ವಿಶ್ವ ಕಪ್ ನಲ್ಲಿ ಹೊಸ ದಾಖಲೆಯನ್ನು ಬರೆಯಲಿರುವ ವಿರಾಟ್ ಕೊಹ್ಲಿ. ಯಾವುದು ಆ ದಾಖಲೆ

0
686

ವಿಶ್ವಕಪ್ ಪಂದ್ಯಾವಳಿಗಳು ಆರಂಭವಾಗಿದ್ದು ಭಾರತ ತಂಡ ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನವನ್ನು ನೀಡುತ್ತಿದೆ. ಸತತ 3 ಪಂದ್ಯಗಳಲ್ಲಿ ಭಾರತ ವಿಜಯ ಪತಾಕೆಯನ್ನು ಹಾರಿಸಿದೆ. ಮೊದಲನೆ ಮ್ಯಾಚ್ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದಿದ್ದು, ಎರಡನೇ ಮ್ಯಾಚ್ ಆಸ್ಟ್ರೇಲಿಯ ವಿರುದ್ದ ಗೆದ್ದು, ಮೂರನೇ ಪಂದ್ಯ ಬದ್ದ ವೈರಿಯ ಪಾಕಿಸ್ತಾನದ ಜೊತೆಗೆ ಗೆಲ್ಲುತ್ತಾರೆ. ವಿರಾಟ್ ಕೊಹ್ಲಿ ಅವರು ಸಹ ಅದ್ಬುತವಾಗಿ ನಾಯಕತ್ವವನ್ನು ಮಾಡುತ್ತಿದ್ದಾರೆ. ತಂಡದ ಆಟಗಾರರು ಸಹ ಉತ್ತಮವಾದ ಪ್ರದರ್ಶನವನ್ನು ನೀಡುತ್ತಿದ್ದಾರೆ. ಆಸ್ಟ್ರೇಲಿಯ ವಿರುದ್ದ ಪಂದ್ಯದಲ್ಲಿ ಶಿಖರ್ ಧವಾನ್ ಗೆ ಏಟಾದ ಕಾರಣದಿಂದಾಗಿ ಪಂದ್ಯದಿಂದ ಹೊರಗೆ ನಡೆದಿದ್ದಾರೆ. ಪಾಕಿಸ್ತಾನದ ವಿರುದ್ದ ಶಿಖರ್ ಧವಾನ್ ಅವರ ಜಾಗವನ್ನು ವಿಜಯ್ ಶಂಕರ್  ತುಂಬಿದ್ದರು.

11000 ರನ್ಸ್ ಗಳನ್ನು ಗಳಿಸುವ ಒಂದು ಅವಕಾಶವು ಕೈ ಚಲ್ಲಿ ಹೋಗಿತ್ತು

ಸಚಿನ್ ತೆಂಡುಲ್ಕರ್ ಕ್ರಿಕೆಟ್ ಕ್ರೀಡೆಯಲ್ಲಿ ಮಾಡಿದ್ದ ದಾಖಲೆಗಳೆಲ್ಲ ವಿರಾಟ್ ಕೊಹ್ಲಿ ಮುರಿಯುತ್ತಾ ಬಂದಿದ್ದಾರೆ. ದಾಖಲೆ ಸಣ್ಣದೆ ಆಗಲಿ ಅಥವಾ ದೊಡ್ಡದೆ ಆಗಲಿ ಕೊಹ್ಲಿ ಮಾತ್ರ ಅದನ್ನು ಮುರಿಯುತ್ತಾ ಬಂದಿದ್ದಾರೆ. ಕಳೆದ ಬಾರಿ ಪಾಕಿಸ್ತಾನದ ವಿರುದ್ದ ನಡೆದ ಪಂದ್ಯದಲ್ಲಿ ಅತಿ ವೇಗವಾಗಿ 11000 ರನ್ಸ್ ಗಳನ್ನು ಗಳಿಸುವ ಒಂದು ಅವಕಾಶವು ಕೈ ಚಲ್ಲಿ ಹೋಗಿತ್ತು. ಭಾರತ ಮುಂದಿನ ಪಂದ್ಯವನ್ನು ಅಫ್ಘಾನಿಸ್ತಾನ್ ವಿರುದ್ದ ಆಡಲಿದೆ. ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು ಮುರಿಯುವುದರ ಜೊತೆಗೆ ಮತ್ತೊಂದು ವಿಶ್ವ ದಾಖಲೆ ಈ ಪಂದ್ಯದ ಮೂಲಕ ಬರೆಯಬಹುದಾಗಿದೆ. ಮುಂದೆ ಓದಿ.

