ಭಾರತದಲ್ಲಿರುವ ಈ ಸ್ಥಗಳಿಗೆ ಭೇಟಿ ನೀಡಿದರೆ ನಿಮ್ಮ ಸಾವು ಖಚಿತ. ಯಾವುವು ಆ ಸ್ಥಳಗಳು?

0
686
vismaya sthalagalu

ನಮ್ಮ ಭಾರತದವನ್ನು ಎಲ್ಲರು ಪುಣ್ಯಭೂಮಿ ಎನ್ನುತ್ತಾರೆ. ಯಾಕಂದ್ರೆ ದೇವಾನು ದೇವತೆಗಳ ವಾಸಸ್ಥಾನ ಭಾರತವಾಗಿದೆ. ಹಾಗಾಗಿ ಭಾರತದಲ್ಲಿರುವ ಸ್ಥಳಗಳನ್ನು ನೋಡಲು ಹಲವರು ಅನೇಕ ಕಡೆಗಳಿಂದ ಬರುತ್ತಾರೆ. ಅಲ್ಲದೆ ನಮ್ಮ ಭಾರತ ವಾಸ್ತುಶಿಲ್ಪಗಳ ನೆಲೆವೀಡಾಗಿದೆ. ಹಾಗಾಗಿ ನಮ್ಮಲ್ಲಿ ಗಲ್ಲಿಗೆ ಒಂದರಂತೆ ದೇವಾಲಯಗಳಿವೆ. ಅವುಗಳನ್ನು ನೋಡಲು ದೇಶ, ವಿದೇಶಗಳಿಂದಲೂ ಜನರು ಬರುತ್ತಾರೆ. ನಮ್ಮ ಭಾರತ ದೇವಾಲಯಗಳಿಗೆ ಹಾಗು ಅನೇಕ ಸಂಸ್ಕೃತಿಗಳಿಗೆ ಹೆಸರಾಗಿರುವ ರೀತಿ, ಅನೇಕ ವಿಚಿತ್ರಗಳಿಗೂ ಸಹ ಹೆಸರುವಾಸಿಯಾಗಿದೆ. ಹೌದು. ಅನೇಕ ನಿಗೂಢ ರಹಸ್ಯಗಳು ಹಾಗು ವಿಚಿತ್ರ ಸ್ಥಳಗಳು ನಮ್ಮಲ್ಲಿವೆ. ಇನ್ನು ಆ ಸ್ಥಳಗಳ ಬಳಿ ಯಾರು ಸಹ ಹೋಗುವುದಿಲ್ಲ. ಒಂದು ವೇಳೆ ಹೋದವರು, ಹಿಂದಿರುಗಿ ಬರುವುದಿಲ್ಲ ಎಂದು ಹೇಳುತ್ತಾರೆ. ಇಂತಹ ಸ್ಥಳಗಳು ನಮ್ಮ ಭಾರತದಲ್ಲಿ ಹಲವಿವೆ. ಈ ಸ್ಥಳಗ ಬಗ್ಗೆ ಕೇಳಿದರೆ, ನಿಜಕ್ಕೂ ಎಂಥವರ ಮೈ ಕೂಡ ರೋಮಾಂಚನವಾಗುತ್ತದೆ.

ಬ್ರಿಜ್ ರಾಜ್ ಭವನ್ ಅರಮನೆ

ಭಾರತದ ಅತ್ಯಂತ ಭಯಾನಕ ಸ್ಥಳಗಳಲ್ಲಿ ಈ ಸ್ಥಳವು ಸಹ ಒಂದಾಗಿದೆ. ಇನ್ನು ಈ ಅರಮನೆ ರಾಜಸ್ಥಾನದ ಕೋಟಾದಲ್ಲಿ ಇದೆ. ಇದೊಂದು ಅತ್ಯಂತ ಪುರಾತನವಾದ ಅರಮನೆಯಾಗಿದೆ. ಅಲ್ಲದೆ ಈ ಅರಮನೆಯ ಬಳಿ ಪ್ರೇತಗಳ ಕಾಟವಿದೆಯಂತೆ. ಆ ಪ್ರೇತಗಳು ರಾತ್ರಿ ಸಮಯದಲ್ಲಿ ಯಾರನ್ನು ಸುಮ್ಮನೆ ಬಿಡುವುದಿಲ್ಲವಂತೆ. ಅಲ್ಲದೆ ಅಲ್ಲಿನ ಕಾವಲುಗಾರರಿಗೆ ಕಪಾಳಕ್ಕೆ ಹೊಡೆಯುತ್ತವೆಯಂತೆ. ಇನ್ನು1857ರಲ್ಲಿ ಕೋಟಾದಲ್ಲಿ ಬ್ರಿಟಿಷ್ ನಿವಾಸಿಯಾಗಿ ಸೇವೆ ಸಲ್ಲಿಸುತ್ತಿದ್ದ ಮೇಜರ್ ಬರ್ಟ್‍ನ್ನ ಪ್ರೇತವಾಗಿದ್ದಾನೆ. ಎಂದು ನಂಬಲಾಗಿದೆ. ಹಾಗಾಗಿ ಇಲ್ಲಿ ಯಾರು ಸಹ ಹೋಗುಬ್ದುಲ್ಲ ಎಂದು ಹೇಳುತ್ತಾರೆ.

