ಕೊನೆಯ ಹಂತಕ್ಕೆ ಬಂದು ತಲುಪಿದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ

0
798
week end with ramesh

ಕನ್ನಡದ ಕಿರುತೆರೆ ಕಾರ್ಯಕ್ರಮಗಳನ್ನ ನಮ್ಮ ಜನರು ಬಳಷ್ಟು ಆಸಕ್ತಿಯಿಂದ ನೋಡುತ್ತಾರೆ. ಯಾಕಂದ್ರೆ, ಕಿರುತೆರೆಯಲ್ಲಿ ಅಂತಹ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಅದರಲ್ಲೂ ಜನರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ತುಂಬಾ ಇಷ್ಟ ಪಟ್ಟು ನೋಡುತ್ತಾರೆ. ಯಾಕಂದ್ರೆ ಕಾರ್ಯಕ್ರಮದಲ್ಲಿ ಸಾಧಕರು ಬಂದು, ಅವರ ಜೀವನದ ಏಳು, ಬೀಳು ಹಾಗೂ ಜೀವನದಲ್ಲಿ ಪಟ್ಟಂತಹ ಕಷ್ಟವನ್ನು ಇಲ್ಲಿ ಎಲ್ಲರ ಮುಂದೆ ತಿಳಿಸುತ್ತಾರೆ. ಹಾಗಾಗಿ ಎಲ್ಲರು ಈ ಕಾರ್ಯಕ್ರಮವನ್ನು ಇಷ್ಟ ಪಡುತ್ತಾರೆ. ಇನ್ನೂ ವಾರದ ಕೊನೆಯಲ್ಲಿ ಯಾವ ಅತಿಥಿ ಕಾರ್ಯಕ್ರಮಕ್ಕೆ ಬರಬಹುದು. ಕಾರ್ಯಕ್ರಮದಲ್ಲಿಯೇ ಏನು ಹೇಳಬಹುದು ಎಂದು ಕಾತುರದಿಂದ ಕಾಯುತ್ತಿದ್ದರು. ಆದ್ರೆ ಈಗ ಆ ಕಾಯುವಿಕೆಯನ್ನು ನಿಲ್ಲಿಸಬೇಕಾಗಿದೆ. ಹೌದು. ಜಿ ವಾಹಿನಿಯಲ್ಲಿ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುತ್ತಿದ್ದ ವೀಕೆಂಡ್ ವಿತ್ ರಮೇಶ್ ಸೀಸನ್ 4 ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬಂದಿದೆ ಎಂದು ರಮೇಶ್ ಅರವಿಂದ್ ಅವರು ಬೇಸರದಿಂದ ತಿಳಿಸಿದ್ದಾರೆ.

ಕೊನೆ ಹಂತಕ್ಕೆ ತಲುಪಿದ ವೀಕೆಂಡ್ ವಿತ್ ರಮೇಶ್

ಶನಿವಾರ, ಭಾನುವಾರ ಬಂದ್ರೆ ಸಾಕು ಜನರು ಟಿವಿ ರಿಮೋಟ್ ಪಕ್ಕಕ್ಕೆ ಎಸೆದು, ವೀಕೆಂಡ್ ವಿತ್ ರಮೇಶ್ ನೋಡೋದ್ರಲ್ಲಿ ಬ್ಯುಸಿಯಾಗಿರ್ತಿದ್ರು. ಆದ್ರೆ ಈಗ ಆ ಅದೇ ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬಂದಿದೆ. ಹೌದು. ‘ವೀಕೆಂಡ್ ವಿತ್ ರಮೇಶ್ ಸೀಸನ್ 4’ ಕಾರ್ಯಕ್ರಮ ಇನ್ನು ಒಂದು ಅಥವಾ ಎರಡು ವಾರ ಮಾತ್ರ ನಡೆಯುತ್ತದೆ. ವಾಲ್ ಆಫ್ ಫ್ರೆಮ್ ನಲ್ಲಿ ಇನ್ನು ಮೂರು ಫೋಟೋಗಳು ಬಾಕಿ ಇದ್ದು, ಮೂರು ಸಂಚಿಕೆಗಳ ಬಳಿಕ ಕಾರ್ಯಕ್ರಮ ಅಂತ್ಯ ಆಗುವ ಸೂಚನೆ ಸಿಕ್ಕಿದೆ. ಹೌದು. ಇದರ ಬಗ್ಗೆ ಸ್ವತಃ ರಮೇಶ್ ಅವರೇ ಕಾರ್ಯಕ್ರಮದ ಬಗ್ಗೆ ತಿಳಿಸಿದ್ದಾರೆ.

