ರಾಜಕೀಯದಲ್ಲಿ ಅಭ್ಯರ್ಥಿ ಹಾಗೂ ಅಭ್ಯರ್ಥಿಯ ನಿಲುವು ಮುಖ್ಯವಾಗಿರಬೇಕು. ಸುಮ್ನೆ ರಾಜಕೀಯ ಮಾಡಿ ಅದರಿಂದ ಬರುವ ಹಣವನ್ನು ತಮ್ಮ ಹೊಟ್ಟೆ ತುಂಬಿಸಿಕೊಳ್ಳಬಾರದು. ಈಗಿನ ರಾಜಕೀಯ ನೋಡಿ ಜನರು ಬೇಸತ್ತು ಹೋಗಿದ್ದಾರೆ. ಒಂದು ಪಕ್ಷ ಇನ್ನೊಂದು ಪಕ್ಷಕ್ಕೆ ಬೈಯುವುದು ಇದರ ಪ್ರತಿಕಾರವಾಗಿ ವಿರೋಧ ಪಕ್ಷ ಬೈಗುಳದ ಮೂಲಕ ಪ್ರತ್ಯುತ್ತರ ನೀಡುವುದು ಇದನ್ನೇ ನೋಡಿ ನೋಡಿ ಜನರು ಕಂಗೆಟ್ಟು ಕುಳಿತುಕೊಂಡಿದ್ದಾರೆ ಸ್ವಲ್ಪ ಪ್ರಮಾಣದಲ್ಲಿ ಜನ ನಾಯಕರು ಕೆಲಸ ಮಾಡಿದ್ದಾರೆ, ಪಕ್ಷಗಳನ್ನು ನಿಂದಿಸುವುದು ಬಿಟ್ಟು ಸ್ವಲ್ಪ ಅಧಿಕವಾಗಿ ಜನರ ಆಸರೆಗೆ ನಾಯಕರು ನೆರವಾಗಬೇಕು. ಈಗ ಮಂಡ್ಯದಲ್ಲಿ ರಾಜಕೀಯದ ಕಾಳಗ ಶುರುವಾಗಿದ್ದು, ಯಾರಿಗೆ ಜಯ ಸಿಗುವುದು ಎನ್ನುವುದೇ ಅಚ್ಚರಿಯ ಸಂಗತಿ ಆಗಿದೆ.
ಮಂಡ್ಯದಲ್ಲಿ ರಾಜಕೀಯ ಕಾಳಗ
ರಾಜಕೀಯದ ಬಿಸಿ ಮಂಡ್ಯ ಜಿಲ್ಲೆ ಹಾಗೂ ಕರ್ನಾಟಕದ ಜನತೆಗೆ ಈಗ ತಟ್ಟಿದೆ, ಹೌದೂ ಒಂದು ಕಡೆ ರೆಬೆಲ್ ಸ್ಟಾರ್ ಅಂಬರೀಷ್ ಪತ್ನಿ ಸುಮಲತಾ ಚುನಾವಣೆಗೆ ಅಭ್ಯರ್ಥಿಯ ಸ್ಥಾನದಲ್ಲಿ ಮಂಡ್ಯದಲ್ಲಿ ಭಾಗವಹಿಸಿದರೆ, ಇನ್ನೊಂದು ಕಡೆ ಮುಖ್ಯಮಂತ್ರಿಯ ಮಗ ನಿಖಿಲ್ ಕುಮಾರ್ ಸ್ವಾಮಿ ಕೂಡ ಅದೇ ಜಾಗಕ್ಕೆ ಸುಮಲತಾ ಅವರಿಗೆ ಪೈಪೋಟಿ ನೀಡಲಿದ್ದಾರೆ. ನಾನು ವಯಸ್ಸಿನಲ್ಲಿ ಚಿಕ್ಕವನಾಗಿದ್ದರು ಜನರ ಸೇವೆಯೇ ಜನಾರ್ಧನ ಸೇವೆ ಎಂದು ಭಾವಿಸಿದ್ದೇನೆ, ರಾಜಕೀಯದಲ್ಲಿ ನನಗೆ ಅನುಭವ ಸ್ವಲ್ಪ ಕಮ್ಮಿ , ಮಂಡ್ಯದ ಜೆಡಿಯಸ್ ಶಾಸಕರ ಸಭೆಯಲ್ಲಿ ಶಾಸಕರು ನನ್ನನ್ನು ಕ್ಯಾಂಡಿಡೆಟ್ ಆಗಿ ಆಯ್ಕೆ ಮಾಡಿದ್ದಾರೆ, ಕೇವಲ ದುಡ್ಡು ಮಾಡಬೇಕಂತ ನಾನು ರಾಜಕೀಯಕ್ಕೆ ಪ್ರವೇಶಿಸುತ್ತಿಲ್ಲ, ನಮ್ಮ ತಂದೆ ಕೂಡ ಯಾವುದೇ ದುರುದ್ದೇಶ ಇಟ್ಟುಕೊಂಡು ನನ್ನನ್ನು ರಾಜಕೀಯಕ್ಕೆ ನುಗ್ಗಿಸುತ್ತಿಲ್ಲ ಎಂದು ಹೇಳಿದ್ದಾರೆ.
