ವೀಕ್ ಎಂಡ್ ವಿತ್ ರಮೇಶ್ ಕೊನೆ ಸಂಚಿಕೆಯಲ್ಲಿ ಕೂರಲಿರುವ ಸಾಧಕರು

0
413

ವೀಕ್ ಎಂಡ್ ವಿತ್ ರಮೇಶ್ ಕಾರ್ಯಕ್ರಮ ಇನ್ನೇನು ಕೊನೆ ಹಂತಕ್ಕೆ ಬಂದು ನಿಂತಿದೆ. ಈ ಬಾರಿ ವಿಶೇಷವಾದ ರೀತಿಯಲ್ಲಿ ಗ್ರಾಂಡ್ ಫಿನಾಲೆ ನಡೆಯಲಿದೆ. ಪ್ರತಿ ವಾರ ಇಬ್ಬರು ಸಾಧಕರ ಕಥೆಯನ್ನು ನಾವು ಕಾರ್ಯಕ್ರಮದಲ್ಲಿ ನೋಡುತ್ತಿದ್ದೆವು. ಆದರೆ ಈ ಸಾರಿ ಸಾಧನೆ ಮಾಡಿರುವ ಪ್ರತಿ ಒಬ್ಬ ವ್ಯಕ್ತಿಯು ಸಹ ತಮ್ಮ ಕಥೆಯನ್ನು ಹಂಚಿಕೊಳ್ಳಲಿದ್ದಾರೆ. ಫಿನಾಲೆಯಲ್ಲಿ ನೀವು ಹಲವಾರು ಪ್ರಶ್ನೆಗಳು ಸಾಧಕರಿಗೆ ಕೇಳಬಹುದಾಗಿದೆ.ಕಾರ್ಯಕ್ರಮದಲ್ಲಿ ಕಾಲೇಜ್ ವಿದ್ಯಾರ್ಥಿಗಳು, ಯುವಕರು, ಸಾಧಕರ ಹೆಸರನ್ನು ಸೂಚಿಸಿದವರು ಭಾಗಿಯಾಗಲಿದ್ದಾರೆ. ವೀಕ್ ಎಂಡ್ ವಿತ್ ರಮೇಶ್ ನಾಲಕ್ಕನೆ ಆವೃತ್ತಿಯ ಗ್ರಾಂಡ್ ಫಿನಾಲೆಯಲ್ಲಿ ಯಾರು ಅತಿಥಿಯಾಗಿ ಬರಲಿದ್ದಾರೆ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಅಣ್ಣಮಲೈ ಮತ್ತು ವಿಲಾಸ್ ನಾಯಕ್ ಸಾಧಕರ ಸೀಟ್ ನಲ್ಲಿ ಕೂರಲಿದ್ದಾರೆ

ವಿಶ್ವ ಮಟ್ಟದಲ್ಲಿ ಚಿತ್ರ ಕಲೆಯಲ್ಲಿ ಸಾಧನೆ ಮಾಡಿದ ವಿಲಾಸ್ ನಾಯಕ್ ಮತ್ತು ಕರ್ನಾಟಕದ ಸಿಂಗಂ ಎಂದೆ ಪ್ರಸಿದ್ಧರಾದ ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರು ಅತಿಥಿಯಾಗಿ ಬರುವುದು ಬಹುತೇಕ ಖಚಿತವಾಗಿದೆ. ಈ ಇಬ್ಬರ ಸಾಧಕರ ಕುರಿತು ನಾವು ಹೇಳಲು ಹೊರಟಿದ್ದೇವೆ. ಮೂರು ವರ್ಷ ಇದ್ದಾಗಲೆ ವಿಲಾಸ್ ನಾಯಕ್ ಕೈ ನಲ್ಲಿ ಬ್ರಷ್ ಹಿಡಿದು ಪೇಪರ್ ಮೇಲೆ ಬಣ್ಣ ಹಚ್ಚುವ ಆಸಕ್ತಿಯನ್ನು ಹೊಂದಿದ್ದರು. ಯಾವುದೆ ಕಲಾ ಕೇಂದ್ರದಲ್ಲಿ ಇವರು ತರಬೇತಿಯನ್ನು ಪಡೆದುಕೊಳ್ಳದೆ, ಸ್ವತಃ ತಾವೆ ಚಿತ್ರ ಕಲೆಯನ್ನು ಕಲಿತುಕೊಂಡಿದ್ದಾರೆ. ಇಂದು ದೇಶಾದ್ಯಂತ ತಮ್ಮ ಚಿತ್ರ ಕಲೆಯ ಮೂಲಕ ಹೆಸರುವಾಸಿಯಾಗಿದ್ದಾರೆ. ದೇಶ ವಿದೇಶದ ವೇದಿಕೆಗಳಲ್ಲಿ ಅತ್ಯಂತ ವೇಗವಾಗಿ ಗಣ್ಯ ವ್ಯಕ್ತಿಗಳ ಚಿತ್ರವನ್ನು ಬಿಡಿಸುವ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಚಿತ್ರ ಕಲೆಯನ್ನು ಪ್ರದರ್ಶಿಸುವ ಮೂಲಕ ಯಶಸ್ವಿ ಕಲಾವಿದರಾಗುತ್ತಾರೆ

