ಅಭಿಮಾನಿಗಳ ಆಸೆಯಂತೆ ಮಹಾನ್ ಸಾಧಕರೇ ಬರುತ್ತಿದ್ದಾರೆ ಈ ವಾರದ ವೀಕೆಂಡ್ ಟೆಂಟ್ ಗೆ

0
3374

ನಮ್ಮ ಜನರಿಗೆ ಸಾಮಾನ್ಯವಾಗಿ ವಿಶೇಷ ಕಾರ್ಯಕ್ರಮಗಳು ಅಂದ್ರೆ ತುಂಬಾ ಇಷ್ಟ. ಅದರಲ್ಲೂ ಇತ್ತೀಚಿಗೆ ಬರುತ್ತಿರುವ ಕಿರುತೆರೆ ಕಾರ್ಯಕ್ರಮಗಳನ್ನಂತೂ ಜನರು, ತುಂಬಾ ಇಷ್ಟ ಪಟ್ಟು ನೋಡುತ್ತಾರೆ. ಹೌದು. ಕನ್ನಡದಲ್ಲಿ ಇತ್ತೀಚಿಗೆ ಬರುತ್ತಿರುವ ಕಿರುತೆರೆ ಕಾರ್ಯಕ್ರಮಗಳು ಎಲ್ಲರ ಮನಸ್ಸನ್ನ ಗೆದ್ದಿವೆ. ವಾರಾಂತ್ಯದಲ್ಲಿ ಪ್ರತಿಯೊಬ್ಬರೂ ಟಿವಿ ಮುಂದೆ ಕೂತು, ನೆಚ್ಚಿನ ಕಾರ್ಯಕ್ರಮಗಳನ್ನ ನೋಡೋದೇ ಆಗುತ್ತೆ. ಈಗ ಅದರ ಸಾಲಿನಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ತುಂಬಾ ಮುಂದಿದೆ.

ಹೌದು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನೋಡುಗರ ಸಂಖ್ಯೆ ವಾರದಿಂದ ವಾರಕ್ಕೆ ಹೆಚ್ಚುತ್ತಿದೆ. ಹೀಗಾಗಿ ರಮೇಶ್ ಅವರು ಬಹಳ ಉತ್ಸಾಹದಿಂದ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಆದ್ರೆ ಅಥಿತಿಗಳ ವಿಷಯದಲ್ಲಿ ಸ್ವಲ್ಪ ಹಿಂದಾಗುತ್ತಿದ್ದಾರೆ ಎಂದು ಅಭಿಮಾನಿಗಳು ಅವರ ಮೇಲೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹೌದು. ಕೇವಲ ಸಿನಿಮಾ ರಂಗದವರನ್ನ ಮಾತ್ರ, ಕರೆಸಿದರೆ, ಬೇರೆ ರಂಗದಲ್ಲಿ ಯಾರು ಸಾಧಕರಿಲ್ಲವಾ? ಅನ್ನೋದು ಅಭಿಮಾನಿಗಳ ಪ್ರಶ್ನೆಯಾಗಿದೆ. ಹಾಗಾಗಿ ಈ ಬಾರಿ ಅಭಿಮಾನಿಗಳ ನಿರೀಕ್ಷೆ ಮಟ್ಟ ತಲುಪುವಂತಹ ಅತಿಥಿಗಳನ್ನ ಕರೆಸುತ್ತಿದ್ದಾರೆ.

ಬೇಸರ ವ್ಯಕ್ತಪಡಿಸುತ್ತಿರುವ ಅಭಿಮಾನಿಗಳು

ಇತ್ತೀಚಿನ ದಿನಗಳಲ್ಲಿ ಮನೆ ಮಂದಿ ಎಲ್ಲಾ ಕೂತು ನೋಡುವ ಕಾರ್ಯಕ್ರಮ ಅಂದ್ರೆ ಅದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ. ಯಾಕಂದ್ರೆ ಅಭಿಮಾನಿಗಳ ಮನಸ್ಸನ್ನ ಅಷ್ಟು ಆಳವಾಗಿ ಗೆದ್ದಿದೆ. ಆದರೆ ಅತಿಥಿಗಳನ್ನ ಕರೆಸುವ ವಿಷಯದಲ್ಲಿ ಮಾತ್ರ ರಮೇಶ್ ಅವರು ಸರಿಯಾದ ಆಯ್ಕೆ ನಡೆಸುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹೌದು. ಪ್ರಾರಂಭದಲ್ಲಿ ಒಳ್ಳೊಳ್ಳೆ ಅತಿಥಿಗಳನ್ನ ಕರೆಸುತ್ತಿದ್ರು. ಆದ್ರೆ ಈಗ, ಸಾಧನೆ ಮಾಡಿರದೆ ಇರುವ ವ್ಯಕ್ತಿಗಳನ್ನ, ಸಾಧಕರ ಸೀಟಿನಲ್ಲಿ ಕೂರಿಸುತ್ತಿರುವುದು, ಅಭಿಮಾನಿಗಳಿಂದ ಸಹಿಸುವುದಕ್ಕೆ ಆಗುತ್ತಿಲ್ಲ. ಹಾಗಾಗಿ ಅವರ ಮೇಲೆ ಬೇಸರ ವ್ಯಕ್ತಪಡಿಸಿ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಹಾಗಾಗಿ ಈ ಬಾರಿಯ ಸಾಧಕರ ಸ್ಥಾನಕ್ಕೆ, ಅಭಿಮಾನಿಗಳ ನಿರೀಕ್ಷೆಯನ್ನ ಮೀರಿಸುವಂತಹ ವ್ಯಕ್ತಿಯನ್ನ ಕರೆಸುತ್ತಿದ್ದಾರೆ.

