ಸ್ಟೋರಿ ಸ್ವತಃ ಅವರ ತಾಯಿ ಧನಲಕ್ಷ್ಮಿ ಉನ್ನಿಕೃಷ್ಣನ್ ಅವರು ಹಂಚಿಕೊಂಡಿದ್ದಾರೆ. 1995 ರಲ್ಲಿ ಸಂದೀಪ್ ಅವರು ಎನ್ ಡಿ ಎ ಪರೀಕ್ಷೆ ಕ್ಲಿಯರ್ ಮಾಡಿ ಪುಣೆಗೆ ಹಾರಿ ಕೆಡಿಟ್ ಆಗಿ ಸೇನೆಯಲ್ಲಿ ಸೇವೆ ಸಲ್ಲಿಸಿದರು. ರಾಜಸ್ಥಾನ್, ಜಮ್ಮು-ಕಾಶ್ಮೀರ್, ಹೈದರಾಬಾದ್ ಅಲ್ಲಿ ಕೆಲಸ ಮಾಡಿದ ನಂತರ, ಎನ್ಎಸ್ ಜಿ ಕಮ್ಯಾಂಡೋ ವಿಭಾಗದಲ್ಲಿ ಮೇಜರ್ ಆಗಿ ಹರಿಯಾಣದ ಮನೆಸರ್ ನ ಎನ್ ಎಸ್ ಜಿ ಅನ್ನೋ ಮುಖ್ಯ ಕಚೇರಿಗೆ ಇವರನ್ನು ನೇಮಕರಿಸಲಾಗಿತ್ತು. ಇಂತಹ ದೊಡ್ಡ ಮಟ್ಟದ ಹುದ್ದೆಯಲ್ಲಿ ಇದ್ದು ಸಹ ಪರಿವಾರಗೋಸ್ಕರ ಸ್ವಲ್ಪ ಹಣ ಕೂಡ ಕಲಿಸಿರಲಿಲ್ಲ. ಕುಟುಂಬದವರು ಸಹ ಈ ಹಣಕಾಸಿನ ವಿಚ್ಚರದ ಬಗ್ಗೆ ಸಂದೀಪ್ ಅವರನ್ನು ಪ್ರಶ್ನೆ ಮಾಡಲಿಲ್ಲ. ಏನೋ ಬಂದ ಹಣವನ್ನೆಲ್ಲ ಉಳಿತಾಯ ಮಾಡಿರಬಹುದೆಂದು ಕುಟುಂಬದವರು ಭಾವಿಸಿದ್ದರು.

ಸಂದೀಪ್ ಅವರ ಬ್ಯಾಂಕ್ ಬ್ಯಾಲೆನ್ಸ್ ಜೇರೋ

ಆದರೇ ಸಂದೀಪ್ ಅವರು ಹುತಾತ್ಮರಾದ ನಂತರ ಇವರ ಬ್ಯಾಂಕ್ ಬ್ಯಾಲೆನ್ಸ್ ವಿಚಾರಿಸಿ ನೋಡಿದಾಗ ಬ್ಯಾಲೆನ್ಸ್ ಜೇರೋ ಆಗಿತ್ತು ಎಂದು ಇವರ ತಾಯಿ ಹೇಳಿಕೊಂಡಿದ್ದಾರೆ. ಹಾಗಾದರೆ ಗಳಿಸಿದ್ದ ದುಡ್ಡೆಲ್ಲ ಎಲ್ಲಿ ಮಾಯವಾಯಿತು. ಬಂದ ಹಣವನ್ನೆಲ್ಲ ಬಡವರಿಗೆ ನೀಡುತಿದ್ದರು, ಮತ್ತು ತಿಂಗಳ ಕೊನೆಯಲ್ಲಿ ಸಿಕ್ಕ ಸಂಬಳದ ಹಣವನ್ನ ಬೇತಾಲಿಯನ್ ಅಲ್ಲಿ ವಾಸಮಾಡುತ್ತಿದ್ದ ಬಡ ಸೈನಿಕರಿಗೆ ಮತ್ತು ಅವರ ಫ್ಯಾಮಿಲಿ ಗೆ ಸಮರ್ಪಿಸುತ್ತಿದ್ದರು. ಸಂದೀಪ್ ಅವರು ನಿಧನವಾದ ಮೇಲೆ ನಾವು ಎನ್ಎಸ್ ಜಿ ಪ್ರದೇಶಕ್ಕೆ ತೆರಳಿದ್ದೆವು, ಅಲ್ಲಿಯ ಯೋಧರು ನಾವು ಸಂದೀಪ್ ಅವರಿಂದ ತುಂಬಾ ಉಪಕಾರವಾಗಿದೆ, ಅವರ ಸಹಕಾರದಿಂದ ನಾವು ಈಗ ಇಷ್ಟು ಆರಮಾಗಿ ಜೀವನ ನಡೆಸುತ್ತಿದ್ದೇವೆ ಎಂದು ಅಲ್ಲಿಯ ನಿವಾಸಿಯಾರು ನಮ್ಮಗೆ ಹೇಳಿದಾಗ ನಾವು ಮೂಖವಿಸ್ಮಿತರಾಗಿದ್ದೆವು.