ನಾನು ಸ್ಪರ್ದಿಸುವುದಾದರೆ ಅದೂ ಮಂಡ್ಯದಿಂದ ಮಾತ್ರ ಎಂದು ಸುಮಲತಾ ಅವರು ಘೋಷಿಸಿದ್ದಾರೆ
ಅಭಿಮಾನಿಗಳ ಒತ್ತಾಯದಿಂದ ನಾನು ಮಂಡ್ಯದಲ್ಲಿ ಲೋಕಸಭಾ ಎಲೆಕ್ಷನ್ ಅಲ್ಲಿ ಸ್ಪರ್ದಿಸುವುದು ಖಚಿತ ಅಂತಾ ಸುಮಲತಾ ಅವರು ಹೇಳಿದ್ದಾರೆ. ಅಂಬರೀಷ್ ಅವರ ಸ್ಥಾನವನ್ನು ನಿಮ್ಮನ್ನು ಬಿಟ್ಟು ಬೇರೆ ಅವರು ತುಂಬಲಿಕ್ಕೆ ಸಾಧ್ಯವಿಲ್ಲ ಅಂತಾ ಈ ಕಡೆ ಅಂಬರೀಷ್ ಅವರ ಅಭಿಮಾನಿಗಳು ತಮ್ಮ ಅಭಿಮಾನವನ್ನ ವ್ಯಕ್ತ ಪಡಿಸಿದ್ದಾರೆ. ಆದರೆ ಯಾವ ಪಕ್ಷಕ್ಕೆ ನೀವು ನಿಲ್ಲುತ್ತಿದ್ದೀರಾ ಎಂದು ಕೇಳಿದಾಗ ಅಂಬರೀಷ್ ಅವರು ಕಾಂಗ್ರೆಸ್ ಪಕ್ಷಕ್ಕೆ ಕಾರ್ಯ ಸಲ್ಲಿಸಿರುವುದರಿಂದ ನಾನು ಕಾಂಗ್ರೆಸ್ ಪಕ್ಷದ ಮುಖಾಂತರವೇ ಚುನಾವಣೆಯಲ್ಲಿ ನಿಲ್ಲಲ್ಲಿದ್ದೇನೆ ಎಂದು ತಿಳಿಸಿದ್ದಾರೆ. ಅಭಿಮಾನಿಗಳ ಆಸೆಯಂತೆ ನಾನು ಪಕ್ಷೇತರವಾಗಿ ನಿಂತರು ಸರಿ ನನಗೆ ಗೆಲುವು ಸಿಗಬೇಕು ಸೋಲಾಗಬಾರದು, ಅಭಿಮಾನಿಗಳು ಅಂದುಕೊಂಡ ಹಾಗೆ ನಾನು ಗೆಲ್ಲಲು ಏನು ನಿರ್ಧಾರ ತೆಗೆದುಕೊಳ್ಳಬೇಕ್ಕೆನ್ನುವುದು ನನಗೆ ಗೊತ್ತು ಎಂದರು.
ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ರೋಚಕವಾದ ತಿರುವು ನೀಡಿದ್ದಾರೆ
ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ರೋಚಕವಾದ ತಿರುವು ನೀಡಿದ್ದಾರೆ, ಇದಪ್ಪ ವರಸೆ. ಪ್ರಜಾಕೀಯ ಸಂಸ್ಥಾಪಕ ಉಪ್ಪಿ, ಇ ಲವ್ ಯುವ್ ಪ್ರೆಸ್ ಮೀಟ್ ನಲ್ಲಿ ಈಗಾಗಲೇ 25 ಕ್ಷೇತ್ರಗಳಿಂದ ನಮ್ಮ ಪಕ್ಷದಿಂದ ಆಯ್ಕೆ ಮಾಡಿದ್ದೇವೆ. ಸುಮ್ ಸುಮ್ನೆ ನಾವು ಕ್ಯಾಂಡಿಡೆಟ್ ಸೆಲೆಕ್ಟ್ ಮಾಡಿಲ್ಲ, ನಾವು ಕೇಳಿದ ವಿಚಿತ್ರವಾದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದವರನ್ನ, ಪರ್ಸನಲ್ ಇಂಟರ್ವ್ಯೂ ಕ್ಲಿಯರ್ ಮಾಡಿದವರನ್ನ, ರಿಟೆನ್ ಪರೀಕ್ಷೆಯಲ್ಲಿ ಪಾಸಾದವರನ್ನ ಮಾತ್ರ ಆಯ್ಕೆ ಮಾಡಿದ್ದೇವೆ ಎಂದು ತಮ್ಮ ಪ್ರಜಾಕೀಯದ ಪಕ್ಷದ ಕುರಿತು ಸಣ್ಣ ತುಣುಕು ನೀಡಿದ್ದಾರೆ.
