ಮಾಯಾನಗರಿಯ ಯಾನಕ್ಕೆ ನೀವು ಏಕೇ ಭೇಟಿ ನೀಡಲೇಬೇಕು?

0
1197
yaana

ಯಾನ ಸೌಂದರ್ಯದ ತಾಣ ಅಂತಾನೆ ಕರೆಯಬಹುದು, ಪ್ರಕೃತಿಯ ಅಂದ-ಚಂದಕ್ಕೆ ಯಾನ ಪ್ರದೇಶವು ಸಾಕ್ಷಿಯಾಗಿದೆ. ಹಸುರಿನ ಸುಗಂಧದ ಕಂಪು ಮನಸ್ಸಿಗೆ ತಂಪು ಕೊಡುತ್ತದೆ. ಸಿರ್ಶಿ ಇಂದಾ ಸ್ವಲ್ಪಾ ದೂರದಲ್ಲಿದೆ, ಪ್ರವಾಸಿಗರ ಮನದಲ್ಲಿ ಸದಾ ಕಾಲ ನೆಲೆಗೊಂಡಿರುವ ಜಾಗ ಅಂತಾನೆ ಹೇಳಬಹುದು. ಇಲ್ಲಿಯ ಸೊಬಗಿನ ರುಚಿಯನ್ನು ಕಂಡವನೆ ಪುಣ್ಯವಂತ. ಕಣ್ಣು ಹಾಯಿಸಿದಲೆಲ್ಲ ಬೆಟ್ಟಗಳು, ಬೆಟ್ಟದ ಸುಂದರವಾದ ನೋಟ ಕಂಡಿತ ನಿಮ್ಮಗೆ ಇಷ್ಟವಾಗುತ್ತದೆ. ಬೇಸಿಗೆ ರಜೆಗಳಲ್ಲಿ ಪ್ರಯಾಣಿಸುವುದು ಉತ್ತಮ, ಚಳಿಗಾಲದಲ್ಲಿ ನಿಮ್ಮಗೆ ಯಾನ ಪ್ರವಾಸ ಸ್ವಲ್ಪ ಕಷ್ಟವಾಗುತ್ತದೆ. ಮಳೆ ಗಾಲದಲ್ಲೂ ಅಷ್ಟೇ ಮಳೆಹನಿಗಳ ಅಬ್ಬರಕ್ಕೆ ನೀವು ತತ್ತರಿಸಿ ಹೋಗುತ್ತಿರಾ ಎಲ್ಲ ಸೀನ್ಸ್ ಗಳನ್ನು ಸಲೀಸಾಗಿ ನೋಡಲು ಆಗುವುದಿಲ್ಲ.

ಟ್ಯಾಕ್ಸಿ ಅಥವಾ ಕಾರ್ ನಲ್ಲಿ ಪ್ರಯಾಣಿಸಿದರೆ ನಿಮ್ಮಗೆ ಅನುಕೂಲವಾಗುತ್ತದೆ

ಟ್ಯಾಕ್ಸಿ ಅಥವಾ ಕಾರ್ ಅಲ್ಲಿ ಪ್ರಯಾಣಿಸಿದರೆ ನಿಮ್ಮಗೆ ಅನುಕೂಲವಾಗುತ್ತದೆ, ಬಸ್ ಅಲ್ಲಿ ಹೋದರೆ ಅಷ್ಟೊಂದು ನಿಮ್ಮಗೆ ವರ್ಕ್ ಔಟ್ ಆಗುವುದಿಲ್ಲ. ಯಾಕೆಂದರೆ ಯಾನದಲ್ಲಿ ನಿಮ್ಮಗೆ ನೋಡುವಂತಹ ಸೈಡ್ ಸೀನ್ಸ್ ಅಪಾರ ಆದ್ದರಿಂದ ಪ್ರತಿ ಒಂದು ಸ್ಥಳ ನೀವು ನೋಡಲು ಹೊರಟರೆ ನಿಮ್ಮ ಜೇಬಿಗೆ ಕತ್ತರಿ ಖಚಿತ. ಸ್ವಂತ ವಾಹನದಲ್ಲಿ ಪ್ರಯಾಣಿಸಿದರೆ ನೀವು ಇಷ್ಟ ಬಂದ ಜಾಗಕ್ಕೆ ಹೋಗಿ ಬರಬಹುದು. ಸ್ವಂತಹ ವಾಹನವಾಗಲಿ, ಬಾಡಿಗೆ ಗಾಡಿಯೇ ಆಗಲಿ ವಾಹನಗಳನ್ನು ಹೊರಾಂಗಣದಲ್ಲಿ ನಿಲ್ಲಿಸೇ ಯಾನ ಪ್ರಯಾಣ ಶುರುಮಾಡಬೇಕು. ಯಾನವನ್ನು ಪ್ರವಾಸಿಗರು ಮಾಯಾದ ನಗರಿ ಎಂದೇ ಹೆಸರಿಟ್ಟಿದ್ದಾರೆ. ಗುಹೆಗಳ ನಡುವಲ್ಲಿ ಸಾಗುವ ಕಾಲ್ನಡಿಗೆಯ ದಾರಿ ಅಕ್ಕ ಪಕ್ಕ ಕಾಡಿನ ವಾತಾವರಣ.