sandeep unnikrishnan

ಸಾಕಷ್ಟು ಬಡವರ ಪಾಲಿಗೆ ನೆರಳಾಗಿ ನಿಂತಿದ್ದ ಈ ವೀರ ಯೋಧ

ಈ ಸಮಾಜ ಸೇವೆಯ ವಿಷಯದ ಕುರಿತು ಸಂದೀಪ್ ಅವರು ನಮ್ಮ ಬಳ್ಳಿ ಒಂದು ಬಾರಿ ಕೂಡ ವ್ಯಕ್ತ ಪಡಿಸಲಿಲ್ಲ. ದೇಶದ ಹೊಣೆ ಜೊತೆಗೆ ಸಮಾಜದ ಕಷ್ಟಕ್ಕೆ ಕೂಡ ಸ್ಪಂದಿಸುತ್ತಿದ್ದ ಅನ್ನೋ ವಿಷಯ ನಮ್ಮಗೆ ಗೊತ್ತಿರಲಿಲ್ಲ. ಆದರೆ ಇವರು ಎನ್ ಜಿ ಓ ಗಳಿಗೆ ಸಹಾಯ ಮಾಡುತ್ತಿದ್ದ ಅನ್ನೋ ಸಮಾಚಾರದ ಬಗ್ಗೆ  ನಮ್ಮಗೆ ಅನೇಕ ಸಂಘ ಸಂಸ್ಥೆಯವರು ಕಲಿಸುತ್ತಿದ್ದ ಪತ್ರಗಳ ಮೂಲಕ ಗೊತ್ತಾಯಿತು. ಸ್ವಲ್ಪ ಜನರ ಕಳಕಳಿಗೆ ನೆರವಾಗುತ್ತಿದ್ದ ಎಂದು ನಾವು ಅಂದುಕೊಂಡಿದ್ದೆವು, ಆದರೆ ಸಾಕಷ್ಟು ಬಡ ಜನತೆಗೆ ನೆರಳಾಗಿ ನಿಂತಿದ್ದನು ಅಂತಾ ನಾವು ಊಹಿಸಿರಲಿಲ್ಲ. ಎಲ್ಲಾ ಯೋಧರಂತೆ ಮೊದಲೇ ನಾನು ರಜ ಹಾಕಿ ಮನೆಗೆ ಬರುತ್ತಿದ್ದೇನೆ ಅಂತಾ ವರದಿ ನೀಡುತ್ತಿರಲಿಲ್ಲ.

Advertisements

sandeep

ಏಕ ಏಕಾ ಆಗಿ ಮನೆಗೆ ಬಂದು ಹೋಗುತ್ತಿದ್ದ

ಏಕಾ ಏಕೀ ಆಗಿ ಮನೆಗೆ ಬರುತ್ತಿದ್ದ, ಯಾಕೋ ಹೀಗೆ ಸಡನ್ ಆಗಿ ಏನು ಹೇಳದೇ ಕೇಳದೆ ಮನೆಗೆ ಬಂದು ಹಾಗೆ ಹೊರಟು ಬಿಡುತ್ತಿ ಅಲ್ಲಾ ಎಂದು ಕೇಳಿದಾಗ ಸಂದೀಪ್ ಅವರು ಕೊಟ್ಟ ಉತ್ತರ ನಾನು ಈಗ ಒಬ್ಬ ದೊಡ್ಡ ಅಧಿಕಾರಿ, ಅಲ್ಲಿ ಸಾಕಷ್ಟು ಯೋಧರು ಮತ್ತು ಕೆಲ ಬಡ ಕುಟುಂಬಗಳು ಕಣ್ಣೀರಿನಲ್ಲಿಯೇ ಕೈ ತೊಳೆಯುತ್ತಿದ್ದಾರೆ, ಹೀಗಿರುವಾಗ ಅವರಿಗೆ ಬೇಕೆಂದಾಗ ರಜಾ ಕೊಟ್ಟು, ಸ್ವಲ್ಪ ಹಣ ನೀಡಿ, ಅವರ ಸಂಕಷ್ಟಗಳನ್ನು ಬಗೆ ಹರಿಸಿ, ನಾನು ಹೇಳಿದ ಸಮಯಕ್ಕೆ ಮನೆಗೆ ಬರಲು ನನಗೆ ತೊಂದರೆಯಾಗುತ್ತದೆ, ಆದ್ದರಿಂದ ನಾನು ಏಕಾ ಏಕೀ ಆಗಿ ರಜಾ ತೆಗೆದುಕೊಂಡು ಮನೆಗೆ ಬರುವ ಪರಿಸ್ಥಿತಿ ಬಂದಿದೆ.

