ಡಿಜಿಟಲ್ ರಾಜಕೀಯ !! ಉಪೇಂದ್ರರ ಪಕ್ಷದ ಪ್ರಣಾಳಿಕೆಯನ್ನು ನೋಡಿ ಬೆಚ್ಚಿ ಬಿದ್ದರಾ ರಾಜ್ಯದ ಮೋದಿ ಭಕ್ತರು??

Modi Fans Baseless Arguments

ಚುನಾವಣೆಯ ಬಿಸಿ ಆಗಲೇ ರಾಜ್ಯದಲ್ಲಿ ಏರಿರುವ ಹಾಗಿದೆ. ಎಲ್ಲೆಡೆ ಪಕ್ಷಗಳ ಗುಸು ಗುಸು ಮಾತುಗಳು, ಚಾಟಿ ಏಟುಗಳು, ಮತ್ತು ಆರೋಪ ಪ್ರತ್ಯಾರೋಪಗಳು, ಸಾಮಾಜಿಕ ಜಾಲತಾಣಗಳಲ್ಲಿ ಸ್ವಚ್ಛಂದ ವಾಗಿ ಹರಿದಾಡುತ್ತಿವೆ. ಮೋದಿ ಅವರ ಡಿಜಿಟಲ್ ಇಂಡಿಯಾದ ಕನಸು ಈ ರೀತಿ ಕಾರ್ಯ ಸಿದ್ಧಿ ಪಡೆದುಕೊಳ್ಳುತ್ತದೆ ಎಂದು ಎಣಿಸಿರಲಿಲ್ಲ ಬಿಡಿ. ಹೀಗೆ ಈ ಡಿಜಿಟಲ್ ಟ್ರೊಲ್ ಗಳು ,ಕಾಮೆಂಟ್ ವಾರ್ ಗಳು, ಫ್ಯಾನ್ಸ್ ಕದನಗಳು ಬರಿ ಚಿತ್ರ ರಂಗಕ್ಕೆ ಸೀಮಿತ ಅಂದು ಕೊಂಡಿದ್ದರೆ, ಈಗ ಇದು ರಾಜಕೀಯಕ್ಕೂ ಎಂಟ್ರಿ ಕೊಟ್ಟಿದೆ.

ವಿಷಯ ಎನ್ನಪ್ಪಾ ಅಂದರೆ

ಕೆಲವು ದಿನಗಳ ಹಿಂದೆ, ನಟ ಉಪೇಂದ್ರ ರವರ ಪಕ್ಷದ ಪ್ರಣಾಳಿಕೆ ಬಿಡುಗಡೆ ಆಗಿದ್ದು ನಿಮಗೆಲ್ಲ ಗೊತ್ತಿರಬಹುದು. ಒಟ್ಟು 24 ಅಂಶಗಳನ್ನು ಪ್ರಜಾಕೀಯ ಪಕ್ಷವು, ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಎಲ್ಲೆಡೆ ಇದರ ಬಗ್ಗೆ ಚರ್ಚೆ ನಡಿತಾ ಇದೆ ಮತ್ತು ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇದು ವಾಸ್ತವಕ್ಕೆ ಹತ್ತಿರವಾಗಿದೆಯೇ? ಪ್ರಣಾಳಿಕೆಯಲ್ಲಿ ಹೇಳಿದ ವಿಷಯಗಳನ್ನು ಕಾರ್ಯ ರೂಪಕ್ಕೆ ತರುವುದು ಸಾಧ್ಯವೇ? ಉಪೇಂದ್ರ ಅವರು ಸಿನಿಮಾ ಬಿಟ್ಟು ಗ್ರೌಂಡ್ ರಿಯಾಲಿಟಿ ಅರ್ಥ ಮಾಡ್ಕೋಬೇಕು ಮತ್ತು ಇದು ಸಾಧ್ಯ ಆಗಿದ್ದೇ ಆದರೆ, ಸೂಪರ್ ಫೈನ್ ಅಂತ ನೂ – ಹೀಗೆ ಒಂದೇ ಎರಡೇ, ಅಭಿಪ್ರಾಯಗಳ ಮಳೆಯೇ ಸುರಿಯುತ್ತಿದೆ. ಆದರೆ, ಇದು ಕದ್ದ ಪ್ರಣಾಳಿಕೆ ಎಂದು ಟೀಕಿಸಿದ ರಾಜ್ಯದ ಮೋದಿ ಭಕ್ತರು, ತಮ್ಮ ಲೇಖನದಲ್ಲಿ ಇದಕ್ಕೆ ಯಾವುದೇ ಪುರಾವೆಯನ್ನು ಕೊಡಲೇ ಇಲ್ವಲ್ಲಾ? ಎಂತಹ ಅವಮಾನದ ಸಂಗತಿ ! ಪ್ರಚೋದಿಸುವಂತಹ ಟೈಟಲ್ ಕೊಡಲು ಕಲಿತ ನೀವುಗಳು, ಯಾಕೆ ಟೈಟಲ್ ಗೆ ತಕ್ಕಂತೆ ವಿಷಯ ಬರೆಯುವುದಿಲ್ಲ ಎನ್ನುವ ಪ್ರಶ್ನೆ ಮೂಡುತ್ತದೆ.

