ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ವೀರೇಂದ್ರ ಹೆಗ್ಗಡೆ ಅವರೇ ಮೊದಲ ಅತಿಥಿ. ಹಾಗಾದ್ರೆ ಇನ್ನುಳಿದ ಲಿಸ್ಟ್ ನಲ್ಲಿ ಯಾರ್ಯಾರ ಹೆಸರಿದೆ?

0
12999
weekend with ramesh

ನಮ್ಮ ಕಿರುತೆರೆಯಲ್ಲಿ ಸಾಕಷ್ಟು ಮನೋರಂಜನೆಯ ಕಾರ್ಯಕ್ರಮಗಳಿವೆ. ಶನಿವಾರ, ಭಾನುವಾರ ಬಂದ್ರೆ ಸಾಕು ಟಿವಿ ರಿಮೋಟ್ ಪಕ್ಕಕ್ಕಿಟ್ಟು ಬರೀ ಆ ಕಾರ್ಯಕ್ರಮ, ಈ ಕಾರ್ಯಕ್ರಮ ಅಂತ ನೋಡೋದೇ ಆಗುತ್ತೆ. ಮಾತು ಕಥೆ, ಸಂಗೀತ, ಕಾಮಿಡಿ ಈ ರೀತಿಯ ಕಾರ್ಯಕ್ರಮಗಳು ನಮ್ಮ ಕಿರುತೆರೆಯಲ್ಲಿ ಪ್ರಸಾರವಾಗ್ತಿರೋದ್ರಿಂದ ಜನರಿಗೆ ಮನರಂಜನೆ ಕೊರತೆ ಇಲ್ಲದಂತಾಗಿದೆ.

ಜೀ ಕನ್ನಡದಲ್ಲಿ ಪ್ರಸಾರವಾಗೋ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮವಂತೂ, ನಿಜಕ್ಕೂ ಸಾಮಾನ್ಯರನ್ನ ತನ್ನತ್ತ ಸೆಳೆದಿದೆ. ವಾರದ ಕೊನೆಯಲ್ಲಿ ಪ್ರತಿಯೊಬ್ಬರೂ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮವನ್ನ ನೋಡುತ್ತಾ ಕೂರ್ತಿದ್ರು. ಯಾಕಂದ್ರೆ ಸಾಧನೆ ಮಾಡಿದಂತಹ ಗಣ್ಯರನ್ನ ಈ ಕಾರ್ಯಕ್ರಮದಲ್ಲಿ ಕರೆಸಿ ಅವರು ಬೆಳೆದು ಬಂದ ಹಾದಿಯನ್ನ ತಿಳಿಸ್ತಿದ್ರು. ಹಾಗಾಗಿ ಎಲ್ಲರಿಗೂ ಇದು ನೆಚ್ಚಿನ ಕಾರ್ಯಕ್ರಮವಾಗಿತ್ತು.

ವೀಕೆಂಡ್ ವಿಥ್ ರಮೇಶ್ ಮೊದಲ ಅತಿಥಿ

ಈಗಾಗಲೇ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ 3 ಆವೃತ್ತಿಗಳು ಮುಗಿದಿವೆ. ಅದರಲ್ಲಿ ಅನೇಕ ಗಣ್ಯರು, ಹಾಗೂ ಕಲಾವಿದರು ಬಂದಿದ್ದಾರೆ. ಆದ್ರೆ ಜನರಿಗೆ ಆ ಚೇರ್ ಮೇಲೆ ಒಬ್ಬರು ಮುಖ್ಯವಾದ ವ್ಯಕ್ತಿಯನ್ನ ನೋಡಬೇಕಿತ್ತು. ಹಾಗಾಗಿ ಅದರ ವಿಚಾರವಾಗಿ ಜನರು ಎಷ್ಟೋ ಸಲ ಕಾರ್ಯಕ್ರಮದಲ್ಲಿ ತಿಳಿಸಿದ್ದರು. ಅದಕ್ಕೋಸ್ಕರ ರಮೇಶ್ ಅವರು ಆ ವ್ಯಕ್ತಿಯನ್ನ ಹಲವು ಬಾರಿ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿದ್ದರು. ಆದರೆ ಅವರಿಗೆ ಕೆಲಸದ ನಿಮಿತ್ತ ಬಿಡುವು ಸಿಗೋದು ತುಂಬ ಕಷ್ಟವಾಗಿತ್ತು. ಯಾಕಂದ್ರೆ ಮುಖ್ಯವಾದ ಅನೇಕ ಜವಾಬ್ದಾರಿಗಳನ್ನ ಅವರು ಹೊತ್ತಿದ್ದಾರೆ. ಹಾಗಾಗಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರೋದು ಅವರಿಗೆ ಕಷ್ಟ ಆಗಿತ್ತು. ಆದ್ರೆ ಈಗ ರಮೇಶ್ ಅವರ ಮಾತಿಗೆ ಹಾಗೂ ಜನರ ಮಾತಿಗೆ ಬೆಲೆ ಕೊಟ್ಟು, ಕಾರ್ಯಕ್ರಮಕ್ಕೆ ಬರಲು ಒಪ್ಪಿಗೆ ನೀಡಿದ್ದಾರೆ.

