ವಿಷ್ಣು ಸ್ಮಾರಕದ ಜೊತೆಗೆ ರಂಗ ತರಬೇತಿ ನಿರ್ಮಿಸಲು ನಿರ್ಧರಿಸಿದ ಭಾರತಿ ವಿಷ್ಣುವರ್ಧನ್

0
707
vishnu ranga tarabeti

ಬಹಳ ದಿನಗಳಿಂದ ಕಾಯುತ್ತಿದ್ದ ವಿಷ್ಣು ಸ್ಮಾರಕದ ವಿಚಾರ ಮೊನ್ನೆಯಷ್ಟೇ ಬಗೆಹರಿದಿದೆ. ಹೌದು. ಕಳೆದ ಕೆಲವು ದಿನಗಳ ಹಿಂದೆ ವಿಷ್ಣುವರ್ಧನ್ ಅವರ ಪತ್ನಿ ಭಾರತಿ ಅವರು ಒಂದು ಹೇಳಿಕೆ ನೀಡಿದ್ದರು. ಸುಮಾರು 10 ವರ್ಷಗಳಿಂದ ತಡೆಯಾಗುತ್ತಿದ್ದ ವಿಷ್ಣು ಸ್ಮಾರಕದ ವಿಚಾರ ಇಂದು ಪೂರ್ಣವಾಗಿದೆ. ಯಾಕಂದ್ರೆ ನ್ಯಾಯಾಲಯ ಸ್ಮಾರಕ ನಿರ್ಮಿಸಲು ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ಇನ್ನೇನು ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಹೇಳಿದ್ದರು. ಅದಾದ ನಂತರ ಮೊನ್ನೆಯಷ್ಟೇ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಒಂದು ಹೇಳಿಕೆ ನೀಡಿದ್ದರು. ಹೌದು. ಮೊನ್ನೆ ಮಾತನಾಡಿದ ಅನಿರುದ್ಧ್ ಅವರು, ಸ್ಮಾರಕದ ಬಗ್ಗೆ ತಿಳಿಸಿದರು. ಈಗ ಸ್ಮಾರಕದ ನೀಲಿ ನಕ್ಷೆ ತಯಾರಾಗಿದ್ದು, ಆದಷ್ಟು ಬೇಗ ಕಾಮಗಾರಿ ಶುರುವಾಗುತ್ತದೆ ಎಂದು ತಿಳಿಸಿದ್ದರು. ಆದ್ರೆ ಅದರ ಜೊತೆಗೆ ಈಗ ಭಾರತಿ ಅವರು ಮತ್ತೊಂದು ಹೇಳಿಕೆ ನೀಡಿದ್ದಾರೆ. ಹೌದು. ಸ್ಮಾರಕದ ಜೊತೆಗೆ ರಂಗ ತರಬೇತಿಯು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಸ್ಮಾರಕದ ಜೊತೆಗೆ ರಂಗ ತರಬೇತಿ ನಿರ್ಮಾಣ