ಅಮ್ಮನಿಗೆ ಕಾರ್ ಡ್ರೈವಿಂಗ್ ಕಲಿಸಿ ಮತ್ತೆ ಮನೆಗೆ ಮರುಕಳಿಸಲಿಲ್ಲ

2008 ಆಗಸ್ಟ್ ತಿಂಗಳಿನಲ್ಲಿ 40 ದಿನ ರಜಾ ಹಾಕಿ ಮನೆಗೆ ಬಂದಿದ್ದ ಇದೇ ಅವನ ಲಾಸ್ಟ್ ಮುಖ ದರ್ಶನ. ಬಂದವನೇ ಅಮ್ಮಾ ನೀನು ಕಾರ್ ಡ್ರೈವಿಂಗ್ ಕಲಿಯಬೇಕೆಂದು ಜಿದ್ದು ಮಾಡಿದ, ಆಯಿತು ಅಂತಾ ಹೇಳಿ ನಾನು ಸಹ ಅವನ ಆಸೆಯನ್ನು ನೆರವೇರಿಸಿ ಕಾರ್ ಡ್ರೈವಿಂಗ್ ಕಲಿತಿದ್ದೆ. ಯಾವಾಗಲೂ ಸಂದೀಪ್ ಅವರು ವಿಮಾನದಲ್ಲಿಯೇ ಮನೆಗೆ ಬಂದು ಹೋಗುತ್ತಿದ್ದರು, ಆಗಸ್ಟ್ 11 ರಂದು ವಾಪಸ್ಸ್ ರೈಲಿನಲ್ಲಿ ಹೋದನು ವಿಮಾನದಲ್ಲಿ ಹೋಗಬೇಕೆಂದರೆ ದೇವನಹಳ್ಳಿವರೆಗೂ ಹೊರಡಬೇಕಿತ್ತು. ಆದ್ದರಿಂದ ಪಕ್ಕದಲ್ಲೇ ರೈಲು ನಿಲ್ದಾಣ ಇರುವ ಕಾರಣದಿಂದ, 5 ನಿಮಿಷ ಮೊದಲು ನಾನು ತಲುಪಬಹುದು ಎನ್ನುವ ಸಮಯಪ್ರಜ್ಞೆ ಇವರಲ್ಲಿ ಇರುವದರಿಂದ ರೈಲಿನಲ್ಲಿಯೇ ಪ್ರಯಾಣ ಮಾಡುತ್ತಾರೆ. ಇದೇ ಕೊನೆ ಮತ್ತೆ ಅವನು ನಮ್ಮ ಮನೆಗೆ ಮರುಕಳಿಸಲಿಲ್ಲ.

