ಯಶ್-ದರ್ಶನ ಬೆಂಬಲ ಸುಮಲತಾ ಅವರಿಗೆ. ಮಂಡ್ಯ ಚುನಾವಣೆ ಬಗ್ಗೆ ಈವರೆಗೂ ನಡೆದ ಎಲ್ಲ ವಿಷಯಗಳ ಕಂಪ್ಲೀಟ್ ಅಪ್ಡೇಟ್ ಇಲ್ಲಿದೆ.

0
3129
sumalatha mandya elections

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷ, ಪಕ್ಷಗಳ ನಡುವೆ ಜಿದ್ದಾಜಿದ್ದಿ ಪೈಪೋಟಿ ಏರ್ಪಟ್ಟಿದೆ. ನಾ ಮುಂದು, ತಾ ಮುಂದು ಅಂತ ಒಬ್ಬರ ವಿರುದ್ಧ, ಇನ್ನೊಬ್ಬರು ಕಣಕ್ಕಿಳಿದ್ದಿದ್ದಾರೆ. ಕೆಲವು ಅಭ್ಯರ್ಥಿಗಳಿಗೆ ಸಿನಿಮಾ ರಂಗದ ಸಪೋರ್ಟ್ ಇದ್ದರೇ, ಇನ್ನು ಕೆಲವರಿಗೆ ಸರ್ಕಾರದ ಸಪೋರ್ಟ್ ಇದೆ. ಆದ್ರೆ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಅಬ್ಬರ ಬೇರೆ ಕೆಡೆ ಹೇಗೆ ನಡೆಯುತ್ತಿದೆಯೋ ಗೊತ್ತಿಲ್ಲ. ಆದ್ರೆ ಮಂಡ್ಯದಲ್ಲಿ ಮಾತ್ರ ಚುನಾವಣೆ ಕಾವು ವಿಪರೀತವಾಗಿದೆ.

ಹೌದು. ಮಂಡ್ಯದಲ್ಲಿ ಚುನಾವಣೆ ಅಬ್ಬರ ಹೆಚ್ಚಾಗಿದೆ. ಒಂದು ಕಡೆ ಸುಮಲತಾ ಅವರ ಪ್ರಚಾರ ನಡೀತಿದ್ರೆ, ಇನ್ನೊಂದು ಕಡೆ ನಿಖಿಲ್ ಅವರ ಪ್ರಚಾರ ನಡೀತಿದೆ. ಪ್ರಚಾರದ ಅಬ್ಬರ ನಡಿತಿರೊದ್ರಿಂದ ಸುಮಲತಾ ಅವರು ಆಗಾಗ ಒಂದು ಮಾತು ಹೇಳ್ತಿದ್ರು. ನನಗಿರುವ ಬೆಂಬಲದಿಂದ ನಾನು ಗೆಲ್ಲುತ್ತೇನೆ ಅನ್ನೋ ನಂಬಿಕೆ ನನಗಿದೆ ಅಂತ. ಆದ್ರೆ ಈಗ ಅದಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.

ಸುಮಲತಾ ಬೆಂಬಲಕ್ಕೆ ನಿಂತಿರುವ ದರ್ಶನ್

ಹೌದು. ದರ್ಶನ್ ಅವರನ್ನ ಸುಮಲತಾ ಅವರ ದೊಡ್ಡ ಮಗ ಅಂತ ಎಲ್ಲರೂ ಅಂತಾರೆ. ಹಾಗಾಗಿ ಸುಮಲತಾ ಅವರು ನಾನು ಚುನಾವಣೆಗೆ ನಿಲ್ಲುತ್ತೇನೆ ಅಂತ ಹೇಳಿದ ದಿನದಿಂದಲೂ ದರ್ಶನ್, ಸುಮಲತಾ ಬೆನ್ನಿಂದೆ ನಿಂತು ಕೆಲಸ ಮಾಡುತ್ತಿದ್ದಾರೆ. ಯಾವುದೇ ಪ್ರಚಾರ ಆಗಲಿ, ಕಾರ್ಯಕ್ರಮಕ್ಕಾಗಲಿ ದರ್ಶನ್ ಸುಮಲತಾ ಅವರ ಜೊತೆಯಾಗಿ ನಿಂತು ಓಡಾಡುತ್ತಿದ್ದಾರೆ. ಸುಮಲತಾ ಅವರು ಸಹ, ನನಗೆ ನನ್ನ ಮಗನ ಮೇಲೆ ನಂಬಿಕೆ ಇದೆ. ನನ್ನ ಮಗ ಯಾವಾಗಲು ನನ್ನ ಜೊತೆಯಲ್ಲಿ ಇರುತ್ತಾನೆ ಅಂತ ಹೇಳ್ತಿದ್ರು. ಅದರಂತೆ ಈಗಲೂ ದರ್ಶನ್, ಸುಮಲತಾ ಅವರ ಪ್ರಚಾರದ ವಿಚಾರದಲ್ಲಿ ಬ್ಯುಸಿಯಾಗಿದ್ದಾರೆ.

