ಜೈ ಜಗದೀಶ್ ಅವರಿಗೆ ಪ್ರೇಮ ವಿವಾಹವನ್ನು ಮಾಡಿಸಿದ್ದರಂತೆ ಕನ್ನಡ ಚಿತ್ರರಂಗದ ಖ್ಯಾತ ನಟ

0
462

ಬಿಗ್ ಬಾಸ್ ಹೌದು ಸ್ವಾಮಿ. ಬಿಗ್ ಬಾಸ್ ಮನೆಗೆ ಈ ಬಾರಿ ಕೇವಲ ಸೆಲೆಬ್ರಿಟಿಗಳು ಮಾತ್ರ ಲಗ್ಗೆ ಇಟ್ಟಿದ್ದಾರೆ. ಚಿತ್ರರಂಗದಲ್ಲಿ ಅನೇಕ ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದವರು ಜೈ ಜಗದೀಶ್ ಅವರು. ಈ ಹಿಂದೆ ಚಿತ್ರರಂಗದ ಕಲಾವಿದರ ಕುರಿತು ಬಾಸ್ ರವಿ ಬೆಳಗೆರೆ ಅವರು ಅನೇಕ ಕುತೂಹಲಕಾರಿಯಾದ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಮನೆಯಿಂದ ಬೆಳಗೆರೆ ಹೋದ ನಂತರ ಅತ್ಯಂತ ಹಿರಿಯ ಸ್ಥಾನದಲ್ಲಿ ಇರುವವರು ಜೈ ಜಗದೀಶ್. ಜೈ ಜಗದೀಶ್ ಅವರು ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರಿಗೆ ಎರಡು ಮದುವೆ ಆಗಿರುವ ವಿಚಾರವು ಬಿಗ್ ಬಾಸ್ ಮನೆಯಲ್ಲಿ ಬಯಲಾಗಿದೆ. ಜೈ ಜಗದೀಶ್ ಅವರು ಹಂಚಿಕೊಂಡಿರುವ ಆ ವಿಷಯವಾದರು ಏನು?. ಮುಂದೆ ಓದಿ

ಎರಡು ಮದುವೆ ಆಗಿದ್ದರು

ಬಿಗ್ ಬಾಸ್ ಸ್ಪರ್ಧಿಗಳಿಗೆ ಕ್ಷಮೆ ಕೇಳುವ ಒಂದು ಟಾಸ್ಕ್ ಏರ್ಪಡಿಸಿದ್ದು, ಇದೆ ವೇಳೆಯಲ್ಲಿ ವಿಜಯಲಕ್ಷ್ಮಿ ಸಿಂಗ್ ಅವರ ಜೊತೆ ಮದುವೆಯಾಗುವುದಕ್ಕು ಮುನ್ನ, ಮತ್ತೊಬ್ಬ ಯುವತಿಯ ಜೊತೆ ಪ್ರೇಮ ವಿವಾಹವಾಗಿದ್ದರಂತೆ. ಆ ಯುವತಿಯ ಹೆಸರು ರೂಪ. ರೂಪ ಅವರ ಜೊತೆ ಪ್ರೇಮವಿವಾಹವಾಗಿದ್ದು, 6 ವರ್ಷಗಳ ಕಾಲ ದಾಂಪತ್ಯ ಜೀವನವನ್ನು ಸಹ ನಡೆಸಿದ್ದರು. ಇನ್ನು ಇವರಿಗೆ ಒಂದು ಮಗು ಸಹ ಇತ್ತು ಎನ್ನುವ ವಿಷಯವನ್ನು ನೆನೆದು ತುಂಬ ಭಾವುಕರಾಗಿದ್ದರು. ಇನ್ನು ಇವರ ಪ್ರೇಮ ವಿವಾಹಕ್ಕೆ ಪ್ರೋತ್ಸಾಹವನ್ನು ನೀಡಿದ್ದು, ಕನ್ನಡ ಚಿತ್ರರಂಗದ ಮೇರು ನಟ ಎನ್ನುವ ವಿಷಯವನ್ನು ಸ್ವತಃ ಜೈ ಜಗದೀಶ್ ಅವರು ಬಿಗ್ ಬಾಸ್ ನಲ್ಲಿ ಹೇಳಿಕೊಂಡಿದ್ದಾರೆ. ಯಾರು ಆ ನಟ? ಮುಂದೆ ಓದಿ

