ವಜ್ರಮುನಿ ಅಭಿಮಾನಿಗಳ ಸಂಘದ ಅಧ್ಯಕ್ಷ ಸ್ಥಾನ ಅಲಂಕರಿಸಿದ ನಟ ವಸಿಷ್ಠ ಸಿಂಹ

0
553
vasishta simha and vajramuni

ಕನ್ನಡ ಚಿತ್ರರಂಗದಲ್ಲಿ ನಟ ವಜ್ರಮುನಿ ಅವರನ್ನು ಎಂದಿಗೂ ಮರೆಯಲು ಆಗುವುದಿಲ್ಲ. ಯಾಕಂದ್ರೆ ತಮ್ಮ ನಟನೆ ಮೂಲಕ ಎಲ್ಲರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ನಿಜಕ್ಕೂ ಅವರ ನಟನೆ ಹಾಗು ಅವರ ವ್ಯಕ್ತಿತ್ವ ಅದ್ಭುತ. ಹೌದು. ಅವರು ಚಿತ್ರಗಳಲ್ಲಿ ನಟಿಸುವಾಗ, ಅವರ ಪಾತ್ರ, ಅವರ ಮುಖದಲ್ಲಿ ಕಾಣುವ ಕೋಪ, ಹಾಗು ಅವರ ಕೆಂಪು ಕಣ್ಣುಗಳು ಎಲ್ಲರ ಎದೆ ಝಲ್ ಎನ್ನುವಂತೆ ಮಾಡುತ್ತದೆ. ಹಾಗಾಗಿ ಅವರನ್ನು ಎಂದಿಗೂ ಸಹ ಯಾರು ಕೂಡ ಮರೆಯುವುದಿಲ್ಲ. ಇಂತಹ ನಟನನ್ನು ಕಳೆದುಕೊಂಡಿದ್ದು, ಸ್ಯಾಂಡಲ್ ವುಡ್ ಗೆ ತುಂಬಲಾರದ ನಷ್ಟವಾಗಿದೆ. ಆದ್ರೆ ಈಗ ಮತ್ತೊಮ್ಮೆ ಈ ನಟನನ್ನು ನೆನಪಿಸಿಕೊಳ್ಳುವ ಸಮಯ ಬಂದಿದೆ. ಹೌದು. ವಸಿಷ್ಠ ಸಿಂಹ, ತೆರೆ ಮೇಲೆ ವಜ್ರಮುನಿ ಅವರನ್ನು ನೆನಪಿಸಲು ಹೊರಟಿದ್ದಾರೆ. ಜೊತೆಗೆ, ಅವರ ಸಂಘಕ್ಕೆ ಅಧ್ಯಕ್ಷ ಅಗಲಿದ್ದಾರೆ.