ನಾನು ಪ್ರಚಾರಕ್ಕೆ ಬರುತ್ತೇನೆ ಎಂದ ಯಶ್

ಸುಮಲತಾ ಅವರು ಚುನಾವಣೆಗೆ ನಿಲ್ಲುತ್ತಿದ್ದಾರೆ ಅನ್ನೋ ಮಾತು ಕೇಳಿಬಂದಾಗಲೇ, ಎಲ್ಲರೂ ಯಶ್ ಹಾಗೂ ದರ್ಶನ್ ಅವರ ಹಿಂದೆ ಇರುತ್ತಾರೆ ಅಂತ ಮಾತಾಡ್ತಿದ್ರು. ಆದ್ರೆ ಯಶ್ ಒಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ರು. ನಾನು ಸುಮಲತಾ ಅವರ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲ ಅಂತ. ಆದ್ರೆ ಈಗ ನಿನ್ನೆ ನಡೆದಂತ ಪತ್ರಿಕಾಗೋಷ್ಠಿಯಲ್ಲಿ ಯಶ್ ಎಲ್ಲರ ಮುಂದೆ ತಮ್ಮ ಅನಿಸಿಕೆಯನ್ನ ವ್ಯಕ್ತಪಡಿಸಿದ್ದಾರೆ. ನಾನು ಸುಮಲತಾ ಅವರಿಗೆ ಬೆಂಬಲವಾಗಿ ನಿಂತು, ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಅಂತ. ಈ ಮಾತಿಂದ ಸುಮಲತಾ ಅವರಿಗೆ ಬಹಳಷ್ಟು ಸಂತೋಷವಾಗಿದೆ. ಅಲ್ಲೇ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಸುಮಲತಾ, ಯಶ್ ಹಾಗೂ ದರ್ಶನ್ ನನ್ನ ಮನೆ ಮಕ್ಕಳು. ಅವರಿಬ್ಬರ ಸಹಾಯ ನನಗೆ ದೊರಕಿರುವುದು ನನಗೆ ತುಂಬ ಸಂತೋಷವಾಗಿದೆ ಎಂದು ತಿಳಿಸಿದರು.

ಒಬ್ಬರಿಗೊಬ್ಬರು ಕೈ ಹಿಡಿದು ನಡೆದ ರಾಕಿಂಗ್ ಸ್ಟಾರ್ ಹಾಗೂ ಚಾಲೆಂಜಿಂಗ್ ಸ್ಟಾರ್

ಸ್ಯಾಂಡಲ್ ವುಡ್ ನಲ್ಲಿ ಇವರಿಬ್ಬರಿಗೂ ಅವರದ್ದೇ ಆದ ಫ್ಯಾನ್ಸ್ ಬೇಸ್ ಇದೆ. ಒಂದೇ ಚಲಚಿತ್ರ ಮಂಡಳಿಯವರಾದ್ರು, ಒಂದು ದಿನವೂ ಇವರು ಮಾತಾಡಿರಲಿಲ್ಲ. ಆದ್ರೆ ಈ ಚುನಾವಣೆ ಅವರನ್ನ ಒಂದು ಮಾಡಿದೆ. ಹೌದು ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ದರ್ಶನ್ ಹಾಗೂ ಯಶ್ ಇಬ್ಬರು ಇದ್ದರು. ಅಂತ ಸಮಯದಲ್ಲಿ ಇಬ್ಬರು ಸುಮಲತಾ ಪರವಾಗಿ ನಿಲ್ಲೋದ್ರಿಂದ, ಮೊದಲು ನಾವು ಚೆನ್ನಾಗಿರಬೇಕು ಅಂತ ಒಬ್ಬರಿಗೊಬ್ಬರು ಮಾತನಾಡಿದ್ದಾರೆ.

