ಕೆ ಜಿ ಎಫ್ ಸಿನೆಮಾದಲ್ಲಿ ಯಶ್ ಬಿಟ್ಟರೆ ಈ ನಟರೇ ಹೆಚ್ಚು ಗಮನವನ್ನು ಸೆಳೆಯುವುದು, ಇನ್ ಫ್ಯಾಕ್ಟ್ ಹೆಚ್ಚು ಇಷ್ಟ ಆಗುವುದು

ಕೆ ಜಿ ಎಫ್ ಎಂದರೆ ಬರಿ ಸಿನಿಮಾ ಆಗದೆ ಇಂದು ಕನ್ನಡಿಗರ ಪಾಲಿಗೆ ಒಂದು ಹೆಮ್ಮೆಯ ಪ್ರತೀಕ ವಾಗಿದೆ. ಈ ಚಿತ್ರದಲ್ಲಿ ಬರುವ ಎಲ್ಲ ಪಾತ್ರಗಳೂ ಪ್ರೇಕ್ಷಕರ ಗಮನ ಸೆಳೆದಿದೆ. ಯಶ್ ಮುಖ್ಯ ಭೂಮಿಯಲ್ಲಿ ಇದ್ದರೆ, ಪೋಷಕ ಪಾತ್ರದಲ್ಲಿ ಬಂದು ಹೋಗುವ ಪಾತ್ರಗಳು ಅನೇಕ. ಇಲ್ಲಿ ಅಂತಹ ಕೆಲವು ಮುಖ್ಯ ಪಾತ್ರ ಮಾಡಿದ ನಟ ನಟಿಯರ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡಿದ್ದೇವೆ. ಮುಂದೆ ಓದಿ.

ಅರ್ಚನ ಜೋಯಿಸ್

ಅರ್ಚನ ಜೋಯಿಸ್ ಕೆ‌ಜಿ‌ಎಫ್ ಚಿತ್ರದಲ್ಲಿ ನಾಯಕ ನಟನ ಅಮ್ಮನ ಪಾತ್ರದಲ್ಲಿ ನಟಿಸಿ ಜೀವ ತುಂಬಿದ್ದಾರೆ. ಇವರ ವಯಸ್ಸು ಕೇವಲ 25 ಮಾತ್ರ, ಸಿನಿಮಾದಲ್ಲಿ ನೋಡಿದರೆ ನಿಮ್ಮಗೆ ಹಾಗೆ ಕಾಣುವುದಿಲ್ಲ. ಇವರು ಮೊದಲು ಧಾರವಾಹಿಗಳಲ್ಲಿ ಅಭಿನಯಿಸುತ್ತಾ ಬಂದರು ನಿಮ್ಮಗೆ ನೆನಪಿದೆ ಇಲ್ಲವೋ? ಸುವರ್ಣ ಚಾನಲ್ ನಲ್ಲಿ ಪ್ರಸಾರವಾಗುತ್ತಿದ್ದ ದುರ್ಗ ಧಾರವಾಹಿಯಲ್ಲಿ ದುರ್ಗ ಎಂಬ ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ಆನಂತರ ಮಹಾದೇವಿ ಧಾರಾವಾಹಿ ಜೀ ಕನ್ನಡದಲ್ಲಿ ಬರುತ್ತಿತ್ತು, ಇದರಲ್ಲಿ ಇವರು ತ್ರಿಪುರ ಸುಂದರಿ ಮತ್ತು ಮಯೂರಿಯ ಪಾತ್ರವನ್ನು ಮಾಡುವ ಮೂಲಕ ಗುರುತಿಸಿಕೊಂಡಿದ್ದಾರೆ. ಧಾರವಾಹಿಗಳ ನಂತರ ಕೆ‌ಜಿ‌ಎಫ್ ಚಿತ್ರದಲ್ಲಿ ನಟಿಸುವ ಅವಕಾಶ ದೊರೆಯುತ್ತದೆ. ಜನರು ಇವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಧ್ಯಕ್ಕೆ ಇವರು ತಕದಿಮಿತ ರೆಯಲಿಟಿ ಶೋ ಅಲ್ಲಿ ಪಾಲ್ಗೊಂಡಿದ್ದಾರೆ.

