ಅಭಿನಂದನ್ ವರ್ಧಮಾನ್ ಕುರಿತು ಮಾಡಲಿದ್ದಾರಾ ಚಿತ್ರ ? ಈ ಸ್ಟೋರಿ ನೋಡಿ

ಭಾರತ, ಪಾಕಿಸ್ತಾನದ ಗಲಾಟೆ ನಿನ್ನೆ, ಮೊನ್ನೆಯದಲ್ಲ.. ದಶಕಗಳಿಂದಲೂ ಇದರ ಆರ್ಭಟ ನಡೆಯುತ್ತಲೇ ಇದೆನಮ್ಮಿಂದ ನೀವು, ನಿಮ್ಮಿಂದ ನಾವಲ್ಲ ಅನ್ನೋ ಸದ್ದು ಕೇಳಿಬರುತ್ತಲೇ ಇದೆ.. ಈ ಯುದ್ಧ ಇಂದಿಗೆ ಕೊನೆಯಾಗುತ್ತಾ? ಅಥವಾ ನಾಳೆಗೆ ಮುಗಿಯುತ್ತಾ? ಅನ್ನೋ ಗೊಂದಲ ಎಲ್ಲರಲ್ಲೂ ಮನೆ ಮಾಡಿದೆ.. ಈ ರೀತಿಯ ಯುದ್ಧಗಳನ್ನಿಟ್ಟುಕೊಂಡು ಕೆಲವಷ್ಟು ಸಿನಿಮಾಗಳು ಕೂಡ ಬಿಡುಗಡೆಯಾಗಿವೆ.. ಎಲ್ಲ ಭಾಷೆಗಳಲ್ಲೂ ಸಹ ನಿರ್ಮಾಪಕರು ಹಾಗೂ ನಿರ್ದೇಶಕರು ಬಹಳಷ್ಟು ಕುತೂಹಲದಿಂದ ಸಿನಿಮಾ ಮಾಡಿದ್ದಾರೆ.. ನಾವು, ನೀವೆಲ್ಲಾ ಚಿಕ್ಕವರಿಂದಲೂ ಇಂತಹ ಸಿನಿಮಾಗಳನ್ನ ನೋಡುತ್ತಾ ಬೆಳೆದಿದ್ದೇವೆ.. ಉಗ್ರರು ಅಂದ್ರೆ ಯಾರು? ಅವ್ರು ಹೇಗೆಲ್ಲ ಇರಬಹುದು? ಅಂತ ಸಿನಿಮಾ ನೋಡಿ ತಿಳ್ಕೊಂಡಿದ್ವಿ .. ಆದ್ರೆ ಈಗ ನಿಜಕ್ಕೂ ನಮ್ಮಲ್ಲಿ ಏನಾಗಿದೆ ಅಂದ್ರೆ ಸಿನಿಮಾದಲ್ಲಿ ನೋಡಿದ ಘಟನೆಗಳೆಲ್ಲ ಎದುರಿಗೆ ಬಂದು ನಿಲ್ಲುತ್ತಿದೆ..

