ವೀಕೆಂಡ್ ಟೆಂಟ್ ನಲ್ಲಿ ಯಶ್ ಗೆ ಹ್ಯಾಟ್ಸಾಫ್ ಹೇಳಿದ ಟಿಎಸ್ ನಾಗಾಭರಣ

0
623
yash and nagabharan

ಸಿನಿಮಾ ರಂಗದಲ್ಲಿ ಯಾರೊಬ್ಬರಿಗೂ ಸಹ ಒಂದೇ ಸರಿ ಶಿಖರ ಏರಲು ಆಗುವುದಿಲ್ಲ. ಒಂದೊಂದು ಹಂತವಾಗಿ ಅವರು ಮೇಲೆ ಬರಬೇಕಾಗುತ್ತದೆ. ಜೊತೆಗೆ ಯಾರಾದರೂ ಒಬ್ಬರು ಬೆನ್ನೆಲುಬಾಗಿ ನಿಲ್ಲಬೇಕಾಗುತ್ತೆ. ಆಗ ಮಾತ್ರ ನಾವು ಮೇಲೆ ಬರಲು ಸಾಧ್ಯ. ಯಾಕಂದ್ರೆ ಮಾರ್ಗದರ್ಶನ ಮಾಡುವವರು ಯಾರು ಇಲ್ಲ ಅಂದ್ರೆ, ಸರಿಯಾದ ದಾರಿ ತಿಳಿಯುವುದಿಲ್ಲ. ಹಾಗಾಗಿ ಎಲ್ಲರಿಗೂ ಒಬ್ಬರು ಮಾರ್ಗದರ್ಶಕರು ಹಾಗೆ ಬುದ್ಧಿ ಹೇಳಿ ಮೇಲೆ ಬೆಳಸಿದವರು ಒಬ್ಬರು ಇದ್ದೇ ಇರುತ್ತಾರೆ. ಅದರಲ್ಲೂ ಸಿನಿಮಾ ರಂಗದಲ್ಲಿ ಬುದ್ಧಿ ಹೇಳುವವರು ಹಾಗೂ ಕೈ ಹಿಡಿದು ನಡೆಸುವವರು ಯಾರಾದರೂ ಒಬ್ಬರು ಇರಲೇ ಬೇಕು. ಆಗ ಮಾತ್ರ ಬೆಳೆಯಲು ಸಾಧ್ಯ.

ಅದರಂತೆ ಸಿನಿಮಾ ರಂಗದಲ್ಲಿ ಒಬ್ಬೊಬ್ಬ ಕಲಾವಿದರಿಗೆ ಒಬ್ಬೊಬ್ಬರು ಮಾರ್ಗದರ್ಶಕರಿದ್ದಾರೆ. ಜೊತೆಗೆ ಕೈ ಹಿಡಿದು ನಡೆಸಿದವರಿದ್ದಾರೆ. ಅದೇ ರೀತಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಗೆ ಕೂಡ ಬುದ್ಧಿ ಹೇಳಿ, ಮುಂದೆ ತಂದವರು ಒಬ್ಬರು ಇದ್ದಾರೆ. ಅವರೇ ಟಿಎಸ್ ನಾಗಾಭರಣ. ಹೌದು. ನಟ ಯಶ್ ಜೋರು ಧ್ವನಿಯಲ್ಲಿ ಹೇಳುತ್ತಾರೆ. ಇವರೇ ನನ್ನ ಕೈ ಹಿಡಿದು ನಡೆಸಿದವರು ಎಂದು. ಯಾಕಂದ್ರೆ ಯಶ್ ಗೆ ಇವರು ಹೆಜ್ಜೆ ಹೆಜ್ಜೆಗೂ ನಿಂತು ಪ್ರೋತಾಹಿಸಿದ್ದಾರೆ. ಹಾಗಾಗಿ ಯಶ್ ಅವರಿಗೆ ಇವರ ಮೇಲೆ ಅಪಾರ ಗೌರವ. ಜೊತೆಗೆ ನಾಗಾಭರಣ ಅವರಿಗೂ ಸಹ ಯಶ್ ಕಂಡ್ರೆ ತುಂಬಾ ಪ್ರೀತಿ. ಹಾಗಾಗಿ ಯಶ್ ಗೆ ನಾಗಾಭರಣ ಅವರು ಹ್ಯಾಟ್ಸಾಫ್ ಹೇಳಿದ್ದಾರೆ. ಆದ್ರೆ ಹ್ಯಾಟ್ಸಾಫ್ ಯಾವ ಕಾರಣದಿಂದ ಹೇಳಿದ್ರು ಎಂತ ನೀವೇ ಮುಂದೆ ಓದಿ.