Advertisements

kgf actors

ರೂಪ ರಾಯಪ್ಪ

ರೂಪ ರಾಯಪ್ಪ ಶಾಂತಿಯಾಗಿ ತುಂಬು ಗರ್ಭಿಣಿಯ ಪಾತ್ರವನ್ನು ಮಾಡಿದ್ದಾರೆ. ರೂಪ ರಾಯಪ್ಪ ಸಿನಿಮಾ ಟಾಕಿಸ್ಗಳಲ್ಲಿ ಒಂದು ವರೆ ವರ್ಷ ಕೆಲಸ ಮಾಡಿದ್ದಾರೆ, ಆದರೆ ನನಗೆ ಅದರಿಂದ ಅಷ್ಟೊಂದು ಹಣ ಸಿಗಲಿಲ್ಲ ಎಂದು ಹೇಳಿದ್ದಾರೆ. ನಾನು ಪರದೆ ಮೇಲೆ ಕಾಣಿಸಿಕೊಳ್ಳುವುದಕ್ಕೆ ಇಷ್ಟ ಪಡುತ್ತೇನೆ, ಕೆ‌ಜಿ‌ಎಫ್ ನನ್ನ ಕನಸು ಈಡೇರಿಸಿದ ಚಿತ್ರ ಅಂತಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಮೊದಲು ನನಗೆ ಅವಕಾಶ ಬಂದಾಗ ಹಿಂದೂ ಮುಂದು ನೋಡದೆ ಒಪ್ಪಿಕೊಂಡೆ, ಯಾಕೆಂದರೆ ಮೊದಲು ನಾನು ಉತ್ತಮವಾಗಿ ನಟಿಸಬಲ್ಲೆ ಎಂದು ನಿರೂಪಿಸಬೇಕಿತ್ತು . ಈ ಸಿನಿಮಾ ನನ್ನ ಸಿನಿ ಬದುಕಿನಲ್ಲಿ  ಬಹು ದೊಡ್ಡ ವೇದಿಕೆ ಆಗಿತ್ತು ಎಂದು ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಸಧ್ಯಕ್ಕೆ ಧನಂಜಯ ರಂಜನ್ಸ್ ಮೈಸೂರ್(diaries) ಅನ್ನೋ ಪ್ರೊಜೆಕ್ಟ್ ಅಲ್ಲಿ ಕೆಲಸ ಮಾಡುತ್ತಿದ್ದೇನೆ. ಟ್ರೇಲರ್ ಬಿಡುಗಡೆ ಆಗಿದ್ದು ಎಲ್ಲಾ ಕಡೆಯಿಂದ ಧನಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಅಂತಾ ಹೇಳಿದ್ದಾರೆ.