ಈ ಬಾರಿಯ ಸಾಧಕರ ಸೀಟಿನಲ್ಲಿ ಇನ್ ಫೋಸಿಸ್ ಸಂಸ್ಥಾಪಕರು ಇರಲಿದ್ದಾರೆ.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅತಿಥಿಗಳನ್ನ ಕರೆಸುವುದರ ಬಗ್ಗೆ ಅಭಿಮಾನಿಗಳು ದೊಡ್ಡ ಲಿಸ್ಟ್ ಇಟ್ಟಿದ್ದಾರೆ. ಅದರಲ್ಲಿ ಇನ್ ಫೋಸಿಸ್ ನಾರಾಯಣಮೂರ್ತಿಯವರ ಧರ್ಮಪತ್ನಿಯಾದ ಸುಧಾಮೂರ್ತಿಯವರ ಹೆಸರು ಇತ್ತು. ಆದರೆ ಕೆಲವು ಕಾರಣಗಳಿಂದ, ಸುಧಾಮೂರ್ತಿಯವರು ಕಾರ್ಯಕ್ರಮಕ್ಕೆ ಬರಲು ಆಗಿಲ್ಲ. ಹಾಗಾಗಿ, ಇನ್ ಫೋಸಿಸ್ ಸಂಸ್ಥಾಪಕರಾದ ನಾರಾಯಣಮೂರ್ತಿಯವರು ಈ ವಾರದ ಕಾರ್ಯಕ್ರಮದಲ್ಲಿ ಅತಿಥಿಯಾಗಲಿದ್ದಾರೆ.

ಅಭಿಮಾನಿಗಳ ಆಸೆ ಈಡೇರಿಸಲಿರುವ ರಮೇಶ್ ಅರವಿಂದ್

ಅಭಿಮಾನಿಗಳು ಕಾರ್ಯಕ್ರಮದ ಪ್ರಾರಂಭದಲ್ಲೇ ಅತಿಥಿಗಳ ದೊಡ್ಡ ಲಿಸ್ಟ್ ಕೊಟ್ಟಿದ್ದರು. ಅದರಲ್ಲಿದ್ದ ಅತಿಥಿಗಳನ್ನೆಲ್ಲಾ ರಮೇಶ್ ಅವರು ಕಾರ್ಯಕ್ರಮಕ್ಕೆ ಕರೆಸುತ್ತಿದ್ದಾರೆ. ಅದರಂತೆ ಈ ವಾರ ಇನ್ ಫೋಸಿಸ್ ಸಂಸ್ಥಾಪಕರಾದ ನಾರಾಯಣಮೂರ್ತಿಯವರು ಬರಲಿದ್ದಾರೆ. ಅಭಿಮಾನಿಗಳು ಇವರ ಹೆಸರನ್ನ ಕೇಳಿದ ಕೂಡಲೇ ಸಂತಸ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ, ನಿಜವಾದ ಸಾಧಕರನ್ನ ಕರೆಸುತ್ತಿದ್ದಾರೆ ಎಂದು. ಹಾಗಾಗಿ ಈ ವಾರ ಕಾರ್ಯಕ್ರಮಕ್ಕೆ ಬರಲಿರುವ ನಾರಾಯಣಮೂರ್ತಿಯವರು, ತಮ್ಮ ಜೀವನದಲ್ಲಿ ಅನುಭವಿಸಿದ ನೋವು, ಸಂಕಟ, ಹಾಗೂ ಇಷ್ಟು ಎತ್ತರಕ್ಕೆ ಬೆಳೆಯಲು ಪಟ್ಟಿರುವ ಕಷ್ಟ ಎಲ್ಲವನ್ನೂ ಜನರ ಮುಂದೆ ಹೇಳಲಿದ್ದಾರೆ. ಇದಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಒಟ್ಟಿನಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ದಿನದಿಂದ ದಿನಕ್ಕೆ ಜನರಿಗೆ ತುಂಬಾ ಹತ್ತಿರವಾಗುತ್ತಿದೆ. ಯಾಕಂದ್ರೆ, ಅಭಿಮಾನಿಗಳ ಬೇಡಿಕೆಗೆ ತಕ್ಕಂತೆ, ಸಾಧಕರನ್ನ ಕಾರ್ಯಕ್ರಮಕ್ಕೆ ಕರೆಸುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳು ಬಹಳ ಇಷ್ಟ ಪಟ್ಟು ಕಾರ್ಯಕ್ರಮ ನೋಡುತ್ತಿದ್ದಾರೆ.

LEAVE A REPLY

Please enter your comment!
Please enter your name here