ಬಾಯಿ ಚಪ್ಪರಿಸವುದಕ್ಕೆ ಇದಕ್ಕಿಂತ ರುಚಿವುಳ್ಳ ಉಪ್ಪಿನಕಾಯಿ ರಾಜ್ಯದ ಬೇರೆಡೆಯೆಲ್ಲೂ ಸಿಗುವುದಿಲ್ಲ

0
882
uppinakayi

ಕೈ ರುಚಿ ಅನ್ನೋದು ಅಷ್ಟಾಗಿ ಯಾರಿಗೂ ಬರಲ್ಲ. ಅದು ಕೆಲವರಿಗೆ ಮಾತ್ರ ಬರುತ್ತದೆ. ಹೌದು. ಅಡಿಗೆ ಅನ್ನೋದು ಅದೊಂದು ದೊಡ್ಡ ಸಾಮ್ರಾಜ್ಯ. ಅದರಲ್ಲಿ ಸಾಕಷ್ಟು ಜನ ಬರುತ್ತಾರೆ. ಆದ್ರೆ ರುಚಿ ಅನ್ನೋದು ಮಾತ್ರ ಎಲ್ಲರಿಗೂ ಬರುವುದಿಲ್ಲ. ಅದು ಕೆಲವರಿಗೆ ಮಾತ್ರ ಬರುತ್ತದೆ. ಅದರಲ್ಲೂ ನಾವು ಸಾಮಾನ್ಯವಾಗಿ ಬೆಸ್ಟ್ ಕುಕ್ ಯಾರು ಅಂದ್ರೆ, ಎಲ್ಲರೂ ನಳ ಮಹಾರಾಜಾ ಅಂತಾನೆ ಕರೆಯುತ್ತಾರೆ. ಹೌದು. ಹೆಣ್ಣು ಮಕ್ಕಳು ಎಷ್ಟೇ ರುಚಿಯಾಗಿ ಅಡಿಗೆ ಮಾಡಿದರು, ನಳ ಮಹಾರಾಜನನ್ನು ಮೀರಿಸಲು ಆಗುವುದಿಲ್ಲ ಅಂತ ಎಲ್ಲರೂ ಹೇಳುತ್ತಾರೆ. ಅದೇ ರೀತಿ ಇಲ್ಲೊಬ್ಬರು ಉಪ್ಪಿನಕಾಯಿ ಹಾಕುತ್ತಾರೆ. ಇವರ ಉಪ್ಪಿನಕಾಯಿ ರುಚಿ ರಾಜ್ಯದ ಯಾವ ಮೂಲೆಯಲ್ಲೂ ಸಿಗುವುದಿಲ್ಲ. ಯಾಕಂದ್ರೆ ಅಷ್ಟು ರುಚಿಯಾಗಿ ಉಪ್ಪಿನಕಾಯಿ ತಯಾರಿಸುತ್ತಾರೆ. ಇವರ ಬಳಿ ಸಿಗುವ ಉಪ್ಪಿನಕಾಯಿ ತಿನ್ನಲು ಹೊರ ರಾಜ್ಯದಿಂದಲೂ ಬೇಡಿಕೆ ಬರುತ್ತದೆ. ಅಷ್ಟರ ಮಟ್ಟಿಗೆ ತಮ್ಮ ಉಪ್ಪಿನಕಾಯಿ ರುಚಿಯಿಂದ ಎಲ್ಲರನ್ನು ಸೆಳೆದಿದ್ದಾರೆ.