kgf actors

ಅಯ್ಯಪ್ಪ ಶರ್ಮ

ಅಯ್ಯಪ್ಪ ಶರ್ಮ ವಾನರಮ್ ಆಗಿ ಕೆ‌ಜಿ‌ಎಫ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಯ್ಯಪ್ಪ ಒಬ್ಬ ಸ್ಕ್ರೀನ್ ರೈಟರ್, ನಟ, ನಿರ್ದೇಶಕ ಒಟ್ಟಾರೆ ಇವರನ್ನು ಬಹುಮುಖ ಪ್ರತಿಭೆ ಅಂತಾನೆ ಜನರು ಕರೆಯುತ್ತಾರೆ. ರೈಟರ್ ಮತ್ತು ನಿರ್ದೇಶಕರಾಗಿ ದುರ್ಗದ ಹುಲಿ ಅನ್ನೋ ಚಿತ್ರದ ಮೂಲಕ ಸ್ಯಾಂಡಲ್ ವುಡ್ಗೆ ಪಾದಾರ್ಪಣೆ ಮಾಡುತ್ತಾರೆ. ವರ್ಷಗಳ ಹಿಂದೆ ವೀರ ಮತ್ತು ವರದನಾಯಕ ಚಿತ್ರಗಳನ್ನು ನಿರ್ದೆಶಿಸಿದ್ದರು. ಮೊದಲನೇ ಬಾರಿಗೆ ಪಾರ್ಥ ಚಿತ್ರದಲ್ಲಿ ಅಭಿನಯಿಸಿದ್ದರು. ನಂತರ ಮಾಸ್ಟೆರ್ ಪೀಸ್, ಸಂತು ಸ್ಟ್ರೇಟ್ ಫಾರ್ವರ್ಡ್, ಕಾಟಮಾರಾಯುಡು, ಟೈಗರ್ ಗಲ್ಲಿ ಚಿತ್ರಗಳಲ್ಲಿ ತಮ್ಮ ನಟನೆಯ ಕೌಶಲ್ಯತೆ ತೋರಿಸಿದ್ದಾರೆ. ಕೆ‌ಜಿ‌ಎಫ್ ಇವರಿಗೆ ಬ್ರೇಕ್ ಕೊಟ್ಟ ಚಲನಚಿತ್ರ.

Advertisements

kgf actors

ಬಿ ಸುರೇಶ್

ಬಿ ಸುರೇಶ್ ಅವರು ಕೆ‌ಜಿ‌ಎಫ್ ಅಲ್ಲಿ ವಿಠಲ ಪಾತ್ರವನ್ನು ಮಾಡಿದ್ದಾರೆ. ವಿಠಲ ಅನ್ನೋ ಪಾತ್ರ ಚಿತ್ರದಲ್ಲಿ ಹೈಲೈಟ್ ಆಗುತ್ತದೆ. ಯಶ್ ಬಿಟ್ಟರೆ ಈ ಚಿತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದಿದ್ದು ನಾನೇ ಎಂದು ಬಹಳ ಸಂತಸದಿಂದ ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ಇವರ ರೋಲ್ ಪ್ರೇಕ್ಷಕರನ್ನು ಬೇರೆ ಆಯಾಮಕ್ಕೆ ಕರೆದುಕೊಂಡು ಹೋಗುತ್ತದೆ. ಇವರ ನಟನೆಯ ಪ್ರದರ್ಶನ ಸಿಂಪ್ಲಿ ಕ್ಲಾಸಿಕ್ ಆಗಿತ್ತು. ಬಹಳ ಅನುಭವ ಇರುವ ಕಲಾವಿದನನ್ನು ಬಹಳ ಚೆನ್ನಾಗಿ ನಿರ್ದೇಶಕರು ಉಪಯೋಗಿಸಿಕೊಂಡಿದ್ದಾರೆ. ತಾವು ತೆಗೆದುಕೊಂಡಿದ್ದ ಸಂಭಾವನೆ ಎಷ್ಟು ಎನ್ನುವುದರ ಬಗ್ಗೆ ಎಲ್ಲಿಯೂ ಹೇಳಿಕೊಳ್ಳಲಿಲ್ಲ.

