ವಿಶೇಷಚೇತನ ಯುವಕನಿಗೆ ಕೆಲಸ ನೀಡಿ, ಜೀವನಾಸರೆಯಾಗಿರುವ zomato

0
672
zomato

ನೀವು ಏನ್ ಕೆಲಸ ಮಾಡಿಕೊಂಡಿದ್ದೀರಾ? ನಾನು, ಆಟೋ ಡ್ರೈವರ್, ಬಸ್ ಡ್ರೈವರ್, ಇಂಜಿನಿಯರ್, ಡಾಕ್ಟರ್, ಪೊಲೀಸ್ ಇತ್ಯಾದಿ.. ಈ ರೀತಿ ಯಾರಾದ್ರೂ, ನೀವು ಏನು ಕೆಲಸ ಮಾಡಿಕೊಂಡಿದ್ದೀರಾ ಅಂತ ಕೇಳಿದಾಗ, ನಾವು ಇಂಥ ಕೆಲಸ ಮಾಡುತ್ತಿದ್ದೀವಿ ಅಂತ ಹೆಮ್ಮೆಯಿಂದ ಹೇಳಬೇಕು. ಕೆಲಸ ಯಾವುದಾದರೇನು, ಆದ್ರೆ ಉದ್ಯೋಗ ಅನ್ನೋದು ಎಲ್ಲರಿಗೂ ಇರಬೇಕಾದದ್ದು. ನಾನು ದುಡಿದು ತಿನ್ನುತ್ತೇನೆ ಅನ್ನೋ ಛಲವಿರಬೇಕು. ನಮಗೆ ಕೈ, ಕಾಲು ಎಲ್ಲವೂ ಚೆನ್ನಾಗಿರಬೇಕಾದರೆ, ನಾವೇಕೆ ದುಡಿದು ತಿನ್ನಬಾರದು. ಆದರೆ ಕೆಲವರು ನಾನೇಕೆ ದುಡಿಯಬೇಕು ಅಂತ ಅವರಿಗೆ, ಅವರೇ ನಿರ್ಧಾರ ಮಾಡಿಕೊಂಡಿರ್ತಾರೆ. ಹಾಗಾಗಿ ಕೆಲಸಕ್ಕೆ ಹೋಗದೆ, ಸುಮ್ಮನೆ ಅಲ್ಲಿ, ಇಲ್ಲಿ ಓಡಾಡಿಕೊಂಡು ಜೀವನ ನಡೆಸುತ್ತಾರೆ.

ಒಂದು ಗಾದೆ ಇದೆ. ಸಾಮಾನ್ಯವಾಗಿ ಅದು ಎಲ್ಲರಿಗೂ ಗೊತ್ತು. ಉದ್ಯೋಗಂ ಪುರುಷ ಲಕ್ಷಣಂ ಎಂದು. ಆದ್ರೆ ಈಗಿನ ಕಾಲದಲ್ಲಿ ಪುರುಷರು ಮಾತ್ರವಲ್ಲ, ಮಹಿಳೆಯರು ಸಹ ಅವರ ಸಮನಾಗಿಯೇ ದುಡಿಯುತ್ತಾರೆ. ಆದ್ರೆ ಕೆಲವರು ದುಡಿಮೆಯನ್ನ ಕೀಳಾಗಿ ನೋಡುತ್ತಾರೆ. ನಾನು ದುಡಿಬೇಕಾ? ಅದು ಬೇರೆ ಅವರ ಕೈ ಕೆಳಗೆ ಅಂತೆಲ್ಲಾ ಯೋಚನೆ ಮಾಡ್ತಾರೆ. ಆದ್ರೆ ಇಲ್ಲಿ ವಿಕಲಚೇತನನೊಬ್ಬ , ನಾನು ದುಡಿದೇ ತಿನ್ನುವುದು. ನನಗೆ  ಬಿಟ್ಟಿ ಬದುಕಲು ಇಷ್ಟ ಇಲ್ಲ. ನನಗೆ ದುಡಿಯಬೇಕೆಂಬ ಛಲವಿದೆ. ಹಾಗಾಗಿ ದುಡಿಯುತ್ತೇನೆ ಎಂದು ಕೆಲಸ ಮಾಡುತ್ತಿದ್ದಾರೆ.

ವಿಶೇಷ ಚೇತನ ಯುವಕನಿಗೆ ಕೆಲಸ ನೀಡಿದ zomato

ಸಾಮಾನ್ಯವಾಗಿ zomato ಅಂದ್ರೆ ಎಲ್ಲರಿಗೂ ಗೊತ್ತು. ಫುಡ್ ಆರ್ಡರ್ ಮಾಡಿ, ಸುಲಭವಾಗಿ ಅದನ್ನ ಪಡೆಯುವ ಒಂದು ಆಪ್. ಇದನ್ನ ಈಗಂತೂ ಎಲ್ಲರೂ ಬಳಸುತ್ತಾರೆ. ಹಾಗಾಗಿ ರಸ್ತೆಯಲ್ಲಿ zomato ಟೀಶರ್ಟ್ ಧರಿಸಿದವರು ಓಡಾಡುತ್ತಲೇ ಇರುತ್ತಾರೆ. ಆದರೆ ಅವರ್ಯಾರು, ಯಾರ ಕಣ್ಣಿಗೂ ವಿಶೇಷವಾಗಿ ಕಾಣಿಸಿಲ್ಲ. ಆದರೆ, ಈ ಒಬ್ಬ ವ್ಯಕ್ತಿ ಮಾತ್ರ ಎಲ್ಲರ ಕಣ್ಣಿಗೆ ವಿಶೇಷವಾಗಿ ಕಂಡಿದ್ದಾರೆ. ಯಾಕಂದ್ರೆ, ಆ ವ್ಯಕ್ತಿ ಎಲ್ಲರಂತೆ, ದೈಹಿಕವಾಗಿ ಆರೋಗ್ಯವಾಗಿದ್ದು, ಆರಾಮಾಗಿ ಓಡಾಡುವಂತ ವ್ಯಕ್ತಿಯಲ್ಲ. ಅವರು ವಿಶೇಷಚೇತನರು. ಹೌದು. ಈ ವ್ಯಕ್ತಿ ಚಿಕ್ಕಂದಿನಲ್ಲೇ, ವಿಶೇಷ ಚೇತನಾಗಿರುತ್ತಾರೆ. ಹಾಗಾಗಿ ಅವರಿಗೆ ಎಲ್ಲೂ ಕೆಲಸ, ಕಾರ್ಯ ಸಿಗುವುದಿಲ್ಲ. ಆದರೆ zomato ಅವರಿಗೆ ಕೆಲಸವನ್ನ ನೀಡುವುದರ ಮೂಲಕ, ಆ ವ್ಯಕ್ತಿಯ ಬೆನ್ನೆಲುಬಾಗಿ ನಿಂತಿದೆ.

