ಮಂಗಳೂರು ಎಂಬ ಹೆಸರು ಬರಲು ಕಾರಣ ಒಂದು ಹೆಣ್ಣು ದೇವತೆ. ಆ ದೇವತೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಸ್ಟೋರಿ

ನಮ್ಮ ಜನರು ಪುರಾತನದಿಂದಲೂ ಯಾವುದನ್ನ ನಂಬುತ್ತಾರೋ ಅಥವಾ ಬಿಡುತ್ತಾರೋ ಗೊತ್ತಿಲ್ಲ. ಆದ್ರೆ ದೇವರು ಅಂದ್ರೆ ಮಾತ್ರ ಭಕ್ತಿಯಲ್ಲಿ ಮುಳುಗಿ ಬಿಡುತ್ತಾರೆ. ನಮ್ಮಲ್ಲಿ ದೇವರನ್ನ ವಿವಿಧ ರೀತಿಯಲ್ಲಿ ಕಾಣುತ್ತಾರೆ. ಆದ್ರೆ ದೇವರೊಂದೇ ನಮ ಹಲವು ಅನ್ನೋದನ್ನ ಮರೆತು, ಆ ದೇವರು ಬೇರೆ, ಈ ದೇವರು ಬೇರೆ ಅಂತ ಪೂಜೆ ಮಾಡ್ತಾರೆ. ಆದ್ರೆ ದೇವರು ಇರುವುದು ಒಂದೇ. ಅದಕ್ಕೆ ಹೆಸರನ್ನ ಮಾತ್ರ ಮನುಷ್ಯನಿಟ್ಟಿದ್ದಾನೆ. ಇದರಲ್ಲೂ ನಾವು ಎರಡು ರೀತಿಯಲ್ಲಿ ಮುಖ್ಯವಾಗಿ ನೋಡಬಹುದು. ಒಂದು ಹೆಣ್ಣು ದೇವರು. ಇನ್ನೊಂದು ಗಂಡು ದೇವರು. ನಮ್ಮಲ್ಲಿ ಗಂಡು ದೇವರಿಗಿಂತ, ಹೆಣ್ಣು ದೇವರಿಗೆ ವಿಶೇಷ ಪ್ರಾಮುಖ್ಯತೆ ನೀಡ್ತಾರೆ. ಅದೇನೋ ಗೊತ್ತಿಲ್ಲ. ಹೆಣ್ಣು ದೇವರಿಗಿರುವ ಶಕ್ತಿ ಅಪಾರ. ಹಾಗಾಗಿ ಹೆಣ್ಣು ದೇವರನ್ನ ಹೆಚ್ಚಾಗಿ ನಂಬುತ್ತೇವೆ ಅನ್ನೋದು ಪುರಾಣಗಲ್ಲಿಯೂ ಉಲ್ಲೇಖವಾಗಿದೆ.

ಇದೇ ರೀತಿ ಒಂದು ದೇವಿ ಹೆಸರಿಂದ, ಒಂದು ಊರಿಗೆ ಹೆಸರಾಗಿದೆ. ಈಗ ಆ ಊರು ಕರ್ನಾಟಕದ ಮನೆ ಮಾತಾಗಿರುವ ಊರಾಗಿದೆ. ಹಾಗಾದ್ರೆ ಈ ದೇವಿ ಶಕ್ತಿ ಏನು? ಯಾವ ಕಾರಣಕ್ಕೆ ಈ ದೇವಿ ಹೆಸರನ್ನ ಈ ಊರಿಗೆ ಇಟ್ಟರು ಅಂತ ತಿಳಿಸ್ತೀವಿ ಮುಂದೆ ನೀವೇ ಓದಿ