kgf actors

ಬಿ ಎಸ್ ಅವಿನಾಶ್ 

ಆಂಡ್ರಿವ್ಸ್ ಕೆ‌ಜಿ‌ಎಫ್ ಚಿತ್ರದ ಇನ್ನೊಂದು ನೆನಪಿನಲ್ಲಿ ಉಳಿಯುವಂತಹ ಪಾತ್ರ. ನಟನಾಗುವ ಆಸಕ್ತಿ ನನ್ನಲ್ಲಿ ಇತ್ತು ಆದರೆ ಹೇಗೆ ಸಿನಿ ಪಯಣವನ್ನು ಮಾಡಬೇಕು ಎನ್ನುವ ಗೊಂದಲದಲ್ಲಿದ್ದಾಗ ನಟ ಚಿರಂಜೀವಿ ಸರ್ಜಾ ಅವರನ್ನು ಬೇಟಿ ಮಾಡುತ್ತಾರೆ. ಜಿಮ್ ಅಲ್ಲಿ ನನ್ನ ಆತ್ಮೀಯ ಸ್ನೇಹಿತನಾಗಿದ್ದ, ಸಿನಿರಂಗದಲ್ಲಿ ಕೆಲಸ ಮಾಡುತ್ತಿದ್ದ ಜನರ ಪರಿಚಯ ಮಾಡಿಸಿದ, ನಾನು ಅವರ ಹತ್ತಿರ ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದೆ ಎಂದು ಹೇಳಿದ್ದಾರೆ. ಕೆಲ ದಿನಗಳ ಕಳೆದ ಮೇಲೆ ಪನಗ ಭರಣ ಎಂಬ ವ್ಯಕ್ತಿ ನನ್ನನ್ನು ತಮ್ಮ ನಟನೆಯ ಸಂಸ್ಥೆಗೆ ಕರೆದು ಕೊಂಡು ಹೋಗಿ ನಟನೆಯ ತರಬೇತಿಯನ್ನು ನೀಡಿ ನನ್ನನ್ನು ತಯಾರು ಮಾಡಿ, ಅಲ್ಲಮಾ ಚಿತ್ರದಲ್ಲಿ ನನಗೆ ಒಂದು ಛಾನ್ಸ್ ಕೊಟ್ಟು ನನನ್ನು ನಟನಾಗಿ ಮಾಡಿದರು ಎಂದು ಹೇಳಿದ್ದಾರೆ. ಇಲ್ಲಿಂದ ಶುರುವಾದ ಇವರ ಸಿನಿಪಯಣ ಈಗ ಕೆ‌ಜಿ‌ಎಫ್ ವರೆಗೂ ಬಂದು ತಲುಪಿದೆ. ಒಬ್ಬ ಕಲಾವಿದನಿಗೆ ವಯಸ್ಸು ಜಸ್ಟ್ ಒಂದು ನಂಬರ್ ಎಂದು ಇವರು ಪ್ರೂವ್ ಮಾಡಿದ್ದಾರೆ.

kgf actors

ರಾಮಚಂದ್ರ ರಾಜು

ರಾಮಚಂದ್ರ ರಾಜು ಕೆ‌ಜಿ‌ಎಫ್ ಅಲ್ಲಿ ವಿಲ್ಲನ್ ಆಗಿ ಗರುಡನ ಪಾತ್ರದಲ್ಲಿ ಮಿಂಚಿದ್ದಾರೆ. ಪಾತ್ರಕ್ಕಾಗಿ ತುಂಬಾ ಕಷ್ಟ ಪಟ್ಟಿದ್ದಾರೆ. ನಾಯಕ ನಟನ ಸರಿ ಸಮಾನವಾಗಿ ಕಾಣಬೇಕೆಂದರೆ ಅದೂ ತಮಾಷೆಯ ಮಾತಲ್ಲ. ಜಿಮ್ ಅಲ್ಲಿ ಇವರ ಕಸರತ್ತು ನಿಷ್ಠೆಯಿಂದ ಸಾಗಿತ್ತು, ಯಶ್ ಅವರು ಸಹ ಹೇಗೆ ಅಭಿನಯಿಸಬೇಕು ಅನ್ನುವುದರ ಬಗ್ಗೆ ಸಲಹೆ ನೀಡಿದ್ದಾರೆ, ಅದನ್ನು ನಾನು ಚಾಚು ತಪ್ಪದೆ ಅಳವಡಿಸಿಕೊಂಡಿದ್ದೆ ಎಂದು ಹೇಳಿದ್ದಾರೆ.ಇದು ಇವರ ಚೊಚ್ಚಲ ಚಿತ್ರ. ಆದರಿಂದ ಯಶ್ ಅವರ ಜೊತೆ ಅಭಿನಯಿಸುವುದು ಮೊದಲಿಗೆ ಕಷ್ಟವಾಯಿತು, ಹೋಗ್ತಾ ಹೋಗ್ತಾ ಸಣ್ಣ ಪುಟ್ಟ ತಪ್ಪುಗಳನ್ನು ಅರಿತು ಯಾವುದೇ ಭೀತಿ ಇಲ್ಲದೆ ಅಭಿನಯಿಸಿದ್ದೇನೆ ಅಂತಾ ನುಡಿದಿದ್ದಾರೆ. ಕೆ‌ಜಿ‌ಎಫ್ ಭಾಗ ೨ ರಲ್ಲಿ ಇವರು ಇದ್ದರೆ ಚೆನ್ನಾಗಿರುತಿತ್ತು ಆದರೆ ಕಥೆಯ ಅನುಸಾರವಾಗಿ ಗರುಡನ ಪಾತ್ರ ಭಾಗ ೧ ಕ್ಕೆ ಮಾತ್ರ ಸೀಮಿತವಾಗಿದೆ.

