ಗಾಳಿಬೋರ್ ಗೆ ನೀವು ಯಾಕೆ ಭೇಟಿ ನೀಡಲೇಬೇಕು

0
490

ಜನರು ತಮ್ಮ ದಿನ ನಿತ್ಯದ ಕೆಲಸಗಳಿಂದ ಬೆಸತ್ತು ಹೋಗಿರುತ್ತಾರೆ. ಸ್ವಲ್ಪ ದಿನಗಳ ಕಾಲ ಬ್ರೇಕ್ ಬೇಕಾಗಿರುತ್ತದೆ. ಪ್ರಕೃತಿಯ ಅಂದ-ಚಂದವನ್ನು ನೋಡುತ್ತಿದ್ದರೆ ಮನುಷ್ಯ ಒಂದು ಕ್ಷಣ ಮೈ ಮರೆತು ನೋಡುತ್ತ ನಿಂತು ಬಿಡುತ್ತಾನೆ. ಬೆಂಗಳೂರಿನಲ್ಲಿ ನೋಡುವಂತಹ ಸ್ಥಳಗಳು ಬಹಳ ಇವೆ. ನೀವು ಆರಾಮವಾಗಿ ಕೆಲಸಕ್ಕೆ ರಜೆ ಹಾಕಿ ರಿಲ್ಯಾಕ್ಸ್ ಮಾಡಬಹುದು. ಬೆಂಗಳೂರಿನಿಂದ 110 ಕಿಮೀ ಹಾಗೂ ಸಂಗಮದಿಂದ 10 ಕಿಮೀ ದೂರದಲ್ಲಿ ನೆಲೆಗೊಂಡಿರುವ ಪ್ರದೇಶ ಗಾಳಿಬೋರ್, ಇದು ಪ್ರಕೃತಿಯ ದೃಶ್ಯಾವಳಿಗಳಿಗೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಸುಂದರವಾದ ನೋಟಗಳಿಗೆ ಗಾಳಿಬೋರ್ ಕರ್ನಾಟಕದಲ್ಲಿ ಹೆಸರುವಾಸಿಯ ಪ್ರದೇಶವಾಗಿದೆ.

ಗಾಳಿಬೋರ್ ಒಂದು ಪ್ರಖ್ಯಾತಿ ಮೀನುಗಾರಿಕೆ ಮತ್ತು ಪ್ರಕೃತಿಯ ಕ್ಯಾಂಪ್ ಆಗಿದೆ

ಇದು ಅರ್ಕಾವತಿ ಮತ್ತು ಕಾವೇರಿ ನದಿಯ ಸಂಗಮದ ತಾಣವಾಗಿದೆ. ಕಾವೇರಿ ಅಭಯಾರಣ್ಯದ, ವನ್ಯ ಜೀವಿಗಳ ಹಾಗೂ ಕಾಡು ಮೃಗಗಳ ಪ್ರದೇಶ ಇದಾಗಿದೆ. ಕಾವೇರಿ ದಡದಲ್ಲಿರುವ ಗಾಳಿಬೋರ್ ಒಂದು ಪ್ರಖ್ಯಾತಿ ಮೀನುಗಾರಿಕೆ ಮತ್ತು ಪ್ರಕೃತಿಯ ಕ್ಯಾಂಪ್ ಆಗಿದೆ. ಸುತ್ತಲು ಉತ್ತಮ ಗುಣಮಟ್ಟದ ಗಿಡಗಳು ಆವರಿಸುವದರಿಂದ, ಬಿಸಿಲಿನ ಬೇಗೆಯಲ್ಲಿ ಜನರಿಗೆ ತಂಪಾದ ವಾತಾವರಣ ನಿರ್ಮಾಣವಾಗಿದೆ. ಈ ಕ್ಯಾಂಪ್ ಹಿಂದೆ ಗಾಳಿಬೋರ್ ಎನ್ನುವ ಒಂದು ಬೆಟ್ಟ ಇದೆ. ಆದ್ದರಿಂದ ಈ ಬೆಟ್ಟದ ಹೆಸರೇ, ಪ್ರದೇಶಕ್ಕೆ ನಾಮಕರಣ ಮಾಡಿದ್ದಾರೆ. ಗಾಳಿ ಬೋರ್ ಕ್ಯಾಂಪ್ ಗಿಡಗಳ ಗುಂಪಿನಿಂದ ಮತ್ತು ಕಾವೇರಿಯ ಮೌನವಾದ ನೋಟದಿಂದ ಕೂಡಿದೆ ಅಂತ ಹೇಳಬಹುದು.