Advertisements

ಮಂಗಳಾದೇವಿ

ಮಂಗಳಾದೇವಿ ದೇವಸ್ಥಾನ, ಮಂಗಳೂರಿನ ಬೋಳಾರಿನಲ್ಲಿ ನೆಲೆಸಿದ್ದು ಬೆಂಗಳೂರಿನ ಮಧ್ಯ ಪ್ರದೇಶದಿಂದ ಸುಮಾರು ಮೂರೂ ಕಿ ಮೀ ದೂರದಲ್ಲಿದೆ. ಈ ದೇವಾಲಯವು ಹಲವು ಬಂದರುಗಳಿಂದ ಸುತ್ತುವರಿಯಲ್ಪಟ್ಟಿದೆ. ಮಂಗಳೂರಿನ ಹೆಸರಿನ ಹಿಂದೆ ಈ ದೇವಾಲಯಕ್ಕೆ ಸಂಬಂಧಿಸಿದ ಹೆಸರಿದೆ. ಅಂದರೆ ಮಂಗಳೂರು ಮಂಗಳ ನಗರವಾಗಿದೆ ಎಂಬ ಅರ್ಥ ಇದೆ. ಈ ಊರಿನಲ್ಲಿ ಇದೇ ಮುಖ್ಯವಾದ ದೇವರಾಗಿದೆ. ಹಾಗಾಗಿ ಈ ದೇವರು ಆಗಿನ ಕಾಲದಲ್ಲಿ ಇಲ್ಲಿ ನೆಲೆಸಿದ್ದರಿಂದ, ಈ ಊರಿಗೆ ಮಂಗಳೂರು ಎಂದು ಹೆಸರಿಡಲಾಯಿತು.

ಇತಿಹಾಸ

ಈ ದೇವಾಲಯಕ್ಕೆ ಒಂದು ದೊಡ್ಡ ಇತಿಹಾಸವಿದೆ. ಈ ದೇವಾಲಯ ಒಂಬತ್ತನೇ ಶತಮಾನದ ಕುಂದವರ್ಮನ ಕಾಲದಲ್ಲಿ ಮೊದಲಿಗೆ ಪ್ರತಿಷ್ಠಾಪನೆಗೊಂಡಿತು. ಆ ಕಾಲದಲ್ಲಿ ಕುಂದವರ್ಮ ರಾಜ ಬಹಳ ಪ್ರಸಿದ್ದಿ ಪಡೆದಿದ್ದನು. ಇವನು ಅಹೇಪ ವಂಶದ ರಾಜನಾಗಿದ್ದನು. ಆ ಸಮಯದಲ್ಲಿ ನೇಪಾಳದಿಂದ ನಾಥಪಂಥದ ಸನ್ಯಾಸಿಗಳಾದ ಮಚ್ಚೇಂದ್ರನಾಥ ಹಾಗು ಗೋರಾಕ್ಷನಾಥರು ನೇತ್ರಾವತಿ ನದಿಯನ್ನು ದಾಟಿ ಕುಂದವರ್ಮನ ರಾಜ್ಯಕ್ಕೆ ಬಂದರು. ಈ ಜಾಗ ಕ್ರಮೇಣ ಗೋರಖಂಡಿ ಎಂದು ಹೆಸರುವಾಸಿಯಾಯಿತು. ನೇತ್ರಾವತಿ ನದಿಯ ತಪ್ಪಲಿನ ಒಂದು ಪ್ರದೇಶವನ್ನು ಆಯ್ಕೆಮಾಡಿ ಅಲ್ಲಿ ಅವರ ಆಶ್ರಮವನ್ನು ಸ್ಥಾಪಿಸಿದರು. ಇದೆಲ್ಲದಕ್ಕೂ ಈ ಕುಂದವರ್ಮ ಅವರಿಗೆ ಬೆಂಬಲವಾಗಿ ನಿಂತಿದ್ದನು, ಆಗ ಅವನ ಸತ್ಕಾರಕ್ಕೆ ಮೆಚ್ಚಿದ ಸನ್ಯಾಸಿಗಳು ಕಾಲಿ ಪ್ರದೇಶವನ್ನ ನೀಡುತ್ತಾರೆ. ಆಗ ಅದರ ಇತಿಹಾಸವನ್ನ ಕುಂದವರ್ಮ ತಿಳಿದುಕೊಳ್ಳುತ್ತಾನೆ. ಆಗ ಇದು ಮಂಗಳಾದೇವಿಗೆ ಸೇರಿದ ಸ್ಥಳ. ಹಾಗಾಗಿ ಈ ಊರಿಗೆ ಆ ದೇವರ ಹೆಸರನ್ನೇ ಇಡಬೇಕು ಅಂತ ಮಂಗಳೂರು ಎಂದು ಹೆಸರಿಟ್ಟನು.

