ವೈರಿಗಳು ಕೆಣಕಿದಷ್ಟೂ ಧಗ ಧಗ ಬೆಂಕಿಯಂತೆ ಉರಿಯುತ್ತಾನೆ, ವಿರೋಧ ಪಕ್ಷದವರಿಗೆ ಟಾಂಗ್ ನೀಡಿದ ಯಶ್

0
784
mandya election

ಸ್ಟಾರ್ ನಟರಾದ ಯಶ್ ಹಾಗೂ ದರ್ಶನ್ ಸುಮಲತಾ ಪರ ಪ್ರಚಾರ ಮಾಡುವ ಸಂದರ್ಭದಲ್ಲಿ ಎದುರಾಳಿಯ ಸ್ಪರ್ದಿಗಳು ಅವಹೇಳನಕಾರಿ ಮಾತುಗಳನ್ನು ಆಡಿದ್ದರು. ಅದಕ್ಕೆ ಯಶ್ ಹಾಗೂ ದರ್ಶನ್ ಅವರು ಸಮಾಧಾನವಾಗಿಯೇ ಉತ್ತರ ನೀಡಿದ್ದರು. ಹೀಗೆ ಟೀಕೆಗಳ ಕಾಳಗ ಹಾಗೂ ಮಾತುಗಳ ಸಮರ ನಡೆಯುತ್ತಲೆ ಇದೆ. ರಾಜ್ಯದಲ್ಲಿ ಚುನಾವಣೆಯ ಫಲಿತಾಂಶ ಎನಾಗುತ್ತೋ ಗೊತಿಲ್ಲ? ಆದರೆ ಮಂಡ್ಯ ಕ್ಷೇತ್ರದ ಚುನಾವಣೆ ಎನಾಗುತ್ತೋ ಎನ್ನುವುದು ರಾಜ್ಯದ ಜನತೆಯ ಚಿಂತೆ ಆಗಿದೆ. ಟೀಕೆಗಳು ವಯುಕ್ತಿಕ ವಿಚಾರಗಳ ಮಟ್ಟದ ವರೆಗೂ ಈಗ ಬಂದು ನಿಂತಿದೆ.

ನಿಖಿಲ್ ಸ್ಟಾರ್ ನಟರ ವಿರುದ್ಧ ಗುಡುಗಿದ್ದಾರೆ

ಕುಮಾರ್ ಸ್ವಾಮಿ ಹಾಗೂ ನಿಖಿಲ್ ಸ್ಟಾರ್ ನಟರ ವಿರುದ್ಧ ಅನೇಕ ಮಾತುಗಳನ್ನು ಆಡಿದ್ದಾರೆ, ಛತ್ರಿ ಇಟ್ಟುಕೊಂಡು ನಟನೆ ಮಾಡುವವರಿಗೆ ಬಿಸಿಲಿನಲ್ಲಿ ನಿಂತು ಪ್ರಚಾರ ಮಾಡಲು ತೊಂದರೆ ಆಗುತ್ತಿರಬಹುದು, ನನ್ನ ಯೋಗ್ಯತೆ ಬಗ್ಗೆ ಮಾತನಾಡಲು ಅವರಿಗೆ ಅರ್ಹತೆ ಇಲ್ಲ, ನಮ್ಮ ತಾತ ಪ್ರಧಾನ ಮಂತ್ರಿಯಾಗಿದ್ದಾಗ ನಾವು ಬಾಡಿಗೆ ಮನೆಯಲ್ಲೇ ಜೀವನವನ್ನು ನಡೆಸಿದ್ದೆವು ಪ್ರತಿ ತಿಂಗಳು 5000 ರುಪಾಯಿ ಬಾಡಿಗೆಯನ್ನು ಕಟ್ಟುತ್ತಿದ್ದೆವು, ನಟ ಯಶ್ ಗೆ ಕತ್ರಿಗುಪ್ಪೆಯಲ್ಲಿದ್ದ ಮನೆಯ ಬಾಡಿಗೆಯನ್ನು ಕಟ್ಟಲು ಆಗುತಿಲ್ಲ ಅಂತಾ ಮಾತನಾಡಿ ಯಶ್ ಗೆ ಟಾಂಗ್ ನೀಡಿದ್ದಾರೆ.