ಈ ಹಿಂದೆ ನಮ್ಮನ್ನ ಬ್ರಿಟಿಷರು ಆಳ್ತಿದ್ರು.. ಆದ್ರೆ ಈಗ ಪಾಪಿ ಪಾಕಿಸ್ತಾನದವರು ಆಳಬೇಕು ಅಂತ ನಿರ್ಧಾರ ಮಾಡಿದ್ದಾರೆ.. ಆದ್ರೆ ಅದು ಎಂದಿಗೂ ಆಗದಿರುವ ವಿಷಯ ಅಂತ ಗೊತ್ತಿದ್ದರೂ ತಮ್ಮ ಪೌರುಷವನ್ನ ತೋರಿಸೋಕೆ ಮುಂದಾಗ್ತಿದ್ದಾರೆ.. ಹೀಗೆ ಅವ್ರಿಗೂ, ನಮಗೂ ಯುದ್ಧ ನಡೆಯುತ್ತಲೇ ಇದೆ.. ಆದ್ರೆ ಸ್ವಲ್ಪ ದಿನಗಳಿಂದ ಅದಕ್ಕೆ ಬ್ರೇಕ್ ಬಿದ್ದಿತ್ತು.. ಆದ್ರೆ ಈಗ ಮತ್ತೆ ಅದು ಕೆಲವು ದಿನಗಳಿಂದ ಶುರುವಾಗಿದೆ..  ಹೌದುಅಂದು ಫೆಬ್ರವರಿ ೧೪.. ಪ್ರೇಮಿಗಳ ದಿನಕ್ಕೆ ಅಂತಾನೆ ಹೆಸರುವಾಸಿಯಾಗಿರೋ ದಿನ.. ಅಂದು ಅದೆಲ್ಲಿಂದಲೋ ಒಂದು ಸುದ್ದಿ ಕೇಳಿಬರುತ್ತೆ.. ಅದೇನೆಂದ್ರೆ ಪಾಪಿ ಪಾಕಿಸ್ತಾನದವರು ನಮ್ಮ ಯೋಧರನ್ನ ಹತ್ಯೆಗಯ್ದಿದ್ದಾರೆ ಅಂತ.. ನಿಜಕ್ಕೂ ಅಂದು ಭಾರತ ದೇಶಕ್ಕೆ ಬರಸಿಡಿಲು ಬಡಿದಂತಾಗಿತ್ತು.. ಪ್ರತಿಯೊಂದು ಮನೆಯ್ಲಲೂ ಕಣ್ಣೀರಿನಿಂದ ಕೈ ತೊಳೆಯುತ್ತಿದ್ರು.. ಆದ್ರೆ ಅವತ್ತು ಬರ್ತಿವೈರಿಗೆ ಆಕ್ರೋಶ ಮತ್ತೆ ಕಣ್ಣೀರು ಬಿಟ್ಟರೆ ಬೇರೆ ದಾರಿ ಇರಲಿಲ್ಲ.. ರಣ ಹೇಡಿಗಳಂತೆ ಯುದ್ಧ ಮಾಡದೇ, ಬೆನ್ನಿಗೆ ಚೂರಿ ಹಾಕಿದ ಪಾಪಿಗಳಿಗೆ ಗೊತ್ತಿರ್ಲಿಲ್ಲ ಅನ್ಸುತ್ತೆ, ನಮ್ಮ ಸಾವು ಕೂಡ ಇದೇ ತಿಂಗಳು ಆಗೋದು ಅಂತ.. ಅದ್ರಂತೆ ಫೆಬ್ರವರಿ ೨೬ ರಂದು ನಮ್ಮ ಸೇನೆ ಉಗ್ರರನ್ನ ಬಲಿತೆಗೆದುಕೊಂಡಿದೆ..

Advertisements

ಭಾರತವನ್ನೇ ಸಂಹಾರ ಮಾಡಲು ಹೊರಟ ಪಾಕಿಸ್ತಾನ

ಹೌದುಯಾರಿಗೂ ತಿಳಿಯದಂತೆ ಭಾರತವನ್ನೇ ನಾಶ ಮಾಡಬೇಕು ಅಂತ ಪಾಕಿಸ್ತಾನ ನಿರ್ಧಾರ ಮಾಡಿತ್ತು.. ಅದಕ್ಕೋಸ್ಕರ ಅವರಲ್ಲಿದ್ದ ಶಸ್ತ್ರಾಸ್ತ್ರ ವಿಮಾನದಲ್ಲಿ ಉಗ್ರರನ್ನ ಕಳಿಸಿದ್ರು.. ಆದ್ರೆ ನಮ್ಮಲ್ಲಿ ಯಾರು ಕಣ್ಣು ಮುಚ್ಚಿ ಕುಳಿತಿರ್ಲಿಲ್ಲ.. ಹಾಗಾಗಿ ಅವರ ವಿಮಾನ ಬರುವುದನ್ನ ನೋಡಿದ್ದೇ ತಡ, ನಮ್ಮ ಭಾರತೀಯ ಪುತ್ರ ಅಭಿನಂದನ್ ವರ್ಧಮಾನ್ ನಮ್ಮಲ್ಲಿ ಇದ್ದಂತಹ ಜೆಟ್ ನ್ನ ತೆಗೆದುಕೊಂಡು ಹೋಗಿ, ಅವರ ವಿಮಾನಕ್ಕೆ ಗುದ್ದುತ್ತಾರೆ.. ಅವ್ರು ತಮ್ಮ ಪ್ರಾಣವನ್ನ ಲೆಕ್ಕಿಸದೆ ಇಡೀ ಭಾರತವನ್ನ ಕಾಪಾಡುತ್ತಾರೆ.. ನಿಜಕ್ಕೂ ನಮ್ಮಲ್ಲಿ ಇತಿಹಾಸ ಸೃಷ್ಟಿ ಆಗುವಂತಹ ವಿಷಯ..

