ಕೊನೆಗೂ ಕೆಜಿಎಫ್ ದಾಖಲೆಯನ್ನ ಮುರಿದ ಡಿ ಬಾಸ್ ಅವರ ಯಜಮಾನ

kgf and yajamana

ಇತ್ತೀಚಿಗೆ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಒಂದರ ಹಿಂದಂತೆ ಒಂದು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈ ಸಿನಿಮಾ ತುಂಬಾ ಚೆನ್ನಾಗಿತ್ತು ಅಲ್ವಾ ಅನ್ನೋ ಅಷ್ಟರಲ್ಲಿ, ಇನ್ನೊಂದು ಸಿನಿಮಾ ತೆರೆ ಮೇಲೆ ಬರುತ್ತಿದೆ. ಯಾವ ಸಿನಿಮಾವನ್ನ ನೋಡೋದು, ಯಾವದನ್ನ ಬಿಡೋದು ಅನ್ನೋದೇ ಅಭಿಮಾನಿಗಳಿಗೆ ಗೊಂದಲವಾಗಿದೆ.

ಹೌದು. ನಮ್ಮ ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಸಿನಿಮಾ ಬಂದ್ರೆ ಸಾಕು ಅಂತ ಎಲ್ರು ಕಾಯ್ತಿದ್ರು. ಯಾಕಂದ್ರೆ ಸಿನಿಮಾ ಮೇಲೆ ಅಭಿಮಾನಿಗಳು ಬಹಳಷ್ಟು ನಿರೀಕ್ಷೆಯನ್ನ ಇಟ್ಟುಕೊಂಡಿದ್ದರು. ಅದರಂತೆ ಸಿನಿಮಾ ಬಿಡುಗಡೆಯೂ ಆಯ್ತು. ಜನರ ಮನಸ್ಸನ್ನ ಗೆದ್ದಿದ್ದು ಆಯ್ತು. ಆದ್ರೆ ಈ ಮಧ್ಯದಲ್ಲಿ ಬಂದ ಯಜಮಾನ ಎಲ್ಲವನ್ನೂ ಮೀರಿಸಿದೆ.

Advertisements

ಕನ್ನಡ ಕೆಜಿಎಫ್ ಟ್ರೈಲರ್ ನ ಮೀರಿಸಿದ ಯಜಮಾನ

ಕೆಜಿಎಫ್ ಕನ್ನಡ ಟ್ರೈಲರ್ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿತ್ತು. ಅತಿ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಚರಿತ್ರೆ ಸೃಷ್ಟಿಸಿತ್ತು. ಕೆಜಿಎಫ್ ಮಾಡಿದ್ದ ಹವಾ ನೋಡಿ, ಬಹುಶಃ ಈ ದಾಖಲೆಯನ್ನ ಬೇರೆ ಯಾವ ಚಿತ್ರವೂ ಮುರಿಯಲು ಸಾಧ್ಯವಿಲ್ಲ ಎಂದು ಹೇಳಲಾಗ್ತಿತ್ತು. ಆದ್ರೀಗ, ಆ ಮಾತು ಕೆಲವೇ ದಿನಗಳಲ್ಲಿ ಸುಳ್ಳಾಗಿದೆ. ಹೌದು, ಕೆಜಿಎಫ್ ನಿರ್ಮಿಸಿದ್ದ ಟ್ರೈಲರ್ ದಾಖಲೆಯನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಸಿನಿಮಾ ಅಳಿಸಿಹಾಕಿದೆ. ಈ ಮೂಲಕ ದಾಖಲೆ ಇರೋದೇ ಅಳಿಸಿ ಹಾಕೋಕೆ ಎಂಬುದನ್ನ ಈ ಎರಡು ಚಿತ್ರಗಳು ಸಾಬೀತು ಮಾಡಿದೆ.

