ಇನ್ಫೋಸಿಸ್ ದಂಪತಿಗಳ ಸಿನಿಮಾಗೆ ಸಿಕ್ತು ಶೀರ್ಷಿಕೆ. ಸುಧಾಮೂರ್ತಿಯಾಗಿ ಕಾಣಿಸಿಕೊಳ್ಳುತ್ತಾರಾ ಈ ನಟಿ?

0
336

ಸಿನಿಮಾಗಳಲ್ಲಿ ಹಲವಾರು ವಿಧಗಳಿದ್ದು, ಕೆಲವರು ಹಾಸ್ಯಮಯವಾದ ಚಿತ್ರಗಳನ್ನು ನಿರ್ದೇಶಿಸಿದರೆ ಇನ್ನು ಕೆಲವರು ಲವ್ ಸ್ಟೋರಿ, ಹಾರರ್, ರೌಡಿಸಂ ಆಧಾರಿತವಾದ ಚಿತ್ರಗಳನ್ನು ನಿರ್ದೇಶಿಸುತ್ತಾರೆ. ನಿಜ ಜೀವನದಲ್ಲಿ ನಡೆದ ಕೆಲವು ಅಂಶಗಳನ್ನು ಇಟ್ಟುಕೊಂಡು ನಿರ್ದೇಶಕರು ಚಿತ್ರವನ್ನು ಮಾಡಲು ಮುಂದಾಗುತ್ತಾರೆ. ಇತ್ತೀಚಿಗಷ್ಟೆ ಹೃತಿಕ್ ರೋಷನ್ ಅಭಿನಯದ ಸೂಪರ್ 30 ಚಿತ್ರ ಬಿಡುಗಡೆಯಾಗಿದ್ದು, ಇದು ಸಹ ನಿಜ ಜೀವನದಲ್ಲಿ ನಡೆದ ಕಥೆಯಾಗಿತ್ತು. ಚಿತ್ರ ಹಿಟ್ ಕೂಡ ಆಗಿತ್ತು. ಸಾಧಕರ ಜೀವನವನ್ನು ತೆರೆ ಮೇಲೆ ನೋಡುವುದೆ ಒಂದು ಖುಷಿ. ಕನ್ನಡಿಗರಿಗು ಸಹ ಕರುನಾಡ ಸಾಧಕರ ಜೀವನದಲ್ಲಿ ನಡೆದ ಘಟನೆಗಳು ಸಿನಿಮವಾಗಿ ಮೂಡಿ ಬರಬೇಕೆನ್ನುವುದು ಕನ್ನಡಿಗರ ಆಸೆಯಾಗಿತ್ತು. ಕನ್ನಡಿಗರ ಆಸೆ ನೆರವೇರಿದೆ ಆ ಕಾಲ ಈಗ ಕೂಡಿ ಬಂದಿದೆ.

ಇನ್ಫೋಸಿಸ್ ದಂಪತಿಗಳ ಕಥೆ ತೆರೆ ಮೇಲೆ

ಇಬ್ಬರ ಸಾಧಕರ ಜೀವನದಲ್ಲಿ ನಡೆದ ಕಥೆಯನ್ನು ನಾವು ಸಿನಿಮಾದಲ್ಲಿ ನೋಡಬಹುದಾಗಿದೆ. ನೈಜ್ಯ ಘಟನೆಗಳ ಆಧಾರಿತವಾದ ಚಿತ್ರಗಳು ಹೆಚ್ಚು ಜನಪ್ರಿಯತೆಗಳಿಸುವುದರ ಜೊತೆಗೆ ಹಿಟ್ ಕೂಡ ಆಗುತ್ತದೆ. ವಿಶ್ವಾದ್ಯಂತ ತಮ್ಮ ಸಮಾಜ ಸೇವೆ ಹಾಗು ಇನ್ಫೋಸಿಸ್ ಎನ್ನುವ ಬ್ರಾಂಡ್ ಮೂಲಕ ದಂಪತಿಗಳು ಗುರುತಿಸಿಕೊಂಡಿದ್ದರು. ಹಿಂದಿ ಭಾಷೆಯಲ್ಲಿ ಚಿತ್ರ ತಯಾರಾಗಲಿದ್ದು, ಈ ಸಿನಿಮಾದಿಂದ ಜನರು ಪ್ರೇರಿತವಾಗುವುದಂತು ನಿಶ್ಚಿತ. ಕನ್ನಡಿಗರಿಗೆ ಇದು ಹೆಮ್ಮೆ ಪಡುವ ವಿಷಯವಾಗಿದೆ. ಅಶ್ವಿನ್ ತಿವಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸುಧಾಮೂರ್ತಿ ಹಾಗು ನಾರಾಯಣ್ ಮೂರ್ತಿ ನಡುವೆ ನಡೆಯುವ ಪ್ರೇಮ ಕಥೆಯನ್ನು ಕಥಾವಸ್ತುವಾಗಿಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದಾರೆ. ಸುಧಾಮೂರ್ತಿ ಅವರ ಪಾತ್ರವನ್ನು ಮಾಡುತ್ತಿರೋ ಆ ಬಾಲಿವುಡ್ ನಟಿ ಯಾರು? ಮುಂದೆ ಓದಿ

ಸುಧಾಮೂರ್ತಿಯಾಗಿ ಆಲಿಯಾ ಭಟ್?