Advertisements

ಸೋ ಕಾಲ್ಡ್ ಅಂಧ ಮೋದಿ ಭಕ್ತರು

ನಾನು ಆ ಲೇಖನದಲ್ಲಿ ಏನಿದ್ದರಬಹುದು ಅಂತಹ ಸುಮ್ಮನೆ ಕಣ್ಣಾಡಿಸಿದೆ. ಅದರ ಮೊದಲಾರ್ಧದಲ್ಲಿ ಉಪೇಂದ್ರ ರವರ ಕನಸಿನ ಬಗ್ಗೆ ಟೀಕೆಯ ಮಾತುಗಳು, ಮೋದಿ ಅವರ ಕೆಲಸಕ್ಕೆ ಹೋಲಿಕೆಯ ಮಾತುಗಳು ಇದ್ದರೆ ಮುಂದಿನ ಓದುವಿನಲ್ಲಿ, ಪ್ರಣಾಳಿಕೆಯ ಒಂದೊಂದು ಅಂಶವನ್ನು ಇಟ್ಟುಕೊಂಡು, ಅರ್ಥವಿಲ್ಲದ ಹೋಲಿಕೆ ಮಾಡುತ್ತ, ಡಿಜಿಟಲ್ ಇಂಡಿಯಾ, ಮೋದಿ ಅವರ ಯೋಜನೆಗಳನ್ನು ಸಲ್ಲದ ರೀತಿಯಲ್ಲಿ ಸೇರಿಸುತ್ತ ಬರೆದ ಆ ಲೇಖನವನ್ನು ನೋಡಿದರೆ, ಖಂಡಿತವಾಗಿಯೂ ಯಾರೋ ಉರ್ಕೊಂಡು ಬರೆದಿದ್ದಾರೆ ಅನ್ನಿಸುವುದರಲ್ಲಿ ಅನುಮಾನವೇ ಇಲ್ಲ.

ಮೋದಿ ಅವರು ಹಿಂದೆ ಗುಜರಾತ್ ನಲ್ಲಿ ಮಾಡಿದ ಕೆಲಸದ ಬಗ್ಗೆ ಎರಡು ಮಾತಿಲ್ಲ. ಮಾನ್ಯ ನರೇಂದ್ರ ಮೋದಿ ಅವರು ಈ ದೇಶ ಕಂಡ ಅತ್ಯಂತ ದಕ್ಷ ಅಧಿಕಾರಿ ಮತ್ತು ಇದು ಅತಿಶಯೋಕ್ತಿ ಅಲ್ಲ. ನೀವು ಭಾರತವನ್ನು ನಿಜವಾಗಿಯೂ ಪ್ರೀತಿಸುವವರಾಗಿದ್ದರೆ, ಮೋದಿ ಯನ್ನು ನೀವು ದ್ವೇಷಿಸುವುದಿಲ್ಲ. ಮೋದಿ ಅವರ ಸ್ಥಾನ ಬೇರೆ, ಅದರ ಬಗ್ಗೆ ಮಾತು ಬೇಡ. ಆದರೆ ಈ ಸೋ ಕಾಲ್ಡ್ ಮೋದಿ ಭಕ್ತರು ಇನ್ನೂ ತನ್ನ ರೂಪ ಪಡೆದುಕೊಳ್ಳುತ್ತಿರುವ ಪ್ರಜಾಕೀಯ ಪಕ್ಷದ ಮೇಲೆ ಯಾಕೆ ಗೂಬೆ ಕೂಡಿಸುತ್ತಿದ್ದಾರೆ ಅನ್ನುವುದು ಪ್ರಶ್ನೆ.