ಬೇಸರದಿಂದ ತಿಳಿಸಿದ ರಮೇಶ್ ಅರವಿಂದ್

ಇನ್ನೂ ಕಾರ್ಯಕ್ರಮದ ಮಾತನಾಡಿದ ರಮೇಶ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ ವೀಕೆಂಡ್ ವಿತ್ ರಮೇಶ್ ಸೀಸನ್ ೪ ಕಾರ್ಯಕ್ರಮ ಇಷ್ಟು ಬೇಗ ಮುಗಿಯುತ್ತದೆ ಅಂತ ನಾನು ತಿಳಿದಿರಲಿಲ್ಲ. ಆದರೆ ಇಷ್ಟು ಮುಗಿಸುವಂತಹ ಪರಿಸ್ಥಿತಿ ಬಂದಿದೆ. ಹೌದು. ಈಗ ತಾನೇ ಸೀಸನ್ 4 ಶುರು ಆಗಿತ್ತು ಅನಿಸಿತ್ತು, ಧರ್ಮಸ್ಥಳದ ಧರ್ಮಾಧಿಕಾರಿಗಳು ಈ ಸೀಟ್ ಮೇಲೆ ಕೂತಿದ್ದರು ಅನಿಸುತ್ತಿದೆ. ಆದರೆ, ಇಷ್ಟು ಬೇಗ ಕಾರ್ಯಕ್ರಮ ಆಗಲೇ ಮುಗಿಯುತ್ತಾ ಬಂತು.” ಎಂದು ರಮೇಶ್ ವಿಡಿಯೋ ಮೂಲಕ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದ್ದಾರೆ. ಇನ್ನೂ ಸೀಸನ್ 4 ರಲ್ಲಿ ಈವರೆಗೆ 17 ಸಾಧಕರ ಬಂದಿದ್ದಾರೆ. ಸಿನಿಮಾ ಹಾಗೂ ಸಿನಿಮಾ ಕ್ಷೇತ್ರ ಬಿಟ್ಟು ಇತರ ಸಾಧಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಬಾರಿಯ ಕೆಲವು ಸಂಚಿಕೆಗಳು ಪ್ರಶಂಸೆ ಪಡೆದರೆ, ಇನ್ನು ಕೆಲವು ಸಂಚಿಕೆಗಳು ಜನರಿಗೆ ಇಷ್ಟವಾಗಿಲ್ಲ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದ ಕೊನೆಯ ಸಾಧಕರಾರು?

ಇನ್ನೂ ಈ ಬಾರಿಯ ಸಂಚಿಕೆಯಲ್ಲಿ ಸುಮಾರು ೧೭ ಜನ ಅತಿಥಿಗಳು ಬಂದಿದ್ದರು. ವೀರೇಂದ್ರ ಹೆಗ್ಗಡೆ, ರಾಘವೇಂದ್ರ ರಾಜ್ ಕುಮಾರ್, ಪ್ರಕಾಶ್ ಬೆಳವಾಡಿ, ಪ್ರೇಮಾ, ಶಶಿಕುಮಾರ್, ವಿನಯ ಪ್ರಸಾದ್, ಶ್ರೀಮುರಳಿ, ನಾರಾಯಣ ಮೂರ್ತಿ, ಸುಧಾಮೂರ್ತಿ, ಟಿ ಎಸ್ ನಾಗಾಭರಣ, ಸುಮಲತಾ ಅಂಬರೀಶ್, ಶರಣ್, ಚಿಕ್ಕಣ್ಣ, ಬಿರಾದರ್, ಟೈಗರ್ ಅಶೋಕ್ ಕುಮಾರ್, ಶಂಕರ್ ಬಿದರಿ ಅವರು ಈ ಬಾರಿ ಬಂಡ ಅತಿಥಿಗಳಾಗಿದ್ದರೆ. ಇನ್ನೂ ವಾಲ್ ನಲ್ಲಿ ೩ ಫ್ರೆಮ್ ಗಳು ಖಾಲಿ ಇವೆಯಂತೆ. ಆದ್ರೆ ಆ ೩ ಜನ ಅತಿಥಿಗಳು ಯಾರು ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಆದರೆ, ಇದರ ಬಗ್ಗೆ ಯಾವುದೇ ರೀತಿಯಲ್ಲಿ ಸುಳಿವನ್ನು ನೋಡಿಲ್ಲ. ಹಾಗಾದ್ರೆ, ಆ ೩ ಜನ ಸಾಧಕರು ಯಾರು ಎಂಬುದನ್ನ ಕಾರ್ಯಕ್ರಮದಲ್ಲೇ ನೋಡಬೇಕಾಗಿದೆ.

ಒಟ್ಟಿನಲ್ಲಿ ಜನರ ನೆಚ್ಚಿನ ಕಾರ್ಯಕ್ರಮವಾಗಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬಂದಿದೆ. ಹಾಗಾಗಿ ಇದರ ಬಗ್ಗೆ ರಮೇಶ್ ಅರವಿಂದ್ ಹಾಗೂ ಅಭಿಮಾನಿಗಳು ಇಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here