sandeep

ಕ್ಯಾಂಪ್ ಅಲ್ಲಿ ಸಿಕ್ಕ ಸೋಹಾನ್ ಅನ್ನೋ ಹೆಸರಿನ ಒಬ್ಬ ಆಪ್ತ ಸ್ನೇಹಿತ

ಜಾರ್ಖಂಡ್ ದೇಶದ ಸೋಹಾನ್ ಅನ್ನೋ ಒಬ್ಬ ವ್ಯಕ್ತಿ ಸಂದೀಪ್ ಅವರ ಆಪ್ತ ಸ್ನೇಹಿತ, ಇವರಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಬಹುಶ ಸಂದೀಪ್ ಅವರ ಎಲ್ಲ ಚಟುವಟಿಕೆಗಳಲ್ಲಿ ಸೋಹಾನ್ ಭಾಗಿ ಆಗುತ್ತಿದ್ದರು. ಮುಂಬೈನ ದಾಳಿ ಇಂದ ಜನರು ತತ್ತರಿಸಿ ಹೋಗಿದ್ದರು, ಈ ಆಪರೇಷನ್ ಗಾಗಿ ಸಂದೀಪ್ ಅವರು ಕಾರ್ಯ ನಿರ್ವಹಿಸಲು ಮುಂದಾಗುತ್ತಾರೆ. ಹೊರಡುವ ವೇಳೆಯಲ್ಲಿ ಸೋಹಾನ್ ಒಂದು ಜತೆ ಬಟ್ಟೆ ಹಾಗೂ ಶೂ ಅನ್ನು ಪ್ಯಾಕ್ ಮಾಡಿ ಸಂದೀಪ್ ಅವರ ಬಾಗ್ ನಲ್ಲಿ ಇಟ್ಟಿದ್ದರು. ಮನೆ ಇಂದ ಕರೆ ಬಂದರೆ ನಾನು ಹೊರಗಡೆ ಹೋಗಿದ್ದೀನಿ ಎಂದು ಮನೆಯವರಿಗೆ ತಿಳಿಸು ಅಂತಾ ಹೇಳಿ ಅಲ್ಲಿಂದ ಸಂದೀಪ್ ಅವರು ನಿಷ್ಕ್ರಮಿಸುತ್ತಾರೆ. ಟಿ‌ವಿ ಅಲ್ಲಿ ತಾಜ್ ಹೊಟೇಲ್ ಮೇಲೆ ನಡೆದ ದಾಳಿಯನ್ನು ವೀಕ್ಷಿಸಿದ ನಾವು ಕೂಡಲೇ ಸೈನ್ಯದ ಸಂಘಕ್ಕೆ ಕರೆಮಾಡಿದ್ದೆವು, ಆಗ ಸೋಹಾನ್ ಸಂದೀಪ್ ಸಾಬ್ ಗಯಾ ಅಂತಾ ವರದಿ ನೀಡಿದ ಅಷ್ಟೇ.

Advertisements

ಸಂದೀಪ್ ರಾ ಆಸೆ ಅವರ ತಂದೆ ತಾಯಿ ನೆರವೇರಿಸಿದ್ದಾರೆ, ಮತ್ತೆ ಹುಟ್ಟಿ ಬರಲಿ ಸಂದೀಪ್ ಉನ್ನಿಕೃಷ್ಣನ್ ಅಂತ ವೀರ ಯೋಧರು 

ಸಂದೀಪ್ ಅವರಿಗೆ ಸೋಹಾನ್ ಮೇಲೆ ತುಂಬಾ ಪ್ರೀತಿ ಹಾಗೂ ಮಮಕಾರ. ಬಡ ಕುಟುಂಬದಿಂದ ಸೈನ್ಯಕ್ಕೆ ಬಂದ ಸೋಹಾನ್ ನಾ ಕಂಡು ಅಮ್ಮಾ ಇವನ ಮದುವೆ ನಾವೇ ನಿಂತು ಮಾಡಿಸೋಣ ಅಂತಾ ಹೇಳಿದ್ದ, ಆದರೆ ವಿಧಿ ಆಟ ತನ್ನ ಸಹೋದರನ ಮದುವೆ ಆಗುವ ಮುನ್ನ ಸಂದೀಪ್ ಅಂತ ವೀರ ಯೋಧ ದೇಶಕ್ಕಾಗಿ ಮಣಿದು ಹುತಾತ್ಮನಾದನು.

ಆದರೆ ಸಂದೀಪ್ ಅವರ ಆಸೆ ಈಗ ಅವರ ತಂದೆ ತಾಯಿ ಈಡೇರಿಸಿದ್ದಾರೆ. ತಾವೇ ನಿಂತು ಸೋಹನ್ ನಾ ವಿವಾಹವನ್ನು ಮಾಡಿಸಿದ್ದಾರೆ. ಸೋಹಾನ್ ಅವರ ಅಮ್ಮನ ಕಡೆ ಬೆರಳು ಮಾಡಿ ತೋರಿಸಿ, ಅಮ್ಮಾ  ಇಂದು ನಾನು ಉಸಿರು ಸೇವನೆ ಮಾಡುತ್ತಿದ್ದೀನಿ ಎಂದರೆ ಅದಕ್ಕೆ ಸಂದೀಪ್ ಸಾಬ್ ಕಾರಣ ಅಂತಾ ಹೇಳಿ ಸಂದೀಪ್ ಅವರ ತಂದೆ ತಾಯಿಯನ್ನು ಅಪ್ಪಿಕೊಂಡು ಘಲ ಘಲನೇ ಅತ್ತಿದ್ದಾರಂತೆ ಇದೂ ನಡೆದಿದ್ದು ಸೋಹಾನ್ ಅವರ ಮನೆಯಲ್ಲಿ.