 

ವೀರೇಂದ್ರ ಹೆಗ್ಗಡೆ ಅವರೇ ಮೊದಲ ಅತಿಥಿ

ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ನಾಲ್ಕನೇ ಆವೃತ್ತಿಯ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಬರಲಿದ್ದಾರಂತೆ. ಹೌದು. ಈ ಕಾರ್ಯಕ್ರಮಕ್ಕೆ ವೀರೇಂದ್ರ ಹೆಗ್ಗಡೆ ಅವರು ಬರಬೇಕು ಅನ್ನೋದು ಹಲವರ ಆಸೆಯಾಗಿತ್ತು. ಹಾಗಾಗಿ ಜೀ ವಾಹಿನಿ ಅವರನ್ನ ಕಾರ್ಯಕ್ರಮಕ್ಕೆ ಬರುವಂತೆ ಒಪ್ಪಿಸಿದೆ. ಅವರು ಸಹ ಕಾರ್ಯಕ್ರಮಕ್ಕೆ ಬರುತ್ತೇನೆ ಎಂದು ತಿಳಿಸಿದ್ದಾರಂತೆ. ಈಗಾಗಲೇ ವೀರೇಂದ್ರ ಹೆಗ್ಗಡೆ ಅವರ ಸಂಚಿಕೆ ಶೂಟಿಂಗ್ ಮುಗಿದಿದ್ದು, ಪ್ರಸಾರಕ್ಕೆ ಸಜ್ಜಾಗಿದೆ ಎಂದು ವೀಕೆಂಡ್ ವಿಥ್ ರಮೇಶ್ ಶೋ ನ ಕೆಲವು ಮೂಲಗಳು ತಿಳಿಸಿವೆ.

ಇತ್ತೀಚಿಗೆ ಪ್ರಶಸ್ತಿ ನೀಡಿದ ಜೀ ವಾಹಿನಿ

ಜೀ ಕನ್ನಡದಲ್ಲಿ ಆಗಾಗ ಕೆಲವೊಂದು ಪ್ರಶಸ್ತಿ ಸಮಾರಂಭಗಳನ್ನ ಮಾಡ್ತಿರ್ತಾರೆ. ಆ ಕಾರ್ಯಕ್ರಮದಲ್ಲಿ ಇತ್ತೀಚಿಗಷ್ಟೇ ಲೋಕೋಪಕಾರಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಈ ವರ್ಷದ ಹೆಮ್ಮೆಯ ಜೀವಮಾನ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆಗಲೇ ಅವರನ್ನ ಕರೆಸೋದಾಗಿ ಮಾತುಕತೆ ನಡೆಸಿದ್ರು. ಆಗಲೇ ವೀರೇಂದ್ರ ಹೆಗ್ಗಡೆ ಅವರು ಕಾರ್ಯಕ್ರಮಕ್ಕೆ ಬರೋದಾಗಿ ಒಪ್ಪಿಕೊಂಡಿದ್ದರಂತೆ. ಹಾಗಾಗಿ ಈಗ ಅವರು ಬಂದೆ ಬರುತ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಇನ್ನೂ ಮುಖ್ಯವಾದವರ ಆಗಮನ