ಮೈಸೂರು ಜಿಲ್ಲೆಯ ಹಾಲಾಳು ಗ್ರಾಮದಲ್ಲಿ ವಿಷ್ಣು ಸ್ಮಾರಕ ನಿರ್ಮಾಣವಾಗಲು ಎಲ್ಲ ರೀತಿಯಲ್ಲಿ ಸಜ್ಜಾಗುತ್ತಿದೆ. ಈ ಸಮಯದಲ್ಲಿ ಭಾರತಿ ಅವರು ಮತ್ತೊಂದು ವಿಶೇಷ ಹೇಳಿಕೆ ನೀಡಿದ್ದಾರೆ. ಹೌದು. ವಿಷ್ಣು ಸ್ಮಾರಕದ ವಿಚಾರವಾಗಿ ಬಹಳಷ್ಟು ತಗಾದೆಗಳು ಎದುರಾದವು. ಆದ್ರೆ ಅದೆಲ್ಲವನ್ನು ಮೀರಿ ಇಂದು ಕಾಮಗಾರಿ ಶುರು ಮಾಡಲು ಅವಕಾಶ ಸಿಕ್ಕಿದೆ. ಆದ್ರೆ ಇಲ್ಲಿ ಕೇವಲ ಸ್ಮಾರಕ ಮಾತ್ರ, ನಿರ್ಮಾಣ ಮಾಡುತ್ತಿಲ್ಲ. ಬದಲಿಗೆ ರಂಗ ತರಬೇತಿಯನ್ನು ನಿರ್ಮಾಣ ಮಾಡುತ್ತಿದ್ದೇವೆ. ಯಾಕಂದ್ರೆ ಇದು ವಿಷ್ಣುವರ್ಧನ್ ಅವರ ಕನಸಾಗಿತ್ತು. ಅವರು ಸಾಯುವ ಮೊದಲೇ ಹೇಳಿದ್ದರು. ನಾನು ಸತ್ತ ಮೇಲೆ, ನನ್ನ ಸ್ಮಾರಕದಲ್ಲೇ, ಒಂದು ರಂಗ ತರಬೇತಿ ನಿರ್ಮಾಣ ಮಾಡಬೇಕು. ನಂತರ ಆ ತರಬೇತಿಯಿಂದ ಹಲವರಿಗೆ ಉಪಯೋಗವಾಗಬೇಕು ಎಂದು ತಿಳಿಸಿದ್ದರು. ಹಾಗಾಗಿ ಸ್ಮಾರಕದ ಜೊತೆಗೆ, ರಂಗ ತರಬೇತಿಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ಕೇವಲ ಸ್ಮಾರಕವಲ್ಲ, ಇದೊಂದು ರಾಜ್ಯದ ಮಾಡೆಲ್

ಇನ್ನು ಸ್ಮಾರಕದ ವಿಚಾರವಾಗಿ ಮಾತನಾಡಿದ ಅನಿರುದ್ಧ್ ಅವರು ಕೆಲವು ಮಾತುಗಳನ್ನು ಹೇಳಿದ್ದಾರೆ. ಹೌದು. ಮೈಸೂರಿನಲ್ಲಿ ಸ್ಮಾರಕ ಆಗ್ತಿರೋದು ತುಂಬಾನೇ ಖುಷಿಯಾಗಿದೆ. ಅಪ್ಪಾಜಿಯವರ ಕನಸು ಕೂಡ ಇದೇ ಆಗಿತ್ತು. ಯಾಕಂದ್ರೆ ಕಲೆ ಇರುವವರಿಗೆ ಅವಕಾಶಗಳು ಸಿಗುವುದು ಕಡಿಮೆ. ಹಾಗಾಗಿ ಅಂಥವರಿಗೆ ಈ ತರಬೇತಿಯಿಂದ ಸಹಾಯವಾಗಬೇಕು ಎಂದು ತಿಳಿಸಿದ್ದರು. ಹಾಗಾಗಿ ಇದು ಕೇವಲ ಸ್ಮಾರಕವಲ್ಲ, ಇದೊಂದು ರಾಜ್ಯದ ಮಾಡೆಲ್. ರಂಗ ತರಬೇತಿಯಿಂದ ಹಿಡಿದು ಸಿನಿಮಾಗೆ ಸಂಬಂಧಿಸಿದ ಎಲ್ಲ ರೀತಿಯ ಟ್ರೈನಿಂಗ್ ಇಲ್ಲಿ ಇರುತ್ತದೆ. ದಕ್ಷಿಣ ಭಾರತದಲ್ಲಿ ಇದೊಂದು ಉತ್ತಮವಾದ ಮ್ಯೂಸಿಯಂ ಆಗಬೇಕಿದೆ. 10 ವರ್ಷಗಳ ಕಾಲ ನಡೆದ ಹೋರಾಟದ ಫಲ ಇಂದು ದೊರಕಿದೆ. ಎರಡು ವರ್ಷದಲ್ಲಿ ಈ ಸ್ಮಾರಕ ಹಾಗೂ ಮ್ಯೂಸಿಯಂ ಮುಕ್ತಾಯವಾಗಲಿದೆ ಎಂದು ತಿಳಿಸಿದರು.