ದಾಖಲೆ ಬರೆಯುವ 12 ನೇ ಬ್ಯಾಟ್ಸ್ ಮ್ಯಾನ್ ರಾಗುತ್ತಾರೆ

20,000 ಅಂತರಾಷ್ಟ್ರೀಯ ರನ್ಸ್ ಗಳನ್ನು ತಲಪುವುದಕ್ಕೆ ವಿರಾಟ್ ಕೊಹ್ಲಿಗೆ 104 ರನ್ಸ್ ಗಳು ಮಾತ್ರ ಬೇಕಾಗಿದೆ. ಮುಂದಿನ ಪಂದ್ಯದಲ್ಲಿ 104 ರನ್ಸ್ ಗಳನ್ನು ಹೊಡೆದರೆ ಇವರು ಈ ದಾಖಲೆ ಬರೆಯುವ 12 ನೇ ಬ್ಯಾಟ್ಸ್ ಮ್ಯಾನ್ ರಾಗುತ್ತಾರೆ. ಸಚಿನ್, ರಾಹುಲ್ ದ್ರಾವಿಡ್ ನಂತರ ಈ ದಾಖಲೆ ಬರೆಯಲಿರುವ 3 ನೇ ಭಾರತೀಯ ಬ್ಯಾಟ್ಸ್ ಮ್ಯಾನ್ ರಾಗಿ ಗುರುತಿಸಿಕೊಳ್ಳಲಿದ್ದಾರೆ. ವಿರಾಟ್ ಕೊಹ್ಲಿ ಅವರು ಏಕದಿನ ಪಂದ್ಯಗಳಲ್ಲಿ 6613 ರನ್ಸ್ ಗಳಿಸಿದ್ದರೆ, ಟೆಸ್ಟ್ ಮತ್ತು ಟ್ವೆಂಟಿ ಟ್ವೆಂಟಿ ಪಂದ್ಯಗಳಲ್ಲಿ 6613, 2263 ರನ್ಸ್ ಗಳನ್ನು ಗಳಿಸಿದ್ದಾರೆ.  20,000 ರನ್ಸ್ ಹೊಡೆಯುವ ಒಂದು ದಾಖಲೆಯು ಸಚಿನ್ ಮತ್ತು ಬ್ರೈನ್ ಲಾರ ಇಬ್ಬರು ಹಂಚಿಕೊಂಡಿದ್ದಾರೆ. ಇಬ್ಬರು 453 ಇನ್ನಿಂಗ್ಸ್ ಆಡುವ ಮೂಲಕ 20,000 ರನ್ಸ್ ಗಳನ್ನು ಹೊಡೆದಿದ್ದಾರೆ.

ಸ್ಪರ್ದಾತ್ಮಕವಾಗಿಯೇ ವಿರಾಟ್ ಕೊಹ್ಲಿ ಅವರು ಸೋಲಿಸಲಿದ್ದಾರೆ

ಇಲ್ಲಿಯವರೆಗು ವಿರಾಟ್ ಕೊಹ್ಲಿ 415 ಇನ್ನಿಂಗ್ಸ್ ಆಡಿದ್ದು, ಅದರಲ್ಲಿ 131 ಮ್ಯಾಚ್ ಟೆಸ್ಟ್, 222 ಏಕ ದಿನ ಪಂದ್ಯ, 62 ಟ್ವೆಂಟಿ ಟ್ವೆಂಟಿ ಪಂದ್ಯಗಳನ್ನು ಆಡಿದ್ದಾರೆ. ಸಚಿನ್ ಮತ್ತು ಬ್ರೈನ್ ಲಾರಾ ಗೆ ಸ್ಪರ್ದಾತ್ಮಕವಾಗಿಯೇ ವಿರಾಟ್ ಕೊಹ್ಲಿ ಅವರು ಸೋಲಿಸಲಿದ್ದಾರೆ. 3 ನೇ ಸ್ಥಾನದಲ್ಲಿ ಆಸ್ಟ್ರೇಲಿಯದಾ ಯಶಸ್ವಿ ನಾಯಕ ರಿಕ್ಕಿ ಪಾಂಟಿಂಗ್ ಇದ್ದಾರೆ. ಇವರು ಈ ಹಂತವನ್ನು ತಲುಪಲು 468 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು. ಒಟ್ಟಿನಲ್ಲಿ ಕೊಹ್ಲಿ ಅವರು ದಾಖಲೆಗಳ ಸರದಾರ ಎಂದು ಅತಿ ಶೀಘ್ರದಲ್ಲೇ ಗುರುತಿಸಿಕೊಳ್ಳಲಿದ್ದಾರೆ. ಈಗಾಗಲೆ ಕೊಹ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ದ ಎರಡು ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ತಂಡ ಬಲಶಾಲಿಯಾಗುವುದರಲ್ಲಿ ಅನುಮಾನವೆ ಇಲ್ಲ

ಭುವನೇಶ್ವರ್ ಕುಮಾರ್ ಅವರು ಸಹ ಈಗ ತಂಡದಿಂದ ಹೊರ ಬಿದ್ದಿರುವ ಸುದ್ದಿ ಕೇಳಿ ಬರುತ್ತಿದೆ. ಸೂಕ್ತವಾದ ಆಟಗಾರರನ್ನು ಆಯ್ಕೆ ಮಾಡುವ ಒಂದು ಹೊಣೆ ವಿರಾಟ್ ಕೊಹ್ಲಿ ಅವರ ಮೇಲೆ ಬಿದ್ದಿದೆ. ಒಳ್ಳೆಯ ಆಟಗಾರರನ್ನು ರಿಪ್ಲೇಸ್ ಮಾಡಿದರೆ ತಂಡ ಇನ್ನಷ್ಟು ಬಲಶಾಲಿಯಾಗುವುದರಲ್ಲಿ ಅನುಮಾನವೆ ಇಲ್ಲ. ಹೀಗೆ ಭಾರತ ತಂಡ ಉತ್ತಮವಾದ ಪ್ರದರ್ಶನ ನೀಡುತ್ತ, ವಿಶ್ವ ಕಪ್ ಚಾಂಪಿಯನ್ಸ್ ಆಗಬೇಕೆನ್ನುವುದೆ ಭಾರತೀಯರ ಬಯಕೆಯಾಗಿದೆ.

LEAVE A REPLY

Please enter your comment!
Please enter your name here