Advertisements

kgf actors

ದಿನೇಶ್ ಮಂಗಳೂರು

ದಿನೇಶ್ ಶೆಟ್ಟಿ ಅನ್ನೋ ರೋಲ್ ಮಾಡಿದ್ದಾರೆ. ಒಳ್ಳೆಯ ನಟ ಹಾಗೂ ಒಬ್ಬ ಕಲಾ ನಿರ್ದೇಶಕ. ಇವರು ಕೆ‌ಜಿ‌ಎಫ್ ಚಿತ್ರವಲ್ಲದೆ ವೀರಮದಕರಿ, ಆ ದಿನಗಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕೆ‌ಜಿ‌ಎಫ್ ಅಲ್ಲಿ ಉನ್ನತವಾದ ಪಾತ್ರವನ್ನು ನಿಭಾಯಿಸುವಲ್ಲಿ ಯಶಸ್ವಿ ಆಗಿದ್ದಾರೆ. ಸಿನಿಮಾದಲ್ಲಿ ಶೆಟ್ಟಿ ಗ್ಯಾಂಗ್ ಅನ್ನೋ ಹೆಸರು ಫೇಮಸ್. ಕೆ‌ಜಿ‌ಎಫ್ ಭಾಗ ೨ರಲ್ಲಿ ಇನ್ನಷ್ಟು ಕೌತುಕ ಹುಟ್ಟು ಹಾಕುತ್ತದೆ ಇವರ ಪಾತ್ರ.