ಕಳೆದ ಎಪಿಸೋಡ್ ನಲ್ಲಿ ಜನರು ರಮೇಶ್ ಅವರಿಗೆ ಒಂದು ದೊಡ್ಡ ಲಿಸ್ಟ್ ಕೊಟ್ಟಿದ್ದರು. ಅಂದ್ರೆ ಇಂಥ ಗಣ್ಯ ವ್ಯಕ್ತಿಗಳನ್ನ ಕಾರ್ಯಕ್ರಮಕ್ಕೆ ಕರೆಸಬೇಕು ಅಂತ. ಅದರಲ್ಲಿ ವೀರೇಂದ್ರ ಹೆಗ್ಗಡೆ ಅವರ ಹೆಸರು ಮೊದಲಿತ್ತು. ಹಾಗಾಗಿ ಅವರನ್ನ ಮೊದಲ ಅತಿಥಿಯಾಗಿ ಕರೆಸುತ್ತಿದ್ದಾರೆ. ಇನ್ನೂ ನಂತರ ಅತಿಥಿಗಳೆಂದರೆ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸಾಲು ಮರದ ತಿಮ್ಮಕ್ಕ, ಮಾಲಾಶ್ರೀ, ಇನ್ಫೋಸಿಸ್ ನಾರಾಯಣ ಮೂರ್ತಿ, ಸೇರಿದಂತೆ ಇನ್ನೂ ಅನೇಕ ಗಣ್ಯರನ್ನ ಕರೆಸೋ ನಿರೀಕ್ಷೆಯಲ್ಲಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಅವರೆಲ್ಲ ಬರುತ್ತಾರೆ ಅನ್ನೋದು ಜನರ ನಂಬಿಕೆ. ಜನರ ಆಸೆಯಂತೆ ರಮೇಶ್, ವೀರೇಂದ್ರ ಹೆಗ್ಗಡೆ ಅವರನ್ನ ಕರೆಸುತ್ತಿದ್ದಾರೆ. ಅದರಂತೆ, ಇವರನ್ನು ಕರೆಸುತ್ತಾರೆ ಅನ್ನೋದು ಜನರ ನಂಬಿಕೆಯಾಗಿದೆ. ಜೊತೆಗೆ ಜನರ ಆಸೆಯೂ ಕೂಡ ಹೌದು.

ಯಾವಾಗ ಆರಂಭ?

ಸದ್ಯಕ್ಕೆ ವೀಕೆಂಡ್ ವಿಥ್ ರಮೇಶ್ ನಾಲ್ಕನೇ ಆವೃತ್ತಿಯ ಎಲ್ಲಾ ತಯಾರಿ ನಡೆಯುತ್ತಿದೆ. ಎಪಿಸೋಡ್ ಗಳ ಶೂಟಿಂಗ್ ಕೂಡ ನಡೆಯುತ್ತಿದೆಯಂತೆ. ಆದ್ರೆ ಪ್ರಸಾರದ ದಿನಾಂಕ ಮತ್ತು ಸಮಯವನ್ನ ಮಾತ್ರ ಸದ್ಯಕ್ಕಿನ್ನೂ ಪ್ರಕಟಿಸಿಲ್ಲ. ಆದ್ರೆ ಆದಷ್ಟು ಬೇಗ ತೆರೆ ಮೇಲೆ ಬರುತ್ತಿವಿ ಅಂತ ಪ್ರೊಮೊ ಮಾತ್ರ ರಿಲೀಸ್ ಮಾಡಿದ್ದಾರೆ.

ನಿಜಕ್ಕೂ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ಬಹಳ ಅದ್ಭುತವಾಗಿದೆ. ಯಾಕಂದ್ರೆ ಎಷ್ಟೋ ಜನ ಗಣ್ಯ ವ್ಯಕ್ತಿಗಳ ಬಗ್ಗೆ, ಹಾಗೆ ನಮ್ಮ ನೆಚ್ಚಿನ ವ್ಯಕ್ತಿಗಳ ಜೀವನದ ಬಗ್ಗೆ ನಮಗೆ ಗೊತ್ತಿರಲ್ಲ. ಆದ್ರೆ ಈ ಕಾರ್ಯಕ್ರಮದಲ್ಲಿ ಅದನ್ನೆಲ್ಲಾ ತಿಳಿಸಿಕೊಡುತ್ತಿದ್ದಾರೆ. ಜೊತೆಗೆ ಎಷ್ಟೋ ಜನ ಗಣ್ಯರಿಗೆ ತಾವು ನಡೆದು ಬಂದ ಹಾದಿಯ ಬಗ್ಗೆ ಹೇಳಿಕೊಳ್ಳೋಕೆ ಒಂದು ವೇದಿಕೆ ಸಿಕ್ಕಿರಲ್ಲ. ಅಂತವರಿಗೆ ಇದು ತುಂಬ ಒಳ್ಳೆಯ ವೇದಿಕೆಯಾಗಿದೆ. ಆದರೆ ಜನರ ನಿರೀಕ್ಷೆಯಲ್ಲಿರುವ ಅತಿಥಿಗಳನ್ನ ಕರೆಸಿದರೆ, ಜನರಿಗೆ ಕಾರ್ಯಕ್ರಮ ಇನ್ನೂ ಇಷ್ಟ ಆಗುತ್ತದೆ ಅನ್ನೋದಕ್ಕೆ ಯಾವ ಅನುಮಾನವಿಲ್ಲ.

LEAVE A REPLY

Please enter your comment!
Please enter your name here