2011 ನೇ ವಿಶ್ವ ಕಪ್ ಜಯಭೇರಿಗೆ ಇಂದು 8 ವರ್ಷ – ಇಲ್ಲಿವೆ ನೋಡಿ ಅದರ ನೆನಪುಗಳು

0
826
world cup final

ಕ್ರಿಕೆಟ್ ಆಟವು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಕಿರಿಯ ವಯಸ್ಸಿನಿಂದ ಹಿರಿಯ ವಯಸ್ಸಿನವರೆಗೂ ಪ್ರತಿಯೊಬ್ಬರೂ ಇಷ್ಟ ಪಡುವ ಆಟ. ಆದೇನೂ ಒಂಥರಾ ಕ್ರಿಕೆಟ್ ಗೂ ನಮಗೂ ನಂಟು ಅಂತಾನೆ ಹೇಳಬಹುದು.. ಸಣ್ಣ ವಯಸ್ಸಿನಿಂದಲೂ ನಾವು ಕ್ರಿಕೆಟ್ ನೋಡುತ್ತಾ, ಆಡುತ್ತಾ ಬೆಳೆದಿದ್ದೇವೆ. ಕ್ರಿಕೆಟ್ ಅಲ್ಲಿ ಬಹಳ ಮುಖ್ಯವಾದ ಹಾಗೂ ಪ್ರತಿಷ್ಠೆ ತರುವ ಕಪ್ ಎಂದರೆ ಅದೂ ವಿಶ್ವ ಕಪ್. ಹೌದೂ ಇಂದಿಗೆ ಭಾರತ ವಿಶ್ವ ಕಪ್ ಗೆದ್ದು 8 ವರ್ಷಗಳಾಗಿವೆ. ಈ ದಿನ ಕ್ರಿಕೆಟ್ ಪ್ರೇಮಿಗಳು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಧೋನಿ ನಮ್ಮ ದೇಶಕ್ಕೆ ಈ ಹಿಂದೆ ವಿಶ್ವ ಕಪ್ ತಂದುಕೊಟ್ಟಿದ್ದರು

ಧೋನಿ ನಮ್ಮ ಭಾರತ ದೇಶಕ್ಕೆ ಈ ಹಿಂದೆ ವಿಶ್ವ ಕಪ್ ತಂದುಕೊಟ್ಟಿದರು, ಇದರ ಕ್ರೆಡಿಟ್ ನಾವು ಧೋನಿ ಅವರಿಗೆ ಕೊಡಬೇಕಾಗುತ್ತದೆ. ವಿಶ್ವ ಕಪ್ ಗೆಲ್ಲುವ ಕನಸನ್ನು ನಮ್ಮ ಇಡೀ ಭಾರತ ತಂಡ ಸಾಕಾರ ಗೊಳಿಸಿತ್ತು.. 2011 ರ ಇಸವಿಯಲ್ಲಿ ನಡೆದ ವರ್ಲ್ಡ್ ಕಪ್ ಅಲ್ಲಿ ಭಾರತ ವಿಜಯ ಪತಾಕಿ ಹಾರಿಸಿದ್ದರು. 2011ರ ಮೊದಲು 1983 ರಲ್ಲಿ ನಡೆದ ವರ್ಲ್ಡ್ ಕಪ್ ಅಲ್ಲಿ ಕಪಿಲ್ ದೇವ್ ನಾಯಕರಾಗಿದ್ದರು. ತಮ್ಮ ಚಾಣಕ್ಷ್ಯತನದ ನಾಯಕತ್ವದಿಂದ ಫೈನಲ್ ಅಲ್ಲಿ ವೆಸ್ಟ್ ಇಂಡೀಸ್ ವಿರುಧ್ಹ ಗೆದ್ದು ಕಪ್ ತಮ್ಮ ಮುಡಿಗೆ ಏರಿಸಿಕೊಂಡಿದ್ದರು.

1983ರ ವಿಶ್ವ ಕಪ್ ಅಲ್ಲಿ ಭಾರತ ಕಪಿಲ್ ದೇವ್ ನಾಯಕತ್ವದಲ್ಲಿ ಚಾಂಪಿಯನ್ಸ್ ಆಗಿ ಹೊರ ಬರುತ್ತಾರೆ

1983 ಅಲ್ಲಿ ನಡೆದ ವಿಶ್ವ ಕಪ್ ಅಲ್ಲಿ ಭಾರತ ಟಾಸ್ ಸೋತಿತು, ಎದುರಾಳಿಯ ತಂಡ ವೆಸ್ಟ್ ಇಂಡೀಸ್ ಭಾರತಕ್ಕೆ ಮೊದಲು ಬ್ಯಾಟ್ಟಿಂಗ್ ಕೊಡಬೇಕೆಂದು ನಿರ್ಧರಿಸುತ್ತಾರೆ. ಭಾರತ 183 ರನ್ಸ್ ಹೊಡೆಯುತ್ತಾರೆ. ಈ ರನ್ಸ್ ಅನ್ನು ಬೆನ್ನು ಹತ್ತಿದ ವೆಸ್ಟ್ ಇಂಡೀಸ್ 183 ರನ್ಸ್ ಹೊಡೆಯುವುದರಲ್ಲಿ ವಿಫಲರಾಗುತ್ತಾರೆ.. ಭಾರತ ವರ್ಲ್ಡ್ ಚಾಂಪಿಯನ್ಸ್ ಆಗಿ ಹೊರ ಬರುತ್ತಾರೆ.. ಇದಾದ ಬಳಿಕ ಭಾರತ ವಿಶ್ವ ಕಪ್ ಗೆಲ್ಲುವ ಕನಸು ಕನಸಾಗೆ ಉಳಿಯುತ್ತದೆ. ಕ್ರಿಕೆಟ್ ಅಭಿಮಾನಿಗಳು ಭಾರತ ವಿಶ್ವ ಕಪ್ ಅನ್ನು ಗೆಲ್ಲುವ ರೋಮಾಂಚಕ ಕ್ಷಣಗಳನ್ನು ನೋಡಲು 28 ವರ್ಷಗಳ ಕಾಲ ಕಾಯಬೇಕಾಗಿ ಬರುತ್ತದೆ.

