ವಿಷ್ಣು ಹುಟ್ಟುಹಬ್ಬಕ್ಕಾಗಿ ಪುತ್ಥಳಿ ಅನಾವರಣಗೊಳಿಸಲಿರುವ ಅಭಿಮಾನಿಗಳು. ಪ್ರತಿಮೆಯ ವಿಶೇಷವಾದ್ರೂ ಏನು?

0
427

ಚಂದನವನದಲ್ಲಿ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಾಹಸಸಿಂಹ ಅಂದ್ರೆ ಪ್ರತಿಯೊಬ್ಬರಿಗೂ ಇಷ್ಟ. ಯಾಕಂದ್ರೆ ತಮ್ಮ ಅದ್ಭುತ ನಟನೆ ಮೂಲಕ ಎಲ್ಲರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಹೌದು. ಯಜಮಾನ, ಕೋಟಿಗೊಬ್ಬ, ಸಿಂಹಾದ್ರಿಯ ಸಿಂಹ, ಸೂರ್ಯವಂಶ ಈ ರೀತಿಯ ಸಿನಿಮಾಗಳನ್ನು ಜನರು ಇಂದಿಗೂ ಮರೆತಿಲ್ಲ. ಜೊತೆಗೆ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಹಾಗಾಗಿ ಅವರ ಅಭಿಮಾನಿಗಳು ಸದಾಕಾಲ ಏನಾದ್ರು ಒಂದು ಉತ್ತಮ ಅಕಾರ್ಯವನ್ನು ಮಾಡುತ್ತಲೇ ಇರುತ್ತಾರೆ. ಅದಕ್ಕೋಸ್ಕರ ತಮ್ಮದೇ ಆದ ಒಂದು ಸಮಿತಿಯನ್ನು ಕೂಡ ರಚಿಸಿಕೊಂಡಿದ್ದಾರೆ. ಅದಕ್ಕೆ ವಿಷ್ಣು ಸೇನಾ ಸಮಿತಿ ಎಂಬ ಹೆಸರನ್ನು ಸಹ ಇಟ್ಟಿದ್ದಾರೆ. ಈಗ ಇದೇ ತಿಂಗಳ ೧೮ರಂದು ಅವರ ಹುಟ್ಟುಹಬ್ಬವಿದೆ. ಅದಕ್ಕೋಸ್ಕರ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಈ ಮಧ್ಯೆ ಸಾಹಸಸಿಂಹನ ವಿಶೇಷ ಪುತ್ಥಳಿಯು ಸಹ ಅನಾವರಣಗೊಳ್ಳಲಿದೆಯಂತೆ.

ಗಡಿನಾಡಲ್ಲಿ ಅನಾವರಣಗೊಳ್ಳಲಿದೆ ಯಜಮಾನನ ಪುತ್ಥಳಿ

ಇದೇ ತಿಂಗಳು ಸಾಹಸಿಂಹನ ಹುಟ್ಟುಹಬ್ಬವಿದೆ. ಹಾಗಾಗಿ ಅವರ ಅಭಿಮಾನಿಗಳು ವಿಶೇಷವಾದ ಕಾರ್ಯಕ್ರಮಗಳನ್ನು ಮಾಡಲು ನಿರ್ಧರಿಸಿದ್ದಾರೆ. ಆದ್ರೆ ಈ ಮಧ್ಯೆ ಅವರ ಪುತ್ಥಳಿಯು ಸಹ ಅನಾವರಣ ಆಗಲಿದೆಯಂತೆ. ಆದರೆ ಇದರಲ್ಲೇನು ವಿಶೇಷ ಅನ್ನೋದು ನೀವು ಯೋಚಿಸಬಹುದು. ಯಾಕಂದ್ರೆ ಈಗಾಗಲೇ ವಿಷ್ಣು ಪುತ್ಥಳಿಗಳು ಸ್ಕಷ್ಟಿವೆ. ಅದರಲ್ಲಿ ಇದು ಸಹ ಒಂದು ಎಂದು ನೀವು ಭಾವಿಸಬಹುದು. ಆದ್ರೆ ಈ ಪುತ್ಥಳಿ ಬಹಳ ವಿಶೇಷವಾಗಿದೆಯಂತೆ. ಹೌದು. ಈ ಹಿಂದೆ ನಿರ್ಮಿಸಿರುವ ವಿಷ್ಣು ಪುತ್ಥಳಿಗಳಿಗಿಂತ ಈ ಪುತ್ಥಳಿ ಬಹಳಷ್ಟು ವಿಶಿಷ್ಟವಾಗಿರಲಿದೆಯಂತೆ.

