ಬಾಲ್ಯದ ವಯಸ್ಸಿನ ಪ್ರೇಯಸಿ ನಿಮ್ಮನ್ನು ಕಾಡುತ್ತಿದ್ದಾಳಾ, ಹಾಗಾದರೆ ನೀವು ’99’ ಚಿತ್ರ ನೋಡಲೇಬೇಕು

0
980
99 movie

ಗೋಲ್ಡನ್ ಸ್ಟಾರ್ ಗಣೇಶ್ ಅವರು ಅಭಿನಯಿಸಿದ 99 ಚಲನಚಿತ್ರ ಬುಧವಾರ ದಿನದಂದು ಬಿಡುಗಡೆ ಆಗಿತ್ತು, ಈ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈ ಚಿತ್ರ ತಮಿಳು ಭಾಷೆಯ ರೀಮೇಕ್ ಆದರೂ ಕನ್ನಡದಲ್ಲಿ ಬಹಳ ಸೊಗಸಾಗಿ ಮೂಡಿ ಬಂದಿದೆ. ಗಣೇಶ್ ನಾಯಕ ನಟನಾಗಿ ಚಿತ್ರದಲ್ಲಿ ಕಾಣಿಸಿಕೊಂಡರೆ, ಭಾವನಾ ಮೆನನ್ ನಾಯಕಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ರೆಗುಲರ್ ಸಿನೆಮಾದ ಕಥೆಯಂತೆ ನಿಮ್ಮಗೆ ಅನಿಸುವುದೇ ಇಲ್ಲ ಎಲ್ಲಾ ನಮ್ಮ ಜೀವನದಲ್ಲಿ ನಡೆದಿರುವ ಕಥೆ ಅಂತಾ ಭಾಸವಾಗುತ್ತದೆ. ಸಿನೆಮಾದ ಕಥೆಯ ಜೊತೆಗೆ ನೀವು ಕನೆಕ್ಟ್ ಆದರೆ ನಿಜವಾಗಿಯೂ 99 ಚಿತ್ರ ನಿಮ್ಮಗೆ ಇಷ್ಟ ಆಗುವುದಂತೂ ಖಚಿತ.

99 ಚಲನಚಿತ್ರ ಸೀದಾ ನಮಗೆ ಬಾಲ್ಯದ ವಾಯಸ್ಸಿಗೆ ಕರೆದುಕೊಂಡು ಹೋಗಿ ಬಿಡುತ್ತದೆ

ಪ್ರೀತಂ ಗುಬ್ಬಿ ಈ ಸಿನೆಮಾವನ್ನು ನಿರ್ದೇಶನ ಮಾಡಿದ್ದಾರೆ. 99 ಚಲನಚಿತ್ರ ಸೀದಾ ನಮಗೆ ಬಾಲ್ಯದ ವಯಸ್ಸಿಗೆ ಕರೆದುಕೊಂಡು ಹೋಗುತ್ತದೆ, ಪ್ರೇಮ ಕಥೆಯ ಸುತ್ತ ಈ ಸಿನೆಮಾದ ಚಿತ್ರ ಕಥೆ ಸುತ್ತುತ್ತದೆ. ಗಣೇಶ್ ಅವರ ಅಭಿನಯ ಅಮೋಘ ನೈಜ್ಯವಾದ ಅಭಿನಯ, ಪಾತ್ರಕ್ಕೆ ತಕ್ಕ ಹಾಗೆ ಹಾವ ಭಾವ ಎಲ್ಲಾ ಮೊಗದಲ್ಲೇ ತೋರಿಸಬಲ್ಲ ಅಪ್ರತಿಮ ಕಲಾವಿದ. ಭಾವನಾ ಮೆನನ್ ಅವರು ಸಹ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಇನ್ನುಲಿದಂತೆ ರವಿ ಶಂಕರ್ ಅವರ ಹಾಸ್ಯ ಚಟಾಕಿಯ ದೃಶ್ಯಗಳು ವೀಕ್ಷಕರನ್ನು ನಲಿಯುಸುತ್ತದೆ. ಚಿತ್ರ ಕಥೆಯ ವಿಷಯಕ್ಕೆ ಬಂದರೆ ನಾಯಕ ನಟ ಫೋಟೋ ಗ್ರಾಫರ್ ವೃತ್ತಿಯಲ್ಲಿ ನಿರುತನಾಗಿರುತ್ತಾನೆ, ಬೇರೆ ಬೇರೆ ಊರುಗಳನ್ನು ಸುತ್ತಿ ಅಲ್ಲಿಯ ಫೋಟೋ ಸೆರೆಹಿಡಿಯುವುದೇ ಇವನ ಕೆಲಸವಾಗಿರುತ್ತದೆ.