ಇಡೀ ಸಿನಿಮಾ ರಂಗವೇ ನಿಂತಿದೆ ಸುಮಲತಾ ಬೆನ್ನಿಂದೆ

ಹೌದು. ಮಂಡ್ಯದಲ್ಲಿ ಈಗ ಕಣಕ್ಕಿಳಿದಿರುವ ಪ್ರತಿಭೆಗಳಿಬ್ಬರು ಸಾಮಾನ್ಯದವರಲ್ಲ. ಒಬ್ಬರಿಗೆ ಸಿನಿಮಾ ರಂಗದ ಕಡೆಯಿಂದ ಬೆಂಬಲ ಸಿಕ್ಕರೆ, ಇನ್ನೊಬ್ಬರಿಗೆ ಸಿನಿಮಾ ಹಾಗೂ ಸರ್ಕಾರ ಎರಡು ಕಡೆಯಿಂದಲೂ ಬೆಂಬಲ ಸಿಗುತ್ತಿದೆ. ಹೌದು. ಸುಮಲತಾ ಅವರಿಗೆ ದರ್ಶನ್, ಯಶ್, ಸುದೀಪ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಈ ರೀತಿ ದೊಡ್ಡ ದೊಡ್ಡ ಸಿನಿಮಾ ರಂಗದವರ ಬೆಂಬಲ ಸಿಗುತ್ತಿದೆ. ಇತ್ತ ಕುಮಾರಸ್ವಾಮಿ ಅವರು ಕೂಡ ಸಿನಿಮಾ ರಂಗದಲ್ಲಿ ಹೆಸರು ಮಾಡಿರುವವರು. ಹಾಗಾಗಿ ಇವರಿಗೂ ಸಹ ಕೆಲವು ನಾಯಕ, ನಾಯಕಿಯರು ಬೆಂಬಲವಾಗಿ ನಿಲ್ಲುವ ಸೂಚನೆ ಇದೆ ಎಂದು ತಿಳಿದು ಬಂದಿದೆ. ಜೊತೆಗೆ ಈಗ ಸರ್ಕಾರ ಕುಮಾರಸ್ವಾಮಿ ಅವರದ್ದೇ ಇರೋದ್ರಿಂದ ಹಲವು ರಾಜಕೀಯ ನಾಯಕರುಗಳ ಬೆಂಬಲ ಇವರಿಗಿದೆ. ಹಾಗಾಗಿ ಮಂಡ್ಯದಲ್ಲಿ ಪ್ರತಿದಿನ ನಡೆಯುತ್ತಿರೋ ಪ್ರಚಾರದಲ್ಲಿ ಸುಮಲತಾ ಅವರ ಹಿಂದೆ ಸಿನಿಮಾ ರಂಗ ಇದ್ರೆ, ನಿಖಿಲ್ ಅವರ ಹಿಂದೆ ರಾಜಕೀಯ ನಾಯಕರುಗಳೇ ಇದ್ದಾರೆ.

ಸುಮಲತಾ ಅವರಿ ಸಿಗಲಿದೆಯೇ ಬಿಜೆಪಿ ಆಹ್ವಾನ?

