ವಿಶೇಷ ಚೇತನರಾಗಿದ್ದರು ದುಡಿದು ಇತರರಿಗೆ ಅನ್ನದಾನ ಮಾಡುತ್ತಿರುವ ವ್ಯಕ್ತಿ

0
882
uta angavikalaru

ಹಿಂದಿನ ಕಾಲದಲ್ಲಿ ದಾನ ಅನ್ನೋದು ಎಲ್ಲ ಕಡೆ ನಡೆಯುತ್ತಿತ್ತು. ಯಾಕಂದ್ರೆ ದಾನ ಮಾಡುವವರ ಮನಸ್ಥಿತಿ ಕೂಡ ಚೆನ್ನಾಗಿರುತ್ತಿತ್ತು. ಜೊತೆಗೆ ದಾನ ತೆಗೆದುಕೊಳ್ಳುವವರು ಸಹ ದಾನಕ್ಕೆ ತಕ್ಕಂತೆ ಇರುತ್ತಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ದಾನ ಇರಲಿ, ಸಹಾಯವನ್ನೇ ಯಾರು ಸಹ ಮಾಡುವುದಿಲ್ಲ. ಜೊತೆಯಲ್ಲಿರುವವರೇ ಯಾರಾದರೂ ಸಣ್ಣ ಪುಟ್ಟ ಸಹಾಯ ಕೇಳಿದರೆ ಯಾರು ಮಾಡುವುದಿಲ್ಲ. ಇನ್ನು ಯಾರಾದರೂ ಹಸಿವು ಅಂತ ಬಂದ್ರೆ, ಅವರ ಮುಖ ನೋಡಿ ಹಾಗೆಯೆ ಕಳಿಸುತ್ತಾರೆ. ಇಂಥ ಕಾಲದಲ್ಲಿ ವಿಶೇಷ ಚೇತನರೊಬ್ಬರು ಪ್ರತಿ ಭಾನುವಾರದ ದಿನ ಅನೇಕ ಮಂದಿಗೆ ಅನ್ನ ನೀಡುತ್ತಿದ್ದಾರೆ. ಹೌದು. ಆಸ್ಪತ್ರೆಗೆ ಬರುವ ಜನರಿಗೆಲ್ಲ ಇವರೇ ಅನ್ನ ನೀಡುತ್ತಿದ್ದಾರೆ. ಅದಕ್ಕೆ ಕಾರಣವನ್ನು ಸಹ ಅವರೇ ತಿಳಿಸಿದ್ದಾರೆ.

ಸಾಮಾನ್ಯ ಜನರ ಹಸಿವನ್ನು ನೀಗಿಸುತ್ತಿರುವ ವಿಶೇಷ ಚೇತನ

ಇವರ ಹೆಸರು ಹಂಸರಾಜ್ ಸಾದ್. ಇವರು ಮೂಲತಃ ರಾಜಸ್ಥಾನ್ ಅವರು. ಇವರು ಹುಟ್ಟಿದಾಗಿನಿಂದಲೇ ಅಂಗವಿಕಲರಾಗಿರುವುದರಿಂದ ತಮ್ಮದೇ ಆದ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಆದ್ರೆ ಅದ್ಯಾವಾಗ ಅವರ ತಲೆಯಲ್ಲಿ ಅನ್ನ ನೀಡುವ ವಿಚಾರ ಬಂತೋ ಗೊತ್ತಿಲ್ಲ. ಆಗಿಂದ ಹೋಟೆಲ್ ನಲ್ಲಿ ಊಟ ಪಾರ್ಸೆಲ್ ಮಾಡಿಸಿಕೊಂಡು ಬಂದು ಪ್ರತಿ ಭಾನುವಾರ ಸವಾಯಿ ಮಾನ್ಸಿಂಗ್ ಆಸ್ಪತ್ರೆಗೆ ಬರುವ ಜನರಿಗೆ ನೀಡುತ್ತಿದ್ದರು. ಆದ್ರೆ ಆಸ್ಪತ್ರೆಗೆ ಬರುವ ಜನರು ಹೆಚ್ಚಾಗಿದ್ದರಿಂದ ಈಗ ಮನೆಯಲ್ಲಿಯೇ ಅಡಿಗೆ ಮಾಡಿ, ಅವರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಇನ್ನು ಇವರು ಈ ಕಾರ್ಯವನ್ನು 2015ರಿಂದ ಪ್ರಾರಂಭಿಸಿದ್ದು, ಈಗಲೂ ಸಹ ಅವರು 700 ರಿಂದ 800 ಜನಕ್ಕೆ ಊಟವನ್ನು ನೀಡುತ್ತಿದ್ದಾರೆ. ಜೊತೆಗೆ ಯಾವ ಕಾರಣಕ್ಕೆ ಈ ರೀತಿಯ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆಯೂ ಸಹ ತಿಳಿಸಿದ್ದಾರೆ.

