ಸ್ಟಾರ್ ನಟರನ್ನು ಹಿಂದಿಕ್ಕಿ ಅತಿ ಹೆಚ್ಚು ಫಾಲೋಹರ್ಸ್ ಪಡೆದ ನ್ಯಾಷನಲ್ ಸ್ಟಾರ್

0
483
yash instagram

ನಮ್ಮ ಸ್ಯಾಂಡಲ್ ವುಡ್ ನಟರು ಒಂದು ಕಾಲದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವು ಹೆಚ್ಚಾಗಿ ತೊಡಗಿಸಿಕೊಂಡಿರಲಿಲ್ಲ. ಆದ್ರೆ ಇತ್ತೀಚಿಗೆ ಎಲ್ಲರು ಅದರಲ್ಲೇ ಮುಳುಗಿರುತ್ತಾರೆ. ಯಾಕಂದ್ರೆ ಅಭಿಮಾನಿಗಳಿಗೆ ಅವರು ಹತ್ತಿರವಾಗುವುದು ಅದರಲ್ಲೇ. ಹಾಗಾಗಿ ಈಗ ಎಲ್ಲ ನಟರು ಫೇಸ್ ಬುಕ್, ಟ್ವಿಟ್ಟರ್ ಹಾಗು ಇನ್ಸ್ಟಾಗ್ರಾಮ್ ಅಂತ ಅದರಲ್ಲೇ ಬ್ಯುಸಿಯಾಗಿರ್ತಾರೆ. ಹೌದು. ತಮ್ಮ ಸಿನಿಮಾ ಬಗ್ಗೆ ಅಥವಾ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಜೊತೆಗೆ ಆಗಾಗ ಫೋಟೋಗಳನ್ನು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಆದ್ರೆ ಸಾಮಾನ್ಯವಾಗಿ ನಮ್ಮ ಜನರು ಸ್ಟಾರ್ ನಟರ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಅದೇ ರೀತಿ ಈಗ ನಮ್ಮ ಎಲ್ಲ ನಟರು ಸಹ ಸಾಮಾಜಿಕ ಜಾಲತಾಣದಲ್ಲಿ ಇದ್ದಾರೆ. ಆದ್ರೆ ಅದರಲ್ಲಿ ಹೆಚ್ಚು ಫಾಲೋಹರ್ಸ್ ಹೊಂದಿರುವುದು ಅಂದ್ರೆ ರಾಕಿಂಗ್ ಸ್ಟಾರ್ ಯಶ್.

ಇನ್ಸ್ಟಾಗ್ರಾಮ್ ನಲ್ಲಿ ದರ್ಶನ್, ಸುದೀಪ್, ಪುನೀತ್ ರನ್ನು ಹಿಂದೆ ಹಾಕಿದ ಯಶ್

ನಮ್ಮ ನಾಯಕರು ಇತ್ತೀಚಿಗೆ ಈ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆದ್ರೆ ಇಷ್ಟು ಬೇಗ ಒಬ್ಬರನ್ನು, ಒಬ್ಬರು ಮೀರಿಸುವಂತಹ ಫಾಲೋಹರ್ಸ್ ಅನ್ನು ಹೊಂದಿದ್ದಾರೆ. ಹೌದು. ಇನ್ಸ್ಟಾಗ್ರಾಮ್ ನಲ್ಲಿ ಅನ್ನು ಹೆಚ್ಚು ಬಳಸುವ ನಟರು ಅಂದ್ರೆ ಅದು ದರ್ಶನ್, ಸುದೀಪ್, ಪುನೀತ್ ಹಾಗು ಯಶ್. ಹೌದು. ನಮ್ಮ ಚಂದನವನದ ನಟರು ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಫಾಲೋಹರ್ಸ್ ನ್ನು ಹೊಂದಿದ್ದಾರೆ. ಆದ್ರೆ ಯಶ್ ಅವರೆಲ್ಲರನ್ನೂ ಮೀರಿಸಿದ್ದಾರೆ. ಹೌದು. ಇನ್ಸ್ಟಾಗ್ರಾಮ್ ನಲ್ಲಿ ದರ್ಶನ್, ಸುದೀಪ್, ಪುನೀತ್ ರನ್ನು ಯಶ್ ಹಿಂದೆ ಹಾಕಿದ್ದಾರೆ.