ಡೆಲಿವರಿ ಬಾಯ್ ಆಗಿ ಉದ್ಯೋಗ ನೀಡಿರುವ zomato

ಇವರಿಗೆ ದುಡಿಯಬೇಕೆಂಬ ಆಸೆ ತುಂಬಾ ಹೆಚ್ಚಾಗಿದೆ. ಆದರೆ, ಇವರು ವಿಶೇಷ ಚೇತನರಾಗಿದ್ದರಿಂದ, ಇವರಿಗೆ ಕೆಲಸ ಸಿಗೋದು ಕಷ್ಟ ಆಗಿತ್ತು. ಹಾಗಾಗಿ, ಇವರು zomato ದಲ್ಲಿ ಕೆಲಸ ಕೇಳಿದಾಗ, ಅವರು, ಇವರಿಗೆ ಒಂದು ಅವಕಾಶ ಮಾಡಿಕೊಡುತ್ತಾರೆ. ಇವರು ಎಲ್ಲರಂತೆ, ಬೈಕ್ ನಲ್ಲಿ ಓಡಾಡುವುದಿಲ್ಲ. ಬದಲಿಗೆ, 3 ಚಕ್ರದ ಪುಟ್ಟ ಗಾಡಿಯಲ್ಲಿ, ಮನೆ ಮನೆಗೂ ಫುಡ್ ಡೆಲಿವರಿ ಮಾಡುತ್ತಿದ್ದಾರೆ.

ಶಹಬ್ಬಾಸ್ ಎಂದಿರುವ ಗ್ರಾಹಕರು

ಇವರು ಈ ರೀತಿ ಕೆಲಸ ಮಾಡ್ತಿರೋದನ್ನ ನೋಡಿದ ಗ್ರಾಹಕರು ಇವರಿಗೆ ಶಹಬ್ಬಾಸ್ ಎನ್ನುತ್ತಿದ್ದಾರೆ. ಯಾಕಂದ್ರೆ, ಕೈ ಕಾಲು ಸರಿಯಾಗಿ ಇರುವವರೇ ಕೆಲಸ ಮಾಡಲು, ಹಿಂದೆ, ಮುಂದೆ ನೋಡ್ತಾರೆ. ಹೀಗಿರುವಾಗ ವಿಶೇಷ ಚೇತನರಾಗಿರುವ ನೀವು, ಈ ರೀತಿಯಲ್ಲಿ ಕಷ್ಟ ಪಟ್ಟು ದುಡಿಯುತ್ತಿರೋದು ನೋಡುತ್ತಿದ್ರೆ, ನಿಜಕ್ಕೂ ಸಂತೋಷವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಜೊತೆಗೆ, zomato ಕಂಪನಿಯ ಬಗ್ಗೆಯೂ ಒಳ್ಳೆ ರೀತಿಯ ಮಾತುಗಳನ್ನಾಡುತ್ತಿದ್ದಾರೆ. ಯಾಕಂದ್ರೆ, ವಿಶೇಷ ಚೇತನರಿಗೆ ಕೆಲಸ ಮಾಡುವ ಮನಸ್ಸಿದ್ದರೂ, ಅವರಿಗೆ ಕೆಲಸ ಸಿಗೋದು ಬಹಳ ಕಷ್ಟವಾಗಿರುತ್ತದೆ. ಆದ್ರೆ ಇಂಥವರಿಗೆ ಒಂದು ಅವಕಾಶ ಮಾಡಿಕೊಟ್ಟಿರುವ zomato ಕಂಪನಿಗೆ ಧನ್ಯವಾದ ಹೇಳಬೇಕು ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡುತ್ತಿದ್ದಾರೆ.

ನಿಜಕ್ಕೂ ಇಂಥವರನ್ನ ನೋಡಿದಾಗ ಸಂತೋಷದ ಜೊತೆ, ನಮ್ಮ ಬಗ್ಗೆ ನಮಗೆ ಕೀಳು ಭಾವನೆ ಬರುತ್ತದೆ. ಯಾಕಂದ್ರೆ, ವಿಶೇಷ ಚೇತನರಾಗಿರುವ ಅವರೇ ದುಡಿದು ತಿನ್ನಬೇಕಾದರೆ, ನಾವೆಲ್ಲಾ ಶೋಕಿಯ ಜೀವನ ನಡೆಸುತ್ತೀವಿ. ನಿಜಕ್ಕೂ ಇವರ ಈ ಕೆಲಸ ಎಲ್ಲರಿಗೂ ಮಾರ್ಗದರ್ಶನವಾಗಬೇಕು.

LEAVE A REPLY

Please enter your comment!
Please enter your name here