ಆಸ್ಪತ್ರೆಗೆ ಬರುವವರು ಬಹಳಷ್ಟು ಕಷ್ಟದಲ್ಲಿರುತ್ತಾರೆ

ಇನ್ನು ಈ ಬಗ್ಗೆ ಸ್ವತಃ ಹಂಸರಾಜ್ ಅವರೇ ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ. ಹೌದು. ದೇವಸ್ಥಾನ ಹಾಗೂ ಮಸೀದಿಗಳಲ್ಲಿ ಅಗತ್ಯವಿರುವವರಿಗೆ ಊಟ ನೀಡುವ ಸಾಮಾಜಿಕ ಕಾರ್ಯಕರ್ತರು ಕಂಡು ಬರುತ್ತಾರೆ. ಆದರೆ ಆಸ್ಪತ್ರೆಗೆ ಬರುವ ಜನರ ಬಳಿ ಔಷಧಿ ಖರೀದಿಸಲು ಹಣವಿರುವುದಿಲ್ಲ. ಹಾಗಾಗಿ ನಾನು ಆಸ್ಪತ್ರೆ ಬಳಿ ಜನರಿಗೆ ಊಟದ ವ್ಯವಸ್ಥೆ ಮಾಡಲು ಶುರು ಮಾಡಿದೆ ಎಂದರು. ಅಲ್ಲದೆ ಊಟ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೋಡಿ ಆಸ್ಪತ್ರೆಯಲ್ಲಿ ನಾವು ಪ್ರತಿದಿನ ಅವರಿಗೆ ಆಹಾರವನ್ನು ನೀಡಬೇಕು ಎಂಬುದು ನಮ್ಮ ಯೋಜನೆಯಾಗಿದೆ. ಯಾಕಂದ್ರೆ ಆಸ್ಪತ್ರೆಗೆ ದೂರ ದೂರದಿಂದ ಶೇ. 50ರಷ್ಟು ಬಡ ಜನರು ಬರುತ್ತಾರೆ. ಹೀಗಿರುವಾಗ ಅವರಿಗೆ ಮನೆಯಿಂದ ಊಟ ತರಲು ಕಷ್ಟವಾಗುತ್ತದೆ ಹಾಗಾಗಿ ನಾನು ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ನಿಜಕ್ಕೂ ಹಂಸರಾಜ್ ಅವರ ಕಾರ್ಯವನ್ನು ನೋಡಿದಾಗ ಬಹಳಷ್ಟು ಸಂತಸವಾಗುತ್ತದೆ. ಯಾಕಂದ್ರೆ ಅವರೊಬ್ಬ ವಿಶೇಷ ಚೇತನನಾಗಿದ್ದು, ಇತರರ ಸಹಾಯ ಪಡೆಯದೇ, ಅವರೇ ಇನ್ನೊಬ್ಬರಿಗೆ ಸಹಾಯ ಮಾಡುತ್ತ ಬೇರೆಯವರಿಗೆ ಮಾದರಿಯಾಗಿದ್ದಾರೆ.

LEAVE A REPLY

Please enter your comment!
Please enter your name here