ನಂಬಿಕೆ

ಇಲ್ಲಿನ ಜನರಿಗೆ ಮಂಗಳಾದೇವಿ ಬಗ್ಗೆ ಅಪಾರ ನಂಬಿಕೆ. ಯಾಕಂದ್ರೆ ನಮ್ಮನ್ನ ಕಾಪಾಡುತ್ತಿರೋದೇ ಈ ದೇವಿ ಅಂತ ಆಗಿನಿಂದಲೂ ಈ ದೇವಿಗೆ ಪೂಜೆ, ಪುನಸ್ಕಾರ ಮಾಡುತ್ತಲೇ ಇದ್ದಾರೆ. ಅದರಂತೆ ಈ ದೇವಿ ಇಲ್ಲಿನ ಜನರನ್ನ ರಕ್ಷಿಸುತ್ತಿದ್ದಾಳೆ. ಮೀನುಗಾರರಂತೂ ಈ ದೇವರನ್ನೇ ತಮ್ಮ ಸರ್ವಸ್ವ ಎಂದುಕೊಂಡಿದ್ದಾರೆ. ಯಾಕಂದ್ರೆ, ಈ ದೇವಾಲಯ ಹಲವು ಬಂದರುಗಳಿಂದ ಕೂಡಿದೆ. ಜೊತೆಗೆ ನಮಗೆ ಇದು ಒಂದು ರೀತಿಯಲ್ಲಿ ಸಮುದ್ರ ದೇವತೆ ಎಂದು ಅಲ್ಲಿನ ಮೀನುಗಾರರು ನಂಬಿದ್ದಾರೆ.

Advertisements

ಮಹಿಮೆ

ಈ ದೇವರು ಇಲ್ಲಿ ನೆಲೆಸಿದ ದಿನದಿಂದಲೂ ಕುಂದವರ್ಮ ಪ್ರತಿದಿನ ದಿನ ಪೂಜೆ ಮಾಡುತ್ತ ತನ್ನ ಜೀವನ ಕೆಳೆಯುತ್ತಾನೆ. ಯಾಕಂದ್ರೆ ಈ ದೇವಿ ಅಪಾರ ಶಕ್ತಿ ಹೊಂದಿದೆ. ಹಾಗಾಗಿ ಇಲ್ಲಿಗೆ ಬರುವ ಭಕ್ತರನ್ನ ತಾಯಿ ಎಂದಿಗೂ ಬರೀಗೈಲಿ ಕಳಿಸಿಲ್ಲ. ಈ ಜಾಗಕ್ಕೆ ಮದುವೆಯಾಗದಿರುವ ಹೆಣ್ಣು ಮಕ್ಕಳನ್ನ ಕರೆದುಕೊಂಡು ಬಂದು, ದೇವಿ ದರ್ಶನ ಮಾಡಿದರೆ ಅವರಿಗೆ ಕಂಕಣ ಭಾಗ್ಯ ಕೂಡಿಬರುತ್ತೆ. ಹೌದು. ಸುಹಾಸಿನಿಯರು ತಮ್ಮ ವಿವಾಹಾಪೇಕ್ಷೆಯನ್ನು ತಾಯಿಗೆ ಸ್ವಯಂವರ ವ್ರತದ ಮೂಲಕ ಹೇಳಿಕೊಂಡರೆ ಆ ತಾಯಿ ಒಳ್ಳೆಯ ಗಂಡನನ್ನ ಕರುಣಿಸುತ್ತಾಳೆ. ಈ ದೇವಾಲಯಕ್ಕೂ ಕದ್ರಿ ದೇವಾಲಯಕ್ಕೂ ಸಂಭಂದವಿದೆ ಎಂದು ಎಲ್ಲರೂ ನಂಬಿದ್ದಾರೆ. ಹಾಗಾಗಿ ಈಗಲೂ ಕೂಡ ಕದ್ರಿ ದೇವಸ್ಥಾನದ ಜೋಗಿ ಪಂಥದವರು ಅಲ್ಲಿನ ಉತ್ಸವ ಪ್ರಾರಂಭಿಸುವ ಮುನ್ನ ಮಂಗಳಾದೇವಿ ಬಳಿ ಬಂದು ದೇವಿಗೆ ಹೂವು ಹಾಗೂ ರೇಷ್ಮೆ ವಸ್ತ್ರವನ್ನ ಕೊಡುತ್ತಾರೆ.

