ನಾನು ಒಂದು ಹೆಣ್ಣು ಮಗುವಿನ ತಂದೆ – ಬೇಸರ ವ್ಯಕ್ತಪಡಿಸಿದ ಉಪ್ಪಿ

0
945
uppi tvit

ತೆಲಂಗಾಣದಲ್ಲಿ ನಡೆದ್ದ ಪ್ರಿಯಾಂಕಾ ರೆಡ್ಡಿಯ ಅತ್ಯಾಚಾರ ಹಾಗು ಹತ್ಯೆಗೆ ಸಂಬಂಧಿಸಿದಂತೆ ಇಡೀ ದೇಶವೇ ಪೋಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಜೊತೆಗೆ ನಮ್ಮ ಸಂತೋಷವನ್ನು ಹಾಗು ಪೋಲೀಸರ ಕರ್ತವ್ಯ ನಿಷ್ಠೆಯನ್ನು ಮೆಚ್ಚಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದೇ ವಿಚಾರವಾಗಿ ನಟ ಉಪೇಂದ್ರ ಅವರು ಮಾಡಿದಂತಹ ಒಂದು ಟ್ವೀಟ್ ಭಾರಿ ಸುದ್ದಿ ಮಾಡಿತ್ತು. ಹೌದು. ಈ ಹತ್ಯೆಯನ್ನು ಈ ನಾಲ್ಕು ಆರೋಪಿಗಳು ಮಾತ್ರ ಮಾಡಿದ್ದಾರಾ? ಅಥವಾ ಇದರ ಹಿಂದೆ ಬೇರೆ ಯಾರಾದರೂ ಇದ್ದು, ಅವರನ್ನು ಬಯಲಿಗೆ ಎಳೆಯಲು ಆಗುತ್ತಿಲ್ಲವಾ ಎಂಬ ಪ್ರಶ್ನೆ ಕೇಳಿದ್ದರು. ಇನ್ನು ಅವರ ಈ ಟ್ವೀಟ್ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ ಈಗ ಉಪ್ಪಿ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆಗೆ ಉಪ್ಪಿ ಬೇಸರ

ಪಶು ವೈದ್ಯೆ ಹತ್ಯೆ ಖಂಡಿಸಿ ಅನೇಕ ಹೋರಾಟಗಳು ನಡೆದಿದ್ದವು. ಆಗ ಸೈದರಾಬಾದ ಪೊಲೀಸ್ ಆಯುಕ್ತರಾದ ವಿಶ್ವನಾಥ್ ಸಜ್ಜನವರ್ ಅವರು ದಿಟ್ಟ ಮನಸ್ಸಿನಿಂದ ಅವರನ್ನು ಎನ್ಕೌಂಟರ್ ಮಾಡಿದ್ದರು. ಇನ್ನು ಈ ಬಗ್ಗೆ ಉಪೇಂದ್ರ ತಮ್ಮ ಟ್ವಿಟ್ಟರ್ ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಅದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಹೌದು. ನಿಮ್ಮ ಬುದ್ದಿವಂತಿಯನ್ನು ನಾವು ಒಪ್ಪುತ್ತಿವೆ. ಆದರೆ ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ ನಿಮ್ಮ ಬುದ್ದಿವಂತಿಕೆಯನ್ನು ತೋರಿಸಬೇಡಿ. ಯಾಕಂದ್ರೆ ಎಲ್ಲ ಕಡೆ ನಿಮ್ಮ ರಿಯಾಲಿಟಿ ಚೆಕ್ ವರ್ಕೌಟ್ ಆಗುವುದಿಲ್ಲ ಎಂದು ಇಲ್ಲ ಸಲ್ಲದ ರೀತಿಯ ಕಮೆಂಟ್ ಮಾಡಿದ್ದರು.