ವಿಲಾಸ್ ನಾಯಕ್ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಊರಿನವರು. ಇವರು ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಬಿಎ ಪದವಿಯಲ್ಲಿ 7 ನೆ ರಾಂಕ್ ಅನ್ನು ಪಡೆದುಕೊಂಡಿದ್ದು, ಮೈಸೂರು ವಿಶ್ವ ವಿದ್ಯಾಲಯದಲ್ಲಿ ಎಂ ಎಸ ಡಬ್ಲ್ಯೂ ಮಾಡಿ ಎರಡನೆ ರಾಂಕ್ ನಲ್ಲಿ ಪಾಸಾಗಿ ಉತ್ತೀರ್ಣರಾಗಿದ್ದಾರೆ. ವಿದ್ಯಾಭ್ಯಾಸ ಮುಗಿಸಿದ ನಂತರ, ಇಬಿಎಂ ನಲ್ಲಿ ಹೆಚ್ ಆರ್ ಆಗಿ ಕೆಲಸ ಮಾಡುತ್ತಾರೆ. ಆಮೇಲೆ ತಮ್ಮ ಕೆಲಸಕ್ಕೆ ವಿದಾಯ ಹೇಳಿ ಸಂಪೂರ್ಣವಾಗಿ ಚಿತ್ರ ಕಲಾವಿದರಾಗಿ ಗುರುತಿಸಿಕೊಳ್ಳುತ್ತಾರೆ. ಹಲವಾರು ಕಾರ್ಯಕ್ರಮಗಳಲ್ಲಿ ತಮ್ಮ ಚಿತ್ರ ಕಲೆಯನ್ನು ಪ್ರದರ್ಶಿಸುವ ಮೂಲಕ ಯಶಸ್ವಿ ಕಲಾವಿದರಾಗುತ್ತಾರೆ. ಸಾಮಾನ್ಯವಾಗಿ ನಾವು ಯಾವುದೆ ಆದ ಒಬ್ಬ ವ್ಯಕ್ತಿಯ ಚಿತ್ರವನ್ನು ಬಿಡಿಸಲು ಹೋದರೆ ಆ ಚಿತ್ರ ಅಂದುಕೊಂಡ ಹಾಗೆ ಮೂಡಿ ಬರುವುದಿಲ್ಲ.

ವಿಶ್ವದ ಅತಿ ವೇಗ ಚಿತ್ರಗಾರ

ಆದರೆ ಇವರು ಸಲಿಸಾಗಿ ಸ್ಟಾರ್ ನಟರ ಚಿತ್ರವನ್ನು ಎರಡು ಮೂರು ನಿಮಿಷದ ಅವಧಿಯಲ್ಲಿ ಮುಗಿಸುತ್ತಾರೆ. ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್ ವಾಹಿನಿಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಇವರು ಭಾಗವಹಿಸಿದ್ದಾರೆ. ವಿಶ್ವದ ಅತಿ ವೇಗ ಚಿತ್ರಗಾರ ಎನ್ನುವ ಬಿರುದನ್ನು ಪಡೆದುಕೊಂಡಿದ್ದಾರೆ. ಭಾರತ ದೇಶದ ಮಾಜಿ ರಾಷ್ಟ್ರಪತಿಯಾದ ಅಬ್ದುಲ್ ಕಲಾಂ, ಸಚಿನ್ ತೆಂಡುಲ್ಕರ್, ಶಾರುಖ್ ಖಾನ್ ಸೇರಿದಂತೆ ಇನ್ನು ಹಲವಾರು ದಿಗ್ಗಜರು ಪಾಲ್ಗೊಂಡಿರುವ ಸಭೆಯಲ್ಲಿ ಅವರ ಚಿತ್ರವನ್ನು ಬಿಡಿಸಿ ಕಾಣಿಕೆಯಾಗಿ ಕೊಟ್ಟಿದ್ದಾರೆ. ದೇಶ ವಿದೇಶದಲ್ಲು ತಮ್ಮ ಕಲಾ ಕೀರ್ತಿಯನ್ನು ಬೆಳಗಿದ್ದಾರೆ. ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿದೆ.

ಸಿನಿಮಾ ಶೈಲಿಯಲ್ಲಿ ರೌಡಿಗಳನ್ನು ಹಿಡಿಯುತ್ತಿದ್ದರು

ಕರುನಾಡ ದಕ್ಷ ಪೊಲೀಸ್ ಅಧಿಕಾರಿಗಳ ಸಾಲಿನಲ್ಲಿ ಅಣ್ಣಮಲೈ ಅವರ ಹೆಸರು ಇದ್ದೆ ಇರುತ್ತದೆ. ಸಿನಿಮಾ ಸ್ಟೈಲ್ ನಲ್ಲಿ ರೌಡಿಗಳನ್ನು ಹಿಡಿದು ಕಸ್ಟಡಿ ಗೆ ತೆಗೆದುಕೊಳ್ಳುತ್ತಿದ್ದರು. ಮೂಲತಃ ತಮಿಳು ನಾಡಿನ ಕಾರೂರು ಜಿಲ್ಲೆಯಯವರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿಯನ್ನು ಪಡೆದಿದ್ದು, ಲಕ್ನೋ ದಿಂದ ಎಂಬಿಎ ಪದವಿಯನ್ನು ಪಡೆದಿದ್ದಾರೆ.

2011ರ ಬ್ಯಾಚ್ ನಿಂದ ಹೊರ ಬಂದು ಪೊಲೀಸ್ ಅಧಿಕಾರಿಯಾಗಿದ್ದಾರೆ. ಕಾರ್ಕಳದಲ್ಲಿ ಎಎಸ್​​ಪಿ ಆಗಿ, ಚಿಕ್ಕಮಂಗಳೂರಿನಲ್ಲಿ ಎಸ್ ಪಿ ಆಗಿ, ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಡಿ ಸಿ ಆಗಿ ಸೇವೆ ಸಲ್ಲಿಸಿದ್ದಾರೆ. ಸ್ವಲ್ಪ ದಿನಗಳ ಹಿಂದೆ ಅಣ್ಣಮಲೈ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರು.

LEAVE A REPLY

Please enter your comment!
Please enter your name here