Modi Fans Baseless Arguments

ಪ್ರಜಾಕೀಯದ  ಪ್ರಣಾಳಿಕೆಯ ಒಂದು ಅವಲೋಕನ

– ಸಂಪೂರ್ಣ ಪಾರದರ್ಶಕ, ಸರಳ, ಹೊಣೆಗಾರಿಕೆಯುಳ್ಳ, ಮಿತವ್ಯಯೀ ಹಾಗೂ ಪ್ರಜೆಗಳನ್ನೊಳಗೊಂಡ ಆಡಳಿತ.

ಯಾಕೆ ಇದು ಸಾಧ್ಯ ಇಲ್ಲ ಅಂತ ನಾ? ಇಡೀ ಭಾರತದ ರಾಜಾಕೀಯ ಇತಿಹಾಸವನ್ನು ಗಮನಿಸಿದರೆ, ಪ್ರಜೆಗಳನ್ನು ಆಡಳಿತ ಕಾರ್ಯಗಳಲ್ಲಿ ಯಾವ ಪಕ್ಷವೂ ಸೇರಿಸಿಲ್ಲ. ಅದೇನಿದ್ದರೂ ಎಲೆಕ್ಷನ್ ಟೈಮ್ ನಲ್ಲಿ ಮಾತ್ರ. ಈಗ ಉಪೇಂದ್ರ ಅವರು ಜನರನ್ನ ಪ್ರಭುವನ್ನಾಗಿಸಿ ಆಡಳಿತ ನಡೆಸುತ್ತೇನೆ ಅಂದರೆ ಯಾಕೆ ಆಗಬಾರದು. ಈ ಕಲ್ಪನೆಯನ್ನು ವಾಸ್ತವವನ್ನಾಗಿಸುವ ಹೊಣೆಯು ನಾಗರಿಕರಾದ ನಮ್ಮ ಮೇಲೆಯೇ ಇರುತ್ತದೆ. ನಮಗೆ ಅದರ ಅಭ್ಯಾಸವೇ ಇಲ್ವಲ್ಲಾ? ಅದೇ ಸಮಸ್ಯೆ.

Advertisements

– ಪ್ರಜೆಗಳ ನೇರ ಸಂಪರ್ಕಕ್ಕಾಗಿ, ಸರ್ಕಾರದಿಂದ ಸರ್ಕಾರದ್ದೇ ಆದ ಟೆಲಿವಿಜನ್ ಚಾನಲ್, ಪ್ರತಿಯೊಂದು ಇಲಾಖೆಗಳಲ್ಲಿ ಹಾಗೂ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಸಾಮಾಜಿಕ ಜಾಲತಾಣಗಳು (ಫೇಸ್ಬುಕ್, ಟ್ವಿಟರ್, ವೆಬ್ಸೈಟ್, ಯುಟ್ಯೂಬ್ ಚಾನಲ್) ಮತ್ತು ಮೊಬೈಲ್ ಅಪ್ಲಿಕೇಶನ್ಗಳನ್ನು ಪ್ರಾರಂಭಿಸಲಾಗುವುದು.

