ಸೆಲ್ಫಿ ತೆಗೆಸಿಕೊಳ್ಳಲು ಬಂದ ಯೋಧರಿಗೆ ಯಶ್ ಹೇಳಿದ್ದಾದ್ರೂ ಏನು?

0
1008
yash and sainika

ಸ್ಯಾಂಡಲ್ ವುಡ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಏನೋ ಒಂದು ರೀತಿ ಕ್ರೇಜ್. ಹೌದು. ರಾಕಿ ಬಾಯ್ ಎಂದು ಅವರ ಅಭಿಮಾನಿಗಳು ಅವರನ್ನು ನೋಡಲು ಮುಗಿಬೀಳುತ್ತಾರೆ. ಇನ್ನು ಅವರ ಸಿನಿಮಾಗಳನ್ನು ನೋಡಲು ಎಷ್ಟೋ ದಿನಗಳ ವರೆಗೆ ಕಾದು ಕುಳಿತಿರುತ್ತಾರೆ. ಆದರೆ ಯಶ್ ಬಹಳಷ್ಟು ಮಾನವೀಯತೆ ಮೆರೆಯುತ್ತಿದ್ದಾರೆ. ಜೊತೆಗೆ ತಮ್ಮ ಸಹಜತೆಯನ್ನು ತೋರಿಸುತ್ತಿರುತ್ತಾರೆ. ಹೌದು. ನಿನ್ನೆಯಷ್ಟೇ, ಯಶ್ ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ತನ್ನ ಮಗಳಿಗೆ ಯಾರು ಸೆಲಬ್ರಿಟಿ ಮಗಳು ಎಂದು ಗೌರವ ಕೊಡಬೇಡಿ, ಅವಳು ಏನಾದ್ರು ಸಾಧನೆ ಮಾಡಿದಾಗ ಮಾತ್ರ ಗೌರವ ಕೊಡಿ ಎಂದು ಹೇಳಿದ್ದರು. ಈಗ ಇದೇ ಸಮಯದಲ್ಲಿ ಸೈನಿಕರ ಜೊತೆ ಮಾತನಾಡಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಯಶ್ ಬಳಿ ಸೆಲ್ಫಿ ಕೇಳಿದ ಯೋಧರು

ರಾಕಿಂಗ್ ಸ್ಟಾರ್ ಯಶ್ ಯಾವುದೊ ಕಾರ್ಯಕ್ರಮವನ್ನು ಮುಗಿಸಿ ವಾಪಸ್ ಬರುವಾಗ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಇನ್ನು ಅದೇ ಸಮಯದಲ್ಲಿ ಅಲ್ಲಿ ಕೆಲವು ಯೋಧರು ನಿಂತಿದ್ದು, ಯಶ್ ಅವರನ್ನು ನೋಡಿದ ಕೂಡಲೇ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿ, ಅವರನ್ನು ಕೇಳಿದ್ದಾರೆ. ಹೌದು. ಯಶ್ ಅವರನ್ನು ನೋಡಿದ ಕೂಡಲೇ ವಿಮಾನ ಸಿಬ್ಬಂದಿ ಹಾಗು ಸೈನಿಕರು ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆದರೆ ಯಶ್ ಅವರು ಫೋಟೋ ಕೇಳಿದ ಕೂಡಲೇ, ತಮ್ಮ ಮಾತುಗಳನ್ನು ಆರಂಭಿಸಿದ್ದಾರೆ. ಏನು ನೀವು ನನ್ನ ಬಳಿ ಸೆಲ್ಫಿ ಕೇಳುವುದೇ? ನೀವು ನನ್ನ ಬಳಿ ಸೆಲ್ಫಿ ಕೇಳುವುದು ಸರಿಯಲ್ಲ. ನಾನು ನಿಮ್ಮ ಬಳಿ ಫೋಟೋ ತೆಗೆಸಿಕೊಳ್ಳಬೇಕೆನ್ನುವ ಕೆಲವು ಮಾತುಗಳನ್ನು ಹೇಳಿದ್ದಾರೆ.

ನಿಮ್ಮ ಜೊತೆ ಫೋಟೋ ತೆಗೆಸಿಕೊಳ್ಳುವುದು ನಮ್ಮ ಅದೃಷ್ಟ

ಫೋಟೋ ಕೇಳಿದ ಸೈನಿಕರಿಗೆ, ಯಶ್ ತಮ್ಮ ಮನದಾಳನ್ನು ಮಾತನ್ನು ಹೇಳಿದ್ದಾರೆ. ಹೌದು. ಸರ್. ನಿಮ್ಮ ಬಳಿ ನಾನು ಸೆಲ್ಫಿ ತೆಗೆದುಕೊಳ್ಳಬೇಕು. ಯಾಕಂದ್ರೆ ನೀವು ನಮ್ಮ ದೇಶ ಕಾಯುವ ವೀರರು. ನಿಮಗಿಂತ ದೊಡ್ಡ ಮನುಷ್ಯರು ಯಾರು ಇಲ್ಲ. ಹಾಗಾಗಿ ನಾನು ನಿಮ್ಮ ಬಳಿ ಸೆಲ್ಫಿ ತೆಗೆದುಕೊಳ್ಳುವುದು ನಮ್ಮ ಅದೃಷ್ಟ ಎಂದು ಹೇಳಿದ್ದಾರೆ. ನಂತರ ಅವರ ಜೊತೆಗೆ ಯಶ್ ಫೋಟೋ ತೆಗೆಸಿಕೊಂಡಿದ್ದು, ನಂತರ ಅವರಿಗೆ ಗೌರವಾನ್ವಿತವಾಗಿ ಸೆಲ್ಯೂಟ್ ಮಾಡಿದ್ದಾರೆ. ಇನ್ನು ಸೈನಿಕರು ಸಹ ಅಷ್ಟೇ ಗೌರವವಾಗಿ ಯಶ್ ಗೆ ಪ್ರತಿ ಸೆಲ್ಯೂಟ್ ಮಾಡಿದ್ದಾರೆ.

ನಿಜಕ್ಕೂ ಕೆಲವರ ಕೆಲವು ಗುಣಗಳನ್ನು ನೋಡಿದಾಗ ಬಹಳಷ್ಟು ಸಂತಸವಾಗುತ್ತದೆ. ಯಾಕಂದ್ರೆ ನಿನ್ನೆಯಷ್ಟೇ ಯಶ್ ತಮ್ಮ ಮಗಳಿಗೆ ಯಾರು ಇಷ್ಟೊಂದು ಗೌರವ ಕೊಡಬೇಡಿ ಎಂದು ಹೇಳಿದ್ದಾರೆ. ಈಗ ಸೈನಿಕರಿಗಿಂತ ದೊಡ್ಡವರು ಯಾರು ಇಲ್ಲ ಎಂದು ಅವರಿಗೆ ನೀಡಿರುವ ಗೌರವ ಎಲ್ಲ ಕಡೆ ವೈರಲ್ ಆಗುತ್ತಿದೆ.

LEAVE A REPLY

Please enter your comment!
Please enter your name here