ವಿಷ್ಣು ಅಪ್ಪಟ ಅಭಿಮಾನಿ ಅನಾವರಣ ಮಾಡಲಿದ್ದಾರೆ

ಇನ್ನು ಈ ಪ್ರತಿಮೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಅಹನ್ಯ ಗ್ರಾಮದಲ್ಲಿ ಅನಾವರಣ ಆಗಲಿದೆ. ವಿಶೇಷ ಏನು ಅಂದ್ರೆ ಅಹನ್ಯ ಗ್ರಾಮದ ಸುತ್ತ ಎತ್ತ ನೋಡಿದರು ಕಲ್ಲು ಬಂಡೆಗಳೇ ಕಾಣುತ್ತವೆ. ಈ ಮಧ್ಯೆ ವಿಷ್ಣುವಿನ ಪುತ್ಥಳಿಯನ್ನು ನಿರ್ಮಾಣ ಮಾಡುತ್ತಿದ್ದಾರಂತೆ. ಹೌದು. ಈ ಹಿಂದೆ ಅನೇಕ ಪುತ್ಥಳಿಗಳ ರೀತಿ ಈ ಪ್ರತಿಮೆ ಇರುವುದಿಲ್ಲ. ಇವರ ಚಿಂತನೆಯ ಪ್ರಕಾರ ಪ್ರತಿಮೆ ಬಹಳಷ್ಟು ವಿಶೇಷವಾಗಿದೆ ಇರುತ್ತದೆ. ಆ ವಿಶೇಷವನ್ನು ಹುಟ್ಟುಹಬ್ಬದ ದಿನವೇ ತಿಳಿಸುತ್ತೇವೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ. ಇನ್ನು ಆ ದಿನವನ್ನು ಬಹಳಷ್ಟು ಅದ್ದೂರಿಯಾಗಿ ಆಚರಿಸುತ್ತಿದ್ದಾರಂತೆ. ಅಲ್ಲದೆ ಅಂದು ಅಪಾರ ಸಂಖ್ಯೆ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆಯಂತೆ.

ವಿಷ್ಣು ಹುಟ್ಟುಹಬ್ಬಕ್ಕೆ ಸಾಥ್ ನೀಡಲಿರುವ ಕಿಚ್ಚ

ವಿಷ್ಣುವರ್ಧನ್ ಅವರ ಹುಟ್ಟುಹಬ್ಬಕ್ಕೆ ನಟ ಕಿಚ್ಚ ಸುದೀಪ್ ಶುಭಕೋರಿದ್ದಾರೆ. ಹೌದು. ಹುಟ್ಟುಹಬ್ಬಕ್ಕೆ ವಿಷ್ಣು ಸೇನಾ ಸಮಿತಿ ಮಾಡುತ್ತಿರುವ ಕಾರ್ಯಗಳನ್ನು ತಿಳಿದ ಸುದೀಪ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೋಟಿಗೊಬ್ಬನಿಗೆ ಶುಭಾಶಯ ಕೋರಿದ್ದಾರೆ. ಅಲ್ಲದೆ ಇದರ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ”ಯಜಮಾನ್ರಿಗೊಂದು ರಂಗನಮನ”. ಡಾ.ವಿಷ್ಣು ಅವರ ಹೆಸರನ್ನು ಕನ್ನಡಿಗರ ಮನದಾಳದಲ್ಲಿ ಹಚ್ಚ ಹಸಿರಾಗಿರಿಸಲು ಅವರ ಅಭಿಮಾನಿಗಳಿಂದ‌ “ಡಾ.ವಿಷ್ಣುವರ್ಧನ ನಾಟಕೋತ್ಸವ” ಎಂಬ ಅರ್ಥಪೂರ್ಣ ಕಾರ್ಯಕ್ರಮ ಸೆಪ್ಟೆಂಬರ್ 18 ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಈ ರಂಗೋತ್ಸವ ಯಶಸ್ವಿಯಾಗಲಿ. #ಯಜಮಾನ್ರ ಹೆಸರು ಅಜರಾಮರವಾಗಲಿ” ಎಂದಿದ್ದಾರೆ.

ಒಟ್ಟಿನಲ್ಲಿ ಸೆಪ್ಟೆಂಬರ್ 18ನೇ ದಿನಕ್ಕಾಗಿ ವಿಷ್ಣು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಯಾಕಂದ್ರೆ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಇರೋದ್ರಿಂದ, ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಜೊತೆಗೆ ಪುತ್ಥಳಿ ನಿರ್ಮಾಣ ಮಾಡುವ ಯೋಚನೆಯಲ್ಲೂ ಸಹ ಇದ್ದಾರೆ. ಒಟ್ಟಿನಲ್ಲಿ 18ನೇ ತಾರೀಖು ವಿಷ್ಣು ಅಭಿಮಾನಿಗಳಿಗೆ ಹಬ್ಬದ ದಿನವಾಗಿರಲಿದೆ.

LEAVE A REPLY

Please enter your comment!
Please enter your name here