 

 

ನಾನು ಒಂದು ಹೆಣ್ಣು ಮಗುವಿನ ತಂದೆ

ಇನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಕಮೆಂಟ್ ನೋಡಿದ ಉಪ್ಪಿ ಬೇಸರ ಮಾಡಿಕೊಂಡಿದ್ದಾರೆ. ಅಲ್ಲದೆ ಇದರ ಬಗ್ಗೆ ಸ್ಪಷ್ಟನೆ ಸಹ ನೀಡಿದ್ದಾರೆ. ಹೌದು. ನಾನು ಸಹ ಒಂದು ಹೆಣ್ಣು ಮಗುವಿನ ತಂದೆ. ಹೀಗಿರುವಾಗ ಒಂದು ಹೆಣ್ಣಿನ ಬಗ್ಗೆ ಯಾವ ರೀತಿ ಮಾತನಾಡಬೇಕು ಎಂಬ ಅರಿವು ನನಗೂ ಇದೆ. ನಾನು ಹತ್ಯೆ ವಿರೋಧವಾಗಿ ಏನ್ನನ್ನೂ ಮಾತನಾಡಿಲ್ಲ. ಬದಲಿಗೆ ಇದರ ಹಿಂದೆ ಯಾರಾದರೂ ಪ್ರಭಾವಿ ವ್ಯಕ್ತಿಗಳ ಕೈವಾಡ ಇದೆಯಾ ಎಂದು ಕೇಳಿದ್ದೇನೆ ಅಷ್ಟೇ. ಯಾಕಂದ್ರೆ ಆ ಆರೋಪಿಗಳು ಸ್ವತಃ ತಮ್ಮ ನಿರ್ಧಾರದಿಂದ ಈ ರೀತಿ ಮಾಡಿದ್ದಾರಾ? ಅಥವಾ ಯಾರಾದರೂ ಹೇಳಿ ಮಾಡಿಸಿದ್ದಾರಾ? ಆ ರೀತಿ ಏನಾದರು ಇದ್ದಾರೆ ಮೊದಲು ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಹೇಳಿದ್ದೇನೆ. ಆದ್ರೆ ಇದನ್ನು ಕೆಲವರು ತಪ್ಪಾಗಿ ಬಿಂಬಿಸಿದ್ದಾರೆ ಎಂದು ಉಪ್ಪಿ ಬೇಸರ ವ್ಯಕ್ತಪಡಿಸಿದ್ದಾರೆ.

ಹತ್ಯೆ ಬಗ್ಗೆ ಟ್ವೀಟ್ ಮಾಡಿದ್ದ ನಟ ಉಪೇಂದ್ರ

ಇನ್ನು ಉಪೇಂದ್ರ ಹತ್ಯೆಯ ವಿಚಾರವಾಗಿ ಈ ರೀತಿ ಟ್ವೀಟ್ ಮಾಡಿದ್ದರು. ಈ ನಾಲ್ಕು ಹುಡುಗರೇ ಆಕೆಯನ್ನು ರೇಪ್ ಮಾಡಿ ಸುಟ್ಟು ಹಾಕಿದ್ದಾರೋ ಇಲ್ಲ ಇದರ ಹಿಂದೆ ಬೇರೆ ಯಾರೋ ಪ್ರಮುಖ ವ್ಯಕ್ತಿಗಳ ಕೈವಾಡವಿದೆಯೊ? ಈ ರೀತಿಯ ಎನ್ ಕೌಂಟರ್ ಪ್ರಮುಖ ವ್ಯಕ್ತಿಗಳ ಕೇಸ್ನಲ್ಲಿ ಯಾಕಾಗುವುದಿಲ್ಲ? ಕೋರ್ಟನಲ್ಲಿ ವಿಚಾರಣೆಗೂ ಮುನ್ನ ನಡೆದ ಈ ಎನ್ಕೌಂಟರ್ ಇನ್ನು ಮುಂದೆ ಪ್ರಭಾವಶಾಲೀ ಭ್ರಷ್ಟ ರೇಪಿಷ್ಟ್ ಗಳಿಗೆ ರತ್ನಗಂಬಳಿಯಾಗುವುದೇ?” ಎಂದು ಪ್ರಶ್ನಿಸಿದ್ದರು.

ಒಟ್ಟಿನಲ್ಲಿ ಉಪೇಂದ್ರ ಅವರು ಮಡಿದ ಒಂದು ಟ್ವೀಟ್ ಬಹಳಷ್ಟು ಸುದ್ದಿ ಮಾಡಿತ್ತು. ಆದರೆ ಅವರ ಟ್ವೀಟ್ ಗೆ ಬಹಳಷ್ಟು ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ತಮ್ಮ ಟ್ವೀಟ್ ಗೆ ಸ್ಪಷ್ಟನೆ ನೀಡಿ, ಜೊತೆಗೆ ಬೇಸರ ಹೊರ ಹಾಕಿದ್ದಾರೆ.

LEAVE A REPLY

Please enter your comment!
Please enter your name here