ಇದು ವ್ಯಚ್ಚದಾಯಕ ಅನ್ನೋ ಟೀಕೆಯ ಮಾತುಗಳು ಕೇಳಿ ಬಂದವು. ನಾವು ಕಟ್ಟುವ ಕಂದಾಯ ಹಣವನ್ನು ಗುಳುಂ ಮಾಡುವ ಪಕ್ಷಗಳಿಗೆ ಇದು ವ್ಯಚ್ಚ ಅನ್ನಿಸುವುದು ಅಚ್ಚರಿಯ ವಿಷಯ ಏನು ಅಲ್ಲ ಬಿಡಿ. ಸಾಮಾಜಿಕ ಜಾಲತಾಣಗಳ ಅಕೌಂಟ್ ತೆರೆಯುವುದು ಆಡೋ ಮಕ್ಕಳಿಗೂ ಗೊತ್ತಿದೆ ಅಂಡ್ ಮೊಬೈಲ್ ಅಪ್ಲಿಕೇಶನ್ ಅನ್ನು ಒಂದು ಸ್ಟಾರ್ಟ್-ಅಪ್ ಆಫ್ಫೊರ್ಡ್ ಮಾಡುತ್ತೆ ಅಂದರೆ ಒಂದು ರಾಜ್ಯವನ್ನು ಆಳುವ ಪಕ್ಷ ಮಾಡಲಾದೀತೇ?

– ಪ್ರಜೆಗಳು ಮೊಬೈಲ್ ಅಪ್ಲಿಕೇಶನ್ನಲ್ಲಿ ತಮ್ಮ ಕ್ಷೇತ್ರದ/ ಪ್ರದೇಶದ ಸಮಸ್ಯೆ/ ದೂರುಗಳನ್ನು (ಲಿಖಿತ, ಫೋಟೊ, ವಿಡಿಯೋ, ಆಡಿಯೋ ಮೂಲಕ) ಸಂಬಂಧಪಟ್ಟ ಇಲಾಖೆಗಳ ನೌಕರರು, ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ (ಗ್ರಾಮ ಪಂಚಾಯತಿ ಸದಸ್ಯರು, ಕಾರ್ಪೋರೇಟರ್) ಸಲ್ಲಿಸಬಹುದು. ಪ್ರಜೆಗಳ ದೂರನ್ನು ನಿರ್ಧಿಷ್ಟ ಕಾಲಾವಧಿಯೊಳಗೆ ಪರಿಹರಿಸಲು ಸಂಬಂಧಪಟ್ಟವರು ವಿಫಲರಾದಲ್ಲಿ (ವಿಫಲರಾದವರು ಈ ಹೊಣೆಗಾರಿಕೆಯನ್ನು ಹೊರಬೇಕು) ಆ ದೂರು ಕೂಡಲೇ ಮೇಲ್ಮಟ್ಟದ ಅಧಿಕಾರಿಗಳಿಗೆ ಮತ್ತು ಜನ ಪ್ರತಿನಿಧಿಗಳಿಗೆ (ಶಾಸಕರು) ವರ್ಗಾವಣೆಗೊಳ್ಳುವುದು ಅವರು ನಿರ್ಧಿಷ್ಟ ಕಾಲಾವಧಿಯೊಳಗೆ ಆ ದೂರನ್ನು ಪರಿಹರಿಸಬೇಕು. ಈ ಪ್ರಕ್ರಿಯೆ ರಾಜ್ಯದ ಮುಖ್ಯಮಂತ್ರಿಗಳ ಕಛೇರಿವರೆಗೂ ವಿಸ್ತರಿಸಲ್ಪಟ್ಟಿರುತ್ತದೆ ಮತ್ತು ಸಂಪೂರ್ಣ ಪ್ರಕ್ರಿಯೆಯು ಪಾರದರ್ಶಕವಾಗಿ ಸಾರ್ವಜನಿಕವಾಗಿ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುತ್ತದೆ..

ಇದು ಡಿಜಿಟಲ್ ಇಂಡಿಯಾದ ಪರಿಕಲ್ಪನೆ ಅಲ್ಲದೆ ಇನ್ನೇನು? ಈ ವ್ಯವಸ್ಥೆ ಎಷ್ಟರ ಮಟ್ಟಿಗೆ ಸಫಲ ಆಗುತ್ತದೆ ಅನ್ನುವುದು ಮತ್ತೆ ನಮ್ಮ ಮೇಲೆಯೇ ಅವಲಂಬಿತವಾಗಿದೆ. ಈಗಲೂ ಸರ್ಕಾರದ ಅಪ್ಲಿಕೇಶನ್ ಗಳಿವೆ. ಆದರೆ ಎಷ್ಟು ಜನ ದೂರು ಸಲ್ಲಿಸಿದ್ದೇವೆ. ಸಧ್ಯ ಕರ್ನಾಟಕದಲ್ಲಂತೂ ಈ ವ್ಯವಸ್ಥೆ ಇಲ್ಲ. ಇದು ಉಪೇಂದ್ರ ರವರ ಮೂಲಕ ಬರುತ್ತದೆ ಅಂದರೆ ಅವಶ್ಯವಾಗಿ ಬರಲಿ.

