ವಿಜಯನಗರ ಸಾಮ್ರಾಜ್ಯದ ಇತಿಹಾಸ ಬಹಳ ಪುರಾತನವಾದದ್ದು. ಬೀದಿಗಳಲ್ಲಿ ಮುತ್ತು ರತ್ನಗಳನ್ನು ಮಾರಾಟ ಮಾಡುತ್ತಿದ್ದರು ಎಂದರೆ ನೀವೇ ಊಹಿಸಿ ಇದರ ಪ್ರತಿಷ್ಠೆ ಆಗಿನ ಕಾಲದಲ್ಲಿ ಎಷ್ಟರ ಮಟ್ಟಿಗೆ ಇತ್ತು ಅಂತಾ. ಅಕ್ಕ ಬುಕ್ಕರು ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡುತ್ತಾರೆ, ವಿದ್ಯಾರಣ್ಯರು ತಾಮ್ಮ ತಪಸ್ಸು ಶಕ್ತಿಯಿಂದ ಬಂಗಾರದ ಮಳೆಯನ್ನೇ ಸುರಿಸುತ್ತಾರೆ. ಹಂಪಿ ವಿಜಯನಗರ ಸಾಮ್ರಾಜ್ಯ ಎಂದೇ ಪ್ರಸಿದ್ದಿ ಆಗುತ್ತದೆ. ವಿಜಯನಗರ ರಾಜ ಎಂದ ತಕ್ಷಣವೇ ನಮ್ಮಗೆ ನೆನಪಿಗೆ ಬರೋದು ಒಬ್ಬರೇ ಅವರೇ ಶ್ರೀ ಕೃಷ್ಣದೇವರಾಯ. ಇವರು ತಮ್ಮ ಪ್ರಜೆಗಳ ಕಷ್ಟಕ್ಕೆ ಉತ್ತಮವಾಗಿ ಸ್ಪಂದಿಸುತ್ತಿದ್ದರು, ತಮ್ಮ ರಾಜ್ಯವನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಿದ ರಾಜ ಕೃಷ್ಣದೇವರಾಯ.
ಮಾಲ್ಯವಂತ ಬೆಟ್ಟ ತನ್ನದೇ ಆದಂತಹ ಪ್ರಾಮುಖ್ಯತೆ ಪಡೆದುಕೊಂಡಿದೆ
ಹಂಪಿಯಲ್ಲಿ ನಿಮಗೆ ನೋಡಲು ಬಹಳಷ್ಟು ಜಾಗಗಳು ಇದ್ದಾವೆ. ಹೇಮಕೂಟ ಬೆಟ್ಟ, ಲೋಟಸ್ ಮಹಾಲ್, ಆನೆಗುಂದಿ ಗ್ರಾಮ, ಅಂಜನಾದ್ರಿ ಬೆಟ್ಟ, ಹಂಪಿ ವಿಶ್ವವಿದ್ಯಾಲಯ, ಉಲ್ಟಾ ಗೋಪುರ, ಕಿಷ್ಕಿಂದ, ಯಂತ್ರೋದ್ದಾರಕ ದೇವಾಲಯ, ಮಾಲ್ಯವಂತ ದೇವಾಲಯ, ಹಜಾರ ರಾಮ ದೇವಾಲಯ, ಇವೆಲ್ಲವೂ ಹಂಪಿಯ ಪ್ರಮುಖ ಪ್ರಾವಾಸಿಗರ ತಾಣಗಳು ಆಗಿ ನೆಲೆಗೊಂಡಿದೆ. ಮಾಲ್ಯವಂತ ದೇವಾಲಯ ತನ್ನದೇ ಆದ ಪ್ರಾಮುಖ್ಯತೆ ಪಡೆದುಕೊಂಡಿದೆ. ಮಾಲ್ಯವಂತ ದೇವಾಲಯದ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳ ಕುರಿತು ಮಾಹಿತಿ ನೀಡುತ್ತೇವೆ ಮುಂದೆ ಓದಿ.
ಬೆಟ್ಟದ ಮೇಲೆ ಕೂತು ಸನ್ ರೈಸ್ ಹಾಗೂ ಸನ್ ಸೆಟ್ ನೋಡುವುದೇ ಪರಮಾನಂದ
ಬಹಳ ಜನ ಹಂಪಿಯ ಎಲ್ಲಾ ಜಾಗಗಳನ್ನು ವೀಕ್ಷಿಸಿದ ನಂತರ, ಮಾಲ್ಯವಂತ ಬೆಟ್ಟದ ರಮಣೀಯವಾದ ದೃಶ್ಯಗಳನ್ನು ಕಣ್ಣ್ ತುಂಬಿಕೊಳ್ಳಲು ಮರೆತು ಹೋಗಿ ಬಿಡುತ್ತಾರೆ. ಸ್ವಲ್ಪ ಹಂಪಿ ಇಂದ ದೂರವೇ ಇದೆ ಮಾಲ್ಯವಂತ ಬೆಟ್ಟ, ಪ್ರವಾಸಿಗರಿಗೆ ಗೊತ್ತಾಗುವುದಿಲ್ಲ. ರಾಮಾಯಣದ ಇತಿಹಾಸದ ಪ್ರಕಾರ ಇಲ್ಲಿ ರಾಮ ಲಕ್ಷ್ಮಣ ಬಂದು ವಿಶ್ರಮಿಸಿದ್ದರು. ಬೆಟ್ಟದ ತುದಿಯ ಸೌಂದರ್ಯ ಬಣ್ಣಿಸಲು ಅಸಾಧ್ಯ. ನೀವು ಮಾಲ್ಯವಂತ ರಘುನಾಥ ಅನ್ನೋ ಪ್ರಸಿದ್ಧವಾದ ಹಾಗೂ ಶಕ್ತಿಯುತವಾದ ದೇವಲಯವನ್ನು ಕಾಣಬಹುದು. ಶ್ರೀ ರಾಮನಿಗೆಂದೆ ಈ ದೇವಾಲಯವು ಸೀಮಿತವಾಗಿದೆ. ಸನ್ ರೈಸ್ ಹಾಗೂ ಸನ್ ಸೆಟ್ ನೀವು ಈ ಬೆಟ್ಟದ ಮೇಲೆ ಕುಳಿತುಕೊಂಡು ನೋಡಬಹುದು, ಪ್ರವಾಸಿಗರು ಇದನ್ನು ಮಿಸ್ ಮಾಡಲು ಇಷ್ಟಪಡುವುದಿಲ್ಲ.