ಒಂದು ಮಿಲಿಯನ್ ಗಡಿ ದಾಟುವ ಮೂಲಕ ದಾಖಲೆ ಮಾಡಿದ್ದಾರೆ

ಇನ್ನು ಯಶ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಬಳಸುವುದು ಅಂದ್ರೆ ಅದು ಇನ್ಸ್ಟಾಗ್ರಾಮ್. ಹೌದು. ಫೇಸ್ ಬುಕ್ ಹಾಗೂ ಟ್ವಿಟ್ಟರ್ ಗಿಂತ ಹೆಚ್ಚು ಇನ್ಸ್ಟಾಗ್ರಾಮ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಗಾಗಿ ಯಶ್ ಇನ್ಸ್ಟಾ ದಲ್ಲಿ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಅಲ್ಲದೆ ನಟ ದರ್ಶನ್ 261K, ಸುದೀಪ್ 447K ಹಾಗೂ ಪುನೀತ್ ರಾಜ್ ಕುಮಾರ್ 717K ಫಾಲೋಹರ್ಸ್ ಗಳನ್ನು ಹೊಂದಿದ್ದಾರೆ. ಆದ್ರೆ ಯಶ್ 1 ಮಿಲಿಯನ್ ಫಾಲೋಹರ್ಸ್ ಪಡೆದಿದ್ದಾರೆ. ಒಂದು ಮಿಲಿಯನ್ ಗಡಿ ದಾಟುವ ಮೂಲಕ ಇನ್ಸ್ಟಾಗ್ರಾಮ್ ನಲ್ಲಿ ದಾಖಲೆ ಮಾಡಿದ್ದಾರೆ.

‘ಕೆಜಿಎಫ್’ ಸಿನಿಮಾ ಸಮಯದಲ್ಲಿ ಇನ್ಸ್ಟಾಗ್ರಾಮ್ ಗೆ ಬಂದಿದ್ದ ಯಶ್

ಇನ್ನು ನಟ ಯಶ್ ಮೊದಲಿನಿಂದಲೂ ಇನ್ಸ್ಟಾಗ್ರಾಮ್ ಅನ್ನು ಬಳಸಿದವರಲ್ಲ. ಅಂದ್ರೆ ಅವರು ಇನ್ಸ್ಟಾಗ್ರಾಮ್ ನಲ್ಲಿ ಈ ಮೊದಲು ತಮ್ಮ ಖಾತೆಯನ್ನು ತೆರೆದೇ ಇರಲಿಲ್ಲ. ಬದಲಿಗೆ ಕೆಜಿಎಫ್ ಸಿನಿಮಾ ಸಮಯದಲ್ಲಿ ಇನ್ಸ್ಟಾಗ್ರಾಮ್ ಗೆ ಬಂದಿದ್ದರು. ಆದ್ರೆ ಇಷ್ಟು ಬೇಗ ಇಷ್ಟೊಂದು ಜನ ಫಾಲೋಹರ್ಸ್ ಪಡೆದಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಹೌದು. ಅತಿ ಕಡಿಮೆ ಸಮಯದಲ್ಲಿ ಇಷ್ಟು ಜನ ಫಾಲೋಹರ್ಸ್ ಹೊಂದಿರುವ ನಟ ಯಶ್ ಆಗಿದ್ದಾರೆ. ಇದೆಲ್ಲಕ್ಕೂ ಅವರ ಕೆಜಿಎಫ್ ಸಿನಿಮಾ ಕಾರಣವಾಗಿತ್ತು. ಹೌದು. ಕೆಜಿಎಫ್ ಸಮಯದಲ್ಲೇ ಯಶ್ ಇನ್ಸ್ಟಾಗ್ರಾಮ್ ಗೆ ಬಂದಿದ್ದರಿಂದ ಹೆಚ್ಚಿನ ಹಿಂಬಾಲಕರಾದರು. ಅದೇ ರೀತಿ ಈಗ ‘ಕೆಜಿಎಫ್ 2’ ಸಿನಿಮಾ ಬಂದ ಮೇಲೆ ಫಾಲೋವರ್ಸ್ ಸಂಖ್ಯೆ ಡಬಲ್ ಆದರೂ ಅಚ್ಚರಿ ಪಡಬೇಕಿಲ್ಲ.

ಒಟ್ಟಿನಲ್ಲಿ ನಮ್ಮ ನಟರೆಲ್ಲ ಸಾಮಾಜಿಕ ಜಾಲತಾಣಗಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ ಒಬ್ಬೊಬ್ಬರು ಒಂದೊಂದು ಖಾತೆಯಲ್ಲೂ ಅನೇಕ ಹಿಂಬಾಲಕರನ್ನು ಹೊಂದಿದ್ದಾರೆ. ಆದ್ರೆ ಇನ್ಸ್ತಾಗ್ರಾಮ್ ನಲ್ಲಿ ಮಾತ್ರ ಯಶ್ ಎಲ್ಲ ನಟರನ್ನು ಹಿಂದಿಕ್ಕಿ, ಅಧಿಕ ಫಾಲೋಹರ್ಸ್ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

LEAVE A REPLY

Please enter your comment!
Please enter your name here