nikhil

ನಿಖಿಲ್ ಹೇಳಿಕೆಗೆ ರಾಕ್ಕಿಂಗ್ ಸ್ಟಾರ್ ಯಶ್ ನೇರವಾಗಿ ಉತ್ತರ ನೀಡಿದ್ದಾರೆ

ನಿಖಿಲ್ ಅವರ ಹೇಳಿಕೆಗೆ ರಾಕ್ಕಿಂಗ್ ಸ್ಟಾರ್ ಯಶ್ ನೇರವಾಗಿ ಉತ್ತರ ನೀಡಿದ್ದಾರೆ. ಯಶ್ ಅವರು ಸತತವಾಗಿ ಸುಮಲತಾ ಅಮ್ಮನ ಪರ ಸುಡು ಬಿಸಿಲಿನಲ್ಲಿ ನಿಂತು ಪ್ರಚಾರ ಮಾಡುತ್ತಿದ್ದಾರೆ. ಮಂಡ್ಯದ ಜನತೆ ಕೂಡ ಅದ್ದೂರಿಯಾಗಿ ಯಶ್ ಅವರನ್ನ ಬರಮಾಡಿಕೊಂಡಿದ್ದಾರೆ. ಮಳವಳ್ಳಿ ತಾಲೂಕಿನ ಪೋರಿಗಾಲಿಯಲ್ಲಿ ನಡೆದ ಪ್ರಚಾರದ ಸಂದರ್ಭದಲ್ಲಿ ನಾನು ಇಲ್ಲಿಯವರೆಗೂ ಬೆಳೆದು ನಿಂತಿದ್ದೇನೆ ಎಂದರೆ ಅದಕ್ಕೆ ಕಾರಣ ಅಂಬರೀಷ್ ಅವರು, ಮನುಷ್ಯನು ಸಹಾಯ ಮಾಡಿದ ವ್ಯಕ್ತಿಗಳನ್ನು ಯಾವತ್ತೂ ಮರೆಯಬಾರದು, ಅವರ ಋಣ ನನ್ನ ಮೇಲಿದೆ, ನಾವು ಸಹ ಅಂಬಿ ಅಣ್ಣ ಕುಟುಂಬದ ಮಕ್ಕಳಿದ್ದ ಹಾಗೆ ಯಾರು ಅದನ್ನು ಪ್ರಶ್ನಿಸುವುದು ಸರಿ ಅಲ್ಲ ಅಂತಾ ಹೇಳಿದ್ದಾರೆ.

ನೀವು ಮೊದಲು ಜನರ ಒಳಿತಿಗಾಗಿ ಶ್ರಮಿಸಿ ಅದು ಬಿಟ್ಟು ಗಂಡ ಸತ್ತವಳು ಮನೆ ಸೇರಿಕೊಳ್ಳಬೇಕು, ಮನೆ ಇಂದ ಹೊರಗೆ ಬರಬಾರದೆಂದು ಅವಿವೇಕಿಯಾ ಮಾತುಗಳನ್ನು ಆಡುವುದು ಚೆನ್ನಾಗಿ ಕಾಣುವುದಿಲ್ಲ, ಸುಮಲತಾ ಪರ ಪ್ರಚಾರಕ್ಕೆ ಬಂದಾ ತಕ್ಷಣ ನಮ್ಮನ್ನು ಕಳ್ಳೆತ್ತು ಅಂತಾ ಹೇಳುವುದು ಒಳ್ಳೆಯ ರಾಜಕಾರಣಿಯ ಸ್ವಭಾವ ಅಲ್ಲ, ನಿಮ್ಮ ಮತ ಸುಮಲತಾ ಅವರಿಗೆ ಹಾಕಿ ಗೆಲ್ಲಿಸಿ, ಖಂಡಿತ ಅವರು ಚುನಾವಣೆಯಲ್ಲಿ ಗೆದ್ದ ನಂತರ ಜನರಿಗಾಗಿ ಒಳ್ಳೆಯ ಕೆಲಸವನ್ನು ಮಾಡುತ್ತಾರೆ ಎನ್ನುವುದರ ಕುರಿತು ನನಗೆ ನಂಬಿಕೆ ಇದೆ ಅಂತಾ ಮಾತನಾಡಿ ಎದುರಾಳಿ ಪಕ್ಷದವರಿಗೆ ಮುಖದ ಮೇಲೆ ಹೊಡೆದಂತೆ ಮಾತನಾಡಿದ್ದಾರೆ.