ರಾಮ ದೋಣಿ , ಲಕ್ಷ್ಮಣ ದೋಣಿ ಎಂದೇ ಈಗಲೂ ಜನರು ಕರೆಯುತ್ತಾರೆ
ಕಮಲಾಪುರ ಎಂಬ ಗ್ರಾಮದಿನ ಸ್ವಲ್ಪ ದೂರದಲ್ಲಿದೆ ಮಾಲ್ಯವಂತ ಬೆಟ್ಟ. ದೇವಾಲಯದ ಸುತ್ತ ಮುತ್ತ ಬಂಡೆ ಕಲ್ಲುಗಳದೇ ಕಲಾಕೃತಿ, ಬಂಡೆಗಳ ನಡುವೆ ಸಾಗುವ ಹೆದ್ದಾರಿಯ ಮೂಲಕ ನಾವು ಬೆಟ್ಟದ ತುದಿಯನ್ನು ತಲುಪಬಹುದು. ಮೇಲೆ ಹೋಗುತ್ತ ಹೋಗುತ್ತ ಶಿವಲಿಂಗ ಮತ್ತು ಶಿವನ ವಾಹನ ನಂದಿಯ ದರ್ಶನ ಪಡೆಯಬಹುದು. ಈ ದೇವಾಲಯವು ವಿಜಯನಗರ ಶೈಲಿಯ ಆಕೃತಿಯಲ್ಲಿ ಕೆತ್ತಲಾಗಿದೆ, ಶಿಲ್ಪಗಳ ಕಲೆಯನ್ನು ನೋಡಿ ಆನಂದಿಸಬಹುದು. ರಾಮ ದೋಣಿ , ಲಕ್ಷ್ಮಣ ದೋಣಿ ತುಂಬಾ ಜನಪ್ರಿಯವಾದದ್ದು, ಪುರಾಣದ ಪ್ರಕಾರ ರಾಮ ಹಾಗೂ ಲಕ್ಷ್ಮಣರಿಗೆ ಬಾಯಾರಿಕೆ ಆದಾಗ ತಮ್ಮ ಬಿಲ್ಲಿನಿಂದ ಬಾಣ ಬಿಟ್ಟು ನೀರಿನ ಧೋನಿಯೇ ಶ್ರುಷ್ಟಿಸಿ ಬಿಟ್ಟಿದರು, ಆದ್ದರಿಂದ ನಿವಾಸಿಯರು ಈಗಲೂ ರಾಮ ದೋಣಿ , ಲಕ್ಷ್ಮಣ ದೋಣಿ ಎಂದು ಕರೆಯುತ್ತಾರೆ.
ದೇವಾಲಯದ ಬಾಗಿಲು ಭಕ್ತಾದಿಗಳಿಗೆ ತೆರೆದೇ ಇರುತ್ತದೆ
ಈ ದೇವಾಲಯದ ಇನ್ನೊಂದು ವಿಶೇಷತೆ ಏನೆಂದರೆ ಯಾವಾಗಲೂ ದೇವಾಲಯದ ಬಾಗಿಲು ಭಕ್ತಾದಿಗಳಿಗಾಗಿ ತೆರೆದೆ ಇರುತ್ತದೆ. ದೇಗುಲದ ಆವರಣದಲ್ಲಿ ಶ್ರೀ ರಾಮನ ಜಪ ಕೇಳಿಬರುತ್ತದ, ಭಾರತದ ಬೇರೆ ಬೇರೆ ಪ್ರದೇಶಗಳಿಂದ ಜನರು ಬಂದು ರಾಮನ ದರ್ಶನವನ್ನು ಪಡೆದು ಪುನೀತರಾಗುತ್ತಾರೆ. ನಿಮ್ಮ ಮುಂದಿನ ಪ್ರವಾಸ ಹಂಪಿ ಆಗಿದ್ದಲ್ಲಿ ಮಾಲ್ಯವಂತ ಬೆಟ್ಟವನ್ನು ವೀಕ್ಷಿಸಲು ಮರೆಯದಿರಿ.