ಯಶ್ ಅವರು ಚಾಲನೆ ಮಾಡಿದ ಯಶೋ ಮಾರ್ಗ ಈಗ ಉತ್ತಮ ಫಲಿತಾಂಶ ಕೊಟ್ಟಿದೆ ಟೀಕೆಗಳಿಗೆ ಯಶ್ ಅವರ ಈ ಸಮಾಜ ಸೇವೆಯೇ ಸಾಕ್ಷಿ

0
847

ಮಂಡ್ಯ ಕ್ಷೇತ್ರದ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪಕ್ಷ ಪ್ರತಿ-ಪಕ್ಷಗಳ ಟೀಕೆಗಳು ಕೇಳಿ ಬಂದಿದ್ದವು. ದಿನದಿಂದ ದಿನಕ್ಕೆ ಇದೂ ಹೀಗೆ ಮುಂದುವರೆಯುತ್ತಲೇ ಇದೆ, ಯಶ್ ಹಾಗೂ ದರ್ಶನ್ ಮೇಲೆ ಎದುರಾಳಿಯ ಪಕ್ಷದ ನಾಯಕರು ಹರಿ ಹಾಯಿದಿದ್ದಾರೆ. ಕುಮಾರ್ ಸ್ವಾಮಿ ಹಾಗೂ ನಿಖಿಲ್ ಅವರ ಹೇಳಿಕೆಗೆ ಯಶ್ ಹಾಗೂ ದರ್ಶನ್ ಖಡಕ್ಕಾಗೆ ಉತ್ತರ ನೀಡಿದ್ದಾರೆ. ಏನೇ ಆದರೂ ಸುಮಲತ ಅವರ ಪರ ಮಾತ್ರ ಭರ್ಜರಿ ಆಗಿ ಸ್ಟಾರ್ ನಟರು ಪ್ರಚಾರ ಮಾಡುತ್ತಿದ್ದಾರೆ. ಸುಮಲತಾ ಅವರು ಸಹ ದರ್ಶನ್ ಹಾಗೂ ಯಶ್ ನನ್ನ ಇಬ್ಬರು ಮಕ್ಕಳಿದ್ದ ಹಾಗೆ ಅಂತಾ ಹೇಳಿದ್ದಾರೆ.

ಯಶೋ ಮಾರ್ಗದ ಮೂಲಕ ಹಳ್ಳಿ ಹಳ್ಳಿಗೂ ನೀರಿನ ಸೌಲಭ್ಯವನ್ನು ಯಶ್ ಅವರು ಒದಗಿಸಿ ಕೊಟ್ಟಿದರು

ಇನ್ನೂ ನಿಖಿಲ್ ಕತ್ರಿಗುಪ್ಪೆ ಅಲ್ಲಿ ಇದ್ದ ಮನೆಯ ಬಾಡಿಗೆ ಕಟ್ಟಿಲ್ಲ ಇಂತವರೆಲ್ಲ ನಮ್ಮ ಯೋಗ್ಯತೆ ಬಗ್ಗೆ ಮಾತನಾಡುತ್ತಿದ್ದಾರೆ ಅಂತಾ ಹೇಳಿ ನಟ ಯಶ್ ಗೆ ಟಾಂಗ್ ಕೊಟ್ಟಿದ್ದರು. ಇದಕ್ಕೆ ಸರಿಯಾಗಿ ಯಶ್ ಕೂಡ ಪ್ರತಿಕ್ರಿಯಿಸಿದ್ದರು, ಹೌದೂ ನಾವು ಬಡತನದಲ್ಲಿಯೇ ಬೆಳೆದವರು ನನಗೆ ಆಗ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ, ಆನಂತರ ರೈತರ ಕಷ್ಟಕ್ಕೆ ನಾನು ನೆರವಾಗಿದ್ದೇನೆ ಅಂತಾ ಹೇಳುವುದರ ಮೂಲಕ ಟಾಂಗ್ ಕೊಟ್ಟಿದ್ದಾರೆ. ಯಶೋ ಮಾರ್ಗದ ಮೂಲಕ ಹಳ್ಳಿ ಹಳ್ಳಿಗೂ ನೀರಿನ ಒಂದು ಸೌಲಬ್ಯವನ್ನು ಯಶ್ ಅವರು ಒದಗಿಸಿ ಕೊಟ್ಟಿದ್ದರು.

