ಸುಮಾರು 14 ವರ್ಷಗಳಿಂದ ಪಕ್ಷಿಗಳ ಸಲುವಾಗಿ ಶ್ರಮಿಸುತ್ತಿರುವ ಅಪರೂಪದ ವ್ಯಕ್ತಿ

0
455

ಪ್ರಾಣಿ ಪಕ್ಷಿಗಳನ್ನು ಸಾಕುವುದೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಕಿರಿಯರಿಂದ ಹಿರಿಯ ವಯಸ್ಕರವರೆಗೂ ಪ್ರಾಣಿ ಪಕ್ಷಿಗಳನ್ನು ಇಷ್ಟ ಪಟ್ಟು ಸಾಕಿ ಸಲಹುತ್ತಾರೆ. ಮನುಷ್ಯರ ನಡುವೆ ಭಿನ್ನಾಭಿಪ್ರಾಯ, ಮನಸ್ತಾಪ ಉಂಟಾಗಬಹುದು ಆದರೆ ಪ್ರಾಣಿಗಳ ವಿಷಯದಲ್ಲಿ ಹಾಗೆ ಆಗುವುದಕ್ಕೆ ಅವಕಾಶವೇ ಇಲ್ಲ. ನೀವು ಒಂದು ಸಾರಿ ಪ್ರಾಣಿಗಳ ಮೇಲೆ ಪ್ರೀತಿ ಮತ್ತು ಅನುಕಂಪವನ್ನು ತೋರಿದರೆ ಸಾಕು, ಜೀವನ ಪರ್ಯಂತ ನಿಮ್ಮ ಜೊತೆಯೇ ಇರುತ್ತವೆ. ಆದರೆ ಮನುಷ್ಯ ಹಾಗಲ್ಲ ಸಮಯಕ್ಕೆ ಅನುಗುಣವಾಗಿ ಬದಲಾಗುತ್ತ ಹೋಗುತ್ತಾರೆ. ನಿಷ್ಕಲ್ಮಶ ಭಾವನೆಯಿಂದ ಪ್ರಾಣಿಗಳು ನಮ್ಮನ್ನು ನೋಡುತ್ತವೆ. ಮನುಷ್ಯರು ಸಹ ಪ್ರಾಣಿಗಳ ಪ್ರೀತಿಗೆ ಕಳೆದು ಹೋಗುತ್ತಾರೆ. ಆದರೆ ಇಲ್ಲಿ ಒಬ್ಬ ವ್ಯಾಪಾರೀ ಅದೆಷ್ಟೋ ಪಕ್ಷಿಗಳ ಪಾಲಿಗೆ ಅನ್ನದಾತರಾಗಿದ್ದಾರೆ. ಮುಂದೆ ಓದಿ

ಪಕ್ಷಿಗಳ ಹಸಿವನ್ನು ನೀಗಿಸುತ್ತಿದ್ದಾರೆ

ಪೇಪರ್ ಡಿಸ್ಟ್ರಿಬ್ಯೂಟರ್ ವ್ಯಾಪಾರದ ಜೊತೆಗೆ ಪಕ್ಷಿಗಳ ಹಸಿವನ್ನು ನೀಗಿಸುವ ವ್ಯಕ್ತಿಯೊಬ್ಬರು ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವ್ಯಾಪಾರದ ಉದ್ಯಮದ ನಡುವೆಯಲ್ಲು ಸಹ ಪಕ್ಷಿಗಳ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ. ಈ ಪಕ್ಷಿ ಪ್ರೇಮಿಯ ಹೆಸರು ವಿಕಾಸ್ ದುಂಡಕರ್. ಇವರ ಆಫೀಸ್ ನ ಛಾವಣಿ ಮೇಲೆ ಬರುವ ಸಾವಿರಾರು ಪಕ್ಷಿಗಳಿಗೆ ಅನ್ನದಾತರಾಗಿದ್ದಾರೆ. ಇವರು ಪ್ರತಿ ನಿತ್ಯ ಸುಮಾರು 100 ರಿಂದ 150 ಕೆಜಿ ಕಾಳು ಹಾಕುವುದರ ಮೂಲಕ ಪಕ್ಷಿಗಳ ಹಸಿವನ್ನು ನೀಗಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ವ್ಯಾಪಕವಾದ ಶಬ್ದ ಮತ್ತು ಧ್ವನಿ ಮಾಲಿನ್ಯದಿಂದಾಗಿ ಅದೆಷ್ಟೋ ಪಕ್ಷಿಗಳು ಕಣ್ಮರೆಯಾಗಿ ಹೋಗಿದ್ದವು. ಕೆಲ ಪಕ್ಷಿಗಳು ಮೃತ ಪಟ್ಟಿದ್ದವು.