ಪ್ರೇಮ ಪಕ್ಷಿಗಳಿಗೆ ನೆರವಾಗಿದ್ದು ಸಾಹಸ ಸಿಂಹ ವಿಷ್ಣುವರ್ಧನ್

1980 ರ ದಶಕ ಆಗ ಜೈ ಜಗದೀಶ್ ಅವರು ಚಿತ್ರರಂಗದಲ್ಲಿ ಹೆಸರು ಮಾಡಿದ್ದರು. ಇದೆ ಸಮಯದಲ್ಲಿ ರೂಪ ಎನ್ನುವ ಯುವತಿಯ ಜೊತೆ ಪ್ರೀತಿಯಲ್ಲಿದ್ದರು. ಮದುವೆಯಾಗಲು ಮುಂದಾಗಿದ್ದಾಗ, ರೂಪ ಅವರ ಅಪ್ಪ ಮದುವೆಗೆ ವಿರೋಧವನ್ನು ವ್ಯಕ್ತ ಪಡಿಸಿದ್ದರು. ಆದ್ದರಿಂದ ರೂಪ ಮತ್ತು ಜೈ ಜಗದೀಶ್ ಓಡಿ ಹೋಗಿ ಮದುವೆಯಾಗಬೇಕೆಂದು ನಿರ್ಧರಿಸಿದ್ದರು. ಆಗ ಈ ಪ್ರೇಮ ಪಕ್ಷಿಗಳಿಗೆ ನೆರವಾಗಿದ್ದು ಸಾಹಸ ಸಿಂಹ ವಿಷ್ಣುವರ್ಧನ್. ಮದುವೆಯಾಗಬೇಕೆಂದು ಓಡಿ ಬಂದಿದ್ದ ಜಗದೀಶ್ ಮತ್ತು ರೂಪ ಅವರಿಗೆ, ಸಾಹಸಸಿಂಹ ತಮ್ಮ ಮನೆಯಲ್ಲಿ ಆಶ್ರಯವನ್ನು ನೀಡಿದ್ದರು. ಎರಡು ದಿನಗಳ ಕಾಲ ತಮ್ಮ ಮನೆಯಲ್ಲಿ ಇಟ್ಟುಕೊಂಡು ಮದುವೆಯ ತಯಾರಿಯನ್ನು ನಡೆಸಿದ್ದರಂತೆ. ಇಬ್ಬರಿಗೆ ಮದುವೆಯಾಗಲು ಸಹಕಾರವನ್ನು ನೀಡಿದ್ದು, ತಾವೆ ಎದುರು ನಿಂತು ಮದುವೆಯನ್ನು ಮಾಡಿಸಿದ್ದರಂತೆ.

ಅಭಿಮಾನ್ ಸ್ಟುಡಿಯೋ ದೇವಸ್ಥಾನದಲ್ಲಿ ನಡೆದಿತ್ತು ಮದುವೆ

ಈಗ ನೀವು ನೋಡುತ್ತಿರುವ ಅಭಿಮಾನ್ ಸ್ಟುಡಿಯೋದಲ್ಲಿ ಮೊದಲು ಒಂದು ದೇವಸ್ಥಾನವಿತ್ತು. ವಿಷ್ಣುವರ್ಧನ್, ಭಾರತಿ ಮತ್ತು ವಿಷ್ಣುವರ್ಧನ್ ಅವರ ಗೆಳೆಯರು ಎಲ್ಲರು ಸೇರಿ ಮದುವೆಯನ್ನು ಮಾಡಿಸಿದ್ದರು. ವಿಪರ್ಯಾಸವೆಂದರೆ ಇಂದು ಅದೆ ಜಾಗದಲ್ಲಿ ವಿಷ್ಣುವರ್ಧನ್ ಅವರ ಸಮಾಧಿ ಸಾಕ್ಷಿಯಾಗಿದೆ.

ಜೈ ಜಗದೀಶ್ ಬಂಧನ ಚಿತ್ರದಲ್ಲಿ ವಿಷ್ಣು ಜೊತೆ ಪರದೆಯನ್ನು ಹಂಚಿಕೊಂಡಿದ್ದರು. ಜೈ ಜಗದೀಶ್, ರಾಜೇಂದ್ರ ಸಿಂಗ್ ಬಾಬು ವಿಷ್ಣುವರ್ಧನ್ ಅವರಿಗೆ ಬಹಳ ಆಪ್ತ ಸ್ನೇಹಿತರಾಗಿದ್ದರು. ನಂತರ ರಾಜೇಂದ್ರ ಸಿಂಗ್ ಬಾಬು ಅವರ ಸಹೋದರಿಯಾದ ವಿಜಯ್ ಲಕ್ಷ್ಮಿ ಸಿಂಗ್ ಅವರ ಜೊತೆ ವಿವಾಹವಾಗುತ್ತಾರೆ. ಈ ದಂಪತಿಗೆ ವೈಭವಿ, ವೈಸಿರಿ, ವೈನಿಧಿ ಎಂಬ ಹೆಸರಿನ ಮೂರು ಹೆಣ್ಣು ಮಕ್ಕಳು ಇದ್ದಾರೆ.

LEAVE A REPLY

Please enter your comment!
Please enter your name here