ಈ ದೇಶ ಮೇ 12ನೇ ತಾರೀಖನ್ನ ಗಾಯಕ ‘ವಿಜಯ್ ಪ್ರಕಾಶ್ ಡೇ’ ಎಂದು ಆಚರಿಸುತ್ತದೆ

0
2114
vijay prakash

ಅವಕಾಶ ಅನ್ನೋದು ಎಲ್ಲರಿಗೂ ಸಿಗುತ್ತದೆ. ಆದ್ರೆ ಅದನ್ನ ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಆಗ ಮಾತ್ರ ಅದರ ಉತ್ತಮ ಪ್ರತಿಫಲ ನಮಗೆ ದೊರೆಯುತ್ತದೆ. ಇದೇ ರೀತಿ ಸಂಗೀತದಲ್ಲಿ ಜೈ ಹೋ ಹಾಡಿನ ಮೂಲಕ ಜನರಲ್ಲಿ ಗುರುತಿಸಿಕೊಂಡ, ಹಾಡುಗಾರ ವಿಜಯ್ ಪ್ರಕಾಶ್ ಅವರು ಈಗ ಎಲ್ಲರ ಅಚ್ಚು ಮೆಚ್ಚಿನ ಸಂಗೀತಗಾರ. ಒಂದು ಕಾಲದಲ್ಲಿ ಇವರ ಬಗ್ಗೆ ಯಾರಿಗೂ ಅಷ್ಟು ತಿಳಿದಿರಲಿಲ್ಲ. ಆದ್ರೆ ಯಾವಾಗ, ಇವರು ಜೈ ಹೋ ಹಾಡನ್ನ ಹೇಳಿದರೋ, ಆಗ ಎಲ್ಲರ ಮನೆ ಮಾತಾದರು. ಅಲ್ಲಿಂದ ಶುರುವಾದ ಇವರ ಪಯಣ, ಈಗ ಶಿಖರಕ್ಕೆ ಏರಿ ನಿಂತಿದೆ.

ನಮ್ಮ ದೇಶದಲ್ಲಿ ನಾವು ವಿಜಯ್ ಪ್ರಕಾಶ್ ಅವರನ್ನ ಕೇವಲ ಒಬ್ಬ ಹಾಡುಗಾರ ಅಂತ ಮಾತ್ರ ನೋಡುತ್ತಿವೆ. ಆದ್ರೆ ಹೊರ ದೇಶಗಳಲ್ಲಿ ವಿಜಯ್ ಪ್ರಕಾಶ್ ಅವರಿಗೆ ಇರುವ ಬೆಲೆಯೇ ಬೇರೆ. ಎಲ್ಲಕ್ಕಿಂತ ಹೆಚ್ಚಾಗಿ ವಿಶ್ವದ ದೊಡ್ಡಣ್ಣ ಅಂತ ಕರೆಸಿಕೊಳ್ಳುವ ಅಮೇರಿಕಾದಲ್ಲಿ ವಿಜಯ್ ಪ್ರಕಾಶ್ ಅವರನ್ನ ಕುರಿತು, ಅವರ ದಿನಾಚರಣೆಯನ್ನ ಮಾಡುತ್ತಾರೆ. ಹೌದು. ಅವರ ಹಾಡಿಗೆ ಮನಸೋತ ಜನರು ‘ವಿಜಯ್ ಪ್ರಕಾಶ್ ಡೇ’ ಆಚರಿಸುತ್ತಿದ್ದಾರೆ.

ಅಮೇರಿಕಾದಲ್ಲಿ ‘ವಿಜಯ್ ಪ್ರಕಾಶ್ ಡೇ’ ಆಚರಿಸಲಾಗುತ್ತಿದೆ

ಕಳೆದ ಆರೇಳು ವರ್ಷಗಳಿಂದ ವಿಜಯ್ ಪ್ರಕಾಶ್ ಅವರು ಹಾಡಿದ ಹಾಡುಗಳೆಲ್ಲಾ ಸೂಪರ್ ಹಿಟ್ ಆಗಿವೆ. ಹಾಗಾಗಿ ಅವರ ಕಂಠಕ್ಕೆ ಮನಸೋತ ಅಮೇರಿಕ ಜನರು ಅವರನ್ನ, ಅಲ್ಲಿಗೆ ಕರೆಸಬೇಕೆಂದು ಕೊಂಡರು. ಅದಕ್ಕೋಸ್ಕರ ಒಂದು ಮ್ಯೂಸಿಕ್ ಶೋ ಏರ್ಪಡಿಸಿದ್ದರು. ಅಮೇರಿಕಾದವರ ಆಹ್ವಾನಕ್ಕೆ ಒಪ್ಪಿ ವಿಜಯ್ ಪ್ರಕಾಶ್ ಅಮೇರಿಕಾದ ಕರೋಲಿನಾ ಗೆ ಹೋಗುತ್ತಾರೆ. ಅಲ್ಲಿ ತಮ್ಮ ಗಾನಸುಧೆಯ ಮೂಲಕ ಎಲ್ಲರನ್ನ ರಂಜಿಸುತ್ತಾರೆ. ಅವರ ಹಾಡಿಗೆ ಮನಸೋತ ಅವರು ವಿಜಯ್ ಪ್ರಕಾಶ್ ಗೆ ಒಂದು ಅದ್ಭುತ ಉಡುಗೊರೆ ನೀಡುತ್ತಾರೆ. ಅದೇ, ಅವರು ಬಂದು ಹಾಡಿನ ದಿನವನ್ನ ‘ವಿಜಯ್ ಪ್ರಕಾಶ್ ಡೇ’ ಆಗಿ ಆಚರಿಸವುದಾಗಿ ತಿಳಿಸುತ್ತಾರೆ.

