ವೀಕೆಂಡ್ ಟೆಂಟ್ ಗೆ ಈ ವಾರ ಬರುತ್ತಿರುವ ಅತಿಥಿಗಳಾದ್ರು ಯಾರು?

0
623
weekend with ramesh

ನಮ್ಮ ಜನರಿಗೆ ಏನ್ ಇಷ್ಟ ಆಗುತ್ತೋ, ಇಲ್ವೋ ಗೊತ್ತಿಲ್ಲ. ಆದ್ರೆ ನಮ್ಮ ಕಿರುತೆರೆ ಕಾರ್ಯಕ್ರಮಗಳು ಅಂದ್ರೆ ತುಂಬಾ ಇಷ್ಟ. ಏನೇ ಕೆಲಸ ಇರ್ಲಿ, ಅದನ್ನ ಅರ್ಧಕ್ಕೆ ನಿಲ್ಲಿಸಿ ನೋಡ್ತಾರೆ. ಯಾಕಂದ್ರೆ, ನಮ್ಮ ಕಿರುತೆರೆ ಕಾರ್ಯಕ್ರಮಗಳು ಅಷ್ಟರ ಮಟ್ಟಿಗೆ ನಮ್ಮ ಜನರ ಮನಸ್ಸನ್ನ ಕದ್ದಿವೆ. ಅದರಲ್ಲೂ ಮಹಿಳೆಯರಿಗೆ ಧಾರಾವಾಹಿಗಳು ಎಷ್ಟು ಇಷ್ಟ ಅಂದ್ರೆ, ಇರೋ ಕೆಲಸ ಎಲ್ಲ ಬಿಟ್ಟು, ಟಿವಿ ಮುಂದೆ ಕೂರ್ತಾರೆ. ವಾರ ಪೂರ್ತಿ, ಸೀರಿಯಲ್ ಹವಾ ಆದ್ರೆ, ವಾರದ ಕೊನೆ 2 ದಿನ ಮಾತ್ರ ವಿಶೇಷ ಕಾರ್ಯಕ್ರಮಗಳ ಹವಾ ಶುರುವಾಗುತ್ತೆ.

ಹೌದು. ಈಗ ನಮ್ಮ ಜನರು ವಾರಾಂತ್ಯದಲ್ಲಿ ಕೂತು ಹೆಚ್ಚಾಗಿ ನೋಡುವ ಕಾರ್ಯಕ್ರಮ ಅಂದ್ರೆ, ಅದು ವೀಕೆಂಡ್ ವಿತ್ ರಮೇಶ್. ಶನಿವಾರ, ಭಾನುವಾರ ಬಂದ್ರೆ ಸಾಕು, ಇವತ್ತು ಯಾವ ಸಾಧಕರನ್ನ ಕರೆಸುತ್ತಿದ್ದಾರೆ? ಅವರು ತಮ್ಮ ಜೀವನದ ಬಗ್ಗೆ ಏನು ಹೇಳ್ತಾರೆ? ಅನ್ನೋದನ್ನ ನೋಡೋಕೆ, ಕಾತುರದಿಂದ ಕಾಯುತ್ತಿರುತ್ತಾರೆ. ಅದೇ ರೀತಿ ಈಗ ವೀಕೆಂಡ್ ವಿತ್ ರಮೇಶ್ 4ನೇ ಸೀಸನ್ ನ ನಾಲ್ಕು ಸಂಚಿಕೆಗಳು ಅದ್ದೂರಿಯಾಗಿ ನಡೆದಿದೆ. ಹಾಗಾದ್ರೆ, ಈ ವಾರ ಬರುವ ಅತಿಥಿಗಳಾದ್ರು ಯಾರು ಅಂತ ನಾವು ನಿಮಗೆ ತಿಳಿಸ್ತೀವಿ ನೋಡಿ.

ಕಾರ್ಯಕ್ರಮಕ್ಕೆ ಬರಲಿರುವ ಮುಂದಿನ ಅತಿಥಿಗಳು

ವಾರದ ಕೊನೆಯ 3 ದಿನವನ್ನ ಜನರು ವೀಕೆಂಡ್ ವಿತ್ ರಮೇಶ್ ಗಾಗಿ ಮುಡಿಪಾಗಿಟ್ಟಿದ್ದಾರೆ. ಹೌದು. ಒಬ್ಬ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಹಾಗಾಗಿ ಕಾರ್ಯಕ್ರಮ ಬರೋ ಸಮಯಕ್ಕೆ ಎಲ್ಲರೂ ಟಿವಿ ಮುಂದೆ ಹಾಜರಾಗಿರ್ತಾರೆ. ಅಲ್ಲದೆ ಜನರು ಕಾರ್ಯಕ್ರಮಕ್ಕೆ ಯಾವ ಅತಿಥಿ ಬರಬೇಕು ಅನ್ನೋದನ್ನ ಅವರೇ ತಿಳಿಸುತ್ತಿದ್ದಾರೆ. ಹಾಗಾಗಿ ರಮೇಶ್ ಅವರು ಕೂಡ, ಅಭಿಮಾನಿಗಳ ಆಸೆಯನ್ನ ಪೂರೈಸುತ್ತಿದ್ದಾರೆ. ಹಾಗಾದ್ರೆ, ಈ ವಾರ ಬರಲಿರುವ ಇಬ್ಬರು ಅತಿಥಿಗಳಾದ್ರೂ ಯಾರು? ಯಾರನ್ನ ಕರೆಸುತ್ತಿದ್ದಾರೆ ರಮೇಶ್ ಅವರು ಅಂತ ನೋಡೋಣ.