ಕನಸಲ್ಲೂ ನೆನಪಾಗುವ ಅಪ್ಪೆಮಿಡಿ ಉಪ್ಪಿನಕಾಯಿ

ಇವರ ಹೆಸರು ಸೀತಾರಾಮ್ ಭಟ್ ಎಂದು. ಆದ್ರೆ ಎಲ್ಲರೂ ಇವರನ್ನು ಉಪ್ಪಿನಕಾಯಿ ಭಟ್ಟರು ಎಂದು ಕರೆಯುತ್ತಾರೆ. ಇವರು ಮೂಲತಃ ಉತ್ತರ ಜಿಲ್ಲೆಯವರಾಗಿದ್ದರು, ಸುಮಾರು 40 ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವಾಸಿಸುತ್ತಿದ್ದಾರೆ. ಇವರ ಕಸುಬು ಉಪ್ಪಿನಕಾಯಿ ತಯಾರಿಸವುದು. ಹೌದು. ಇವರು ತಯಾರಿಸುವ ಉಪ್ಪಿನಕಾಯಿ ರುಚಿ, ರಾಜ್ಯದ ಯಾವ ಮೂಲೆಯಲ್ಲೂ ಸಿಗುವುದಿಲ್ಲ. ಯಾಕಂದ್ರೆ ಅಷ್ಟು ರುಚಿಯಾಗಿ ಇವರು ಉಪ್ಪಿನಕಾಯಿ ತಯಾರಿಸುತ್ತಾರೆ. ಇವರು ಮಾಡುವ ಉಪ್ಪಿನಕಾಯಿ ಕರ್ನಾಟಕದಲ್ಲಿ ಮಾತ್ರವಲ್ಲ, ಹೊರ ರಾಜ್ಯಗಳಿಗೂ ಕಳಿಸುತ್ತಾರೆ. ಇಷ್ಟೆಲ್ಲಾ ರುಚಿಯಾಗಿ ಉಪ್ಪಿನಕಾಯಿ ತಯಾರಿಸುವ ಇವರು, ಯಾವುದೇ ಹೆಚ್ಚಿನ ಸೌಲಭ್ಯ ಹೊಂದಿಲ್ಲ. ಬದಲಿಗೆ ತಮ್ಮ ಮನೆಯ ಹೊರಾಂಡದಲ್ಲೇ ತಯಾರಿಸುತ್ತಾರೆ. ಹೌದು. ಯಾವುದೇ ಕಂಪನಿ ಹೊಂದಿರದೆ, ಕೇವಲ ಮನೆಯಲ್ಲೇ ತಯಾರಿಸುತ್ತಾರೆ.

ವಿವಿಧ ಮೂಲಗಳಿಂದ ಉಪ್ಪಿನಕಾಯಿ ಪಡೆಯಬಹುದು

ಇನ್ನೂ ಗ್ರಾಹಕರು ಅಷ್ಟೇ ಉಪ್ಪಿನಕಾಯಿ ಪಡೆಯಬೇಕಂದ್ರೆ ನೇರವಾಗಿ ಇವರ ಮನೆಗೆ ಹೋಗಿ ಪಡೆಯಬಹುದು. ಅಲ್ಲದೆ ಮನೆಗೆ ಬಂದವರನ್ನು, ತಮ್ಮ ಮನೆಯವಂತೆ ಕಾಣುತ್ತಾರೆ. ಹೊರಗಿನ ಜನರು ಎಂದಿಗೂ ಭಾವಿಸುವುದಿಲ್ಲ. ಅಲ್ಲದೆ ಇವರು ತಯಾರಿಸುವ ಉಪ್ಪಿನಕಾಯಿಯನ್ನು ಕೊಳ್ಳಲು ಇವರ ಮನೆಗೆ ಹೋಗಬೇಕು ಅಂತೇನಿಲ್ಲ. ಫೋನಿನ ಮೂಲಕ ಆರ್ಡರ್ ಮಾಡಬಹುದು ಅಥವಾ ಕೊರಿಯರ್ ಮುಖಂತರವಾದರೂ ತರಿಸಿಕೊಳ್ಳಬಹುದು. ಈ ರೀತಿ ತಮ್ಮ ಉಪ್ಪಿನಕಾಯಿ ರುಚಿಯಿಂದ ರಾಜ್ಯದೆಲ್ಲೆಡೆ ಹೆಸರು ವಾಸಿಯಾಗಿದ್ದರೆ. ಹಾಗಾಗಿ ಸೀತಾರಾಮ್ ಭಟ್ ಅವರು ಯಾವಾಗಲು ಬ್ಯುಸಿಯಾಗಿರುತ್ತಾರೆ. ಯಾಕಂದ್ರೆ ಇವರಿಗೆ ರಾಜ್ಯದ ಹಲವೆಡೆಯಿಂದ ಬೇಡಿಕೆ ಬರುವುದರಿಂದ ಉಪ್ಪಿನ್ಕಾಯಿ ಕಲಿಸಿಕೊಡುವಲ್ಲಿ ಸದಾಕಾಲ ಬ್ಯುಸಿಯಾಗಿರುತ್ತಾರೆ. ಆದ್ರೆ ಇತ್ತೀಚಿಗೆ ಸ್ವಲ್ಪ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದ್ರೆ ಉಪ್ಪಿನಕಾಯಿ ಮಾಡಲು ಸರಿಯಾಗಿ ಮಾವಿನಕಾಯಿ ಸಿಗುತ್ತಿಲ್ಲ ಎಂದು.

