ವಿಭಿನ್ನವಾಗಿ ನಡೆಯಲಿರುವ ವೀಕೆಂಡ್ ವಿತ್ ರಮೇಶ್ ಸಂಚಿಕೆ 4ರ ಗ್ರಾಂಡ್ ಫಿನಾಲೆ

0
819
weekend grand

ಕನ್ನಡದ ಕಿರುತೆರೆ ಕಾರ್ಯಕ್ರಮಗಳನ್ನ ನಮ್ಮ ಜನರು ಬಹಳಷ್ಟು ಆಸಕ್ತಿಯಿಂದ ನೋಡುತ್ತಾರೆ. ಯಾಕಂದ್ರೆ, ಕಿರುತೆರೆಯಲ್ಲಿ ಅಂತಹ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಅದರಲ್ಲೂ ಜನರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ತುಂಬಾ ಇಷ್ಟ ಪಟ್ಟು ನೋಡುತ್ತಾರೆ. ಯಾಕಂದ್ರೆ ಕಾರ್ಯಕ್ರಮದಲ್ಲಿ ಸಾಧಕರು ಬಂದು, ಅವರ ಜೀವನದ ಏಳು, ಬೀಳು ಹಾಗೂ ಜೀವನದಲ್ಲಿ ಪಟ್ಟಂತಹ ಕಷ್ಟವನ್ನು ಇಲ್ಲಿ ಎಲ್ಲರ ಮುಂದೆ ತಿಳಿಸುತ್ತಾರೆ. ಹಾಗಾಗಿ ಎಲ್ಲರು ಈ ಕಾರ್ಯಕ್ರಮವನ್ನು ಇಷ್ಟ ಪಡುತ್ತಿದ್ದರು. ಆದ್ರೆ ಈಗ ಅಂತ ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬಂದು ತಲುಪಿದೆ ಎಂದು ರಮೇಶ್ ಅರವಿಂದ್ ತಿಳಿಸಿದ್ದರು. ಹಾಗಾಗಿ ಇದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಕೊನೆ ಸಂಚಿಕೆಯಾಗಿದೆ. ಹೌದು. ಈ ವಾರ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ನಡೆಯಲಿದೆ. ಆದ್ರೆ ಈ ಬಾರಿಯ ಗ್ರಾಂಡ್ ಫಿನಾಲೆ ಬಹಳಷ್ಟು ವಿಶೇಷವಾಗಿ ಹಾಗು ವಿಭಿನ್ನವಾಗಿ ಇರಲಿದೆಯಂತೆ.

ವಿಭಿನ್ನವಾಗಿ ನಡೆಯಲಿರುವ ಗ್ರಾಂಡ್ ಫಿನಾಲೆ

ಜನರು ಶನಿವಾರ, ಭಾನುವಾರ ಬಂದ್ರೆ ಸಾಕು ಟಿವಿ ಮುಂದೆ ಕಾತುರದಿಂದ ಕಾಯುತ್ತ ಕುಳಿತಿರುತ್ತಿದ್ದರು. ಯಾಕಂದ್ರೆ ವೀಕೆಂಡ್ ಟೆಂಟ್ ನಲ್ಲಿ ಈ ವಾರ ಯಾವ ಅತಿಥಿ ಬರುತ್ತಾರೆ ಅಂತ. ಆದ್ರೆ ಇನ್ಮುಂದೆ ಈ ಕಾಯುವಿಕೆ ಇರುವುದಿಲ್ಲ ಎಂದು ಕೆಳೆದ ಎರಡು ವಾರಗಳ ಹಿಂದೆ ರಮೇಶ್ ತಿಳಿಸಿದ್ದರು. ಹೌದು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಂಚಿಕೆ ಮುಗಿಯುತ್ತ ಬಂದಿದ್ದು, ಇನ್ನು ಎರಡು ಮಾತ್ರ ಬಾಕಿ ಇದೆ ಎಂದು ಹೇಳಿದ್ದರು. ಅದೇ ರೀತಿ ಈಗ ಕಾರ್ಯಕ್ರಮದ ಕೊನೆಯ ವಾರ ಬಂದಿದೆ. ಹಾಗಾಗಿ ರಮೇಶ್ ಇದನ್ನು ಬಹಳಷ್ಟು ಬೇಸರದಿಂದ ತಿಳಿಸಿದ್ದಾರೆ. ಆದ್ರೆ ಒಂದು ವಿಷಯಕ್ಕೆ ಸಂತೋಷ ಪಟ್ಟಿದ್ದಾರೆ. ಹೌದು. ಈ ಸಂಚಿಕೆಯ ಗ್ರಾಂಡ್ ಫಿನಾಲೆ ಬಹಳಷ್ಟು ವಿಭಿನ್ನವಾಗಿ ಹಾಗು ವಿಶೇಷವಾಗಿ ಇರಲಿದೆಯಂತೆ. ಹಾಗಾಗಿ ಈ ಬಾರಿಯ ಗ್ರಾಂಡ್ ಫಿನಾಲೆ ಮರೆಯಲಾಗದಂತ ಕಾರ್ಯಕ್ರಮವಾಗಲಿದೆ ಎಂದು ರಮೇಶ್ ತಿಳಿಸಿದ್ದಾರೆ.