ವಿನಯ ಪ್ರಸಾದ್

ಈ ಬಾರಿ ಕಾರ್ಯಕ್ರಮಕ್ಕೆ ಬರಲಿರುವ ಅತಿಥಿಗಳಲ್ಲಿ ಒಬ್ಬರು ವಿನಯ ಪ್ರಸಾದ್ ಅವರು. ಹೌದು. ಒಂದು ಕಾಲದಲ್ಲಿ ವಿನಯ ಪ್ರಸಾದ್ ಅವರು, ನಾಯಕಿಯಾಗಿ ಮಿಂಚಿದ್ದರು. ಅವರ ಎಲ್ಲಾ ಸಿನಿಮಾಗಳು ಅದ್ಭುತವಾಗಿ ಪ್ರದರ್ಶನ ಕಂಡಿದ್ದವು. ಅಲ್ಲದೆ ಅವರು ದೊಡ್ಡ ದೊಡ್ಡ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಹಾಗಾಗಿ ಅವರ ಜೀವನದಲ್ಲಿ ಏನೆಲ್ಲಾ ನಡೆದಿದೆ. ಹಾಗೂ ಅವರು ಜೀವನವನ್ನ ಯಾವ ರೀತಿ ರೂಪಿಸಿಕೊಂಡರು, ಹಾಗೆ ಅವರು ಸಿನಿಮಾದಿಂದ ತಿಳಿದ ವಿಷಯಗಳು ಹಾಗೂ ಅನುಭವವನ್ನ ಇಲ್ಲಿ ಎಲ್ಲರ ಮುಂದೆ ಹಂಚಿಕೊಳ್ಳಲು ಬರುತ್ತಿದ್ದಾರೆ.

ಶಶಿಕುಮಾರ್

2 ದಿನದಲ್ಲಿ ಒಂದು ದಿನ, ವಿನಯ ಪ್ರಸಾದ್ ಅವರು ಬಂದರೆ, ಇನ್ನೊಂದು ದಿನಕ್ಕೆ ಶಶಿಕುಮಾರ್ ಅವರು ಬರುತ್ತಿದ್ದಾರೆ. ಹೌದು. ಶಶಿಕುಮಾರ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ನಟನೆ ಹಾಗೂ ನೃತ್ಯದ ಮೂಲಕ ಎಲ್ಲರನ್ನ ತನ್ನತ್ತ ಸೆಳೆದಿದ್ದಾರೆ. ಈಗ ಈ ವಾರದ ಕಾರ್ಯಕ್ರಮಕ್ಕೆ ಇವರು ಅತಿಥಿಯಾಗಿ ಬರಲಿದ್ದಾರೆ. ಇವರು ಸಿನಿಮಾದಲ್ಲಿ ಅನುಭವಿಸಿದ ಕಷ್ಟ, ನೋವುಗಳು ಹಾಗೂ ಇಂಥ ಒಂದು ಸ್ಥಾನಕ್ಕೆ ಬರುವುದಕ್ಕಾಗಿ ಪಟ್ಟ ಶ್ರಮವನ್ನ ಎಲ್ಲರ ಬಗ್ಗೆ ತಿಳಿಸಿಕೊಡಲಿದ್ದಾರೆ.

ಒಟ್ಟಿನಲ್ಲಿ ಈ ವಾರದ ಕಾರ್ಯಕ್ರಮಕ್ಕೆ ವಿನಯ ಪ್ರಸಾದ್ ಹಾಗೂ ಶಶಿಕುಮಾರ್ ಅವರನ್ನ ಕರೆಸಬೇಕು ಅಂತ ನಿರ್ಧಾರ ಮಾಡಲಾಗಿದೆ. ಹಾಗಾದ್ರೆ, ಅವರು ಕಾರ್ಯಕ್ರಮದಲ್ಲಿ ತಮ್ಮ ಜೀವನದ ನೋವು, ನಲಿವುಗಳನ್ನ ಹೇಗೆ ಹಂಚಿಕೊಳ್ಳುತ್ತಾರೆ ಅಂತ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here