ಪ್ರವಾಸಿಗರು ಸಹ ಇಲ್ಲಿ ಫಿಶ್ ಅನ್ನು ಹಿಡಿಯಬಹುದು

ಇನ್ನು ಭೀಮೇಶ್ವರಿಯಲ್ಲಿರುವ ಗಾಳಿ ಬೋರ್ ಮೀನುಗಾರಿಕೆಗೆ ಕೇಂದ್ರ ಬಿಂದುವಾಗಿದೆ. ಮೀನು ಹಿಡಿಯಬೇಕೆಂದು ಬಯಸುವವರು ತಪ್ಪದೆ ಇಲ್ಲಿಗೆ ಭೇಟಿ ನೀಡಲೇಬೇಕು. ಗಾಳ ಹಾಕಿ ಮೀನು ಹಿಡಿಯುವವರಿಗೆ ಇದು ಹೇಳಿ ಮಾಡಿಸಿದ ಜಾಗವಾಗಿದೆ. ಮೀನನ್ನು ಬಲೆಗೆ ಹಾಕುವ ತಜ್ಞ್ಯರು ಇಲ್ಲಿ ಹೆಚ್ಚಾಗಿ ಭೇಟಿ ನೀಡುತ್ತಾರೆ. ಪ್ರವಾಸಿಗರು ಸಹ ಇಲ್ಲಿ ಫಿಶ್ ಅನ್ನು ಹಿಡಿಯಬಹುದು. ಆದರೆ ಹಿಡಿದ ತಕ್ಷಣ ಮತ್ತೆ ನೀರಿಗೆ ಬಿಡಬೇಕು ಇದು ಇಲ್ಲಿಯ ಫಿಷಿಂಗ್ ನಿಯಮವಾಗಿದೆ, ಪ್ರವಾಸಿಗರು ಇದನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಮೀನನ್ನು ಹಿಡಿಯುವ ಕ್ಷಣಗಳನ್ನು ನೀವು ಕ್ಯಾಮರಾದಲ್ಲಿ ಸೆರೆಹಿಡಿಯಬಹುದು. ಮೀನು ಹಿಡಿಯುವ ವೃತ್ತಿ ಮಾಡುವವರು ಕಾವೇರಿ ನದಿಯಲ್ಲಿ ಸಿಗುವ ಮಶೇರ್ ಜಾತಿಯ ಮೀನುಗಳನ್ನು ಹಿಡಿಯಲು ಇಚ್ಚಿಸುತ್ತಾರೆ. ಕರ್ಪ್, ಮಾರ್ಜಾಲ, ಜಾತಿಯ ಮೀನು ಸೇರಿದಂತೆ ಇನ್ನೂ ಸಣ್ಣ ಸಣ್ಣ ಮೀನುಗಳನ್ನು ಹಿಡಿಯುತ್ತಾರೆ.

ಚಿತ್ರ ವಿಚಿತ್ರವಾದ ಪಕ್ಷಿಗಳನ್ನು ನೀವು ಇಲ್ಲಿ ನೋಡಬಹುದಾಗಿದೆ

ಗಾಳಿಬೋರ್ ನಲ್ಲಿ ಕೇವಲ ಮೀನುಗಾರಿಕೆ ಮಾತ್ರವಲ್ಲ. ಪ್ರವಾಸಿಗರು ವನ್ಯ ಜೀವಿಗಳನ್ನು ಸಹ ಇಲ್ಲಿ ವೀಕ್ಷಿಸಬಹುದು. ಚಿತ್ರ ವಿಚಿತ್ರವಾದ ಪಕ್ಷಿಗಳನ್ನು ನೀವು ಇಲ್ಲಿ ನೋಡಬಹುದಾಗಿದೆ. ಇಲ್ಲಿ ನೀರು ಕಾಗೆ, ಸ್ಪಾಟ್ ಕೊಕ್ಕೆ ಇರುವ ಬಾತುಕೋಳಿಗಳು, ಚಿಕ್ ಪೈಡ್ ಮಿಂಚುಳ್ಳಿಗಳು, ಕಂದು ಹಳದಿಯ ಹದ್ದುಗಳು, ಪೈಡ್ ಜುಟ್ಟುಳ್ಳ ಕೋಗಿಲೆಗಳು, ಕಪ್ಪು ನಾರಿ ಟೆರ್ನ್, ಆಸ್ಟ್ರೇಸ್, ಮೀನನ್ನು ಭೇಟೆ ಆಡುವ ಹದ್ದುಗಳು. ಹೀಗೆ 220 ಜಾತಿಯ ಪಕ್ಷಿಗಳು ಇಲ್ಲಿ ನೆಲೆಕಂಡುಕೊಂಡಿವೆ ಎಂದು ತಿಳಿದುಬಂದಿದೆ.

