ವೀಕೆಂಡ್ ಟೆಂಟ್ ಗೆ ಇವರನ್ನೆಲ್ಲ ಏಕೆ ಕರೆಸಲಿಲ್ಲ ಎಂದು ರಮೇಶ್ ಗೆ ಪ್ರಶ್ನೆ ಮಾಡಿದ ಪ್ರೇಕ್ಷಕರು

0
665
week end with ramesh

ನಮ್ಮ ಚಂದನವನದಲ್ಲಿ ಸಿನಿಮಾಗಳಿಗಿಂತ ಜನರು ಹೆಚ್ಚಾಗಿ ಕಿರುತೆರೆ ಕಾರ್ಯಕ್ರಮಗಳನ್ನ ಇಷ್ಟ ಪಡುತ್ತಾರೆ. ಯಾಕಂದ್ರೆ ನಮ್ಮಲ್ಲಿ ಅಂತಹ ವಿಭಿನ್ನ ರೀತಿಯ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಇನ್ನೂ ಮನೆ ಮಂದಿ ಎಲ್ಲಾ ಕೂತು ನೋಡುವಂತಹ ಕಾರ್ಯಕ್ರಮಗಳು ನಮ್ಮಲ್ಲಿವೆ. ಅವುಗಳೇ ಕನ್ನಡದ ಕೋಟ್ಯಾಧಿಪತಿ, ವೀಕೆಂಡ್ ವಿತ್ ರಮೇಶ್, ಡ್ಯಾನ್ಸಿಂಗ್ ಸ್ಟಾರ್ ಈ ರೀತಿಯ ಹತ್ತು ಹಲವು ಕಾರ್ಯಕ್ರಮಗಳು ಪ್ರಸಾರವಾಗುತ್ತವೆ, ಇವುಗಳನ್ನ ನೋಡಲು ಜನರು, ವಾರದ ಕೊನೆಯ 2 ದಿನಗಳನ್ನ ಮುಡಿಪಾಗಿಟ್ಟಿರುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಎಲ್ಲರ ಮನೆ ಮಾತಾಗಿತ್ತು. ಆದ್ರೆ ಈಗ ಈ ಕಾರ್ಯಕ್ರಮ ಮುಗಿದಿದೆ. ಆದರೆ ಜನರು ಕಾರ್ಯಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ ಕಾರ್ಯಕ್ರಮಕ್ಕೆ ಕರೆಸಬೇಕಾದ ಅತಿಥಿಗಳನ್ನು ಕರೆಸಿಲ್ಲ ಎಂದು ಕಾರ್ಯಕ್ರಮದ ಬಗ್ಗೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಅತಿಥಿಗಳ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ವೀಕ್ಷಕರು