ವಜ್ರಮುನಿ ಅಭಿಮಾನಿಗಳ ಸಂಘದ ಅಧ್ಯಕ್ಷ ಸ್ಥಾನ ಅಲಂಕರಿಸಿದ ವಸಿಷ್ಠ ಸಿಂಹ

ಸ್ಯಾಂಡಲ್ ವುಡ್ ನಲ್ಲಿ ವಿಶಿಷ್ಟ ಶೈಲಿ ಹಾಗು ಗಡಸು ಧ್ವನಿ ಮೂಲಕ ವಸಿಷ್ಠ ಸಿಂಹ ಸಾಕಷ್ಟು ಜನ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಇವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇದರ ಮಧ್ಯೆ ಈಗ ನಟಭಯಂಕರ ವಜ್ರಮುನಿ ಅಭಿಮಾನಿಗಳ ಸಂಘದ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಆದ್ರೆ ಅದು ನಿಜ ಜೀವನದಲ್ಲಿ ಅಲ್ಲ. ಬದಲಿಗೆ ತೆರೆ ಮೇಲೆ. ಹೌದು. ವಸಿಷ್ಠ ಸಿಂಹ ಅವರ ಮುಂದಿನ ಸಿನಿಮಾ ಮರ್ಯಾದಸ್ತ ಆಗಿದ್ದು, ಅದರಲ್ಲಿ ವಸಿಷ್ಠ ಸಿಂಹ ಅವರು ವಜ್ರಮುನಿ ಅವರ ಕೆಲವು ಫೋಟೋಗಳನ್ನು ಬಳಸಿಕೊಂಡಿದ್ದಾರೆ. ಅದು ತಮ್ಮ ಫಸ್ಟ್ ಲುಕ್ ನಲ್ಲೆ ರಿಲೀಸ್ ಮಾಡಿದ್ದಾರೆ. ಹೌದು. ಪೋಸ್ಟರ್ ನಲ್ಲಿ ವಜ್ರಮುನಿಯ ಫೋಟೋವಿದ್ದು ಜೊತೆಗೆ ನಟ ಭಯಂಕರ ವಜ್ರಮುನಿ ಅಭಿಮಾನಿಗಳ ಸಂಘ, ನ್ಯಾಯದಹಳ್ಳಿ, ಮಂಡ್ಯ ಎನ್ನುವ ಬೋರ್ಡ್ ಇದೆ. ಪಕ್ಕದಲ್ಲಿ ಮರ್ಯಾದಸ್ಥ ವಸಿಷ್ಠ ಎರಡು ಕೈ ಎತ್ತಿ ಮುಗಿಯುತ್ತಿರುವ ಚಿತ್ರವಿದೆ.

ಕುತೂಹಲ ಹೆಚ್ಚಿಸುತ್ತಿರುವ ಮರ್ಯಾದಸ್ತ ಪೋಸ್ಟರ್

ಇನ್ನು ವಸಿಷ್ಠ ಸಿಂಹ ಅವರ ಮರ್ಯಾದಸ್ತ ಸಿನಿಮಾದ ಪೋಸ್ಟರ್ ಅನ್ನು ಈಗಾಗಲೇ ಬಿಡುಗಡೆ ಮಾಡಿದ್ದೂ, ಈಗಾಗಲೇ ಅಭಿಮಾನಿಗಳು ಅವರ ಪೋಸ್ಟರ್ ಗೆ ಫಿದಾ ಆಗಿದ್ದರೆ. ಜೊತೆಗೆ ವಜ್ರಮುನಿ ಅವರನ್ನು ಪೋಸ್ಟರ್ ನಲ್ಲಿ ಹೈಲೆಟ್ ಮಾಡಿರೋದ್ರಿಂದ, ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಹಾಗಾಗಿ ಸಿನಿಮಾ ಯಾವಾಗ ತೆರೆ ಮೇಲೆ ಬರುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯಕ್ಕೆ ವಸಿಷ್ಠ ಸಿಂಹ, ಕಾಲಚಕ್ರ, ಇಂಡಿಯ ವರ್ಸಸ್ ಇಂಗ್ಲೆಂಡ್, ತಲ್ವಾರ್ ಪೇಟೆ, ಕೆಜಿಎಫ್-2 ಮತ್ತು ಸಲಗ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಒಟ್ಟಿನಲ್ಲಿ ವಸಿಷ್ಠ ಸಿಂಹ ತಮ್ಮ ಸಿನಿಮಾದ ಕೆಲವೊಂದು ಸನ್ನಿವೇಶದಲ್ಲಿ ನಟಭಯಂಕರನಾದ ವಜ್ರಮುನಿ ಅವರನ್ನು ತೋರಿಸಲು ಮುಂದಾಗಿದ್ದಾರೆ. ಜೊತೆಗೆ ಅವರ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದಾರೆ. ಹಾಗಾದ್ರೆ ಮುಂದಿನ ದಿನಗಳಲ್ಲಿ ಇವರ ಸಿನಿಮಾ ಅಭಿಮಾನಿಗಳ ಮನಸ್ಸನ್ನು ಎಷ್ಟರ ಮಟ್ಟಿಗೆ ಗೆಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here