– ಸಕಾಲಕ್ಕೆ ಸಮಸ್ಯೆಗಳು ಹಾಗೂ ದೂರುಗಳನ್ನು ಉತ್ತಮವಾಗಿ ಪರಿಹರಿಸಿದಂತಹ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕಾರ್ಯಗಳನ್ನು ಪುರಸ್ಕರಿಸಲಾಗುವುದು ಮತ್ತು ಅಂಕಗಳನ್ನು ನೀಡಲಾಗುವುದು. ಈ ಅಂಕಗಳೇ ಚುನಾಯಿತ ಜನ ಪ್ರತಿನಿಧಿಗಳಿಗೆ ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸಲು ಮುಖ್ಯ ಅರ್ಹತೆಗಳಾಗಿರುತ್ತವೆ ಮತ್ತು ಅಧಿಕಾರಿಗಳಿಗೆ ಈ ಅಂಕಗಳೇ ಬಡ್ತಿಗಳಿಗೆ ಮಾನದಂಡವಾಗಿರುತ್ತವೆ. (ಕಾರ್ಪೋರೇಟ್ ಟಿಕೆಟಿಂಗ್ ಟೈಮ್ಲೈನ್ ಟಾರ್ಗೆಟ್ಸ್ ರೀತಿ)

ನಾವು ಆಯ್ಕೆ ಮಾಡಿ ಕೂರಿಸಿದ ಜನರು ನಮ್ಮ ಕೆಲಸವನ್ನು ಮಾಡ್ಬೇಕೆಂದು. ಹೀಗಿದ್ದಾಗ ಇವತ್ತಿನ ಸಿಸ್ಟಮ್ ನಲ್ಲಿ ಒಬ್ಬ ರಾಜಕಾರಣಿಯ ಕೆಲಸವನ್ನು ಅಳಿಯಲು ಯಾವ ಮಾಪು ನಮ್ಮಲ್ಲಿ ಇಲ್ಲ. ಈಗ ನಾನು ಒಬ್ಬ ಮತದಾರನಾಗಿ ಹೇಗೆ ನಿರ್ಧರಿಸಲಿ., ಯಾರು ಹಿತವರು ಮೂವರೊಳಗೆ ಎಂದು? ಇದು ಇನ್ನು ಪ್ರಣಾಳಿಕೆ ಮಾತ್ರ. ಆಗಲೇ ಇದು ಸಾಧ್ಯ ಇಲ್ಲ ಎಂಬ ಮಾತು ಕೇಳಿ ಬರುತ್ತಿರುವುದು ವಿಪರ್ಯಾಸ.

Advertisements

– ಕನಿಷ್ಟ ಹಾಗೂ ನಿಗದಿತ ಅಂಕಗಳನ್ನು ಉತ್ತಮ ಕಾರ್ಯರೀತಿಯಿಂದ ಪಡೆಯತಕ್ಕದ್ದು, ತಪ್ಪಿದಲ್ಲಿ ಶಿಸ್ತು ಕ್ರಮಗಳೊಂದಿಗೆ ವೇತನದಲ್ಲಿ ಕಡಿತ ಸಹಾ ಮಾಡಲಾಗುತ್ತದೆ.

ಹೇಗೆ ಮಾಡುತ್ತಾರೆ ಎಂದು ಕಾದು ನೋಡೋಣ. ಈ ವರೆಗೂ ರಾಜ್ಯದಲ್ಲಿ ಯಾರೂ ಮಾಡಿಲ್ಲ ಅನ್ನೋ ಸತ್ಯ ಒಪ್ಪಿಕೊಳ್ಳೋಣ.