yashomarga

ಯಶೋ ಮಾರ್ಗದ ಸಂಸ್ಥೆ ಅವರು ಕೆರೆಯ ಹೂಳನ್ನು ತೆಗಿಸಿ ರೈತರ ಕಷ್ಟಕ್ಕೆ ನೆರವಾಗಿದ್ದಾರೆ

ರಾಜ್ಯಕ್ಕೆ ನೀರಿನ ಕೊರತೆ ಇದೆ, ಕಳೆದ ಇಪ್ಪತ್ತು ವರ್ಷಗಳಿಂದ ನೀರಿಗೋಸ್ಕರ ರೈತರು ಹೋರಾಡುತ್ತಿದ್ದಾರೆ. ಬೆಳೆಯುವ ಬೆಲೆಗೆ ನೀರಿನ ಅವಶ್ಯಕತೆ ತುಂಬಾ ಇದೆ ಆದ ಕಾರಣ ನೀರಿಗಾಗಿ ರೈತರು ಗೋಲಾಡುವ ಪರಿಸ್ಥಿತಿ ಬಂದಿದೆ. ಅನೇಕ ಜಿಲ್ಲೆಗಳಲ್ಲಿ ಬರಡು ಆವರಿಸಿಕೊಂಡಿದೆ ಹಲವಾರು ಗ್ರಾಮದಲ್ಲಿ ಕೆರೆಗಳು ಒಣಗಿ ಹೋಗಿವೆ, ಕೆರೆ ಕಟ್ಟೆಗಳು ತುಂಬಿ ತುಳುಕಾಡುತ್ತಿಲ್ಲ. ಯಶ್ ಅವರ ನೇತೃತ್ವದಲ್ಲಿರುವ ಯಶೋ ಮಾರ್ಗ ಸಂಸ್ಥೆಯವರ ಸಹಾಯದಿಂದ ಹೂಳು ತೆಗೆಸಿದ್ದ ಯಲಬುರ್ಗ ತಾಲೂಕಿನ ತಲ್ಲೂರು ಕೆರೆ ತುಂಬಿದೆ. ಗ್ರಾಮದ ಜನತೆಯ ದಾಹ ಈ ಕೆರೆ ತೀರಿಸದಲ್ಲದೆ ಉತ್ತಮವಾದ ಬೆಲೆ ಬೆಳೆವಣಿಗೆಗೂ ಕಾರಣವಾಗಿದೆ.

yash

ಕೆರೆಯ ಹೂಳನ್ನು ತೆಗೆಯುವ ಕಾರ್ಯಾಚರಣೆಯಲ್ಲಿ ಯಶೋ ಮಾರ್ಗದವರು ಯಶಸ್ವಿ ಆಗಿದ್ದಾರೆ

ಯಶ್ ಅಭಿನಯಿಸಿದ ಕೆ‌ಜಿ‌ಎಫ್ ಚಿತ್ರ ಹಿಟ್ ಆಗಿದೆ, ಕೇವಲ ಚಿತ್ರದಲ್ಲಿ ಅಭಿನಯಿಸುವುದಲ್ಲದೆ ಸಮಾಜ ಸೇವೆಕನಾಗಿಯೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಯಶ್ ಅವರ ಈ ನಿಲುವಿಗೆ ಬಹಳ ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ತಲ್ಲೂರು ಕೆರೆ ನೋಡಲು ಬಹಳ ವಿಸ್ತಾರವಾಗಿದ್ದು, ಹಲವು ವರ್ಷಗಳ ಕಾಲ ಬರಡಾಗೆ ಇತ್ತು, ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿತ್ತು. ಯಶೋ ಮಾರ್ಗದ ಸಂಸ್ಥೆ ಅವರು ಕೆರೆಯ ಹೂಳನ್ನು ತೆಗೆಯುವುದರ ಕಾರ್ಯಾಚರಣೆಯಲ್ಲಿ ಯಶಸ್ವಿ ಆಗಿದ್ದಾರೆ, ಇದಕ್ಕಾಗಿ ನಟ ಯಶ್ ಅವರು 1.5 ಕೋಟಿ ಹಣವನ್ನು ನೀಡಿದ್ದಾರೆ.

ಸುಡು ಬಿಸಿಲಿನ ಬೇಗೆಯಲ್ಲೂ ಏಪ್ರಿಲ್ ತಿಂಗಳಿನಲ್ಲಿ ಕೆರೆ ತುಂಬಿ ಹರಿಯುತ್ತಿದೆ

ಸುಡು ಬಿಸಿಲಿನ ಬೇಗೆಯಲ್ಲೂ  ಏಪ್ರಿಲ್ ತಿಂಗಳಿನಲ್ಲಿ ಕೆರೆ ತುಂಬಿ ಹರಿಯುತ್ತಿದೆ, ರಾಜ್ಯದಲ್ಲಿ ಬರದ ಸಮಸ್ಯೆ ಇದೆ ಆದರೆ ಈ ಕೆರೆಗೆ ಯಾವ ಕೊರತೆಯೂ ಇಲ್ಲ. ಊರಿನ ಸುತ್ತ ಮುತ್ತ ಪ್ರದೇಶಗಳಲ್ಲಿ ಅಂತರ್ಜಾಲ ಹೆಚ್ಚಾಗಿದೆ. ಗ್ರಾಮದ ನಿವಾಸಿ ರುದ್ರಪ್ಪ ಅವರ ಬೋರೆವೆಲ್ ಅಲ್ಲಿ 4 ವರ್ಷವಾದರೂ ನೀರೇ ಇರಲಿಲ್ಲ , ಇವರ ಮಾವಿನ ತೋಟದಲ್ಲಿ ಬೆಳೆದ ಮಾವು ಕೂಡ ನೀರಿಲ್ಲದೆ ಒಣಗಿ ಹೋಗಿತ್ತು. ಕೆರೆಯ ಹೂಳು ತೆಗೆಸಿದ ನಂತರ ಮತ್ತೆ ಬೋರೆವೆಲ್ ತುಂಬಿದೆ, ಮತ್ತೊಮ್ಮೆ ನೀರಾವರಿ ಶುರು ಮಾಡಿದ್ದು ಮೆಕ್ಕೆ ಜೋಳವನ್ನು ಉತ್ತಮವಾದ ರೀತಿಯಲ್ಲಿ ಬೆಳೆದಿದ್ದಾರೆ. ಹತ್ತು ವರ್ಷಗಳ ಹಿಂದೆ ಮಾರಿಯಪ್ಪ ಅನ್ನೋ ಒಬ್ಬ ವ್ಯಕ್ತಿಯು ಬೋರೆವೆಲ್ ಹಾಕಿಸಿ ನೀರಿಗಾಗಿ ಪರದಾಡಿದ್ದರು, ಆದರೆ ಈಗ ಕೆರೆತುಂಬಿದ ಸಲುವಾಗಿ ಬೋರ್ ವೆಲ್ ಅಲ್ಲಿ ನೀರು ಬಂದಿದೆ.