kgf actors

ಮಾಸ್ಟರ್ ಅನ್ಮೋಲ್

ಬಾಲ ನಟನ ಪಾತ್ರವನ್ನು ಮಾಡಿದ್ದಾನೆ. ಕೆ‌ಜಿ‌ಎಫ್ ಚಿತ್ರದ ಮೊದಲು ಬರುವ ದೃಶ್ಯಾವಳಿಗಳಲ್ಲಿ ಇವನು ಬಹಳ ಸೊಗಸಾಗಿ ನಟಿಸಿದ್ದಾನೆ. ಸಣ್ಣ ವಯಸ್ಸಿನಲ್ಲಿಯೇ ಇಂತಹ ಒಂದು ದೊಡ್ಡ ಚಿತ್ರದಲ್ಲಿ ನಟಿಸುತ್ತಿರುವುದು ನನ್ನ ಪುಣ್ಯ ಅಂತಾ ಮಾತನಾಡಿದ್ದಾನೆ. ಇವನು ಕರಾಟೆ ಹಾಗೂ ಜಿಮ್ ನಾಸ್ತಿಕ್ ಕಲಿಯುತ್ತಿದ್ದಾನೆ. ತಾನು ಕಲಿಯುತ್ತಿರುವ ಗುರುವಿನ ಸಹಾಯದಿಂದ ಕೆ‌ಜಿ‌ಎಫ್ ಚಿತ್ರದಲ್ಲಿ ನಟಿಸುವ ಅವಕಾಶ ಒದಗಿ ಬಂದಿತು ಅಂತಾ ಹೇಳಿದ್ದಾನೆ. ಮೊದಲು ನನಗೆ ಯಶ್ ಈ ಚಿತ್ರಕ್ಕೆ ಹೀರೋ ಅಂತಾ ಗೊತ್ತಿರಲಿಲ್ಲ ಆಮೇಲೆ ಗೊತ್ತಾಯಿತು, ಅವರೊಂದಿಗೆ ಕೆಲಸ ಮಾಡುವುದು ನನ್ನ ಭಾಗ್ಯ ಎಂದು ತನ್ನ ಅನುಭವದ ಮಾತುಗಳನ್ನು ಹಂಚಿಕೊಂಡಿದ್ದಾನೆ ಈ ಪೋರ.

kgf actors

ಗೋವಿಂದೆ ಗೌಡ

ಕಾಮಿಡಿ ಕಿಲಾಡಿ ಎಂಬ ಹಾಸ್ಯದ ನಾಟನೆಯ ರೆಯಲಿಟಿ ಶೋ ಅಲ್ಲಿ ಭಾಗವಹಿಸಿದ್ದ. ಕಾರ್ಯಕ್ರಮದ ವೀಕ್ಷಕರನ್ನು ರಂಜಿಸುತ್ತಲೇ ಬಂದ. ಕೊನೆಗೂ ರೆಯಲಿಟಿ ಶೋ ಇಂದ ಬೆಳ್ಳಿ ಪರೆದೆಗೆ ಕಾಲಿಟ್ಟಿದ್ದಾನೆ. ಪರಸಂಗ ಮೊದಲನೇ ಚಿತ್ರ, ಗೋವಿಂದೆ ಗೌಡ ಕೆ‌ಜಿ‌ಎಫ್ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರವನ್ನು ಮಾಡಿದ್ದಾರೆ.

Advertisements

kgf actors

ಚಿತ್ರದಲ್ಲಿ ಕಥೆ ಹೇಳುವ ಹುಚ್ಚನ ಪಾತ್ರವನ್ನು ಮಾಡಿದ್ದ ಲಕ್ಷ್ಮೀಪತಿ ಈಗ ತೀರಿಕೊಂಡಿರುವ ವಿಷಯ ನಿಮಗಾಗಲೇ ಗೊತ್ತಿದೆ.

ಇನ್ನೂ ವಿನಯ್ ಬಿಡಪ್ಪ ವಿರಾಟ್ ಆಗಿ, ಜಾನ್ ಕೊಕ್ಕೆನ್ ಜಾನ್ ಆಗಿ, ಲಕ್ಷ್ಮಣ್ ರಾಜೇಂದ್ರ ದೇಸಾಯಿ ಆಗಿ, ರಮೇಶ್ ಇಂದಿರಾ ಸೂರ್ಯವರ್ಧನ್ ಆಗಿ, ತರಕ್ ಪೊನ್ನಪ್ಪ ದಯಾ ಆಗಿ, ಬಾಲಕೃಷ್ಣ ಇನ್ನಾಯತ್ ಖಲೀಲ್ ಆಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ, ಕರ್ನಾಟಕ, ಮತ್ತು ಬೆಂಗಳೂರು ನ್ಯೂಸ್ ಗಾಗಿ ನಮ್ಮ ಫೇಸ್ಬುಕ್ ಪೇಜ್ MetroSaga – Kannada ವನ್ನು ಲೈಕ್ ಮಾಡಿ.