ವೀಕೆಂಡ್ ವಿತ್ ರಮೇಶ್ ಸಂಚಿಕೆ 4 ಶುರುವಾಗುತ್ತದೆ ಅಂದ ಕೂಡಲೇ ಜನರೆಲ್ಲಾ ಸಾಕಷ್ಟು ಸಂತಸ ವ್ಯಕ್ತಪಡಿಸಿದ್ದರು. ಜೊತೆಗೆ ಕಾರ್ಯಕ್ರಮಕ್ಕೆ ಈ ಬಾರಿ ಇಂಥ ಅತಿಥಿಗಳನ್ನು ಕರೆಸಬೇಕೆಂದು ಒಂದು ಲಿಸ್ಟ್ ನೀಡಿದ್ದರು. ಆ ಲಿಸ್ಟ್ ಅನ್ನು ನೋಡಿದ ತಂಡ ಮೊದಲಿಗೆ ಕೆಲವು ವಾರ ಜನರ ಆಸೆಯಂತೆ ಅತಿಥಿಗಳನ್ನು ಕರೆಸಿದ್ದಾರೆ. ಆದರೆ ಬರಬರುತ್ತಾ ಜನರ ಆಸೆ ಎಲ್ಲ ಹುಸಿಯಾಗಿದೆ. ಹೌದು. ಜನರು ಅನೇಕ ಅತಿಥಿಗಳ ಹೆಸರನ್ನು ಸೂಚಿಸಿದ್ದರು. ಅದರಲ್ಲಿ ವೀರೇಂದ್ರ ಹೆಗ್ಡೆ ಹಾಗು ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಹೆಸರು ಇತ್ತು. ಕಾರ್ಯಕ್ರಮದವರು ಇವರಿಬ್ಬರನ್ನು ಕರೆಸಿದ್ದು, ಜನರಿಗೆ ಬಹಳ ಸಂತಸ ತಂದಿತ್ತು. ಆದ್ರೆ ವಾರಗಳು ಕಳೆಯುತ್ತಾ ಕಾರ್ಯಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಲು ಶುರು ಮಾಡಿದರು. ಯಾಕಂದ್ರೆ ಏನು ಸಾಧನೆ ಮಾಡದೇ ಇರುವವರನ್ನು ಕಾರ್ಯಕ್ರಮಕ್ಕೆ ಕರೆಸುತ್ತಿದ್ದಾರೆ. ಜೊತೆಗೆ ಕೇವಲ ಸಿನಿಮಾ ರಂಗದವರು ಮಾತ್ರ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಅಂತ ಬೇಸರ ತೋರಿಸಿದರು. ಆದ್ರೆ ಈಗ ಮತ್ತೆ ಕಾರ್ಯಕ್ರಮದವರಿಗೆ ಒಂದು ಮಾತನ್ನು ಕೇಳಿದ್ದಾರೆ. ಹೌದು. ಕೊನೆಗೂ ಇವರನ್ನೆಲ್ಲ ಕರೆಸಲೇ ಇಲ್ಲ ಅಲ್ವಾ? ಎಂದು ಕೇಳಿದ್ದಾರೆ.

ಇವರೆನ್ನೆಲ್ಲ ಕಾರ್ಯಕ್ರಮಕ್ಕೆ ಏಕೆ ಕರೆಸಲಿಲ್ಲ?

ಜನರಿಗೆ ಕೆಲವರು ಕಾರ್ಯಕ್ರಮಕ್ಕೆ ಬರಬೇಕೆನ್ನುವುದು ಆಸೆಯಿತ್ತು. ಆದ್ರೆ ತಂಡ ಇದರಲ್ಲಿ ಪ್ರೇಕ್ಷಕರಿಗೆ ಬೇಸರ ತರಿಸಿದೆ. ಹೌದು. ಕಾರ್ಯಕರಮಕ್ಕೆ ಜನರು ನೀಡಿದ ಲಿಸ್ಟ್ ನಲ್ಲಿ ಮುಖ್ಯವಾಗಿ ಇವರ ಹೆಸರುಗಳು ಇದ್ದವು. ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಅರುಂಧತಿ ನಾಗ್, ಸಾಲು ಮರದ ತಿಮ್ಮಕ್ಕ, ಮಾಲಾಶ್ರೀ, ರಜನೀಕಾಂತ್, ಐಶ್ವರ್ಯ ರೈ ಇನ್ನಿತರ ಕೆಲವು ಹೆಸರುಗಳು ಅದರಲ್ಲಿ ಸೇರಿಕೊಂಡಿದ್ದವು. ಆದ್ರೆ ಅವರೆಲ್ಲರನ್ನು ಕಾರ್ಯಕ್ರಮಕ್ಕೆ ಕರೆಸಿಲ್ಲ ಅಂತ ಪ್ರೇಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಅಲ್ಲದೆ ಇಂಥವರನ್ನು ಕರೆಸುವ ಬದಲು ಸಿಕ್ಕಸಿಕ್ಕವರನ್ನು ಕರೆಸುತ್ತೀರಾ ಎಂಬ ಪ್ರಶ್ನೆಯನ್ನು ಇಟ್ಟಿದ್ದಾರೆ. ಹೌದು. ರಾಹುಲ್ ದ್ರಾವಿಡ್ ಹಾಗು ಅನಿಲ್ ಕುಂಬ್ಳೆ ಎಂಥ ಸಾಧನೆ ಮಾಡಿರುವವರು, ಆದರೆ ಅವರನ್ನು ಕರೆಸಿಲ್ಲ. ಇತ್ತ ಅರುಂಧತಿ ನಾಗ್ ಅವರು ಹಿರಿಯ ಕಲಾವಿದೆ, ಅವರನ್ನು ಸಹ ಕರೆಸುವ ಪ್ರಯತ್ನ ಮಾಡಿಲ್ಲ ಎಂದು ಜನರು ಹೇಳುತ್ತಿದ್ದಾರೆ.