yash

ಅಂಬರೀಶ್ ಅವರ ಮೇಲೆ ನನಗೆ ಅಪಾರ ಗೌರವ ಹಾಗೂ ಅಭಿಮಾನ ಇದೆ

ಒಂದು ಸಾರಿ ನಾನು ಬೇರೆಯವರನ್ನು ಎದುರು ಹಾಕಿಕೊಂಡರೆ ಜೀವನ ಪೂರ್ತಿ ನಾನು ಅವರನ್ನು ವೈರಿ ಆಗೇ ನೋಡುತ್ತೇನೆ ಹೊರತು ಆಪ್ತರಾಗಿ ಎಂದಿಗೂ ನೋಡುವುದಿಲ್ಲ, ಅಂಬರೀಷಣ್ಣ ಬದುಕಿದ್ದಾಗ ಎಲ್ಲರೂ ಹೇಗೆ ಅವರ ಮುಂದೆ ಶಾಂತ ರೀತಿಯಲ್ಲಿ ವರ್ತಿಸುತ್ತಿದ್ದರೋ ಏನು ಮಾತನಾಡದೇ ಸುಮ್ಮನೆ ಕುಳಿತುಕೊಳ್ಳವರೆಲ್ಲ ಈಗ ನಾಲಿಗೆ ಮೇಲೆ ಹಿಡಿತ ಇಲ್ಲದೆ ಮಾತನಾಡುತ್ತಿದ್ದಾರೆ,ಅಂಬರೀಶ್ ಅವರ ಮೇಲೆ ನನಗೆ ಅಪಾರ ಗೌರವ ಮತ್ತು ಅಭಿಮಾನ ಇದೆ ಆದ್ದರಿಂದ ನಾನು ಸುಮಲತಾ ಅವರ ಪರ ಪ್ರಚಾರ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇನೆ ಅಂತಾ ನಟ ಯಶ್ ಹೇಳಿದ್ದಾರೆ.

yash

ಮಂಡ್ಯ ಕ್ಷೇತ್ರವು ಬದಲಾವಣೆ ಆಗುವ ಆಸೆ ನಿಮ್ಮಲಿದ್ದರೆ ಈ ಭಾರಿ ಸುಮಲತಾ ಅವರನ್ನು ಗೆಲ್ಲಿಸಿ ಅಂತಾ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ರೈತರ ಕಷ್ಟಕ್ಕೆ ನಾನು ಸ್ಪಂದಿಸಿದ್ದೇನೆ, ನಾನು ರೈತರಿಗೋಸ್ಕರ ಏನು ಮಾಡಿದ್ದೇನೆ ಅಂತಾ ಸಾಕ್ಷಿ ನೀಡಬೇಕಾದ ಅವಶ್ಯಕತೆ ನನಗಿಲ್ಲ ರೈತರೇ ಬಂದು ಅದನ್ನು ಸಾಭಿತು ಮಾಡುತ್ತಾರೆ, ಅಂಬರೀಶ್ ಅಣ್ಣಂಗೆ ಇರೋದು ಒಬ್ಬಳೇ ಹೆಂಡತಿ ರಾಜ್ಯದ ಜನತೆಗೆ ಅದರ ಬಗ್ಗೆ ಗೊಂದಲ ಇಲ್ಲ ಅಂತಾ ಹೇಳುವ ಮೂಲಕ ಯಶ್ ಅವರು ಸಿ‌ಎಮ್ ಗೆ ಸ್ಟ್ರಾಂಗ್ ಆಗಿಯೇ ಟಾಂಗ್ ಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here