ಮಾರ್ಕೋನಹಳ್ಳಿ ಅಣೆಕಟ್ಟು

ಇದೊಂದು ಪ್ರಸಿದ್ಧವಾದ ಅಣೆಕಟಾಗಿದ್ದು, ಇಲ್ಲಿ ಬೈಕ್ ಸವಾರರೇ ಹೆಚ್ಚು ಅಪಾಯಕ್ಕೆ ಒಳಗಾಗುವುದು. ಯಾಕಂದ್ರೆ ಕೆಲವು ವರ್ಷಗಳ ಹಿಂದೆ ಬೈಕ್ ನಲ್ಲಿ ಬಂದ ಕೆಲವು ಸವಾರರು ಒಬ್ಬ ಮಹಿಳೆಯನ್ನು ಅಮಾನವೀಯವಾಗಿ ಕೊಂದು, ಇಲ್ಲೇ ಹೂಳಿದ್ದರಂತೆ. ಹಾಗಾಗಿ ಇಲ್ಲಿ ಯಾರೇ ಬೈಕ್ ಸವಾರರು ಬಂದರೆ ಅವರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ ಬೈಕ್ ಸವಾರರು ಇಲ್ಲಿ ಓಡಾಡಬಹುದು. ಆದ್ರೆ ಯಾವುದೇ ಕಾರಣಕ್ಕೂ ಅಣೆಕಟ್ಟೆಯಿಂದ ಕ್ರಾಸ್ ಆಗುವವರೆಗೂ, ಮಾರ್ಗ ಮಧ್ಯದಲ್ಲಿ ಬೈಕ್ ನಿಲ್ಲಿಸಬಾರದು. ನಿಲ್ಲಿಸಿದರೆ ಅವರ ಸಾವು ಖಚಿತವಂತೆ.

ರಾಜಸ್ಥಾನದ ಭಂಗಾರ್

ಇದೊಂದು ಅತ್ಯಂತ ಭಯಾನಕ ಪಿಶಾಚಿಗಳಿರುವ ಸ್ಥಳವಾಗಿದೆ. ಈ ಸ್ಥಳಕ್ಕೆ ಹೋದವರು, ಹಿಂದಿರುಗಿ ಬಂದಿರುವುದು ಇತಿಹಾಸದಲ್ಲಿ ಇಲ್ಲವಂತೆ. ಹೌದು. ಈ ಸ್ಥಳಕ್ಕೆ ಸೂರ್ಯೋದಯದ ಮೊದಲು ಹಾಗೂ ಸೂರ್ಯೋದಯದ ನಂತರದ ಸಮಯದಲ್ಲಿ ಹೋಗುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಮಗೆ ಭಯವಿಲ್ಲ, ನಾವು ಹೋಗುತ್ತೇವೆ ಎಂದು ಹೋದವರು, ಇದುವರೆಗೂ ಯಾರೊಬ್ಬರೂ ಹಿಂದಿರುಗಿ ಬಂದಿಲ್ಲ ಎಂದು ಸಮೀಪದ ಸ್ಥಳೀಯರು ಹೇಳುತ್ತಾರೆ.

ಡಿಸೋಜಾ ಚಾವ್ಲಾ

ಒಂದು ಕಾಲದಲ್ಲಿ ಇದೊಂದು ವಾಸಸ್ಥಾನವಾಗಿತ್ತು. ಆದರೆ ಇಲ್ಲೇ ಸುತ್ತಮುತ್ತಲಲ್ಲಿ ವಾಸವಿದ್ದ ಮಹಿಳೆಯೊಬ್ಬಳು, ಬಹಳಷ್ಟು ಮನನೊಂದು ಬಾವಿಗೆ ಬೀಳುತ್ತಾಳೆ. ಆದರೆ ಬಾವಿಗೆ ಬಿದ್ದ ನಂತರ, ಆಕೆಗೆ ಬದುಕಬೇಕೆಂಬ ಆಸೆಯಾಗುತ್ತಂತೆ. ಹಾಗಾಗಿ ಆಕೆ ಜೋರಾಗಿ ಕೂಗಾಡುತ್ತಾಳೆ. ಆದ್ರೆ ಅಲ್ಲೇ ಇದ್ದ ಸ್ಥಳೀಯರು ಸಹ ಆಕೆಯ ಸಹಾಯಕ್ಕೆ ಬರುವುದಿಲ್ಲ. ಹಾಗಾಗಿ ಆಕೆ ಆಗಿಂದ ಪ್ರೇತವಾಗಿ ಇಲ್ಲಿನ ಜನರಿಗೆ ಕಾಡುತ್ತಿದ್ದಾಳಂತೆ. ಹಾಗಾಗಿ ಇಲ್ಲಿಗೆ ಯಾರೊಬ್ಬರೂ ಸಹ ಹೋಗುವುದಿಲ್ಲವಂತೆ.

