ವಾಟಾಳ್ ನಾಗರಾಜ್ ಈಗ ಸಂಚಾರಿ ಪೊಲೀಸ್ ಏನಿದು ಸ್ಟೋರಿ?

0
602

ರೈಲ್ವೆ ನಿಲ್ದಾಣದ ಮುಂದೆ ಸಾಗುವ ನಾಗರಿಕರಿಗೆ ಅಚಾನಕ್ಕಾಗಿ ಇಂದು ಒಂದು ಅಚ್ಚರಿಯ ಸಂಗತಿ ಎದುರಾಗಿತ್ತು. ಯಾಕೆಂದರೆ ಇಲ್ಲಿ ವಾಟಾಳ್ ನಾಗರಾಜ್ ಅವರು ಸಂಚಾರಿ ಪೊಲೀಸ್ ಅಧಿಕಾರಿಯ ಖಾಕಿಯನ್ನು ತೊಟ್ಟು ವಾಹನ ಸವಾರರ ದಂಡ ವಸೂಲಿ ಮಾಡುತ್ತಿದ್ದರು. ಯಾವಾಗಲೂ ಸಮಾಜದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ವಾಟಾಳ್ ನಾಗರಾಜ್ ಅವರು ಹೋರಾಡುತ್ತಿದ್ದರು. ಆದರೆ ಇದ್ದಕಿದ್ದ ಹಾಗೆ ಸಂಚಾರಿ ಪೊಲೀಸ್ ಹೇಗೆ ಆದರೂ ಎಂದು ಆಲೋಚಿಸಬೇಡಿ. ಇದು ಸಹ ಅನ್ಯಾಯದ ವಿರುದ್ಧ ನಡೆಯುತ್ತಿರುವ ಒಂದು ಪ್ರತಿಭಟನೆಯಾಗಿದೆ. ಹೌದು ಇತ್ತೀಚಿಗಷ್ಟೇ ಸರ್ಕಾರದಿಂದ ಟ್ರಾಫಿಕ್ ನಿಯಮಕ್ಕೆ ಸಂಭಂದ ಪಟ್ಟ ಹಾಗೆ ಹೊಸ ನಿಯಮ ಜಾರಿಗೆ ಬಂದಿದ್ದು, ಜನ ಸಾಮಾನ್ಯರು ಈ ಹೊಸ ನಿಯಮದ ವಿರುದ್ಧ ನಿಕಾರಾತ್ಮಕವಾದ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು.

ಸಂಚಾರದ ನಿಯಮದ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟನೆ

ಸಂಚಾರಿ ಪೋಲೀಸರ ವೇಷಭೂಷಣವನ್ನು ಧರಿಸಿ, ಮೈಸೂರಿನ ರೈಲ್ವೆ ನಿಲ್ದಾಣದ ವೃತ್ತದ ಸಮೀಪ ನಿಂತು ಒಂದು ಅಭಿಯಾನದ ಮೂಲಕ ವಾಹನ ಸವಾರರ ಪರವಾಗಿ ನಿಂತಿದ್ದು, ಇದಕ್ಕೆ ಜನ ಸಾಮಾನ್ಯರು ಸಹ ಪ್ರೋತ್ಸಾಹ ನೀಡಿದ್ದರು. ಇದೆ ವೇಳೆಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ಅವರು ಕೇಂದ್ರ ಸರ್ಕಾರ ಜಾರಿಗೊಳಿಸಿದ ಹೊಸ ಸಂಚಾರಿ ನಿಯಮ ಯಮಪಾಶವಾಗಿದೆ. ಕೂಡಲೇ ಇದನ್ನು ರದ್ದು ಪಡಿಸಬೇಕಾಗಿದೆ. ಪಶ್ಚಿಮ ಬಂಗಾಳ ಮತ್ತು ಇನ್ನಿತರ ರಾಜ್ಯಗಳು ಇದನ್ನು ಜಾರಿ ಗೊಳಿಸಲಿಲ್ಲ. ನಮ್ಮ ರಾಜ್ಯ ಸರ್ಕಾರವು ಸಹ ಇದನ್ನು ಕಾರ್ಯ ರೂಪಕ್ಕೆ ತರಬಾರದಾಗಿತ್ತು. ಇದರಿಂದ ಜನರು ಭಯದಿಂದ ವಾಹನ ಚಾಲನೆ ಮಾಡುವ ಸಂದರ್ಭ ಎದುರಾಗಿದೆ. ಸಂಚಾರಿ ನಿಯಮದ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುತ್ತಿರುವುದು ಬಡ ವರ್ಗದ ಮತ್ತು ಮಾಧ್ಯಮ ವರ್ಗದ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ.