ಚಿತ್ರಹಿಂಸೆ ನೀಡಿದ ಪಾಪಿಸ್ತಾನ

ಘಟನೆ ನಡೆದ ಕೂಡಲೇ ಅಭಿನಂದನ್ ಪಾಕಿಸ್ತಾನ ದವರ ಕೈ ವಶರಾಗ್ತಾರೆ.. ಅವ್ರಿಗೆ ಕೊಡಬಾರದ ಚಿತ್ರಹಿಂಸೆ ಕೊಡ್ತಾರೆ.. ಆದ್ರೂ ಅವ್ರು ಯಾವದಕ್ಕೂ ಅಂಜದೆ, ಅಳುಕದೆ ನಿರ್ಭಿತರಾಗಿರ್ತಾರೆ.. ನಂತರ ನಮಲ್ಲಿ, ಅವ್ರಲ್ಲಿ ಒಂದು ಮಾತುಕತೆಯಾಗಿ ಅಭಿನಂದನ್ ಬಿಡುಗಡೆಯಾಗ್ತಾರೆ.. ಇಡೀ ಭಾರತವನ್ನೇ ಕಾಪಾಡಿದ ಯೋಧ, ನಮ್ಮಿಂದ ಪಡಬಾರದ ಹಿಂಸೆಯನ್ನ ಪಟ್ಟು ಹಿಂದಿರುಗಿ ಬರ್ತಾರೆ.. ಅವ್ರು ಬರೋ ದೀನ್ ಇಡೀ ಭಾರತಕ್ಕೆ ಸಂಭ್ರಮದ ದಿನವಾಗಿತ್ತು..

ಅಭಿನಂದನ್ ಕುರಿತು ಚಿತ್ರ ಮಾಡುವ ಬಗ್ಗೆ ಚಿಂತನೆ…….

ನಮ್ಮ ಭಾರತೀಯ ಪುತ್ರನಾಗಿರೋ ಅಭಿನಂದನ್ ಶೌರ್ಯವನ್ನ ಕುರಿತು ಸಿನಿಮಾ ಮಾಡಬೇಕೆಂದು ಕೆಲವೆಡೆ ಮಾತುಕತೆ ನಡೆಯುತ್ತಿದೆ.. ಹೌದುಅವರ ಈ ಕೆಲಸ ಅಜರಾಮರ.. ಹಾಗಾಗಿ ಅವರನ್ನ ಆಧರಿಸಿ ಸಿನಿಮಾ ಮಾಡಬೇಕೆಂದು ಸಿನಿಮಾ ರಂಗ ನಿರ್ಧಾರ ಮಾಡಿದೆಈ ಹಿಂದೆಯೂ ಸಹ ನಮ್ಮಲ್ಲಿ ಎಷ್ಟೋ ಯೋಧರನ್ನ ಆಧರಿಸಿ ಸಿನಿಮಾ ಮಾಡಿದ್ದೇವೆ.. ಹಾಗಾಗಿ ವರ್ಧಮಾನ್ ಅವರನ್ನ ಕುರಿತು ಚಿತ್ರ ಮಾಡುವುದರಲ್ಲಿ ತಪ್ಪೇನಿಲ್ಲ ಎಂಬುದು ಕೆಲವರ ಅಭಿಪ್ರಾಯವಾಗಿದೆ..

Advertisements

ಅಭಿನಂದನ್ ಚಿತ್ರ ಮಾಡಲು ಚಿಂತಿಸಿದ್ದಾರ ಪುನೀತ್ ?