ಜಿಪಿ ಬ್ಲಾಕ್ ಮೀರುತ್

ಇಲ್ಲಿ ಹೆಚ್ಚು ಭಯಾನಕವಾದ ಘಟನೆಗಳು ನಡೆಯುತ್ತವಂತೆ. ಹೌದು. ೪ ಜನ ಹುಡುಗರು ಒಂದು ದೀಪದ ಬೆಳಕಿನಲ್ಲಿ ಕುಳಿತು ಮಧ್ಯವನ್ನು ಕುಡಿಯುತ್ತಿರುವಂತೆ ಕಾಣುತ್ತದೆಯಂತೆ. ಆದ್ರೆ ಹತ್ತಿರ ನೋಡಲು ಹೋದರೆ, ಮಾಯವಾಗುತ್ತಾರಂತೆ. ಅಲ್ಲದೆ ಒಂದು ಹುಡುಗಿ ಕೆಂಪು ಬಣ್ಣದ ಬಟ್ಟೆ ತೊಟ್ಟು, ಇಲ್ಲಿ ಓಡಾಡುತ್ತಿರುತ್ತಾಳಂತೆ. ಹತ್ತಿರ ಹೋಗಿ ನೋಡಲು ಆಗುವುದಿಲ್ಲವಂತೆ. ಇನ್ನು ಹತ್ತಿರ ಹೋಗಿ, ನೋಡೋಣ ಎಂದು ಹೋದವರು, ಇಲ್ಲಿಯವರೆಗೂ ಯಾರು ಸಹ ಹಿಂದಿರುಗಿ ಬಂದಿಲ್ಲವಂತೆ.

ದುಮಾಸ್ ಬೀಚ್

ಈ ದುಮಾಸ್ ಬೀಚ್ ಗುಜರಾತಿನ ಸೂರತ್ ನಲ್ಲಿದೆ. ಇದನ್ನು ಕಪ್ಪು ಮರಳುಗಳ ತೀರ ಎಂದು ಕರೆಯುತ್ತಾರೆ. ಅಲ್ಲದೆ ಇದೊಂದು ಹಿಂದೂಗಳ ಸಮಾಧಿ ನೆಲವೆಂದು ಹೇಳುತ್ತಾರೆ. ಈ ಸ್ಥಳಕ್ಕೆ ದಿನಬೆಳಗಾದ್ರೆ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ಆದರೆ ಬಂದವರು ನಿಗಧಿತ ಸ್ಥಳದಲ್ಲಿ ಮಾತ್ರ ಇರಬೇಕು. ಸ್ವಲ್ಪ ಮುಂದೆ ಹೋದರು, ಅವರ ಸಾವು ಕಟ್ಟಿಟ್ಟ ಬುತ್ತಿಯಂತೆ. ಹಾಗಾಗಿ ಇಲ್ಲಿನ ಕಾವಲುಗಾರರು ಬಹಳಷ್ಟು ಎಚ್ಚರ ವಹಿಸಿ, ಇಲ್ಲಿಗೆ ಬರುವ ಪ್ರವಾಸಿಗರನ್ನು ಕಾಯುತ್ತಾರೆ.

ನಿಜಕ್ಕೂ ಇಂತಹ ಸ್ಥಳಗಳನ್ನು ನೋಡಿದಾಗ ಒಂದು ಕ್ಷಣ ಉಸಿರು ನಿಲ್ಲುವಂತೆ ಆಗುತ್ತದೆ. ಯಾಕಂದ್ರೆ ನಾವು ಎಷ್ಟೇ ಧೈರ್ಯಶಾಲಿಗಳಾಗಿದ್ದರು, ಇಂತಹ ಸ್ಥಳಗಳ ಮುಂದೆ ಸೋತು ಬಿಡುತ್ತೇವೆ. ಯಾಕಂದ್ರೆ ಈ ಸ್ಥಳಗಳು ಅಷ್ಟೊಂದು ಭಯಾನಕವಾದ ಶಕ್ತಿಗಳನ್ನು ಹೊಂದಿರುತ್ತವೆ.

LEAVE A REPLY

Please enter your comment!
Please enter your name here