thalluru lake

ನಮ್ಮ ಕಷ್ಟಕ್ಕೆ ಸ್ಪಂದಿಸಿರುವ ಯಶ್ ಅವರ ಮುಂಬರುವ ಚಿತ್ರಗಳೆಲ್ಲ ಶತ ದಿನೋತ್ಸವ ಪೂರೈಸಲಿ ಎಂದು ಗ್ರಾಮದ ಜನತೆ ಹರಿಸಿದ್ದಾರೆ

ಬೋರೆವೆಲ್ ಗೆ ಹೊಸ ಪಂಪ್ ಸೆಟ್ ಅನ್ನು ಹಾಕಿಸಿ ನೀರಾವರಿ ವ್ಯವಸಾಯ ಮಾಡಲು ಮುಂದಾಗಿದ್ದಾರೆ. ಮೆಕ್ಕೆ ಜೋಳಕ್ಕೆ ಮಾರ್ಕೆಟ್ ಅಲ್ಲಿ ಭಾರಿ ಬೇಡಿಕೆ ಬಂದಿದೆ ಇದರ ಬೆನ್ನ ಹಿಂದೆಯೇ ಈಗ ಸೂರ್ಯ ಕಾಂತಿ ಬಿತ್ತನೆ ಮಾಡಬೇಕೆಂದು ತೀರ್ಮಾನಿಸಿದ್ದಾರೆ. ಕೆರೆಯ ಸುತ್ತಲೂ ನೆಲೆಗೊಂಡಿರುವ ತಲ್ಲೂರು, ಕುತುಗಂಟಿ, ಚಿಕ್ಕಮ್ಯಾಗೆರಿ, ಸಾಲಬಾವಿ, ಜಲಕುಂಟೆ ಹಾಗೂ ಯಲಬುರ್ಗ ಪ್ರದೇಶಗಳಲ್ಲಿ ಅಂತರ್ಜಾಲ ವೃದ್ದಿ ಆಗಿದೆ, ರೈತರು ಬಿಸಿಲಿನ ವಾತಾವರಣದಲ್ಲೂ ವ್ಯವಸಾಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಯಶ್ ನಟಿಸಿರುವ ಕೆ‌ಜಿ‌ಎಫ್ ಚಲನಚಿತ್ರ ಯಶಸ್ವಿ ಆಗಲಿ, ನಮ್ಮ ಕಷ್ಟಕ್ಕೆ ಸ್ಪಂದಿಸಿರುವ ಯಶ್ ಅವರ ಮುಂಬರುವ ಚಿತ್ರಗಳೆಲ್ಲ ಶತ ದಿನೋತ್ಸವ ಪೂರೈಸಲಿ ಎಂದು  ಗ್ರಾಮದ ಜನತೆ ಯಶ್ ಅವರಿಗೆ ಹರಿಸಿದ್ದಾರೆ.

thalluru

ಯಶೋ ಮಾರ್ಗದ ಸಂಸ್ಥೆಯವರ ಶ್ರಮದಿಂದಾಗಿ ಇಂದು ರೈತರಿಗೆ ವ್ಯವಾಸಾಯ ಮಾಡಲು ಅನುಕೂಲವಾಗಿದೆ. ಯಶೋ ಮಾರ್ಗದ ಸಂಸ್ಥೆಯವರ ಕೆಲಸಕ್ಕೆ ಉತ್ತಮವಾದ ಫಲಿತಾಂಶ ಸಿಗಲಿ, ಯಶೋ ಮಾರ್ಗದವರ ಕೆಲಸ ಹೀಗೆ ಮುಂದವರೆಯಲಿ, ಎಲ್ಲಾ ಕಾರ್ಯಾಚರಣೆಗಳು ಯಶಸ್ವಿ ಆಗಲಿ ಎಂದು ಹರಿಸೋಣ.

LEAVE A REPLY

Please enter your comment!
Please enter your name here