ನಮ್ಮ ನೆಚ್ಚ್ಚಿನ ನಟನಾದ ಪುನೀತ್ ರಾಜ್ ಕುಮಾರ್ ಅವ್ರು ನಟಿಸೋ ಚಿತ್ರಗಳೆಲ್ಲವೂ ಅದ್ಭುತವಾಗಿವೆ.. ಕೆಲವು ಚಿತ್ರಗಳಂತೂ ಮುಖ್ಯ ವ್ಯಕ್ತಿಗಳನ್ನ ಆಧಾರವಾಗಿಟ್ಟುಕೊಂಡು ಮಾಡಿದ್ದಾರೆ.. ಹಾಗಾಗಿ ಅಭಿನಂದನ್ ಅವರನ್ನ ಬಿಡುಗಡೆ ಮಾಡಿದ ದಿನ ಮಾಧ್ಯಮಗಳೊಂದಿಗೆ ಮಾತನಾಡಿದ ಪುನೀತ್ ರಾಜ್ ಕುಮಾರ್ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.. ಅಭಿನಂದನ್ ಅವರನ್ನ ಕುರಿತು ಚಿತ್ರ ಮಾಡುವ ಪ್ಲಾನ್ ಏನಾದ್ರು ಇದೆಯಾ? ಎಂದಾಗ, ಹೌದು ಅವ್ರನ್ನ ಕುರಿತು ಸಿನಿಮಾ ಮಾಡೋ ಆಸಕ್ತಿ ನನಗೂ ಇದೇ.. ಆದ್ರೆ ಮುಂದಿನ ದಿನಗಳಲ್ಲಿ ನೋಡೋಣ ಎಂದಿದ್ದಾರೆ

ಸಿನಿಮಾ ಕುರಿತು ನಿರ್ಮಾಪಕರು ಹಾಗೂ ನಿರ್ದೇಶಕರ ಉತ್ಸಾಹ

ಈಗಿನ ಕಾಲದಲ್ಲಿ ಸಿನಿಮಾ ಮಾಡಬೇಕು ಅಂದ್ರೆ, ಮೊದಲು ಬಜೆಟ್ ನೋಡ್ತಾರೆ.. ನಂತರ ಯಾವ ತರ ಸ್ಟೋರಿ ಇದ್ರೆ ಜನ ಅದನ್ನ ಇಷ್ಟ ಪಡ್ತಾರೆ ಅಂತ ತಿಳ್ಕೋತಾರೆ.. ನಂತರ ಅಂತ ಸಿನಿಮಾ ಮಾಡೋಕೆ ನಿರ್ಧಾರ ಮಾಡ್ತಾರೆ.. ಈಗ ಎಲ್ಲರ ಕಣ್ಣು ಬಿದ್ದಿರೋದು ಅಭಿನಂದನ್ ವರ್ಧಮಾನ್ ಮೇಲೆ.. ಹೌದು.. ಇವ್ರನ್ನ ಆಧರಿಸಿ ಸಿನಿಮಾ ಮಾಡಿದ್ರೆ ಜನ್ರಿಗೆ ಬೇಗ ಹತ್ತಿರವಾಗಬಹುದು.. ಮತ್ತೆ ಜನ್ರ ನಿರೀಕ್ಷೆಯನ್ನೇ ಮೀರಿಸಿದ ಚಿತ್ರ ಇದಾಗುತ್ತೆ ಅನ್ನೋದು ನಿರ್ಮಾಪಕರು ಹಾಗೂ ನಿರ್ದೇಶಕರ ಮಾತಾಗಿದೆ..

ಬಾಲಿವುಡ್ ನಲ್ಲಿ ಬಣ್ಣ ಹಚ್ಚಲಿದ್ದಾರಾ ಸಲ್ಮಾನ್ ಖಾನ್ ?

ಇತ್ತ ಸ್ಯಾಂಡಲ್ ವುಡ್ ನಲ್ಲಿ ಪುನೀತ್ ನಟಿಸೋ ನಿರೀಕ್ಷೆ ಇದ್ದಾರೆ, ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ನಟಿಸೋ ಸಾಧ್ಯತೆ ಇದೆ.. ಇನ್ನು ಇವರನ್ನ ಕುರಿತು ಮಾಡೋ ಚಿತ್ರ ಹಲವು ಭಾಷೆಗಳಲ್ಲಿ ಸೆಟ್ಟೇರೋ ಪ್ಲಾನ್ ಇದೆ.. ಸಲ್ಮಾನ್ ಖಾನ್ ಕೂಡ ಚಿತ್ರ ಮಾಡೋ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.. ಹೌದು.. ಅಭಿನಂದನ್ ಅವ್ರ್ ಘಟನೆ ನಡೆದ ಮೇಲೆ, ಮಾಧ್ಯಮದವರು ಕೆಲವರನ್ನ ಪ್ರಶ್ನೆ ಮಾಡಿದ್ದಾರೆ.. ಪ್ರಶ್ನೆಗಳಿಗೆ ಉತ್ತರ ನೀಡಿದ ನಟರು, ಹೌದು.. ನಾವು ಅವರನ್ನ ಕುರಿತು ಸಿನಿಮಾ ಮಾಡಬೇಕೆಂದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ..