ಭೈರವೇಶ್ವರ ಶಿಖರ ಹಾಗೂ ಮೊಹಿನಿ ಶಿಖರ ಜನಪ್ರಸಿದ್ದಿ ಆಗಿವೆ

ಯಾನದಲ್ಲಿ ನೀವು ಒಂದು ದೊಡ್ಡ ಶಿಖರವನ್ನು ಕಾಣಬಹುದು, ಚೂಪಾಡಂತಹ ಬೆಟ್ಟನೋ ಅಥವಾ ಕಲ್ಲೋ ಗೊತ್ತಿಲ್ಲ ಆದರೆ ಒಂದೇ ಸಮನೆ ಬೃಹದಾಕಾರಕ್ಕೆ ಬೆಳೆದು ನಿಂತಿದೆ. ಅಂದಾಜಿನ ಪ್ರಕಾರ 200 ಅಡಿ ಎತ್ತರದಲ್ಲಿದೆ ಈ ಶಿಖರ. ಇಂತಹ ಒಂದು ವಿಸ್ಮಯವಾದ ಬೆಟ್ಟವನ್ನು ನೋಡಲು ಜನರು ಮುಗಿ ಬೀಳುತ್ತಾರೆ, ಯಾನಾದ ವ್ಯೂ ಪಾಯಿಂಟ್ ಇದಾಗಿದೆ, ನೋಡಲು ಸಹ ತುಂಬಾ ಆಕರ್ಷಿತವಾಗಿದೆ. ಕಪ್ಪು ಬಣ್ಣದ ಕಲ್ಲು ಬಂಡೆ, ಹಸಿರು ಚಿಗುರೆಳೆಗಳು ಬೆಟ್ಟವನ್ನು ಅಲಂಕರಿಸಿದೆ. ಭೈರವೇಶ್ವರ ಶಿಖರ ಹಾಗೂ ಮೊಹಿನಿ ಶಿಖರ ಈ ಎರಡು ಗಿರಿಗಳು ಜನಪ್ರಸಿದ್ದಿ ಆಗಿವೆ. ಭೈರವೇಶ್ವರ ಗಿರಿಯಲ್ಲಿ ನೀವು ಒಂದು ಶಿವಲಿಂಗದ ದರ್ಶನ ಪಡೆಯಬಹುದು, ಈ ಶಿವಲಿಂಗವು ಸ್ವಯಂ ಆಗಿಯೇ ಉಧ್ಭವ ಆಗಿದೆ, ಆದ್ದರಿಂದ ಜನರು ಈ ಲಿಂಗವನ್ನು ಸ್ವಯಂಬು ಎಂದು ಕಾರೆಯುತ್ತಾರೆ.

yaana

ಯಾನದ ಹಿಂದೆ ಇರುವ ಇತಿಹಾಸ

ಜನ ಯಾನದಲ್ಲಿ ಮುಂಚೆ ಜೀವಿಸುತ್ತಿದ್ದರು, ಜನರ ಕ್ರಮ ಸಂಖೆ ಕಡಿಮೆ ಆಗುತ್ತಾ ಹೋಯಿತು. ಬೇರೆ ವರ್ಗದ ಜನರು ಬಂದು ಇಲ್ಲಿ ವಾಸಿಸಲು ಶುರು ಮಾಡಿದರು. ಈಗ ಪೂಜಾರಿಯ ಪರಿವಾರದವರು ದೇವರಿಗೆ ಪೂಜೆಯನ್ನು ಸಲ್ಲಿಸುತ್ತಿದ್ದಾರೆ, ಹಾಗೂ ಜನರೊಂದಿಗೆ ಬೆರೆತು ಅವರ ಪ್ರವಾಸದ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಯಾನ ಹಿಂದೆ ಒಂದು ರೋಚಕವಾದ ಇತಿಹಾಸ ಇದೆ. ಮೂರು ಲೋಕದ ಒಡೆಯ ಶಿವ ಒಮ್ಮೆ ಭಸ್ಮಾಸುರನ ತಪ್ಪಸ್ಸಿನ ಶಕ್ತಿಗೆ ಮೆಚ್ಚಿ ಪ್ರತ್ಯಕ್ಷ ಆಗಿ ಬಿಡುತ್ತಾನೆ. ಆಗ ಶಿವನು ನಿನಗೆ ಏನು ವರ ಬೇಕು ಕೇಳು ಎಂದಾಗ, ಆ ರಾಕ್ಷಸ ನಾನು ಯಾರ ಶಿರದ ಮೇಲೆ ಕೈ ಊರುತ್ತಿನೊ ಅವನು ಕ್ಷಣಾರ್ಧದಲ್ಲೆ ಭಸ್ಮಾವಾಗಿ ಬಿಡಬೇಕು ಅಂತಹದೊಂದು ವರ ನೀನು ನನಗೆ ಕೊಡಬೇಕು ಎಂದು ಬೇಡಿಕೊಳ್ಳುತ್ತಾನೆ. ಶಿವ ಹಿಂದೂ ಮುಂದು ನೋಡದೆ ತಥಾಸ್ತು ಎಂದು ಬಿಡುತ್ತಾನೆ.