ನೆಕ್ಸ್ಟ್ ಇವರ ಡಾಕ್ಯುಮೆಂಟ್ಸ್ ಪರಿಶೀಲಿಸಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಳಿದ್ದೇವೆ ಎಂದು ರಿಯಲ್ ಸ್ಟಾರ್ ರಿಯಲ್ ಮಾತುಗಳನ್ನು ಆಡಿದ್ದಾರೆ. ಮಂಡ್ಯದಲ್ಲಿ ನಡೆಯಲಿರುವ ಚುನಾವಣೆಗೆ ನೀವು ಯಾರಿಗೆ ಬೆಂಬಲ ನೀಡುತ್ತೀರಿ ಎಂಬ ಪ್ರಶ್ನೆಗೆ ನಾನು ಒಬ್ಬ ಅಭ್ಯರ್ಥಿಯನ್ನ ಮಂಡ್ಯ ಕ್ಷೇತ್ರದಿಂದ ಅಖಾಡಕ್ಕೆ ತರಲಿದ್ದೇನೆ, ಆದ್ದರಿಂದ ನಾನು ಬೇರೆ ಪಕ್ಷಕ್ಕೆ ಸಪೋರ್ಟ್ ಮಾಡಲು ಸಾಧ್ಯವಾಗುವುದಿಲ್ಲ ಅಂತಾ ಹೇಳಿಕೆ ನೀಡಿದ್ದಾರೆ.
ಸುಮಲತಾ ಅವರ ಬೆಂಬಲಕ್ಕೆ ನಿಂತ ಕನ್ನಡ ಚಿತ್ರರಂಗ
ಸಿನಿರಂಗದ ಸ್ಟಾರ್ ನಟ ಛಾಲೆಂಜಿಂಗ್ ಸ್ಟಾರ್ ದರ್ಶನ್ ನನ್ನ ಕಡೆ ಇಂದ ಸಂಪೂರ್ಣ ಬೆಂಬಲ ಸುಮಲತಾ ಅವರ ಕಡೆಗೆ ಇದೆ ಎಂದು ಪ್ರೋತ್ಸಾಹಿಸಿದ್ದಾರೆ. ಇದರಿಂದ ಸುಮಲತಾ ಅವರಿಗೆ ಆನೆಯ ಬಲ ಬಂದಂತಾಗಿದೆ. ಅಭಿನಯ ಚಕ್ರವರ್ತಿ ಸುದೀಪ್ ಅವರು ಕೂಡ ಸುಮಲತಾ ಬೆನ್ನ್ ಹಿಂದೆ ದರ್ಶನ್ ಇದ್ದರೆ ನನ್ನ ಅವಶ್ಯಕತೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಸಹ ನನ್ನ ಬೆಂಬಲ ಸುಮಲತಾ ಅವರಿಗೆ, ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ, ಆದರೆ ಕೊನೆವರೆಗೂ ನಮ್ಮ ಸಪೋರ್ಟ್ ಅಂಬರೀಶ್ ಅವರ ಪರಿವಾರಕ್ಕೆ ನೀಡಲಿದ್ದೇವೆ, ನಾನು ಮಾತ್ರವಲ್ಲ ಇಡೀ ಚಿತ್ರರಂಗವೇ ನಿಮ್ಮನ್ನು ಪ್ರೋತ್ಸಾಹಿಸಳಿದ್ದೇವೆ ಅಂತಾ ಮಾತನಾಡಿದ್ದಾರೆ.
ಈ ಪೋಸ್ಟ್ ನಿಮಗೆ ಇಷ್ಟ ವಾದಲ್ಲಿ ಲೈಕ್ ಅಂಡ್ ಫಾಲೋ MetroSaga – Kannada on Facebook