99 movie

ಶಾಲೆಯ ದಿನಗಳಿಂದ ಹಿಡಿದು ಇಷ್ಟು ದೊಡ್ಡವನಾದರೂ ಇನ್ನೂ ಸಹ ಆ ಹುಡುಗಿಯನ್ನು ಮರೆತಿರಲಿಲ್ಲ

ಒಂದು ಸಾರಿ ಹೀಗೆ ಒಂದು ಪ್ರವಾಸ ಕೈಗೊಂಡಾಗ 20 ವರ್ಷಗಳ ನಂತರ ತಾನು ಚಿಕ್ಕ ವಯಸ್ಸಿನಲ್ಲಿ ಓದಿರುವ ಶಾಲೆಗೆ ಭೇಟಿ ಕೊಡುತ್ತಾನೆ, ಆಗ ಸ್ನೇಹಿತರನ್ನು ನೆನಪಿಸಿಕೊಳ್ಳುತ್ತಾನೆ ದೂರ ಹೋಗಿರುವ ಎಲ್ಲಾ ಸ್ನೇಹಿತರನ್ನು ಒಟ್ಟಾಗಿ ಸೇರಿಸಿ ಮಿತ್ರ ಕೂಟಕ್ಕೆ ಆಮಂತ್ರಿಸುತ್ತಾನೆ. ಸ್ನೇಹಿತರೊಂದಿಗೆ ನಾಯಕ ನಟ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿರುವ ಪ್ರೇಯಸಿಗೂ ಇವನ ಗೆಳೆಯರು ಕರೆದಿರುತ್ತಾರೆ ಹೀಗೆ ಚಿತ್ರ ಕಥೆ ಸಾಗುತ್ತದೆ.ಶಾಲೆಯ ದಿನಗಳಿಂದ ಹಿಡಿದು ಇಷ್ಟು ದೊಡ್ಡವನಾದರೂ ಇನ್ನೂ ಸಹ ಆ ಹುಡುಗಿಯನ್ನು ಮರೆತಿರಲಿಲ್ಲ.

’99’ ಅನ್ನೋ ಶೀರ್ಷಿಕೆ ಇಡುವುದಕ್ಕೂ ಒಂದು ಕಾರಣವಿದೆ

ಕೆಲವೊಬ್ಬರು ಒಬ್ಬ ಹುಡುಗಿಯನ್ನು ಪ್ರೀತಿಸಿ ಸ್ವಲ್ಪ ದಿನಗಳಾದ ನಂತರ ಬೇರೆ ಹುಡುಗಿಯನ್ನು ಮದುವೆ ಆಗಲು ಸಿದ್ದರಾಗಿರುತ್ತಾರೆ ಆದರೇ ಇಲ್ಲಿ ಹಾಗೆ ನಡೆಯೋದಿಲ್ಲ ಅದೇನೇನ್ನುವುದು ನೀವು ಚಿತ್ರಮಂದಿರಗಳಲ್ಲಿಯೇ ನೋಡಬೇಕು. ಸಿನೆಮಾ ವೀಕ್ಷಿಸಿದ ನಂತರ ನಮ್ಮ ನಿಜ ಜೀವನದಲ್ಲಿ ನಡೆದಿರುವ ಪ್ರೇಮ ಕಥೆಗಳ ಮೆಲುಕು ಈ ಚಿತ್ರ ಹಾಕುತ್ತದೆ.ಈ ಚಿತ್ರಕ್ಕೆ ’99’ ಅನ್ನೋ ಶೀರ್ಷಿಕೆ ಇಡುವುದಕ್ಕೂ ಒಂದು ಕಾರಣವಿದೆ, ನಾಯಕ ನಟ ತನ್ನ ಪ್ರೀತಿ ಪಡೆದುಕೊಳ್ಳುವುದಕ್ಕಾಗಿ ಏನೆಲ್ಲಾ ಮಾಡುತ್ತಾನೆ, ಮತ್ತೆ ಭೇಟಿ ಆಗುವದರೊಳಗೆ ನಾಯಕಿಯ ಜೀವನದಲ್ಲಿ ಏನೆಲ್ಲಾ ಆಗಿರುತ್ತದೆ ಎನ್ನುವುದು ನೀವು ಚಿತ್ರದಲ್ಲಿ ನೋಡಬಹುದು.

99 movie

 ಒಂದು ಸಣ್ಣ ಗೊಂದಲದಿಂದಾಗಿ ಏನೇನೋ ಆಗಿ ಬಿಡುತ್ತದೆ

ಆ ಹುಡುಗಿಯೂ ಸಹ ನಾಯಕನ ಪ್ರೀತಿಗೆ ಕರಗಿ ನೀರಾಗಿರುತ್ತಾಳೆ, ಇವಳಿಗೂ ಕೂಡ ತನ್ನ ಪ್ರಿಯಕರನನ್ನು ಬಿಟ್ಟು ಕೊಡಲು ಇಷ್ಟ ಇರುವುದಿಲ್ಲ. ಒಂದು ಸಣ್ಣ ಗೊಂದಲದಿಂದಾಗಿ ಏನೇನೋ ಆಗಿ ಬಿಡುತ್ತದೆ. ಒಟ್ಟಿನಲ್ಲಿ ’99’ ಚಿತ್ರ ಬಹಳ ಜನರಿಗೆ ಇಷ್ಟ ಆಗೇ ಆಗುತ್ತದೆ, ನಾಯಕ ಹಾಗೂ ನಾಯಕಿಯ ಜೊತೆ ನಡೆಯುವ ಕೆಲ ಸಂಭಾಷೆನಗಳ ದೃಶ್ಯಾವಳಿಗಳು ಸ್ವಲ್ಪ ಬೋರ್ ಹೊಡಿಯುತ್ತದೆ ಇದನ್ನು ಹೊರತು ಪಡಿಸಿ ಓವರ್ ಆಲ್ ಸಿನೆಮಾ ಸೂಪರ್ ಆಗಿದೆ.

LEAVE A REPLY

Please enter your comment!
Please enter your name here