ಬೇಸರ ವ್ಯಕ್ತಪಡಿಸುತ್ತಿರುವ ಸೀತಾರಾಮ್ ಭಟ್ರು

ಇನ್ನೂ ಇತ್ತೀಚಿಗೆ ಇವರನ್ನ ಯಾರೇ ಭೇಟಿ ಮಾಡಲು ಹೋದರು, ಅವರಿಗೆ ಮರೆಯದೆ ಒಂದು ಮಾತನ್ನು ಹೇಳುತ್ತಾರೆ. ಹೌದು. ಇತ್ತೀಚಿಗೆ ಉಪ್ಪಿನಕಾಯಿ ತಯಾರಿಸುವ ವಿಚಾರದಲ್ಲಿ ಬಹಳಷ್ಟು ಬೇಸರವಾಗುತ್ತಿದೆ. ಯಾಕಂದ್ರೆ ಅರಣ್ಯನಾಶ, ಮರಮುಟ್ಟುಗಳಿಗಾಗಿ ಮಾವಿನಮರದ ದೊಡ್ಡ ದೊಡ್ಡ ಕೊಂಬೆಗಳನ್ನು ಕಡಿಯುವ ಟ್ರೆಂಡ್ ಮಲೆನಾಡಿನಲ್ಲಿ ಹೆಚ್ಚಾಗುತ್ತಿದೆ. ಸ್ಥಿತಿ ಹೀಗೇ ಮುಂದುವರೆದರೆ ಅಪ್ಪೆ ಮಿಡಿ ಕುಲ ನಾಶವಾಗತ್ತೆ. ಹೌದು. ಮರಗಳನ್ನ ಕಡಿದರೆ, ಮಾವಿನಕಾಯಿ ಸಿಗುವದಿಲ್ಲ. ಇದರಿಂದ ಅಪ್ಪೆ ಮಿಡಿ ತಯಾರಿಸಲಾಗುವುದಿಲ್ಲ. ಸಂಪೂರ್ಣವಾಗಿ ಅಪ್ಪೆ ಮಿಡಿ ನಾಶವಾಗುತ್ತದೆ ಎಂದು ಉಪ್ಪಿನಕಾಯಿ ಕೊಳ್ಳಲು ಬರುವವರಿಗೂ ಸಹ ತಿಳಿಸತ್ತಾರೆ. ನಿಜಕ್ಕೂ ಇವರನ್ನು ನೋಡಿದಾಗ ಖುಷಿಯಾಗುತ್ತದೆ. ಯಾಕಂದ್ರೆ ತಮ್ಮ ಉಪ್ಪಿನಕಾಯಿ ಕೊಳ್ಳಲು ಬರುವವರಿಗೆ ಪರಿಸರದ ಬಗ್ಗೆ ತಿಳಿಸಿಕೊಡುತ್ತಿದ್ದರೆ. ನಿಜಕ್ಕೂ ಇವರನ್ನು ಮೆಚ್ಚಲೇ ಬೇಕು.

ನಿಜಕ್ಕೂ ಸೀತಾರಾಮ್ ಭಟ್ ಅವರು ತಯಾರಿಸುವ ಉಪ್ಪಿನಕಾಯಿ ಅದ್ಭುತ. ಒಂದು ವೇಳೆ ನೀವು ಏನಾದ್ರು ಈ ಉಪ್ಪಿನಕಾಯಿ ತಿನ್ನಬೇಕು ಅಂದ್ರೆ, ನೇರವಾಗಿ ಸಾಗರಕ್ಕೆ ತೆರಳಿ, ಯಾರನ್ನಾದ್ರೂ ಕೇಳಿದರೆ ಹೇಳುತ್ತಾರೆ. ಹೋಗಿ ಬಾಯಲ್ಲಿ, ನೀರುರಿಸುವ ಉಪ್ಪಿನಕಾಯಿಯನ್ನು ತಿನ್ನಬಹುದು.

LEAVE A REPLY

Please enter your comment!
Please enter your name here