ಉತ್ಸವಗಳು

ಮಂಗಳಾದೇವಿ ದೇವಸ್ಥಾನದಲ್ಲಿ ವರ್ಷಕ್ಕೆ ಎರಡು ಪ್ರಮುಖ ಉತ್ಸವವು ಜರಗುತ್ತದೆ. ಆಶ್ವಿಜಮಾಸದಲ್ಲಿ ನವರಾತ್ರಿಯ ವೈಭವವಾದರೆ ಮಾರ್ಚ್ ಸಮಯದಲ್ಲಿ ವಾರ್ಷಿಕ ಜಾತ್ರಾಮಹೋತ್ಸವವು ನಡೆಯುತ್ತದೆ. ಒಂಬತ್ತು ದಿನಗಳಲ್ಲೂ ನವವಿಧಗಳಲ್ಲಿ ದೇವಿಯನ್ನು ಅಲಂಕರಿಸುತ್ತಾರೆ. ಮೊದಲನೆಯ ದಿನ ಶೈಲಪುತ್ರಿಯಾಗಿ,ಎರಡನೆಯ ದಿನ ಬ್ರಹ್ಮಚಾರಿಣಿ, ಮೂರನೆಯ ದಿನ ಚಂದ್ರಘಂಟಿ, ನಾಲ್ಕನೆಯ ದಿನ ಕೋಶ್ಮಾಂಡಿ, ಐದನೆಯ ದಿನ ಸ್ಕಂದ ಮಾತಾ, ಆರನೆಯ ದಿನ ಕಾತ್ಯಾಯಿನಿ, ಏಳನೇ ದಿನದಂದು ಚಂಡಿಕೆಯಾಗಿ, ಎಂಟನೇ ದಿನದಂದು ಮಹಾಸರಸ್ವತಿಯಾಗಿ ಪೂಜಿಸಲ್ಪಡುತ್ತಾಳೆ. ಮಹಾನವಮಿಯಂದು ವಾಗ್ದೇವಿಯಾಗಿ ಪೂಜಿಸಲ್ಪಡುತ್ತಾಳೆ. ಅಂದು ಆಯುಧ ಪೂಜೆಯನ್ನು ಮಾಡಲಾಗುತ್ತದೆ. ದೇವೀ ಹಾಗೂ ರಾಕ್ಷಸರ ಮಧ್ಯೆ ಯುದ್ಧ ನಡೆದು, ದೇವೀ ಜಯಿಸಿದ ಸಂಕೇತವಾಗಿ ಈ ಪೂಜೆಯನ್ನು ನಡೆಸಲಾಗುತ್ತದೆ. ದೇವಿಯ ಎಲ್ಲಾ ಶಸ್ತ್ರಾಸ್ತ್ರಗಳನ್ನು ಅಂದು ಪೂಜಿಸಲಾಗುತ್ತದೆ. ಚಂಡಿಕಾಯಾಗವೂ ನಡೆಯುತ್ತದೆ. ಹತ್ತನೆಯ ದಿನದಂದು ಮಹಾರಥೋತ್ಸವ ನಡೆಯುತ್ತದೆ ಹಾಗು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಒಟ್ಟಿನಲ್ಲಿ ಸನ್ಯಾಸಿಗಳು ಕುಂದವರ್ಮನ ಸಾಮ್ರಾಜ್ಯಕ್ಕೆ ಬಂದಾಗ, ಅವನ ಅತಿಥಿ ಸತ್ಕಾರಕ್ಕೆ ಮನ ಮೆಚ್ಚಿ ಕಾಲಿ ಪ್ರದೇಶವನ್ನ ಉಡುಗೊರೆಯಾಗಿ ನೀಡುತ್ತಾರೆ. ಆದರೆ ಆ ಕಾಲಿ ಪ್ರದೇಶದಲ್ಲಿ ಮಂಗಳಾದೇವಿಯ ಬಗ್ಗೆ ಒಂದು ಇತಿಹಾಸವಿರುತ್ತೆ. ದೇವಿ ರಾಕ್ಷಸರನ್ನ ಕೊಂದು ಅಲ್ಲಿ ನೆಲೆ ನಿಂತಿರುತ್ತಾಳೆ. ಹಾಗಾಗಿ ಈ ಕಾಲಿ ಜಾಗಕ್ಕೆ ಮಂಗಳೂರು ಅನ್ನೋ ಹೆಸರು ಬರುತ್ತೆ. ಈಗ ಮಂಗಳಾದೇವಿ ಕೃಪೆಯಿಂದ ಮಂಗಳೂರಿನ ಜನ ಜೀವನ ನಡೆಸುತ್ತಿದ್ದಾರೆ. ಇದು ಈ ದೇವಿಯ ಮಹಿಮೆಯಾಗಿದೆ.

Advertisements