Advertisements

ಅಭಿನಂದನ್ ಘಟನೆ ನಡೆದ ಮೇಲೆ, ಭಾರತದಲ್ಲಿ ಒಂದು ರೀತಿ ತಲ್ಲಣ ಉಂಟಾಗಿದೆ.. ಜೊತೆಗೆ ನಾವು ಯಾರ ವಿರುದ್ಧ ನಿಂತರು ಗೆದ್ದೇ ಗೆಲ್ಲುತೇವೆ ಅನ್ನೋದು ಮೈಂಡ್ ಫಿಕ್ಸ್ ಆಗಿದೆ.. ನಮ್ಮಲ್ಲಿ ಈಗಾಗಲೇ ಹಲವು ಸಿನಿಮಾಗಳು ತೆರೆ ಕಂಡಿವೆ.. ಈಗ ಅಭಿನಂದನ್ ಕುರಿತು ಚಿತ್ರ ಮಾಡಿದ್ರೆ, ಅದು ಸಹ ಇವುಗಳ ಸಾಲಿಗೆ ಸೇರಲಿದೆ.. ಜೊತೆಗೆ ಅದ್ದೂರಿಯಾಗಿ ಪ್ರದರ್ಶನ ಕಾಣೋದು ನಿಜ ಎನ್ನುವುದರಲ್ಲಿ ಅನುಮಾನವೇ ಇಲ್ಲದಂತಾಗುತ್ತೆ.. ನಮ್ಮವರೇನೋ ಚಿತ್ರ ಮಾಡ್ಬೇಕೆಂದು ನಿರ್ಧಾರ ಮಾಡಿದ್ದಾರೆ.. ಆದ್ರೆ ಚಿತ್ರ ಮಾಡೋ ವಿಷಯಕ್ಕೆ ಅಭಿನಂದನ್ ನಿಜಕ್ಕೂ ಒಪ್ಪಿಗೆ ನೀಡ್ತಾರಾ ಅನ್ನೋದು ನಿಜಕ್ಕೂ ಎಲ್ಲರ ಪ್ರಶ್ನೆಯಾಗಿದೆ..

ಯಾರು ಏನೇ ಅಂದುಕೊಳ್ಳಲಿ, ಅಭಿನಂದನ್ ಅವ್ರ ತಲೆಯೆಲ್ಲಿ ಇರೋದು ಮಾತ್ರ ಒಂದೇ.. ನಾನು ಒಬ್ಬ ಯೋಧ.. ಯೋಧನಾಗಿಯೇ ಇರುತ್ತೇನೆ.. ದೇಶಕ್ಕಾಗಿ ನಾನು ದುಡಿಯುತ್ತೇನೆ ಅನ್ನೋದು ಅವರ ಎಲ್ಲ ಕಾಲದ ಮಾತಾಗಿದೆ.. ಅವ್ರನ್ನ ಬಂದಿಸಿದಾಗಲೂ ಅವರ ಬಾಯಲ್ಲಿ ಬರುತ್ತಿದ್ದ ಮಾತು ಒಂದೇ.. ನಾನು ದೇಶಕ್ಕಾಗಿ ದುಡಿಯುತ್ತೇನೆ.. ದೇಶಕ್ಕೋಸ್ಕರ ನನ್ನ ಪ್ರಾಣ ಹೋದರು ನನಗೆ ಬೇಜಾರಿಲ್ಲ ಅನ್ನೋದು ನಿರ್ಭಯದ ಮಾತಾಗಿತ್ತು.. ಈ ಮಾತನ್ನೆಲ್ಲ ಕೇಳಿದಾಗ ನಿಜಕ್ಕೂ ನಾವು ಸಹ ಭಾರತೀಯರಾಗಿ ಹುಟ್ಟಿರೋದು ನಮ್ಮ ಪುಣ್ಯ ಅಂತ ಎನಿಸುತ್ತದೆ..

ಈ ಪೋಸ್ಟ್ ನಿಮಗೆ ಇಷ್ಟ ವಾದಲ್ಲಿ ಲೈಕ್ ಅಂಡ್ ಫಾಲೋ MetroSaga – Kannada on Facebook 

Advertisements