ಕಡ್ಡಾಯವಾಗಿ ಪ್ರತಿ ಸರ್ಕಾರಿ ನೌಕರರು ಪೂರ್ಣ ಹೆಸರು, ಹುದ್ದೆ, ಇಲಾಖೆಯ ಬ್ಯಾಡ್ಜ್ಗಳನ್ನು ಮತ್ತು ಸಚಿವಾಲಯಗಳ ಅನುಸಾರ ಏಕರೂಪದ ಬಣ್ಣದ ಸಮವಸ್ತ್ರವನ್ನು ಧರಿಸಿರುತ್ತಾರೆ. ಪ್ರಜೆಗಳು ಆಯಾ ಸರ್ಕಾರಿ ಇಲಾಖೆಗಳ ನೌಕರರನ್ನು ಗುರುತಿಸಲು ಈ ಪ್ರಕ್ರಿಯೆಯು ನೆರವಾಗುತ್ತದೆ.

ಹೌದು ಯಾರು ಏನ್ ಮಾಡ್ತಿದ್ದಾರೆ ಅನ್ನೋದೇ ಗೊತ್ತಾಗ್ದೇ ಇರೋ ಸಮಯದಲ್ಲಿ ಈ ರೀತಿ ಮಾಡುವುದು ತಪ್ಪಾ? ಇದರಿಂದ ಭ್ರಷ್ಟಾಚಾರ ನಿರ್ಮೂಲನೆ ಆಗುತ್ತಾ ಅಂತ ಕೇಳುವ ವಿಚಾರವೇ ಹಾಸ್ಯಾಸ್ಪದ.

ಇನ್ನೂ ಬಯೊಮೀಟ್ರಿಕ್ ಸಿಸ್ಟಮ್ ಆಗಲಿ, ವಿಧಾನ ಸಭೆಯ ಚಟುವಟಿಕೆಗಳನ್ನು ದೊಡ್ಡ ತೆರೆಯ ಮೇಲೆ ತೋರಿಸುವ ವಿಷಯ ಆಗಲಿ, ಟಿ.ವಿ ಯ ನೇರ ಪ್ರಸಾರದಲ್ಲಿ ಸರ್ಕಾರಿ ಅಧಿಕಾರಿಗಳು ಭಾಗವಹಿಸುವ ವಿಷಯ ಆಗಲಿ ಅಥವಾ ಕಾನೂನು ತಿದ್ದು ಪಡಿಯ ವಿಚಾರ ವಾಗಲಿ – ಪ್ರಣಾಳಿಕೆಯಲ್ಲಿ ಹೇಳಿರುವ ಇನ್ನಿತರೆ ಅಂಶಗಳು ಕಷ್ಟ ಅನಿಸಿದರೂ, ಅಸಾಧ್ಯವೇನಲ್ಲ.

Advertisements

ಪ್ರಜಾಕಾರಣದ ಒಂದು ಒಳ್ಳೆಯ ವಿಷಯ ಏನೆಂದರೆ, ಅವರು ಎಲ್ಲಿಯೂ ಯಾವ ಪಕ್ಷದ ಕೆಲಸಗಳನ್ನೂ ಟೀಕಿಸಿಲ್ಲ. ಎಲ್ಲಿಯೂ ವಯಕ್ತಿಕವಾಗಿ ಮಾತಿನ ಧಾಳಿ ಮಾಡಿಲ್ಲ. ಈಗಿರುವ ಸಿಸ್ಟಮ್ ಸರಿ ಇಲ್ಲ ಮತ್ತು ನಾವು ನಮ್ಮ ಕೈಲಾದ ಕೆಲಸವನ್ನು ಮಾಡುತ್ತೇವೆ ಎಂದು ಹೊರಟಿದ್ದಾರೆ. ಉಪೇಂದ್ರ ರವರ ಪಕ್ಷವನ್ನು ಆಮ್ ಆದ್ಮಿ ಪಾರ್ಟಿ ಗೆ ಹೋಲಿಸಿ, ಅವರು ಏನೂ ಮಾಡ್ಲಿಲ್ಲ ಅಂಡ್ ನೀವು ಏನೂ ಮಾಡಲ್ಲ ಅಂತ ನಿರಾಸೆಯ ಮಾತು ಆಡಿದರೆ, ಬದಲಾವಣೆ ಆಗುವುದು ಅಥವಾ ಅದನ್ನು ತರುವುದು ಯಾರು?