ಸಾರ್ವಜನಿಕರು ಇದಕ್ಕೆ ಸಾಥ್ ನೀಡಿದ್ದಾರೆ

ಆದ್ದರಿಂದ ನಮಗೆ ಅರಿಯದೆ ಮಾಡಿದ ತಪ್ಪಿನಿಂದ ದುಬಾರಿ ದಂಡವನ್ನು ಕಟ್ಟಬೇಕಾಗಿದೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಬಂಡೀಪುರ ಪ್ರದೇಶದಲ್ಲಿ ರಾತ್ರಿಯ ಸಮಯದಲ್ಲಿ ವಾಹನ ಸಂಚಾರವಾಗುವ ಲಕ್ಷಣಗಳು ಕಂಡು ಬರುತ್ತಿವೆ. ಯಾವುದೇ ಕಾರಣಕ್ಕೂ ರಾತ್ರಿಯ ಸಮಯದಲ್ಲಿ ವಾಹನ ಸಂಚಾರ ಪ್ರಾರಂಭವಾಗರಬಾರದು ಎಂದು ಆಕ್ಷೇಪಣೆ ಮಾಡಿದ್ದರು.

ಬೆಂಗಳೂರಿನಲ್ಲಿ ಸುಮಾರು 2978 ಪ್ರಕರಣಗಳು ದಾಖಲಾಗಿತ್ತು

ದೇಶಾದ್ಯಂತ ಹೊಸ ಸಂಚಾರಿ ನಿಯಮವು ಜಾರಿಗೆ ಬಂದಿದ್ದು, ಸಂಚಾರಿ ಪೊಲೀಸ್ ಅಧಿಕಾರಿಗಳು ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ ವಾಹನ ಸವಾರರ ಹತ್ತಿರ ದಂಡವನ್ನು ಕಟ್ಟಿಸಿಕೊಳ್ಳುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಬಹಳ ಕಟ್ಟು ನಿಟ್ಟಿನಿಂದ ತಮ್ಮ ಕರ್ತವ್ಯವನ್ನು ಮಾಡುತ್ತಿದ್ದು, ಇದರಿಂದ ಸವಾರರಿಗೆ ದೊಡ್ಡ ತಲೆ ನೋವಾಗಿದೆ. ಹೊಸ ಟ್ರಾಫಿಕ್ ನಿಯಮದ ಕುರಿತು ಜನರಿಂದ ಮಿಶ್ರಣ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಗುರುವಾರದ ದಿನದಂದು ಬೆಂಗಳೂರಿನಲ್ಲಿ ಸುಮಾರು 2978 ಪ್ರಕರಣಗಳು ದಾಖಲಾಗಿತ್ತು ಎಂದು ವರದಿಗಳ ಪ್ರಕಾರ ಹೇಳಲಾಗುತ್ತಿದೆ. ಇದರಿಂದಾನೆ ಗೊತ್ತಾಗುತ್ತಿದೆ ವಾಹನ ಚಾಲಕರು ಎಷ್ಟರ ಮಟ್ಟಿಗೆ ನಿಯಮವನ್ನು ಪಾಲಿಸುತ್ತಿದ್ದಾರಂತ. ಸಂಚಾರಿ ಪೊಲೀಸರು ಒಂದೆ ದಿನದಲ್ಲಿ ಬರೋಬ್ಬರಿ 30 ಲಕ್ಷ ದಂಡವನ್ನು ವಾಹನ ಚಾಲಕರಿಂದ ವಸೂಲಿ ಮಾಡಿದ್ದಾರೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here