2011ರಲ್ಲಿ ನಡೆದ ವಿಶ್ವ ಕಪ್ ಸರಣಿಯನ್ನು ಭಾರತ ದೇಶ ಗೆದ್ದು ಕಪ್ ಅನ್ನು ಬಾಚಿಕೊಳ್ಳುತ್ತಾರೆ

2011 ರಲ್ಲಿ ನಡೆದ ವರ್ಲ್ಡ್ ಕಪ್ ಭಾರತ ಗೆಲ್ಲುತ್ತಾರೆ ಎಂದು ಯಾರು ಸಹ ಊಹಿಸಿರುವುದಿಲ್ಲ.. ಎಲ್ಲಾ ಲೆಕ್ಕಚಾರಗಳನ್ನು ಧೋನಿ ತಲೆ ಕೆಳಗೆ ಮಾಡಿ ಫೈನಲ್ ಹಂತದ ವರೆಗೂ ತಂದು ನಿಲ್ಲಿಸುತ್ತಾರೆ.. ಸೆಮಿ ಫೈನಲ್ ಬದ್ಧ ವೈರಿ ಪಾಕಿಸ್ತಾನದ ಜೊತೆಗೆ ಗೆಲುತ್ತಾರೆ. ಇನ್ನೊಂದು ಗ್ರೂಪ್ ಅಲ್ಲಿ ಶ್ರೀಲಂಕಾ ಗೆದ್ದು ಫೈನಲ್ ಗೆ ಪಾದಾರ್ಪಣೆ ಮಾಡುತ್ತಾರೆ. ವರ್ಲ್ಡ್ ಕಪ್ ಫೈನಲ್ ಮ್ಯಾಚ್ ಭಾರತ vvs ಶ್ರೀಲಂಕಾ. ಶ್ರೀಲಂಕಾ ತಂಡದ ನಾಯಕ ಸಂಗಾಕರ ಟಾಸ್ ಗೆದ್ದು ಮೊದಲು ಬ್ಯಾಟ್ಟಿಂಗ್ ಮಾಡುವ ನಿರ್ಣಯ ತೆಗೆದುಕೊಳ್ಳುತ್ತಾರೆ.

ಮಿಡಿಲ್ ಆರ್ಡರ್ ಅಲ್ಲಿ ಧೋನಿ ಬಂದು ಮಿಂಚುತ್ತಾರೆ ಗೇಮ್ ಫಿಫಿನಿಶರ್ ಎಂದೇ ಎಮ್‌ಎಸ್‌ಡಿ ಗುರುತಿಸಿಕೊಳ್ಳುತ್ತಾರೆ.

ಅಂತಿಮವಾಗಿ ಶ್ರೀಲಂಕಾ 274 ರನ್ಸ್ ಹೊಡೆಯುವುದರಲ್ಲಿ ಯಶಸ್ವಿ ಆಗುತ್ತಾರೆ. 275 ರನ್ಸ್ ಹೊಡೆಯಲು ಭಾರತ ತಂಡ ಮುಂದಾಗುತ್ತದೆ. ಸ್ಟಾರ್ಟಿಂಗ್ ಅಲ್ಲೇ ಸಚಿನ್ ಹಾಗೂ ಸೆಹ್ವಾಗ್ ವಿಕೆಟ್ ಪತನವಾಗುತ್ತದೆ. ಆನಂತರ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಜೊತೆ ಆಟ ಆಡುತ್ತಾರೆ. ಮಿಡಿಲ್ ಆರ್ಡರ್ ಅಲ್ಲಿ ಧೋನಿ ಬಂದು ಮಿಂಚುತ್ತಾರೆ. ಧೋನಿ ಫಿನಿಷ್ ಆಫ್ ಇನ್ ಹಿಸ್ ಸ್ಟೈಲ್ ಅಂತಾ ಹೇಳುವ ರವಿ ಶಾಸ್ತ್ರಿ ಅವರ ಕಾಮೆಂಟರಿ ಈಗಲೂ ಜನ ಮರೆಯಲು ಸಾದ್ಯವೇ ಇಲ್ಲ. ಐತಿಹಾಸಿಕ ವಿಶ್ವ ಕಪ್ ಗೆಲುವಿಗೆ ಭಾರತ ಸಾಕ್ಷಿ ಆಗುತ್ತದೆ.

ಈ ರೀತಿ ಭಾರತ ಕಷ್ಟ ಪಡುವುದರಲ್ಲೇ ಗೆಲುವು ಇರೋದು ಎಂಬುದನ್ನ ತೋರಿಸಿಕೊಟ್ಟಿದೆ. ಹಾಗಾಗಿ ಮುಂದಿನ ದಿನಗಳಲ್ಲೂ ನಮ್ಮ ಭಾರತ ತಂಡದವರು ಇದೇ ರೀತಿ ಗೆಲುವು ತಂದರೆ ನಿಜಕ್ಕೂ ಅದು ಭಾರತಕ್ಕೆ ಹೆಮ್ಮೆ ತರುವ ವಿಷಯವಾಗಿದೆ.

LEAVE A REPLY

Please enter your comment!
Please enter your name here