ಇನ್ಫೋಸಿಸ್ ದಂಪತಿಗಳ ನಿಜ ಜೀವನದ ಕಥೆ ಸಿನಿಮಾವಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಸುಧಾಮೂರ್ತಿ ಅವರ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ಸುದ್ದಿ ಹೊರಗಡೆ ಬಿದ್ದಿದೆ. ಹೌದು ಬಾಲಿವುಡ್ ನಲ್ಲಿ ತಮ್ಮ ಅಭಿನಯಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಪಡೆದ ಮುದ್ದು ಮುಖದ ಚೆಲುವೆ ಆಲಿಯಾ ಭಟ್ ಸುಧಾಮೂರ್ತಿ ಅವರ ಪಾತ್ರವನ್ನು ಮಾಡುತ್ತಿದ್ದು, ಇನ್ನು ಆಲಿಯಾ ಭಟ್ ಅವರಿಂದ ಯಾವುದೆ ಪ್ರತಿಕ್ರಿಯೆ ಬಂದಿಲ್ಲ. ಇನ್ನು ಈ ಚಿತ್ರಕ್ಕೆ ಮೂರ್ತಿ ಎನ್ನುವ ಶೀರ್ಷಿಕೆ ನಿಗಧಿಯಾಗಿದೆ. ಇನ್ನು ಇವರ ಆಯ್ಕೆಯ ವಿಚಾರದಲ್ಲಿ ಮಿಶ್ರಣವಾದ ಅಭಿಪ್ರಾಯವು ಕೇಳಿ ಬರುತ್ತಿದೆ.

ಸಮಾಜ ಸೇವೆಯಲ್ಲು ದಂಪತಿಗಳು ತೊಡಗಿಸಿಕೊಂಡಿದ್ದಾರೆ

ಸುಧಾಮೂರ್ತಿ ಮತ್ತು ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ್ ಮೂರ್ತಿ ಅವರ ಕಥೆಯನ್ನು ನೀವು ವೀಕ್ ಎಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ನೋಡಿರಬಹುದು ಮತ್ತು ಅವರ ಬಗ್ಗೆ ಕೇಳಿರಬಹುದು. ಇನ್ಫೋಸಿಸ್ ಸಂಸ್ಥೆಯ ಸ್ಥಾಪನೆಯ ಹಿಂದೆ ಇರುವ ಬೆವರಿನ ಹನಿ ಮತ್ತು ದಂಪತಿಗಳು ಮಾಡಿದ ತ್ಯಾಗ, ಕಠಿಣ ಪರಿಶ್ರಮದಿಂದಲೆ ಇಂದು ಇನ್ಫೋಸಿಸ್ ಕಂಪನಿ ಉನ್ನತ ಸ್ಥಾನವನ್ನು ತಲುಪಿ, ಕೋಟ್ಯಂತರ ಜನರಿಗೆ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿ ಕೊಟ್ಟಿದೆ.

ಕೇವಲ ಸಂಸ್ಥೆಯನ್ನು ಬೆಳಸುವುದಲ್ಲದೆ, ಸಮಾಜ ಸೇವೆಯಲ್ಲು ದಂಪತಿಗಳು ತೊಡಗಿಸಿಕೊಂಡಿದ್ದಾರೆ. ಸಮಾಜ ಸೇವೆಯ ಸಂಪೂರ್ಣ ಜವಾಬ್ದಾರಿಯನ್ನು ಸುಧಾಮೂರ್ತಿ ಅವರು ವಹಿಸಿಕೊಳ್ಳುತ್ತಾರೆ. ಇತ್ತೀಚಿಗಷ್ಟೆ ಪ್ರವಾಹದಿಂದ ಬಳಲುತ್ತಿದ್ದ ಜನರಿಗೆ ಸುಧಾಮೂರ್ತಿಯವರು ಧನಸಹಾಯವನ್ನು ಮಾಡಿದ್ದರು.

LEAVE A REPLY

Please enter your comment!
Please enter your name here