ಮೇ 12ರಂದು ‘ವಿಜಯ್ ಪ್ರಕಾಶ್ ಡೇ’

ಮೇ 12ರಂದು ಅಮೇರಿಕಾದಲ್ಲಿ ಕಾರ್ಯಕ್ರಮವನ್ನ ಏರ್ಪಡಿಸಿದ್ದರು. ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ಗಣ್ಯರು ಭಾಗವಹಿಸಿದ್ದರು. ಅಲ್ಲದೆ ಸಮಾರಂಭಕ್ಕೆ ಮೇಯರ್ ಆಓರ್ ದಿ ಸಿಟಿ ಆಫ್ ಕಾಂಕಾರ್ಡ್ ರವರು ಭಾಗವಹಿಸಿದ್ದರು. ಇವರೆಲ್ಲರೂ ಸಹ ವಿಜಯ್ ಪ್ರಕಾಶ್ ಅವರ ಹಾಡಿಗೆ ಮನಸೋತಿದ್ದರು. ಹಾಗಾಗಿ ಅವರು ನಮ್ಮ ದೇಶಕ್ಕೆ ಬಂದು ನಮ್ಮನ್ನೆಲ್ಲಾ ರಂಜಿಸಿರುವುದರಿಂದ, ಅವರಿಗೆ ಮರೆಯಲಾರದಂತ ಉಡುಗೊರೆ ನೀಡಬೇಕೆಂದು ನಿರ್ಧರಿಸಿ, ಅವರಿಗೆ ಈ ಅದ್ಭುತ ಉಡುಗೊರೆಯನ್ನ ನೀಡಿದ್ದಾರೆ. ಹಾಗಾಗಿ ಅಮೇರಿಕಾದಲ್ಲಿ ಮೇ ೧೨ ನೇ ತಾರೀಖನ್ನ ‘ವಿಜಯ್ ಪ್ರಕಾಶ್ ಡೇ’ ದಿನವನ್ನಾಗಿ ಆಚರಿಸುತ್ತಾರೆ.

ಇದು ಕನ್ನಡಿಗರೊಬ್ಬರಿಗೆ ಸಿಕ್ಕಿದ ಬಹುದೊಡ್ಡ ಸನ್ಮಾನವಾಗಿದೆ

ಇದುವರೆಗೂ ಈ ರೀತಿಯ ಸನ್ಮಾನವನ್ನ ಯಾರೊಬ್ಬರೂ ಪಡೆದುಕೊಂಡಿಲ್ಲ. ಹಾಗಾಗಿ ಇದು ಕನ್ನಡಿಗರೊಬ್ಬರಿಗೆ ಸಿಕ್ಕಿದ ಬಹುದೊಡ್ಡ ಸನ್ಮಾನವಾಗಿದೆ. ಯಾಕಂದ್ರೆ ಹೊರ ದೇಶದವರು, ಯಾವುದನ್ನೂ ಅಷ್ಟಾಗಿ ಬೇಗ ಒಪ್ಪಿಕೊಳ್ಳುವುದಿಲ್ಲ. ಆದರೆ ನಮ್ಮ ಗಾಯಕ ವಿಜಯ್ ಪ್ರಕಾಶ್ ಅವರ ಸಂಗೀತಕ್ಕೆ ಮನಸೋತಿದ್ದಾರೆ ಅಂದ್ರೆ ಅದು ನಮಗೆ ಹೆಮ್ಮೆಯ ವಿಷಯವಾಗಿದೆ. ನಮ್ಮ ದೇಶದ ಪ್ರತಿಭಾ ವ್ಯಕ್ತಿಯನ್ನ, ಕುರಿತು, ಬೇರೆ ದೇಶದಲ್ಲಿ ಆಚರಣೆಯನ್ನಾಗಿ ಮಾಡುತ್ತಾರೆ ಅಂದ್ರೆ ಇದು, ಕನ್ನಡಿಗರೊಬ್ಬರಿಗೆ ಸಿಕ್ಕಿದ ಬಹುದೊಡ್ಡ ಸನ್ಮಾನವಾಗಿದೆ. ಒಟ್ಟಿನಲ್ಲಿ ಮೇ 12ನ್ನ ಅಮೇರಿಕಾದಲ್ಲಿ ‘ವಿಜಯ್ ಪ್ರಕಾಶ್ ಡೇ’ ದಿನವನ್ನಾಗಿ ಆಚರಿಸುಲು ನಿರ್ಧರಿಸಿದ್ದಾರೆ.

ನಿಜಕ್ಕೂ ಇಂಥ ಉಡುಗೊರೆಯನ್ನ ಹಾಗೂ ಸನ್ಮಾನವನ್ನ ನೋಡಿದಾಗ ಎಂಥವರಿಗೂ ಸಂತಸವಾಗುತ್ತದೆ. ಯಾಕಂದ್ರೆ, ಯಾರು ಸಹ ಇಷ್ಟು ಸುಲಭವಾಗಿ ಈ ರೀತಿಯ ಸನ್ಮಾನವನ್ನ ಪಡೆಯಲು ಆಗುವುದಿಲ್ಲ. ಆದ್ರೆ ವಿಜಯ್ ಪ್ರಕಾಶ್ ಅವರು ಪಡೆದಿರುವುದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.

LEAVE A REPLY

Please enter your comment!
Please enter your name here