ಈ ಜಾಗದಲ್ಲಿದ್ದವರಿಗೆ ಹಣ ನೀಡುವುದಿಲ್ಲ

ವಿಷ್ಣು ಸ್ಮಾರಕದ ಜಗದ ವಿಚಾರವಾಗಿ ಸಕಹ್ತು ಮಾತುಕತೆಗಳು ನಡೆದಿದ್ದವು. ಜೊತೆಗೆ ಆ ಜಾಗದಲ್ಲಿದ್ದ ಜನರಿಗೆ ಭಾರತಿ ಅವರು ಅಂಗಲಾಚಿ ಬೇಡಿದ್ದರು. ನಿಮಗೆ ಎಷ್ಟು ಹಣ ಬೇಕು ಕೇಳಿ ಕೊಡುತ್ತೇವೆ. ಆದ್ರೆ ಈ ಜಾಗ ಬಿಟ್ಟುಕೊಡಿ ಎಂದು ಕೇಳಿದಾಗ ಅವರು ಅದಕ್ಕೆ ಒಪ್ಪಿರಲಿಲ್ಲ. ಆದರೆ ನಂತರ ನ್ಯಾಯಾಲಯವೇ, ಆ ಜಾಗವನ್ನ ವಿಷ್ಣು ಸ್ಮಾರಕಕ್ಕೆ ನೀಡಲಾಗುತ್ತಿದೆ ಎಂದು ತಿಳಿಸಿತು. ಆದ್ರೆ ಈಗ ಈ ಜಾಗದಲ್ಲಿದ್ದವರಿಗೆ ನಾವು ಯಾವುದೇ ರೀತಿ ಹಣ ನೀಡುವುದಿಲ್ಲ ಎಂದು ಭಾರತಿ ಅವರು ತಿಳಿಸಿದ್ದಾರೆ. ಯಾಕಂದ್ರೆ, ಮೊದಲೇ ಜಾಗ ಬಿಟ್ಟುಕೊಡಿ ಹಣ ನೀಡುತ್ತೇವೆ ಎಂದಾಗ ಅವರು ಬಿಟ್ಟುಕೊಡಲಿಲ್ಲ. ಆದ್ರೆ ಈಗ ಇದು ಸರ್ಕಾರಿ ಜಾಗ. ನ್ಯಾಯಾಲಯವೇ ಈ ಜಾಗವನ್ನು ನಮಗೆ ನೀಡಿದೆ. ಹಾಗಾಗಿ ಇಲ್ಲಿದ್ದವರಿಗೆ ನಾನು ಯಾವುದೇ ರೀತಿ ಹಣ ನೀಡುವುದಿಲ್ಲ ಎಂದು ಭಾರತಿ ಅವರು ತಿಳಿಸಿದ್ದಾರೆ.

ಒಟ್ಟಿನಲ್ಲಿ ವಿಷ್ಣು ಸ್ಮಾರಕದ ಕಾಮಗಾರಿ ಶುರುವಾಗುತ್ತಿದೆ. ಜೊತೆಗೆ ಅಲ್ಲಿ ರಂಗ ತರಬೇತಿಯನ್ನು ನಿರ್ಮಾಣ ಮಾಡಲು ನಿರ್ಧರಿಸಿದ್ದು, ಅನೇಕರಿಗೆ ಅದರ ಉಪಯೋಗವಾಗಲಿದೆ.

LEAVE A REPLY

Please enter your comment!
Please enter your name here