ಲೋಕಸಭಾ ಚುನಾವಣೆ ಬರೋ ಸಮಯದಲ್ಲಿ ಸುಮಲತಾ ಅವರು ನಾನು ಮಂಡ್ಯದಿಂದ ಸ್ಪರ್ಧಿಸುತ್ತೇನೆ ಅಂತ ತಿಳಿಸಿದ್ರು. ಆದ್ರೆ ಯಾವ ಪಕ್ಷದಿಂದ ನಿಲ್ಲುತೇನೆ ಅನ್ನೋದನ್ನ ಬಹಿರಂಗ ಪಡಿಸಿರಲಿಲ್ಲ. ಆದ್ರೆ ಇವರಿಗೆ ಕಾಂಗ್ರೆಸ್ ನಿಂದ ಚುನಾವಣೆಗೆ ನಿಲ್ಲುವ ಕೊಂಚ ಆಸೆಯಿತ್ತು. ಆದ್ರೆ ಕಾಂಗ್ರೆಸ್ ಕಡೆಯಿಂದ ಯಾವುದೇ ಅಭಿಪ್ರಾಯ ಹೊರಬರಲಿಲ್ಲ. ಹಾಗಾಗಿ ಇವರು ನಾನು ಪಕ್ಷೇತರವಾಗಿ ನಿಲ್ಲುತ್ತೇನೆ ಎಂದು ಮಂಡ್ಯದಲ್ಲಿ ಈಗ ಚುನಾವಣೆಗೆ ನಿಂತಿದ್ದಾರೆ. ಆದ್ರೆ ಸುಮಲತಾ ಅವರಿಗೆ ಇರುವ ಬೆಂಬಲ, ಇನ್ನೂ ಅವರ ಸ್ಪಿರಿಟ್ ನೋಡಿ ಬಿಜೆಪಿಗೆ ಅವರನ್ನ ಕರೆಸಿಕೊಳ್ಳಬಹುದಾ ಎನ್ನುವ ಮಾತುಕತೆ ನಡೆಯುತ್ತಿದೆ. ಇದರ ವಿಚಾರವಾಗಿ ಯಡಿಯೂರಪ್ಪ ಅವರು ಸಹ ತಮ್ಮ ಕಾರ್ಯಕರ್ತರೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಸುದ್ದಿ ಘೋಷ್ಠಿಯಲ್ಲಿ ಹೇಳಿರುವ ಹಾಗೆ, ಸುಮಲತಾ ಅವರು ಇಂಡಿಪೆಂಡೆಂಟ್ ಆಗಿ ನಿಲ್ಲುವುದು ಈಗ ಖಚಿತವಾಗಿದೆ.

ಸದ್ಯಕ್ಕಂತೂ ಲೋಕಸಭಾ ಚುನಾವಣೆ ಕಾವು ಊರಿಂದ, ಊರಿಗೆ ವಿಭಿನ್ನವಾಗಿ ಹಬ್ಬಿದೆ. ಆದರೆ ಮಂಡ್ಯದಲ್ಲಿ ನಡೆಯುತ್ತಿರುವಂತ ಪ್ರಚಾರವನ್ನ ನಾವು ಬೇರೆಲ್ಲೂ ನೋಡೋಕೆ ಆಗಲ್ಲ. ರಾಜಕೀಯ ಅನ್ನೋದು ಈ ಎರಡು ಅಭ್ಯರ್ಥಿಗಳಿಗೇನೂ ಹೊಸದಲ್ಲ. ಸುಮಲತಾ ಅವರಿಗೆ ತಮ್ಮ ಪತಿಯಿಂದ ರಾಜಕೀಯದ ಬಗ್ಗೆ ತಿಳಿದಿದ್ದರೆ, ಇನ್ನೂ ನಿಖಿಲ್ ಅವರಿಗಂತೂ, ತಮ್ಮ ರಕ್ತದಿಂದಲೇ ರಾಜಕೀಯ ಅನ್ನೋದು ಬಂದಿದೆ. ಆದ್ರೆ ಮಂಡ್ಯ ಜನ ಅಂಬರೀಷ್ ಮೇಲಿಟ್ಟಿರೋ ಗೌರವದಿಂದ ಸುಮಲತಾ ಪರ ನಿಂತು ಅವರನ್ನ ಗೆಲ್ಲಿಸುತ್ತಾರ ಅಥವಾ ಸರ್ಕಾರವನ್ನೇ ತಮ್ಮ ಕೈಯಲ್ಲಿ ಇಟ್ಟುಕೊಂಡಿರೋ ಕುಮಾರಸ್ವಾಮಿ ಅವರ ಮಗ ನಿಖಿಲ್ ಅವರನ್ನ ಗೆಲ್ಲಿಸುತ್ತಾರ ಅಂತ ಕಾದು ನೋಡಬೇಕಾಗಿದೆ.

Comments

comments

LEAVE A REPLY

Please enter your comment!
Please enter your name here