ಪಕ್ಷಿಗಳ ನರಳುವಿಕೆಯ ಘಟನೆಗಳು ವಿಕಾಸ್ ಕಣ್ಣಿಗೆ ಬಿದ್ದಿದ್ದವು

ಆದರೆ ಸ್ವಲ್ಪ ಪಾರಿವಾಳಗಳು ಆಹಾರವಿಲ್ಲದೆ ಹಾರಾಡುತ್ತಿದ್ದವು. ಇನ್ನು ಕೆಲವು ಪಕ್ಷಿಗಳು ವಿದ್ಯುತ್ ತಂತಿಗೆ ಸಿಲುಕಿಕೊಂಡು ಮರಣ ಹೊಂದಿದ್ದವು. ಇಂತಹ ಅನೇಕ ಘಟನೆಗಳು ವಿಕಾಸ್ ಅವರ ಕಣ್ಣಿಗೆ ಬಿದ್ದಿದ್ದವು. ಆದ್ದರಿಂದ ತಮ್ಮ ಕಚೇರಿಯ ಛಾವಣಿಯ ಮೇಲೆ ಮೊದಲು ಒಂದರಿಂದ ಎರಡು ಕೆಜಿ ಅಷ್ಟು ಕಾಳನ್ನು ಹಾಕುತ್ತಿದ್ದರು. ಶುರುವಿನಲ್ಲಿ ಆಹಾರವನ್ನು ಸೇವಿಸಲು ಕಡಿಮೆ ಸಂಖ್ಯೆಯಲ್ಲಿ ಪಾರಿವಾಳದ ಗುಂಪು ಸೇರುತ್ತಿದ್ದವು. ಕೂಡಲೇ ಆಹಾರವನ್ನು ತಿಂದು ಹಾರಿ ಹೋಗುತ್ತಿದ್ದವು. ದಿನ ಕಳೆದಂತೆ ಪಾರಿವಾಳಗಳ ದಂಡಿನ ಸಂಖ್ಯೆ ಅಧಿಕವಾಗುತ್ತ ಹೋಗಿತ್ತು. ಸುಮಾರು ಒಂದು ಸಾವಿರದಿಂದ ಮೂರು ಸಾವಿರ ಪಾರಿವಾಳಗಳು ಬರಲು ಆರಂಭಿಸಿದ್ದವು.

ಪಾರಿವಾಳಗಳ ಸಲುವಾಗಿ ಲಕ್ಷಾಂತರ ಹಣವನ್ನು ಖರ್ಚು ಮಾಡಿದ್ದಾರೆ

ವಿಕಾಸ್ ಪಾರಿವಾಳಗಳ ಸಲುವಾಗಿ ಲಕ್ಷಾಂತರ ಹಣವನ್ನು ಖರ್ಚು ಮಾಡಿದ್ದಾರೆ. ಇನ್ನು ತಮ್ಮ ವ್ಯಾಪಾರದಲ್ಲಿ ಬಂದ ಹಣವನ್ನು ಪಕ್ಷಿಗಳ ಸಲುವಾಗಿ ಮುಡಿಪಾಗಿಟ್ಟಿದ್ದಾರೆ. ಕಚೇರಿಯ ಗೋಡೌನ್ ನಲ್ಲಿ ಮೂಟೆಗಟ್ಟಲೆ ಗೋಧಿ ಕಾಳುಗಳನ್ನು ಸಂಗ್ರಹಿಸಿದ್ದಾರೆ. 3 ರಿಂದ 4 ತಿಂಗಳ ಅವಧಿಯಲ್ಲಿ ಒಂದು ಲಾರಿ ತುಂಬುವಷ್ಟು ಗೋದಿ ಕಾಳುಗಳನ್ನು ಸಂಗ್ರಹಿಸುತ್ತಾರೆ. ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಸಹ ವಿಕಾಸ್ ಅವರು ಮಾಡುತ್ತಿರುವ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ಕಚೇರಿಯ ಛಾವಣಿ ಮೇಲೆ ಪಕ್ಷಿಗಳಿಗಾಗಿ ಒಂದು ಜಾಗವನ್ನು ನಿರ್ಮಿಸಿದ್ದು, ಪಾರಿವಾಳಗಳು ಆ ಜಾಗದಲ್ಲಿ ಕುಳಿತುಕೊಳ್ಳುತ್ತವೆ. ನೀರಿನ ಸೌಲಭ್ಯವು ಸಹ ಒದಗಿಸಿ ಕೊಟ್ಟಿದ್ದಾರೆ.

14 ವರ್ಷಗಳಿಂದ ಈ ಸೇವೆ ನಿರಂತರವಾಗಿ ಸಾಗಿದೆ

ಬೆಳಿಗ್ಗೆ 10 ಘಂಟೆಯಿಂದ ಸಂಜೆ 6 ಘಂಟೆಯವರೆಗೂ ಯಾರು ಸಹ ಟೆರೇಸ್ ಮೇಲೆ ಹೋಗುವಂತಿಲ್ಲ. ಪಕ್ಷಿಗಳಿಗೆ ತೊಂದರೆ ಆಗಬಾರದು ಎನ್ನುವುದು ಇವರ ನಿಲುವಾಗಿದೆ. ಸುಮಾರು 14 ವರ್ಷಗಳಿಂದ ಈ ಸೇವೆ ನಿರಂತರವಾಗಿ ಸಾಗಿದೆ. ಒಂದು ದಿನವೂ ಸಹ ಕಾಳನ್ನು ಹಾಕುವುದು ಮರೆತಿಲ್ಲ. ಕೇವಲ ಪ್ರಚಾರವನ್ನು ಗಿಟ್ಟಿಸಿಕೊಳ್ಳಲು ಸಮಾಜ ಸೇವೆ ಮಾಡುವ ಜನರ ನಡುವೆ ಇಂತಹ ವ್ಯಕ್ತಿತ್ವ ಉಳ್ಳುವ ವ್ಯಕ್ತಿ ಸಿಗುವುದು ಅಪರೂಪ

LEAVE A REPLY

Please enter your comment!
Please enter your name here