ನಿಜವಾದ ಸಾಧಕರನ್ನು ಕರೆಸುವಲ್ಲಿ ಸೋತಿದ್ದೀರಾ

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶುರುವಾಗುತ್ತದೆ ಎಂದ ಕೂಡಲೇ ಜನರು ಬಹಳಷ್ಟು ಖುಷಿ ಪಟ್ಟಿದ್ದರು. ಯಾಕಂದ್ರೆ ಈ ಬಾರಿ ಅದ್ಭುತ ಸಾಧನೆಗಳನ್ನು ಮಾಡಿದ ಸಾಧಕರನ್ನು ಕರೆಸುತ್ತಾರೆ. ಅವರು ಬಂದು ತಮ್ಮ ಜೀವನದ ನೋವು, ನಲಿವು,. ಏಳು ಬೀಳುಗಳನ್ನು ಹೇಳುತ್ತಾರೆ ಎಂದೆಲ್ಲ ತಿಳಿದಿದ್ದರು. ಆದರೆ ಕಾರ್ಯಕ್ರಮದವರು ಅವಂಥವರನ್ನು ಕರೆಸುವ ಬದಲು, ಇನ್ನೂ ಸಾಧನೆ ಅಂದ್ರೆ ಏನು ಅಂತ ಗೊತ್ತಿಲ್ಲದೇ ಇರೋರನ್ನ ಕರೆಸಿದ್ದಾರೆ ಎಂದು ಹೇಳುತ್ತಿದ್ದಾರೆ. ಜೊತೆಗೆ ಈ ಬಾರಿ ಕಾರ್ಯಕಮಕ್ಕೆ ನಿಜವಾದ ಸಾಧಕರನ್ನು ಕರೆಸುವುಲ್ಲಿ ತಂಡ ಸೋತಿದೆ, ಹಾಗಾಗಿ ಕಾರ್ಯಕ್ರಮದ ಮೇಲಿದ್ದ ಆಸಕ್ತಿಯೆಲ್ಲ ನಮಗೆ ಹೊರತು ಹೋಗಿದೆ ಎಂದು ಜನರು ತಂಡದವರ ವಿರುದ್ಧ ಆರೋಪಿಸುತ್ತಿದ್ದಾರೆ.

ನಿಜಕ್ಕೂ ಜನರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಬಗ್ಗೆ ಬಹಳ ಆಸಕ್ತಿ ಹೊಂದಿದ್ದರು. ಆದ್ರೆ ತಂಡ ಜನರ ಆಸೆಯನ್ನೆಲ್ಲಾ ಸುಳ್ಳು ಮಾಡಿದೆಯಂತೆ. ಹಾಗಾಗಿ ಮುಂದಿನ ಸಂಚಿಕೆಗೆ ನಮ್ಮ ಪ್ರೋತ್ಸಾಹ ಸಿಗುವುದು ಕಷ್ಟ ಎಂದು ಜನರು ಹೇಳುತ್ತಿದ್ದಾರಂತೆ.

LEAVE A REPLY

Please enter your comment!
Please enter your name here