ಆ ಅಸುರ ಶಿವ ಕೊಟ್ಟಿರುವ ವರವನ್ನು, ಶಿವನ ಮೇಲೆ ಪ್ರಯೋಗ ಮಾಡಲು ಮುಂದಾಗುತ್ತಾನೆ. ಇಂತಹ ಒಂದು ಸಂದರ್ಭದಲ್ಲಿ ಕೃಷ್ಣ ಮೊಹಿನಿ ವೇಷ ಧರಿಸಿ ಭಸ್ಮಾಸೂರನ ಬಳಿ ಹೋಗುತ್ತಾನೆ. ಭಸ್ಮಾಸುರ ಮೊಹಿನಿ ಅಂದಕ್ಕೆ ವಶನಾಗಿ ಅವಳನ್ನು ಪಡೆದುಕೊಳ್ಳಬೇಕೆಂಬ ಹುಚ್ಚು ಆಸೆಗೆ ಬಲಿಯಾಗುತ್ತಾನೆ. ಮೊಹಿನಿಯನ್ನು ಅನುಕರಣೆ ಮಾಡುತ್ತಾ ಬರುತ್ತಾನೆ, ಮೊಹಿನಿ ರಾಕ್ಷಸನ್ನು ಸಂಹರಿಸಲು ತನ್ನ ಹಸ್ತ ಶಿರದ ಮೇಲೆ ಇಟ್ಟುಕೊಳ್ಳುತ್ತಾಳೆ, ವರದ ಮಹಾತ್ಮೆ ಮರೆತು ಭಸ್ಮಾಸುರ ತನ್ನ ಹಣೆ ಮೇಲೆ ಕೈ ಇಟ್ಟುಕೊಂಡು ಭಸ್ಮಾನಾಗಿ ಬಿಡುತ್ತಾನೆ. ಭಸ್ಮಾಸುರ ಸತ್ತು ಹೋದಾಗ ಅವನ ದೇಹದಿಂದ ಹೊರ ಹೊಮ್ಮಿದ ಭೀಕರವಾದ ಜ್ವಾಲೆ ಇಂದ ಮೊಹಿನಿ ಗಿರಿ ಕಪ್ಪು ಬಣ್ಣಕ್ಕೆ ತಿರುಗಿದೆ ಅಂತಾ ಜನರು ಹೇಳುತ್ತಾರೆ.

ನಮ್ಮೂರ ಮಂದಾರ ಹೂವೆ ಸಿನೆಮಾ ಯಾನ ಪ್ರತಿಷ್ಟಿತೆಗೆ ಕಾರಣವಾಯಿತು

ಈ ನಿಶ್ಚಲ ಪ್ರದೇಶ ಅಷ್ಟೊಂದು ಚಿರಪರಿಚಿತವಾಗಿರಲಿಲ್ಲ. ನಮ್ಮೂರ ಮಂದಾರ ಹೂವೆ ಚಲನಚಿತ್ರದ ಚಿತ್ರೀಕರಣವನ್ನು ಯಾನದಲ್ಲಿ ಮಾಡಲಾಗಿತ್ತು. ಯಾನ ಇನ್ನಷ್ಟು ಪ್ರಸಿದ್ದಿ ಆಗಲು ಈ ಸಿನೆಮಾ ಕಾರಣವಾಯಿತು. ವಿದೇಶದಿಂದಲೂ ಜನರು ಯಾಣ ವೀಕ್ಷಣೆಗಾಗಿ ಬರುತ್ತಾರೆ. ಗುಹೆಗಳು, ಬೆಟ್ಟಗಳು, ವಿಚಿತ್ರ ಆಕಾರದ ಕಲ್ಲು ಬಂಡೆಗಳು ಯಾನದ ಮುಖ್ಯ ಸೆಳೆತ.

yaana

ಒಂದು ಸುಂದರವಾದ ಪ್ರಕೃತಿಯ ಸೊಬಗು ನೀವು ಇಲ್ಲಿ ಸವಿಯಬಹುದು, ನಿಜಕ್ಕೂ ಯಾನ ಒಂದು ವಿಸ್ಮಯವಾದ ಪ್ರವಾಸಿಗರ ಸ್ಥಳ ಆಗಿದೆ. ನಿಮ್ಮ ಮುಂದಿನ ಪ್ರವಾಸ ಯಾನ ಆಗಿದ್ದರೆ ನೀವೇ ಭಾಗ್ಯವಂತರು.

LEAVE A REPLY

Please enter your comment!
Please enter your name here