ವೀಕೆಂಡ್ ಟೆಂಟ್ ನಲ್ಲಿ ಯಶ್ ಬಗ್ಗೆ ಮಾತನಾಡಿದ ಟಿಎಸ್ ನಾಗಾಭರಣ

ಕಳೆದ ವಾರ ಜೀ ಕನ್ನಡದಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕ ಟಿ ಎಸ್ ನಾಗಾಭರಣ ಅವರು ಸಾಧಕರಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯಶ್ ಬಗ್ಗೆಯೂ ಸಹ ಹೇಳಿದರು. ಯಶ್ ಹಾಗೂ ರಾಧಿಕಾ ಪಂಡಿತ್ ಒಂದೇ ಧಾರವಾಹಿ ಮೂಲಕ ತೆರೆ ಮೇಲೆ ಬಂದವರು. ಆದ್ರೆ ಅದಕ್ಕೂ ಮುಂಚೆ ಯಶ್ ಬೆನಕ ತಂಡದಲ್ಲಿ ಒಬ್ಬ ಕಲಾವಿದರಾಗಿದ್ದರು. ಆಗ ಯಾವುದರ ಬಗ್ಗೆಯೂ ಯಶ್ ಗೆ ಸರಿಯಾಗಿ ತಿಳಿದಿರಲಿಲ್ಲವಂತೆ. ಯಾವುದಾದರು ಒಂದು ನಟನೆ ಮಾಡು ಅಂದ್ರೆ, ಎಲ್ಲದಕ್ಕೂ ಭಯ ಪಡುತ್ತಿದ್ದರಂತೆ. ಆಗ ನಾಗಾಭರಣ ಅವರೇ ಯಶ್ ಅವರಿಗೆ ಧೈರ್ಯ ತುಂಬಿ ವೇದಿಕೆ ಮೇಲೆ ಕರೆ ತರುತ್ತಿದ್ದರಂತೆ.

ನಾಗಾಭರಣ ಅವರೇ ಮಾರ್ಗದರ್ಶಕರು ಹಾಗೂ ಗುರುಗಳು

ಕಾರ್ಯಕ್ರಮದಲ್ಲಿ ನಾಗಾಭರಣ ಅವರ ಕುರಿತು ಯಶ್ ಕೂಡ ವಿಡಿಯೋದಲ್ಲಿ ಮಾತಾಡುತ್ತಾರೆ. ನನಗೆ ಮೊದಲು ಯಾವುದರ ಬಗ್ಗೆಯೂ ಅರಿವಿರಲಿಲ್ಲ. ಅಂತ ಸಮಯದಲ್ಲಿ ಇವರೇ ಒಬ್ಬ ಹಿರಿಯರಾಗಿ, ಮಾರ್ಗದರ್ಶಕರಾಗಿ ನನಗೆ ಸಾಕಷ್ಟು ಸಪೋರ್ಟ್ ಮಾಡಿದ್ದರು. ”ನಿಮ್ಮ ಮಾರ್ಗದರ್ಶನದಲ್ಲಿ, ನೀವು ತೋರಿದ ಹಾದಿಯಲ್ಲಿ ನಾವು ಬಂದವರು. ನಿಮ್ಮನ್ನ ನೋಡಿ ಕಲಿತು ಈ ಮಟ್ಟಕ್ಕೆ ಖುಷಿಯಾಗಿದ್ದೀವಿ” ಎಂದು ಯಶ್ ಹೇಳಿದರು. ನಾನು ರಂಗಭೂಮಿಯಲ್ಲಿ ಕಲಿತ್ತಿದ್ದೇನೆ. ಹೀರೋ ಅಂತ ಎಂದಿಗೂ ನನಗೆ ಫೀಲ್ ಆಗಲ್ಲ. ರಂಗಭೂಮಿ ಕಲಾವಿದ ಅಂತಾನೆ ಎಲ್ಲ ರಂಗದಲ್ಲೂ ತೊಡಗಿಸಿಕೊಳ್ಳುತ್ತೇನೆ. ಈಗಲೂ ಸಹ ನಾನು ನಿಮ್ಮ ಮಾರ್ಗದರ್ಶನದಲ್ಲಿ ಬೆಳೆದ ರಂಗಭೂಮಿ ಕಲಾವಿದನೇ. ನಿಮ್ಮ ಪ್ರೋತ್ಸಾಹ ಎಲ್ಲಕ್ಕಿಂತ ಮೀರಿದ್ದು ಎಂದು ಯಶ್ ತಿಳಿಸಿದ್ದಾರೆ.