ಹಲವು ಅತಿಥಿಗಳು ಸಾಧಕರ ಸ್ಥಾನ ಅಲಂಕರಿಸಲಿದ್ದಾರೆ

ಕಾರ್ಯಕ್ರಮದಲ್ಲಿ ಸಾಧಕರ ಆಸನದಲ್ಲಿ ಸಾಮಾನ್ಯವಾಗಿ ಒಬ್ಬರು ಕೂರುತ್ತಾರೆ. ಆದ್ರೆ ಈ ಬಾರಿಯ ಗ್ರಾಂಡ್ ಫಿನಾಲೆಯಲ್ಲಿ ಹಲವು ಅತಿಥಿಗಳು ಸಾಧಕರ ಸ್ಥಾನ ಅಲಂಕರಿಸಲಿದ್ದಾರೆ. ಹೌದು. ಯಾವ ಸಂಚಿಕೆಯಲ್ಲೂ ಈ ರೀತಿಯಲ್ಲಿ ಮಾಡಿರಲಿಲ್ಲ. ಆದ್ರೆ ಈ ಬಾರಿ ಹೊಸದಾಗಿ, ಸಾಕಷ್ಟು ಅತಿಥಿಗಳನ್ನು ಕರೆದು, ಆ ಸ್ಥಾನದಲ್ಲಿ ಕೂರಿಸಲಿದ್ದಾರೆ. ಯಾಕಂದ್ರೆ ಈ ಬಾರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ವಿಶೇಷವಾಗಿ ಹಾಗು ವಿಭಿನ್ನವಾಗಿ ಇರಬೇಕೆಂದು ನಿರ್ಧಾರ ಮಾಡಿದ್ದಾರಂತೆ. ಹಾಗಾಗಿ ಒಬ್ಬರು ಸಾಧಕರ ಬದಲಿಗೆ, ಹಲವು ಜನ ಸಾಧಕರನ್ನು ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆಸುತ್ತಿದ್ದಾರಂತೆ. ಈ ವಿಷಯದ ಬಗ್ಗೆ ಸ್ವತಃ ರಮೇಶ್ ಅವರೇ ತಿಳಿಸಿದ್ದಾರೆ.

ಪ್ರೇಕ್ಷಕರ ನಿರ್ಧಾರದಂತೆ ಸಾಧಕರ ಪಟ್ಟಿ ಮಾಡಲಾಗಿದೆ

ಇನ್ನು ಬಾರಿಯ ಸಂಚಿಕೆ ಸಾಕಷ್ಟು ಜನರಿಗೆ ಬೇಸರ ತರಿಸಿತ್ತು. ಯಾಕಂದ್ರೆ ಕೆಲವರಿಗೆ ಅತಿಥಿಗಳ ಆಯ್ಕೆ ಇಷ್ಟವಾಗಿಲ್ಲ. ಜೊತೆಗೆ ಸಿನಿಮಾ ರಂಗದವರೇ ಹೆಚ್ಚಾಗಿ ಬಂದಿದ್ದರಿಂದ, ಅದು ಕೂಡ ಪ್ರೇಕ್ಷಕರಿಗೆ ಸ್ವಲ್ಪ ಬೇಜಾರಾಗಲು ಕಾರಣವಾಗಿತ್ತು. ಹಾಗಾಗಿ ಪ್ರೇಕ್ಷಕರಿಗೆ ಯಾವುದೇ ಕಾರಣಕ್ಕೂ ಈ ಸಂಚಿಕೆಯ ವಿಷಯವಾಗಿ ಬೇಸರವಾಗಬಾರದು ಅನ್ನೋ ನಿಟ್ಟಿನಲ್ಲಿ ಈ ರೀತಿಯ ನಿರ್ಧಾರ ಕೈಗೊಂಡಿದ್ದಾರಂತೆ. ಹೌದು. ಪ್ರೇಕ್ಷಕರಿಗೆ ಯಾರೆಲ್ಲ ಅತಿಥಿಗಳ ಸಾಧಕರ ಆಸನವನ್ನು ಅಲಂಕರಿಸಬೇಕು ಅಂದುಕೊಂಡಿದ್ದರೋ, ಅವರನ್ನೆಲ್ಲ ಈಗ ಗ್ರಾನ್ ಫಿನಾಲೆಗೆ ಕರೆಸುತ್ತಿದ್ದಾರಂತೆ. ಅಲ್ಲದೆ ಈ ಗ್ರಾಂಡ್ ಫಿನಾಲೆಯಲ್ಲಿ ಒಂದು ರೀತಿ ಪ್ರಶ್ನೋತ್ತರಗಳು ಇರುತ್ತವಂತೆ. ಹೌದು. ಕಾರ್ಯಕ್ರಮದಲ್ಲಿ ಕಾಲೇಜ್ ವಿದ್ಯಾರ್ಥಿಗಳು, ಯುವಕರು, ಸಾಧನೆಯ ಸೂಚನೆ ನೀಡಿದವರು ಭಾಗಿಯಾಗಲಿದ್ದಾರೆ. ಅವರ ಪ್ರಶ್ನೆಗೆ ಅತಿಥಿಗಳು ಉತ್ತರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಈ ಬಾರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ಈ ವಾರಕ್ಕೆ ಮುಗಿಸಲಿದ್ದಾರೆ. ಆದರೆ ಪ್ರೇಕ್ಷಕರಿಗೆ ಆಗಿರುವ ಬೇಸರವನ್ನು ಇಲ್ಲಿ ಸರಿದೂಗಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಇಷ್ಟವಾಗುವ ಅತಿಥಿಗಳನ್ನು ಕರೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here