ವೀಕ್ಷಣೆ ಎಷ್ಟಿದೆ

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಈಗ ಯಜಮಾನ ಹೊಸ ದಾಖಲೆ ಬರೆದಿದ್ದು, ಅತಿ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್ ಗಳ ಪೈಕಿ ಯಜಮಾನ ಆಗಿದೆ. ಹೌದು, ಮಾರ್ಚ್ 21ಕ್ಕೆ ಯಜಮಾನ ವೀಕ್ಷಣೆ 18.78 (18,782,116) ಮಿಲಿಯನ್ ಆಗಿದೆ. ಇದು ಕನ್ನಡ ಚಿತ್ರವೊಂದು ಅತಿ ಹೆಚ್ಚು ವೀವ್ಸ್ ಪಡೆದ ಚಿತ್ರಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಇನ್ನ ರಿಲೀಸ್ ಆದಾಗನಿಂದಲೂ ಮೊದಲ ಸ್ಥಾನದಲ್ಲಿದ್ದ ಕೆಜಿಎಫ್ ಟ್ರೈಲರ್ ಅಂತಿಮವಾಗಿ ಹಿಂದೆ ಬಿದ್ದಿದೆ. ದರ್ಶನ್ ಯಜಮಾನ ಚಿತ್ರದ ಟ್ರೈಲರ್ ಅಬ್ಬರದ ಮುಂದೆ ಕೆಜಿಎಫ್ ಗೆ ಹಿನ್ನಡೆಯಾಗಿದೆ. ಸದ್ಯ, ಕೆಜಿಎಫ್ ಟ್ರೈಲರ್ 18.77 (18,770,683) ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

ಭಾರಿ ಪೈಪೋಟಿ

ಕೆಜಿಎಫ್ ಮತ್ತು ಯಜಮಾನ ಟ್ರೈಲರ್ ನಡುವೆ ಭಾರಿ ಪೈಪೋಟಿ ಇದೆ. ಈಗ ಯಜಮಾನ ಮೊದಲ ಸ್ಥಾನಕ್ಕೆ ಬಂದಿದ್ದರೂ, ಮುಂದಿನ ದಿನದಲ್ಲಿ ಮತ್ತೆ ಕೆಜಿಎಫ್ ಮೊದಲ ಸ್ಥಾನಕ್ಕೆ ಬಂದರೂ ಅಚ್ಚರಿಯಿಲ್ಲ. ಯಾಕಂದ್ರೆ, ಈ ಎರಡು ಟ್ರೈಲರ್ ಗಳ ನಡುವಿನ ಅಂತರ ತುಂಬಾ ಕಮ್ಮಿ ಇದೆ. ಮಾರ್ಚ್ 21 ಮಧ್ಯಾಹ್ನ 3.38 ಗಂಟೆಗೆ ಈ ಎರಡು ಟ್ರೈಲರ್ ಅಂತರ ಕೇವಲ 11,433 ಸಾವಿರ ಮಾತ್ರ ಇದೆ. ಆದ್ರೆ ಅಭಿಮಾನಿಗಳು ಇಬ್ಬರಿಗೂ ಒಂದೇ ರೀತಿ ಇದ್ದಾರೆ. ಹಾಗಾಗಿ ಮತ್ತೆ ಬದಲಾವಣೆ ಆದರೂ ಆಶ್ಚರ್ಯವೇನಿಲ್ಲ.

Advertisements

ಒಂದು ಸಮಯದಲ್ಲಿ ಕನ್ನಡ ಸಿನಿಮಾಗಳ ಟ್ರೈಲರ್, ಹಾಡುಗಳು ಯೂಟ್ಯೂಬ್ ನ ಯಾವ ದಾಖಲೆ ಪಟ್ಟಿಯಲ್ಲೂ ಇರಲಿಲ್ಲ. ಆದ್ರೀಗ, ಸಮಯ ಬದಲಾಗಿದೆ. ಭಾರತದ ಟ್ರೆಂಡಿಂಗ್ ನಲ್ಲಿ ಕನ್ನಡ ಸಿನಿಮಾಗಳ ಹವಾ ಹೆಚ್ಚಾಗ್ತಿದೆ. ನಾ ಮುಂದು, ತಾ ಮುಂದು ಅಂತ ಸಿನಿಮಾ ಟ್ರೈಲರ್ ಗಳನ್ನ ಬಿಡುಗಡೆ ಮಾಡ್ತಿದ್ದಾರೆ. ಇವತ್ತು ಈ ಸಿನಿಮಾ ಟ್ರೈಲರ್ ಮುಂದಿದ್ದರೇ, ನಾಳೆ ಇನ್ನೊಂದು ಸಿನಿಮಾ ಟ್ರೈಲರ್ ಮುಂದೆ ಇರುತ್ತೆ. ಅದೇನೇ ಇರಲಿ ಯಾವ ಸಿನಿಮಾ ಟ್ರೈಲರ್ ಮುಂದಿದ್ದರೆ ಏನು, ಒಟ್ಟಿನಲ್ಲಿ ಮುಂದೆ ಹೋಗ್ತಿರೋದು ನಮ್ಮ ಕನ್ನಡ ಸಿನಿಮಾಗಳೇ ಅನ್ನೋದು ಸಂತೋಷದ ವಿಷಯ.