ಕಾವೇರಿ ನದಿಯಲ್ಲಿ ಬೊಟಿಂಗ್ ಮಾಡಬಹುದಾಗಿದೆ

ಇಲ್ಲಿ ಪ್ರಾಣಿಗಳು ಸಹ ನಿಮ್ಮ ಕಣ್ಣಿಗೆ ಬೀಳುತ್ತವೆ. ಚುಕ್ಕೆ ಜಿಂಕೆ, ಆನೆ, ಚಿರತೆಗಳು, ಸಿಂಹ, ದೈತ್ಯ ಅಳಿಲುಗಳು, ನರಿಗಳು ಮತ್ತು ಸಾಂಬಾರ್ ಗಳು. ಭಯ ಬೀಳಿಸುವ ಹಾಗು ವಿಷ ಸರ್ಪಗಳು ಇಲ್ಲಿ ಇವೆ. ಹೆಬ್ಬಾವು, ಕಿಂಗ್ ಕೋಬ್ರಾಸ್, ರಸೆಲ್ ವೈಪರ್. ಮೊಸಳೆಗಳು, ಆಮೆಗಳು, ಗೋಸುಂಬೆಗಳು ಮತ್ತು ಆಮೆಗಳು ನಿಮ್ಮ ಕಣ್ಣಿಗೆ ಬೀಳುತ್ತವೆ. ಗಾಳಿ ಬೋರ್ ನಲ್ಲಿ ನೀವು ಕಾವೇರಿ ನದಿಯಲ್ಲಿ ಬೊಟಿಂಗ್ ಮಾಡಬಹುದಾಗಿದೆ. ಕಾಲ್ನಡಿಗೆಯಲ್ಲಿ ಸಹ ನೀವು ಕಾಡಿನಲ್ಲಿ ಹೋಗಬಹುದು. ಪ್ರವಾಸಿಗರಿಗೆ ಕಾಲ್ದಾರಿಗಳು ನೈಸರ್ಗಿಕ ಸ್ಥಳಗಳ ಬಗ್ಗೆ ಮಾರ್ಗದರ್ಶನ ನೀಡುತ್ತವೆ. ಪಕ್ಷಿ ಪ್ರಿಯರು ಇಲ್ಲಿ ಜೂನ್ ಹಾಗು ಆಗಸ್ಟ್ ತಿಂಗಳಿನಲ್ಲಿ ಬಂದರೆ ಉತ್ತಮ ವಿವಿಧ ಜಾತಿಯ ಪಕ್ಷಿಗಳು ಈ ಸಮಯದಲ್ಲಿ ಇಲ್ಲಿಗೆ ಆಗಮನಿಸಿರುತ್ತವೆ.

deer

ಗಾಳಿಬೋರ್ ಗೆ ನೀವು ಹೇಗೆ ತಲುಪಬಹುದು

ಬೆಂಗಳೂರಿನಿಂದ ಕನಕಪುರ ಸಂಗಮ ರಸ್ತೆಯ ಮೂಲಕ ಬಂದರೆ ಕೇವಲ ಎರಡು ಗಂಟೆಗಳ ಪ್ರಯಾಣ ಮಾಡಿದರೆ ಸಾಕು ನೀವು ಗಾಳಿ ಬೋರ್ ಗೆ ಬಂದು ತಲುಪುತ್ತಿರಿ. ಬೆಂಗಳೂರಿನಿಂದ 100 ಕಿಮೀ ಚಲಿಸಿದರೆ, ಕನಕಪುರದಲ್ಲಿ ಇರುವ ಒಂದು ಸೈನ್ ಬೋರ್ಡ್ ಎಡಕ್ಕೆ ಹಳ್ಳಿಯ ಕಡೆ ತಿರುಗಿಸುವುದಾಗಿ ಮಾರ್ಗದರ್ಶನ ನೀಡುತ್ತದೆ. ಇದು ನಿಮ್ಮನ್ನು ಅರ್ಕಾವತಿ ಮತ್ತು ಕಾವೇರಿ ಎನ್ನುವ ಎರಡು ನದಿಗಳ ಸಂಗಮಕ್ಕೆ ಕರೆದುಕೊಂಡು ಬರುತ್ತದೆ. ಇಲ್ಲಿ ನಿಮ್ಮ ಕಣ್ಣಿಗೆ ಮತ್ತೊಂದು ಸೈನ್ ಬೋರ್ಡ್ ಕಾಣುತ್ತದೆ ಇದನ್ನು ನೀವು ಅನುಸರಿಸಿ ಹೋದಾಗ ಶಿಬಿರಕ್ಕೆ, ಕಾಡು ಪ್ರದೇಶದ ಮೂಲಕ ಹತ್ತು ಕಿಮೀ ಕಾಡಿನ ಪ್ರದೇಶದಲ್ಲಿ ಬಂದರೆ ಸಾಕು ಗಾಳಿ ಬೋರ್ ಗೆ ಬರುತ್ತೀರಿ.

LEAVE A REPLY

Please enter your comment!
Please enter your name here