ಯಶ್ ಗೆ ಹ್ಯಾಟ್ಸಾಫ್ ಹೇಳಿದ ಟಿಎಸ್ ನಾಗಾಭರಣ

ಕಾರ್ಯಕ್ರಮದಲ್ಲಿ ಯಶ್ ಬಗ್ಗೆ ಮಾತನಾಡಿದ ನಾಗಾಭರಣ ಅವರು, ಯಶ್ ಒಬ್ಬ ಅದ್ಭುತ ಕಲಾವಿದ. ಅವರು ಈಗಲೂ ಬೆಳೆದು ಬಂದ ಹಾದಿಯನ್ನ ನೆನಪಿನಲ್ಲಿಟ್ಟುಕೊಂಡಿದ್ದಾರೆ. ಅದನ್ನ ನೆನಪಿನಲ್ಲಿಟ್ಟುಕೊಂಡು ಈಗ ಅದನ್ನ ಹೇಳಿರೋದು ನನಗೆ ಬಹಳ ಸಂತಸ ತಂದಿದೆ. ಯಶ್ ಒಬ್ಬ ಬಹಳ ನಂಬಿಕಸ್ಥ ವ್ಯಕ್ತಿ. ಆ ನಂಬಿಕೆಯೇ ಅವರನ್ನ ಇಲ್ಲಿಗೆ ತಂದು ನಿಲ್ಲಿಸಿದೆ. ಜೊತೆಗೆ ಅವರು ದೃಡವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ನಾನು ನಿಜಕ್ಕೂ ಹ್ಯಾಟ್ಸಾಫ್ ಹೇಳುತ್ತೇನೆ. ಯಾಕಂದ್ರೆ ಇಷ್ಟು ಬೇಗ ಸಿನಿಮಾ ರಂಗದಲ್ಲಿ ಅವರು ಒಂದು ಅದ್ಭುತವಾದ ದೈತ್ಯ ಪ್ರತಿಭೆಯಾಗಿದ್ದಾರೆ. ಹಾಗಾಗಿ ನನ್ನ ಕಡೆಯಿಂದ ಅವರಿಗೆ ಹ್ಯಾಟ್ಸಾಫ್ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಎಲ್ಲರಿಗೂ ಒಂದೇ ಅಸೆ ಇರುತ್ತದೆ. ಯಾರೊಬ್ಬರೂ ಸಹ ಬೆಳೆದು ಬಂದ ಹಾದಿಯನ್ನ ಮರೆಯಬಾರದು ಎಂದು. ಆದರೆ ಯಶ್ ಅವರು ಅದನ್ನ ಮರೆತಿಲ್ಲ. ಹಾಗಾಗಿ ಅವರ ಮಾರ್ಗದರ್ಶಕರಾಗಿರುವ ಟಿಎಸ್ ನಾಗಾಭರಣ ಅವರೇ, ಯಶ್ ಗೆ ಹ್ಯಾಟ್ಸಾಫ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here