ಒಂದು ಪ್ರಯತ್ನವನ್ನು ಮುಕ್ತ ಮನಸ್ಸಿನಿಂದ ಬೆಂಬಲಿಸೋಣ

ಕೂಸು ಹುಟ್ಟೋಕೆ ಮುಂಚೆ ನೇ ಕುಳಾಯಿ ಹೊಲಿಸಿದರಂತೆ ಅನ್ನೋ ಥರ ನಾವೆಲ್ಲಾ ಆಡುವುದು ಬೇಡ. ಈಗ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ, ಮುಂದೆ ಅದು ಸಾಧ್ಯ ಆಗುತ್ತೆ ಅನ್ನೋ ನಂಬಿಕೆ ಇಂದ ನೇ ಮಾಡಿರ್ತಾರೆ. ಉಪೇಂದ್ರ ಅವರೇ ಇದು ಸಿನಿಮಾ ಅಲ್ಲ, ಇದು ಆಗಲ್ಲ, ಅದು ಹೋಗಲ್ಲ ಅನ್ನೋ ನೆಗೆಟಿವ್ ಮಾತುಗಳು ಅಥವಾ ಕಾಮೆಂಟ್ ಗಳು ಮಾಡುವ ಬದಲು, ಹೀಗೆ ಮಾಡಿರೆ ಚೆನ್ನಾಗಿರತ್ತೆ ಅಂತಹ ಸಲಹೆಯ ಮಾತುಗಳನ್ನು ಆಡೋಣ. ಹಾಗೆ ನೋಡಿದರೆ, ಮೋದಿ ಅವರು ಗುಜರಾತ್ ನ ಅಭಿವೃದ್ಧಿಗಾಗಿ ತಂದ ಯೋಜನೆಗಳನ್ನು, ಆಗ ಟೀಕೆ ಮಾಡಿದವರೂ ಇದ್ದಾರೆ. ಆದರೆ ಅವರು ಮಾಡಿ ತೋರಿಸಲಿಲ್ವೇ ? ಉಪೇಂದ್ರ ಅವರು ಹೇಳುವುದು ಈ ಹಿಂದೆ ಯಾವತ್ತೂ ರಾಜ್ಯದಲ್ಲಿ ಆಗಿಲ್ವಲಾ , ಹಾಗಾಗಿ ಅದು ಅಸಾಧ್ಯ ಎನಿಸುತ್ತದೆ ಹೊರತು ಅದೇನು ದೇಶಕ್ಕೆ ಮಾರಕ ಅಂತೂ ಅಲ್ಲ ಸ್ವಾಮಿ.

Modi Fans Baseless Arguments

ಉಪೇಂದ್ರ ಒಬ್ಬ ಸ್ಟಾರ್ ನಟ ಅಂತ ಆಗಲಿ ಅಥವಾ ಬಿಜೆಪಿ ಗೆ ನರೇಂದ್ರ ಮೋದಿ ಅವರ ಬೆಂಬಲ ಇದೆ ಅಂತ ನೇ ಆಗಲಿ, ನೀವು ಪಕ್ಷಪಾತರಾಗಬೇಡಿ. ಅಂಧ ಭಕ್ತರು, ಎಲ್ಲ ಪಕ್ಷಗಳಲ್ಲಿಯೂ ಇದ್ದಾರೆ. ಪೂಜಾರಿ ಹೇಳಿದ್ದು ದೇವರು ಹೇಳಿದ್ದಲ್ಲ ಅನ್ನೋ ಸರಳ ವಿಷಯವನ್ನು ನಾವು ಅರಿತರೆ, ಒಂದೊಳ್ಳೆಯ ಆಯ್ಕೆಯನ್ನು ಮಾಡಬಹುದು.

Powered by : All India Super Star Upendra Fans

Advertisements